Advertisment

200 ರಹಸ್ಯ ಬ್ಯಾಂಕ್ ಅಕೌಂಟ್​.. ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಮುಚ್ಚಿಟ್ಟ ಸಂಪತ್ತು ಎಷ್ಟು ಗೊತ್ತಾ?

author-image
Gopal Kulkarni
Updated On
200 ರಹಸ್ಯ ಬ್ಯಾಂಕ್ ಅಕೌಂಟ್​.. ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಮುಚ್ಚಿಟ್ಟ ಸಂಪತ್ತು ಎಷ್ಟು ಗೊತ್ತಾ?
Advertisment
  • ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್​ರ ಆಸ್ತಿ ಎಷ್ಟು
  • ಅದೆಂತಹ ಐಷಾರಾಮಿ ಬದುಕು ಬದುಕುತ್ತಾರೆ ಗೊತ್ತಾ ಈ ಸರ್ವಾಧಿಕಾರಿ?
  • ಕಿಮ್ ಜಾಂಗ್ ಉನ್ ಬಳಿ ಇರುವ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ?

ವಿವಾದಾತ್ಮಕ ನಾಯಕರ ಬಗ್ಗೆ ನಾವು ಚರ್ಚೆಗೆ ನಿಂತರೆ ಮೊದಲು ನಮ್ಮ ಕಣ್ಮುಂದೆ ಬರೋದು ವಿಶ್ವದ ಅತಿದೊಡ್ಡ ಸರ್ವಾಧಿಕಾರಿ, ಉತ್ತರ ಕೊರಿಯಾದ ಸರ್ವೋಚ್ಛ ನಾಯಕ ಕಿಮ್​ ಜಾಂಗ್​ ಉನ್​ರದ್ದು. ಕಿಮ್ ಜಾಂಗ್ ಉನ್ ತಮ್ಮ ಕಠಿಣ ನೀತಿ ಹಾಗೂ ರಹಸ್ಯ ಬದುಕಿ ಶೈಲಿಯಿಂಲೇ ಜನಪ್ರಿಯತೆ ಪಡೆದವರು. ಇಡೀ ಉತ್ತರ ಕೊರಿಯಾವನ್ನು ತಮ್ಮ ಬೆರಳಿನ ಮೇಲೆ ಕುಣಿಸುತ್ತಿರುವ ಕಿಮ್ ಜಾಂಗ್​​ ಉನ್​​ರ ಸಂಪತ್ತು ಎಷ್ಟು ಇದೆ ಅಂತ ಗೊತ್ತಾದಲ್ಲಿ ಎಂತವರು ಕೂಡ ಒಮ್ಮೆ ಬೆಚ್ಚಿ ಬೀಳುತ್ತಾರೆ.

Advertisment

ಇದನ್ನೂ ಓದಿ:ಇರಾನ್​ನ ಟಾಪ್ ಕಮಾಂಡರ್ ಮೊಸಾದ್ ಏಜೆಂಟ್​? ಇಂತಹದೊಂದು ಅನುಮಾನ ಬಂದಿದ್ದೇಕೆ?
ಕಿಮ್ ಜಾಂಗ್​ ಉನ್ ಬಳಿ ಸರಿಸುಮಾರು 41 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಇತ್ತೀಚೆಗೆ ತಿಳಿದು ಬಂದಿದೆ. ಹಲವು ಮೂಲಗಳ ಮಾಹಿತಿ ಪ್ರಕಾರ, ಇಡೀ ಉತ್ತರ ಕೊರಿಯಾದ ಆರ್ಥಿಕತೆಯೇ ಕಿಮ್ ಜಾಂಗ್​​ ಉನ್ ಅವರ ಕಪಿಮುಷ್ಠಿಯಲ್ಲಿದೆ. ನೈಸರ್ಗಿಕ ಸಂಪತ್ತುಗಳ ಮೇಲೆಯೂ ಅವರ ಹಿಡಿತ ಇರುವ ಕಾರಣ ಈಗಾಗಲೇ ಸಾಕಷ್ಟು ಆಸ್ತಿಯನ್ನು ಮಾಡಿ ಐಷಾರಾಮಿ ಬದುಕು ನಡೆಸುತ್ತಿದ್ದಾರೆ.

publive-image

ಕಿಮ್ ಜಾಂಗ್ ಉನ್​ ಅವರ ಆಸ್ತಿ ವಿದೇಶಿ ಬ್ಯಾಂಕ್​ಗಳಲ್ಲಿ ಅತ್ಯಂತ ಭದ್ರವಾಗಿ ಹಾಗೂ ಸುರಕ್ಷಿತವಾಗಿ ಕೂಡಿಡಲಾಗಿದೆ ಎಂಬ ವರದಿಗಳು ಈಗ ಹರಿದಾಡುತ್ತಿವೆ. ಚೀನಾ, ಸಿಂಗಾಪೂರ್ ಹಾಗೂ ಸ್ವಿಡ್ಜರ್​ಲೆಂಡ್​ನಲ್ಲಿ ಒಟ್ಟು 200 ರಹಸ್ಯ ಬ್ಯಾಂಕ್ ಅಕೌಂಟ್​ಗಳನ್ನು ಕಿಮ್ ಜಾಂಗ್ ಉನ್ ಹೊಂದಿದ್ದು. ತಮ್ಮ ಎಲ್ಲಾ ಸಂಪತ್ತನ್ನು ಅಲ್ಲಿ ರಹಸ್ಯವಾಗಿ ಹಾಗೂ ಭದ್ರವಾಗಿ ಕೂಡಿಟ್ಟಿದ್ದಾರೆ ಎಂದು ಹೇಳಲಾಗಿದೆ.

publive-image

ಹೇಗಿದೆ ಗೊತ್ತಾ ಕಿಮ್ ಜಾಂಗ್ ಉನ್ ಐಷಾರಾಮಿ ಬದುಕು
ನೀವು ಜಗತ್ತಿನ ಅನೇಕ ರಾಷ್ಟ್ರಗಳ ನಾಯಕನ್ನು ನೋಡಿ, ಅವರು ತಮ್ಮ ದೇಶದ ಪ್ರಜೆಗಳ ಕಲ್ಯಾಣವನ್ನು ಮಾಡುವ ದಿಕ್ಕಿನಲ್ಲಿ ಯೋಚಿಸುತ್ತಾರೆ ಹಾಗೂ ಕಾರ್ಯನಿರ್ವಹಿಸುತ್ತಾರೆ. ಆದ್ರೆ ಕಿಮ್ ಜಾಂಗ್ ಉನ್ ಒಬ್ಬ ನಟೊರೀಯಸ್ ನಾಯಕ. ಅದರಲ್ಲೂ ಐಷಾರಾಮಿ ಬದುಕು ಬದುಕುವಲ್ಲಿ ಅವರು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರು. ಇವರ ವರ್ಷದ ಆದಾಯವೇ ಸರಿಸುಮಾರು 830 ಕೋಟಿ ರೂಪಾಯಿ ಎಂದೇ ಹೇಳಲಾಗತ್ತದೆ. ಇಡೀ ಉತ್ತರ ಕೊರಿಯಾದ ಹಣಕಾಸು ವ್ಯವಸ್ಥೆಯ ಮೇಲೆ ಹಾಗೂ ರಾಷ್ಟ್ರದ ನೈಸರ್ಗಿಕ ಸಂಪತ್ತನಿ ಮೇಲೆ ಇವರ ಬಿಗಿಮುಷ್ಠಿ ಇರುವುದರಿಂದ ಸಾಕಷ್ಟು ಸಂಪತ್ತನ್ನನು ಅಲ್ಲಿಂದಲೇ ಇವರು ಗಳಿಸಿದ್ದಾರೆ. ಕಿಮ್ ಜಾಂಗ್ ಉನ್ ಐಷಾರಾಮಿ ಬದಕು ನೋಡಿದ್ರೆ ಎಂತವರೂ ಕೂಡ ಒಂದು ಬಾರಿ ಹೊಟ್ಟೆಕಿಚ್ಚು ಉಂಟಾಗುತ್ತದೆ.

Advertisment

ಇದನ್ನೂ ಓದಿ:ಇರಾಕ್​ನಿಂದ ಮಿಗ್​ 21 ವಿಮಾನ ಕದ್ದಿದ್ದು ಹೇಗೆ ಇಸ್ರೇಲ್​? ಇದು ಮೊಸಾದ್​ನ ಆಪರೇಷನ್ ಡೈಮಂಡ್ ಕಥೆ

ಅವರ ಬಳಿ ಇರುವ ಎಲ್ಲಾ ವಸ್ತುಗಳು ಐಷಾರಾಮಿಯಿಂದ ಕೂಡಿವೆ. ಕಾರು, ತಮ್ಮದೇ ಖಾಸಗಿ ಹಡಗು, ಖಾಸಗಿ ಜೆಟ್ ಹೀಗೆ ಎಲ್ಲವೂ ಐಷಾರಾಮಿಯತೆಯಿಂದಲೇ ಕೂಡಿವೆ. ಮರ್ಸಿಡೀಜ್ ಬೆಂಜ್​ನಿಂದ ಹಿಡಿದು ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಎಲ್ಲಾ ಐಷಾರಾಮಿ ಕಾರ್​ಗಳು ಕೂಡ ಕಿಮ್ ಮನೆಯ ಮುಂದೆ ನಿಂತಿವೆ. ದೇಶ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳಿಂದ ಬಳಲಿದರೂ ಕೂಡ ಕಿಮ್​ ಐಷಾರಾಮಿ ಬದುಕಿನ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ. ಅವರ ಐಷಾರಾಮಿ ಬದುಕು ಇಂದಿಗೂ ಕೂಡ ಚಾಲ್ತಿಯಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment