/newsfirstlive-kannada/media/post_attachments/wp-content/uploads/2024/11/ISS.jpg)
ಮಾನವ ನಿರ್ಮಿತಿ ಅತ್ಯಂತ ದುಬಾರಿ ವಸ್ತು ಯಾವುದು ಅಂತ ಪ್ರಶ್ನೆ ಬಂದ್ರೆ ನಮ್ಮ ಮುಂದೆ ಬರುವುದು ತಾಜ್ ಮಹಲ್, ಮುಖೇಶ್ ಅಂಬಾನಿಯವರ ನಿವಾಸ ಅಂಟಿಲಿಯಾ, ಕಡೆಯದಾಗಿ ನಮ್ಮ ಕಣ್ಣೆದುರು ಬರೋದು ದುಬೈನ ಬುರ್ಜ್ ಖಲೀಫಾ ಕಟ್ಟಡ. ತಾಜ್ ಮಹಲ್ ನಿರ್ಮಾಣ ಮಾಡಲು ಅಮದಿನ ಕಾಲದಲ್ಲಿ ಮೊಘಲರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದರು. ಇಂದಿನ ಕಾಲಕ್ಕೆ ಹೋಲಿಸಿದರೆ ಅದರ ಮೊತ್ತ ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತದೆ. ಇದೇ ಅತ್ಯಂತ ದುಬಾರಿ ಕಟ್ಟಡ ಎಂದರೆ ನಿಮ್ಮ ಊಹೆ ತಪ್ಪು. ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತು ಯಾವುದಾದ್ರೂ ಇದ್ದರೆ ಅದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)1998ರಲ್ಲಿಯೇ ಅಂದಿನ ಕಾಲದ ಒಟ್ಟು ಸುಮಾರು 1500 ಕೋಟಿ ಯುಎಸ್ ಡಾಲರ್ ಖರ್ಚು ಮಾಡಿ ನಿರ್ಮಿಸಲಾದ ಮೆಗಾ ಪ್ರಾಜೆಕ್ಟ್ ಅದು. 15 ದೇಶಗಳು ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಸಿದ್ಧಗೊಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮಾನವ ನಿರ್ಮಿತ ಅತ್ಯಂತ ದುಬಾರಿ ಕಟ್ಟಡಗಳಲ್ಲಿ ಒಂದು.
ಇದನ್ನೂ ಓದಿ:ಕಂಪ್ಯೂಟರ್ಗಳಲ್ಲಿ ನಿಮ್ಮ ಕೆಲಸ ಇನ್ನಷ್ಟು ಸುಲಭ.. ನಿಮಗಾಗಿ ಬರ್ತಿದೆ AI ಏಜೆಂಟ್..!
ಇದು ಒಂದು ಫುಟ್ಬಾಲ್ ಗ್ರೌಂಡ್ಗಿಂತಲೂ ದೊಡ್ಡದಾದ ಗಾತ್ರವನ್ನು ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ 30 ಕಾರ್ಯಾಚರಣೆಗೆ ಮೂಲಕ ವಿಜ್ಞಾನಿಗಳು ಸಾಧಿಸಿರುವ ಮಹಾ ವಿಜಯ ಈ ಸ್ಪೇಸ್ ಸ್ಟೇಷನ್. ಸೊನ್ನೆ ಗುರುತ್ವಾಕರ್ಷಣ ಬಲ ಇರುವ ಪ್ರದೇಶದಲ್ಲಿ ಇಷ್ಟು ದೊಡ್ಡ ಸ್ಪೇಸ್ ಸ್ಟೇಷನ್ ನಿರ್ಮಿಸುವುದು ಸರಳವಾದ ಕೆಲಸವಲ್ಲ. ಗಗನಯಾನಿಗಳು ಸಾವಿರಾರು ತುಂಡು ತುಂಡು ಡಿವೈಸ್ಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಒಟ್ಟುಗೂಡಿಸಿ ನಿರ್ಮಿಸಿರುವ ಮಹಾ ಸಾಹಸದ ಗುರುತೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ
ಈ ಒಂದು ಕಾರ್ಯಸಾಧನೆಗೆ ಸಿದ್ಧಗೊಂಡಾಗ ಇದಕ್ಕೆ ಇಂತಿಷ್ಟೇ ಬಂಡವಾಳ ಬೇಕು ಎಂದು ಯಾರು ಕೂಡ ನಿರ್ಧರಿಸಿಲಿಲ್ಲ. ಊಹೆಯನ್ನು ಮಾಡಿರಲಿಲ್ಲ.
ಇದನ್ನೂ ಓದಿ:ಜಗತ್ತನ್ನೇ ಬೆರಗುಗೊಳಿಸಿದ ದೃಶ್ಯ.. 12 ರೋಬೋಟ್ಗಳನ್ನ ಕಿಡ್ನ್ಯಾಪ್ ಮಾಡಿದ ಒಂದು ಸಣ್ಣ ರೋಬೋಟ್..!
ಆದ್ರೆ ದಿನ ಕಳೆದಂತೆ ಈ ಒಂದು ನಿಲ್ದಾಣಕ್ಕೆ ಬೇಕಾಗುವ ಅವಶ್ಯಕತೆಗಳ ಸಂಖ್ಯೆ ಏರುತ್ತಲೇ ಹೋಯ್ತು. ಇಂದಿಗೂ ಕೂಡ ಬೆಳೆಯುತ್ತಲೇ ಇದೆ. 2030ಕ್ಕೆ ಈ ಮೆಗಾ ಪ್ರಾಜೆಕ್ಟ್ ಹೆಚ್ಚು ಕಡಿಮೆ ಮುಗಿಯತ್ತದೆ. ಇದನ್ನು ನಿರ್ಮಿಸಲು ಇಲ್ಲಿಯವರೆಗೂ ತಗುಲಿರುವ ವೆಚ್ಚ ಸುಮಾರು 230 ಬಿಲಿಯನ್ ಯುಎಸ್ ಡಾಲರ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 19 ಸಾವಿರ ಕೋಟಿ ರೂಪಾಯಿಗೂ ಹೆಚ್ಚು. ಇನ್ನೂ ಕೆಲವರು ಹೇಳುವ ಪ್ರಕಾರ ಈ ಒಂದು ಯೋಜನೆಯ ಒಟ್ಟು ಮೊತ್ತ ಮುಂದಿನ ದಿನಗಳಲ್ಲಿ 1 ಟ್ರಿಲಿಯನ್ ಡಾಲರ್ ತಲುಪಿದರು ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ.
ಈ ಸ್ಪೇಷ್ ಸ್ಟೇಷನ್ ನಿವೃತ್ತಿಯ ಬಳಿಕ ಏನಾಗಲಿದೆ.?
ಈಗಾಗಲೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದ ಬೆಲೆ ಜಗತ್ತಿನ ತಲೆಯನ್ನು ಕೆರೆಸುತ್ತಿದೆ. ನಿಮಗೆ ಗೊತ್ತಾ ಒಂದು ವೇಳೆ ಈ ಸ್ಪೇಷ್ ಸ್ಟೇಷನ್ ನಿವೃತ್ತಿಯಾದ ಬಳಿಕ ಏನಾಗಲಿದೆ ಎಂದು
ಜುಲೈ 2024ರಲ್ಲಿ ನಾಸಾ ಹಾಗೂ ಎಲಾನ್ ಮಸ್ಕ್ ಕಂಪನಿ ಒಂದು ನಿರ್ಧಾರಕ್ಕೆ ಬಂದಿವೆ. ಈ ಬಾಹ್ಯಾಕಾಶ ನಿಲ್ದಾಣದ ಅವಧಿ ಮುಗಿದ ನಂತರ ಅದನ್ನು ಸುಟ್ಟು ಹಾಕಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಉಳಿದ ಎಲ್ಲಾ ಆಯ್ಕೆಗಳನ್ನು ತಿರಸ್ಕರಿಸಿರುವ ನಾಸಾ ಹಾಗೂ ಎಲಾನ್ ಮಸ್ಕ್ ಕಂಪನಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ