/newsfirstlive-kannada/media/post_attachments/wp-content/uploads/2025/01/INDIAN-FOOD-2.jpg)
ನಾವು ಸೇವಿಸು ಆಹಾರಕ್ಕೆ ಹಲವು ರೀತಿಯ ಹಿನ್ನೆಲೆಗಳು ಇರುತ್ತವೆ. ಯಾವುದೋ ಸಾಮ್ರಾಜ್ಯದಲ್ಲಿ, ಯಾವುದೋ ಕಾಲದಲ್ಲಿ, ಯಾವುದೋ ದೇಶದಲ್ಲಿ ಬಾಣಸಿಗರು ವಿಶೇಷವಾಗಿ ತಯಾರಿಸಿದ ಭಕ್ಷ್ಯಗಳು ವಿಶ್ವಪ್ರಸಿದ್ಧಿಯನ್ನು ಪಡೆಯುತ್ತವೆ. ಮುಂದೆ ಬೇರೆ ಇನ್ಯಾವುದೋ ದೇಶಗಳ ಜನಪ್ರಿಯ ಆಹಾರವಾಗಿ ಕೊನೆವರೆಗೂ ಉಳಿಯುತ್ತವೆ. ಹಾಗೆಯೇ ಭಾರತದಲ್ಲಿಯೂ ಕೆಲವೊಂದು ಭೋಜ್ಯಗಳು ಭಾರತದ ಮೂಲದ್ದು ಅಲ್ಲದೇ ಹೋದರು ಶತಮಾನಗಳಿಂದ ಇಲ್ಲಿಯ ಜನರು ಅವುಗಳನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ. ಅಂತಹ ಕೆಲವು ಖಾದ್ಯಗಳ ಬಗ್ಗೆ ನಾವು ನಿಮಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.
1. ಸಮೋಸಾ: ಭಾರತದಲ್ಲಿ ತುಂಬಾ ಇಷ್ಟಪಟ್ಟು ತಿನ್ನುವ ಆಹಾರ ಅಂದ್ರೆ ಅದು ಸಮೋಸಾ. ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ, ಎಲ್ಲಾ ಜಿಲ್ಲೆಗಳಲ್ಲೂ ಸಮೋಸಾಗಳು ತಿನ್ನಲು ಲಭ್ಯವಿರುತ್ತವೆ. ಸಮೋಸಾದಿಂದಲೇ ಫೇಮಸ್​ ಆಗಿರುವ ಅದೆಷ್ಟೋ ಶಾಪ್​ಗಳು ಇರುತ್ತವೆ. ಆದ್ರೆ ನಾವು ಇಷ್ಟು ಇಷ್ಟಪಟ್ಟು ತಿನ್ನುವ ಸಮೋಸಾ ನಮ್ಮ ದೇಶದಲ್ಲ. ಇದು ಮೂಲತಃ ಮಧ್ಯಪ್ರಾಚ್ಯದ ನೆಚ್ಚಿನ ಖಾದ್ಯ. ಪ್ರಮುಖವಾಗಿ ಪರ್ಷಿಯಾದಲ್ಲಿ ತಯಾರಾದ ತಿಂಡಿಯಿದು. ಇದರ ಮೂಲ ಹೆಸರು ಸಂಬೋಸಾ.
2. ಗುಲಾಬ್ ಜಾಮೂನು: ನಮ್ಮ ದೇಶದಲ್ಲಿ ಮದುವೆ, ಗೃಹಪ್ರವೇಶ, ಆಫೀಸ್ ಪಾರ್ಟಿಗಳಲ್ಲಿ ಬಹುತೇಕವಾಗಿ, ವಿಶೇಷಾಗಿ ಕಾಣುವ ಸಿಹಿ ತಿಂಡಿ ಅಂದ್ರೆ ಅದು ಗುಲಾಬ್ ಜಾಮೂನು. ಗುಲಾಬ್ ಜಾಮೂನು ಭಾರತೀಯರು ತುಂಬಾ ಇಷ್ಟಪಟ್ಟು ತಿನ್ನುವ ಸಿಹಿ ಪದಾರ್ಥಗಳಲ್ಲಿ ಒಂದು. ಇದನ್ನು ಜಗತ್ತಿಗೆ ಮೊದಲು ಪರಿಚಯಿಸಿದ್ದು ಪರ್ಷಿಯನ್ನರೇ.
ಇದನ್ನೂ ಓದಿ:ಇದು ವಿಶ್ವದ ಅತಿಹೆಚ್ಚು ಮಾರಾಟವಾಗುವ ಎರಡನೇ ಪರ್ಫ್ಯೂಮ್​.. ಇದರ ಹಿಂದಿದೆ ಮೊಘಲರ ನಂಟು
3. ಜಿಲೇಬಿ: ಭಾರತೀಯರು ಅದರಲ್ಲೂ ಉತ್ತರ ಭಾರತೀಯರು ಹೆಚ್ಚು ಇಷ್ಟಪಡುವ ಸಿಹಿ ಪದಾರ್ಥ ಅಂದ್ರೆ ಅದು ಜಿಲೇಬಿ. ಅದರಲ್ಲೂ ಹರಿಯಾಣ,ಉತ್ತರಪ್ರದೇಶ, ಗುಜರಾತ್ ಇಲ್ಲಿ ಜಿಲೇಬಿ ತುಂಬಾ ಫೇಮಸ್. ಇದು ಕೂಡ ಪರ್ಷಿಯಾದಿಂದ ಭಾರತಕ್ಕೆ ಪರಿಚಯವಾದ ಒಂದು ಸಿಹಿ ಖಾದ್ಯ. ಇದನ್ನು ಆರಂಭದಲ್ಲಿ ಝಲಾಬಿಯಾ ಎಂದು ಕರೆಯುತ್ತಿದ್ದರು.
4. ನಾನ್: ನಾವು ನಾರ್ಥ ಇಂಡಿಯನ್ ಡಿಶ್ ಆರ್ಡರ್ ಮಾಡುವಾಗ ಹೆಚ್ಚಾಗಿ ನಾನ್​ ಇಲ್ಲವೇ ಬಟರ್ ನಾನ್ ಆರ್ಡರ್ ಮಾಡುತ್ತೇವೆ. ಅದರ ಜೊತೆಗೊಂದಿಷ್ಟು ವಿವಿಧ ಬಗೆಯ ಪಲ್ಯಗಳು. ಆದ್ರೆ ನಾನ್ ಮೊದಲು ಪರಿಚಯಿಸಿದ್ದು ಮೊಘಲರು. ಮೊಘಲರು ಪರ್ಷಿಯಾ ವಶಪಡಿಸಿಕೊಂಡಾಗ ಪರಿಚಯಗೊಂಡ ಆಹಾರವಿದು. ಮುಂದೆ ಭಾರತದಲ್ಲಿ ದೊಡ್ಡ ಪ್ರಸಿದ್ಧಿಯನ್ನು ಪಡೆಯಿತು.
ಇದನ್ನೂ ಓದಿ:ಪನ್ನೀರ್ ತಿನ್ನೋ ಮುನ್ನ ಎಚ್ಚರ ಎಚ್ಚರ.. ಬಯಲಾಗಿದೆ ಬೆಚ್ಚಿ ಬೀಳಿಸುವ ಅಂಶ!
5. ಚಿಕನ್ ಟಿಕ್ಕಾ ಮಸಾಲಾ: ಇದು ನಾನ್ ವೆಜ್ ಪ್ರಿಯರ ಅತ್ಯಂತ ಪ್ರೀತಿಯ ಆಹಾರ. ಈ ಹೆಸರು ಕೇಳಿದರೆ ಬಾಯಲ್ಲಿ ನೀರೂರಲು ಆರಂಭವಾಗುತ್ತದೆ. ಅಷ್ಟು ರುಚಿಕರ ಆಹಾರ ಚಿಕನ್ ಟಿಕ್ಕಾ. ಇದು ಭಾರತದಲ್ಲಿ ಅತ್ಯಂತ ಪ್ರಸಿದ್ಧತೆಯನ್ನು ಪಡೆದಿದ್ದರು ಸಹ. ಇದು ಮೊದಲು ಹುಟ್ಟಿಕೊಂಡಿದ್ದು ಯುನೈಟೆಡ್ ಕಿಂಗ್​​ಡಮ್​ನಲ್ಲಿ. ದಕ್ಷಿಣ ಏಷಿಯಾದ ಬಾಣಸಿಗನಿಂದ ತಯಾರಾದ ವಿಶೇಷ ಭಕ್ಷ್ಯವಿದು.ಸದ್ಯ ಭಾರತದಲ್ಲಿ ಜನರು ಅತಿಹೆಚ್ಚು ಪ್ರೀತಿಯಿಂದ ಸೇವಿಸುವ ಭಕ್ಷ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ