newsfirstkannada.com

ಕಾಟೇರನಿಗೆ ‘ಪವಿತ್ರಾ’ ಕಂಟಕ ಇದೇ ಮೊದಲಲ್ಲ.. ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದೇಕೆ? ಅಸಲಿ ಕಾರಣವೇನು?

Share :

Published June 11, 2024 at 8:23pm

  ದರ್ಶನ್ ದಾಂಪತ್ಯದ ಬಿರುಕಿಗೆ ಕಾರಣವಾಗಿದ್ದ ನಟಿ ಪವಿತ್ರಗೌಡ

  ಪವಿತ್ರಾಗೌಡ ಮತ್ತು ದರ್ಶನ್ ಪತ್ನಿ ಮಧ್ಯೆ ದೊಡ್ಡ ಪೋಸ್ಟ್ ವಾರ್!

  ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ಕೊಲೆ ನಡೀತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್.. ಸಿನಿಮಾಗಳಿಂದ ಸುದ್ದಿಯಾಗಿದ್ದಕ್ಕಿಂತ ವಿವಾದಗಳಿಂದಲೇ ದರ್ಶನ್ ಹೆಸರು ಹೆಚ್ಚು ಸದ್ದು ಮಾಡಿದೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ದರ್ಶನ್ ಕಾಟೇರ ಸಕ್ಸಸ್​​ನಿಂದ ಮತ್ತೆ ಹಿಟ್​ ಸಿನಿಮಾಗಳನ್ನ ಕೊಡೋ ಹುಮ್ಮಸಿನ್ನಲ್ಲಿದ್ದರು. ದರ್ಶನ್​ ಕೆರಿಯರ್ ಇನ್ನೇನು ತಳಹದಿಗೆ ಬರ್ತಿದ್ದ ಅನ್ನೋವಾಗ್ಲೇ ಮತ್ತೊಂದು ಆಘಾತ ಎದುರಾಗಿದೆ. ಕೊಲೆ ಆರೋಪದಲ್ಲಿ ಸ್ಯಾಂಡಲ್​ವುಡ್​ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅರೆಸ್ಟ್ ಆಗಿದ್ದಾರೆ.

ಇದನ್ನೂ ಓದಿ: ಪವಿತ್ರಾ ಗೌಡ A1, ದರ್ಶನ್ A2; ಚಾಲೆಂಜಿಂಗ್ ಸ್ಟಾರ್‌ ಜೈಲಿಗೆ ಹೋಗೋದು ಪಕ್ಕಾನಾ? 

ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್!
ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದೇಕೆ ಸಾರಥಿ?
ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದಾರೆ. ಅದು ಸಾಮಾನ್ಯವಾದ ಕೇಸ್​ನಲ್ಲಿ ಅಲ್ಲವೇ ಅಲ್ಲ. ಮರ್ಡರ್ ಕೇಸ್​ನಲ್ಲಿ ದರ್ಶನ್​ರನ್ನ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪೊಲೀಸರ ವಶದಲ್ಲಿದ್ದಾರೆ. ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿ ಕೊಲೆ ಮಾಡಿಸಿರುವ ಆರೋಪದ ತೂಗುಕತ್ತಿ ದರ್ಶನ ನೆತ್ತಿ ಮೇಲೆ ನೇತಾಡ್ತಿದ್ದು ಹೊಸ ಸಂಕಷ್ಟ ಎದುರಾಗಿದೆ.

ದರ್ಶನ್ ಕೆರಿಯರ್​ನಲ್ಲೇ ಅತಿದೊಡ್ಡ ಕಳಂಕ ಈಗ ದರ್ಶನ್​ ಹಣೆಗೆ ಮೆತ್ತಿದೆ. ಇಷ್ಟು ದಿನ ಸಣ್ಣ ಪುಟ್ಟ ವಿವಾದಗಳಿಂದ ದರ್ಶನ ಹೆಸರು ಸದ್ದು ಮಾಡ್ತಿತ್ತು. ಆದ್ರೀಗ ಒಬ್ಬನ ಜೀವ ತೆಗೆದ ಆರೋಪ ದರ್ಶನ ಹೆಗಲೇರಿರೋದು ಅಭಿಮಾನಿಗಳಿಗೂ ದೊಡ್ಡ ಆಘಾತವನ್ನು ನೀಡಿದೆ. ಕೇವಲ ಕೊಲೆ ಮಾತ್ರವಲ್ಲ, ಮೃತನನ್ನ ಕಿಡ್ನ್ಯಾಪ್ ಮಾಡಿ ಕೂಡಿಟ್ಟು ಹಲ್ಲೆ ಮಾಡಿ ಬಳಿಕ ಕೊಲೆ ಮಾಡಿರುವ ಆರೋಪ ದರ್ಶನ ಬೆನ್ನಿಗೆ ಅಂಟಿಕೊಂಡಿದ್ದು ಹೊಸ ಕಂಟಕದಲ್ಲಿ ದಾಸ ಸಿಲುಕಿದ್ದಾರೆ.

ಜೂನ್ 8 ರಂದು ಕಾಮಾಕ್ಷಿ ಪಾಳ್ಯದ ಮೋರಿಯಲ್ಲಿ ಈ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಆ ದೇಹ ಯಾರದ್ದು ಎಂದು ತನಿಖೆ ಮಾಡಿದಾಗ ಚಿತ್ರದುರ್ಗದ ರೇಣುಕಾಸ್ವಾಮಿ ಎಂದು ಗೊತ್ತಾಗಿದೆ. ಈ ವೇಳೆ ಏಕಾಏಕಿ ಬೆಂಗಳೂರಿನ ಗಿರಿನಗರ ಮೂಲದ ಮೂವರು ಏಕಾಏಕಿ ಪೊಲೀಸ್ ಠಾಣೆಗೆ ಬಂದು ನಾವೇ ಕೊಲೆ ಮಾಡಿದ್ದೇವೆ ಅಂತ ತಪ್ಪೊಪ್ಪಿಕೊಂಡಿದ್ದರು. ಆಗ ಕೊಲೆಯ ತನಿಖೆ ಶುರು ಮಾಡಿದಾಗ ಕೊಲೆಯಲ್ಲಿ ದರ್ಶನ ಪಾತ್ರವಿರೋದು ಗೊತ್ತಾಗಿದೆ. ತಕ್ಷಣವೇ ಮೈಸೂರಿನಲ್ಲಿದ್ದ ದರ್ಶನ್​ರನ್ನ ಪೊಲೀಸರು ಅರೆಸ್ಟ್ ಮಾಡಿ ಬಳಿಕ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ಕೊಲೆ?
ದರ್ಶನ್ ವಿವಾದಗಳಲ್ಲಿ ಹೆಚ್ಚು ಸಂಚಲನಕ್ಕೆ ಕಾರಣವಾಗಿದ್ದ ಹೆಸರು ಅಂದ್ರೆ ಅದು ನಟಿ ಪವಿತ್ರಾಗೌಡ ಹೆಸರು. ಈಗ ಈ ರೇಣುಕಾಸ್ವಾಮಿ ಮರ್ಡರ್ ಕೇಸ್​ನಲ್ಲೂ ಇದೇ ಪವಿತ್ರಾಗೌಡ ಹೆಸರು ತಳುಕು ಹಾಕಿಕೊಂಡಿದೆ. ಅಸಲಿಗೆ ಕೊಲೆಯಾಗಿರುವ ರೇಣುಕಾಸ್ವಾಮಿ ದರ್ಶನ್ ಆತ್ಮೀಯ ಗೆಳತಿ ಪವಿತ್ರಾಗೌಡಗೆ ಅಶ್ಲೀಲವಾಗಿ ಮೆಸೆಜ್ ಮಾಡ್ತಿದ್ನಂತೆ. ಇದೇ ಕಾರಣಕ್ಕೆ ರೇಣುಕಾಸ್ವಾಮಿಯನ್ನ ಅಪಹರಣ ಮಾಡಿ ಥಳಿಸಿ ಕೊಲೆ ಮಾಡಿದ್ದಾರೆ ಅನ್ನೋದು ತನಿಖೆಯಲ್ಲಿ ಬಯಲಾಗಿರುವ ಅಂಶ.

ಯಾರಿದೂ ಪವಿತ್ರಾಗೌಡ? ಈಕೆಗೆ ದರ್ಶನ್‌ಗೆ ಹೇಗೆ ಪರಿಚಯ?
ದರ್ಶನ್ ದಾಂಪತ್ಯದ ಬಿರುಕಿಗೆ ಕಾರಣವಾಗಿದ್ದ ಪವಿತ್ರಗೌಡ!
ದರ್ಶನ್ – ಪವಿತ್ರಗೌಡ ಇಬ್ಬರು ಆತ್ಮೀಯ ಗೆಳಯರು ಅನ್ನೋದು ಜಗಜ್ಜಾಹೀರು ಆಗಿರುವ ವಿಚಾರ. ಇಬ್ಬರ ನಡುವಿನ ಈ ಸ್ನೇಹ ದರ್ಶನ ದಾಂಪತ್ಯದ ಬಿರುಕಿಗೂ ಕಾರಣವಾಗಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಗೌಡ ನಡುವಿನ ಮುಸುಕಿನ ಗುದ್ದಾಟಕ್ಕೂ ಈ ಪರಿಚಯ ನಾಂದಿ ಹಾಡಿತ್ತು. ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವಿನ ಕಲಹಕ್ಕೂ ಈ ಪವಿತ್ರಾಗೌಡ ಕಾರಣವಾಗಿದ್ರು. ಇದೀಗ ಈ ಪವಿತ್ರಾಗೌಡ ಕಾರಣದಿಂದಲೇ ದರ್ಶನ್​ಗೆ ಮತ್ತೊಂದು ಕಂಟಕ ಬೆನ್ನು ಬಿದ್ದಿದೆ.

ಹಾಗಂತ ಇದೇ ಮೊದಲು ದರ್ಶನ್ ಮತ್ತು ಪವಿತ್ರಗೌಡ ಹೆಸರು ಸದ್ದು ಮಾಡಿಲ್ಲ. ಈ ಹಿಂದೆಯೂ ಹಲವು ಬಾರಿ ದರ್ಶನ್ ಪವಿತ್ರಗೌಡ ಪರವೇ ಮಾತನಾಡಿದ್ದು ಇದೆ. ಪತ್ನಿಗಿಂತ ಪವಿತ್ರಗೌಡಗೆ ಹೆಚ್ಚು ಒತ್ತು ಕೊಟ್ಟಿರೋದು ಇದೆ. ಈ ವಿಚಾರ ವಿಜಯಲಕ್ಷ್ಮೀ ಮತ್ತು ಪವಿತ್ರಗೌಡ ನಡುವಿನ ಪೋಸ್ಟರ್ ವಾರ್​ಗೂ ಕಾರಣವಾಗಿ ಅದು ದೊಡ್ಡ ಹಲ್ ಚಲ್ ಸೃಷ್ಟಿಸಿಬಿಟ್ಟಿತ್ತು.

ಇದನ್ನೂ ಓದಿ: ನಟ ದರ್ಶನ್​ ಮತ್ತು ಗ್ಯಾಂಗ್​ಗೆ ಎಷ್ಟು ದಿನ ಕಸ್ಟಡಿ? ಪೊಲೀಸ್ರಿಗೆ ಕೋರ್ಟ್​ ಕೊಟ್ಟ ಸೂಚನೆಯೇನು? 

ದರ್ಶನ್ ಯಾವುದೇ ವಿವಾದವಿದ್ರೂ ಅಲ್ಲಿ ಮೊದಲು ಕೇಳಿ ಬರೋದೆ ಈ ಪವಿತ್ರಗೌಡ ಹೆಸರು. ಹಾಗಾದ್ರೆ ಯಾರು ಈ ಪವಿತ್ರಾಗೌಡ ಅಂತ ನೋಡೋದಾದ್ರೆ ಪವಿತ್ರಾಗೌಡ ಮಾಡೆಲ್ ಕಂ ನಟಿ. ಸಣ್ಣ, ಪುಟ್ಟ ಪಾತ್ರಗಳನ್ನು ಮಾಡುತ್ತಾ ಪವಿತ್ರಗೌಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಕಿರುತೆರೆ ಸಹ ಕಲಾವಿದೆಯಾಗಿ ಕೆಲಸ ಮಾಡ್ತಿದ್ದ ಪವಿತ್ರಗೌಡ ನಾಲ್ಕೈದು ಸಿನಿಮಾಗಳಲ್ಲೂ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಛತ್ರಿಗಳು ಸಾರ್ ಛತ್ರಿಗಳು, ಅಗಮ್ಯ, ಸಾಗುವ ದಾರಿ ಸಿನಿಮಾಗಳಲ್ಲಿ ಪವಿತ್ರಾಗೌಡ ಬಣ್ಣ ಹಚ್ಚಿದ್ದಾರೆ. ಇನ್ನೊಂದು ವಿಚಾರ ಏನಂದ್ರೆ ಪವಿತ್ರಾಗೌಡಗೆ ಮದುವೆಯಾಗಿ ಒಬ್ಬ ಮಗಳು ಕೂಡ ಇದ್ದಾಳೆ.

ಜಗ್ಗುದಾದ ಸಿನಿಮಾದಲ್ಲಿ ಪವಿತ್ರಾಗೌಡ ಪರಿಚಯ!
ದರ್ಶನ್​ ಅಭಿನಯದ ಜಗ್ಗುದಾದ ಸಿನಿಮಾದ ವೇಳೆಯೇ ಈ ಪವಿತ್ರಗೌಡ ಮತ್ತು ದರ್ಶನ್ ನಡುವೆ ಪರಿಚಯ ಆಗಿತ್ತು. ಬಳಿಕ ಇಬ್ಬರ ನಡುವಿನ ಸ್ನೇಹ ಇನ್ನಷ್ಟು ಗಟ್ಟಿಯಾಗಿತ್ತು. ಇದಾದ ಮೇಲೆ ಇಬ್ಬರು ಒಟ್ಟೊಟ್ಟಿಗೆ ಓಡಾಡೋದಕ್ಕು ಶುರು ಮಾಡಿದ್ದರು. ಪವಿತ್ರಾ ಗೌಡ ಮನೆಯ ಯಾವುದೇ ಕಾರ್ಯಕ್ರಮವಿದ್ರೂ ಅಲ್ಲಿ ದರ್ಶನ್ ಹಾಜರಿ ಇರುತ್ತಿತ್ತು. ಇತ್ತ ದರ್ಶನ್ ಯಾವುದೇ ಸಿನಿಮಾ ರಿಲೀಸ್ ಆದ್ರೂ ಪವಿತ್ರಾಗೌಡ ಮಿಸ್ ಮಾಡ್ತಿರಲಿಲ್ಲ. ದರ್ಶನ್ ಅವರ ಬರ್ತ್‌ಡೇಯನ್ನೂ ಕೂಡ ಪವಿತ್ರಾಗೌಡ ತಮ್ಮ ಆಪ್ತ ಸ್ನೇಹಿತರ ಜೊತೆ ಸಪರೇಟ್‌ ಆಗಿ ಸೆಲಬ್ರೇಟ್‌ ಮಾಡ್ತಿದ್ದರು. ಮೈಸೂರಿನಲ್ಲಿ ವೇಟರ್ ಮೇಲೆ ನಡೆದ ಹಲ್ಲೆ ಪ್ರಕರಣದ ವೇಳೆಯೂ ಪವಿತ್ರಗೌಡ ದರ್ಶನ್ ಜೊತೆಯಲ್ಲೇ ಇದ್ದರು. ಅಷ್ಟೇ ಯಾಕೆ ಪವಿತ್ರಾ ಗೌಡ ಮಗಳ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿ ಡ್ಯಾನ್ಸ್ ಕೂಡ ಮಾಡಿದ್ದರು.

ಕಾಟೇರ್ ಸಕ್ಸಸ್ ಸೆಲೆಬ್ರೇಟ್ ಮಾಡಿದ್ದ ಪವಿತ್ರಾಗೌಡ
ಒಂದಲ್ಲ, ಎರಡಲ್ಲ ದರ್ಶನ್ ಮತ್ತು ಪವಿತ್ರಗೌಡ ನಡುವೆ 10 ವರ್ಷದ ಸ್ನೇಹವಿದೆ. ಇದೇ ಕಾರಣಕ್ಕೆ ಪವಿತ್ರಗೌಡ ಸಂಕಷ್ಟದ ಸಮಯದಲ್ಲಿ ದರ್ಶನ್ ಹೆಗಲು ಕೊಟ್ಟು ಜೊತೆಯಾಗಿ ನಿಲ್ಲುತ್ತಿದ್ದರು. ಪವಿತ್ರಗೌಡ ಶುರು ಮಾಡಿದ್ದ ಬೊಟಿಕ್‌ಗೂ ದರ್ಶನ್ ಸಹಾಯ ಮಾಡಿದ್ದರು ಎನ್ನಲಾಗಿದೆ. ಆರ್‌.ಆರ್‌. ನಗರದಲ್ಲಿ ಪವಿತ್ರಾಗೌಡ ರೆಡ್‌ಕಾರ್ಪೆಟ್‌ ಸ್ಟುಡಿಯೋ ಓಪನ್ ಮಾಡಿದ್ದಾರೆ. ಈ ಸ್ಟುಡಿಯೋ ಓಪನ್ ಮಾಡೋದಕ್ಕೆ ದರ್ಶನ್ ನೆರವಾಗಿದ್ರು ಅನ್ನೋದು ಬಲ್ಲ ಮೂಲಗಳಿಂದ ಬಂದಿರುವ ಮಾಹಿತಿ. ಇಷ್ಟೆಲ್ಲ ಅಲ್ಲದೇ ದರ್ಶನ್​ಗೆ ಬ್ರೇಕ್​ ಕೊಟ್ಟ ಕಾಟೇರ್​​ ಸಿನಿಮಾ ಸಕ್ಸಸ್​ ಕೂಡ ಪವಿತ್ರಾಗೌಡ ಸೆಲೆಬ್ರೇಟ್ ಮಾಡಿದ್ದರು. ತಮ್ಮ ಫ್ರೆಂಡ್ಸ್​ ಜೊತೆ ಸಿನಿಮಾ ನೋಡಿ ಬೆಸ್ಟ್ ಆಫ್ ಲಕ್ ತಿಳಿಸಿದ್ದರು.

ದರ್ಶನ್-ಪವಿತ್ರಾ ಸ್ನೇಹ.. ವಿಜಯಲಕ್ಷ್ಮೀ ಕೆಂಡಾಮಂಡಲ!
ದರ್ಶನ್ ಮತ್ತು ಪವಿತ್ರಗೌಡ ಮಧ್ಯೆ ಆತ್ಮೀಯ ಬಾಂಧವ್ಯ ಇರೋದು ಯಾವಾಗ ದರ್ಶನ್ ಪತ್ನಿಗೆ ಗೊತ್ತಾಯ್ತೋ ಆಗಲೇ ನೋಡಿ ಅಸಲಿ ಹೈಡ್ರಾಮಾ ಶುರುವಾಗಿದೆ. ಅದ್ಯಾವಾಗ ದರ್ಶನ್ ಪವಿತ್ರಾಗೌಡ ಜೊತೆ ಕ್ಲೋಸ್ ಆಗೋದಕ್ಕೆ ಶುರು ಮಾಡಿದ್ರೂ ಇದು ಪತ್ನಿ ವಿಜಯಲಕ್ಷ್ಮೀಗೆ ನುಂಗಲಾರದ ತುತ್ತಾಗಿತ್ತು. ಇದೇ ಕಾರಣಕ್ಕೆ ಪವಿತ್ರಾಗೌಡ ಮತ್ತು ದರ್ಶನ್ ಪತ್ನಿ ಮಧ್ಯೆ ಜನವರಿಯಲ್ಲಿ ದೊಡ್ಡ ಪೋಸ್ಟ್ ವಾರ್ ನಡೆದು ಅದು ಕೂಡ ಸ್ಯಾಂಡಲ್​ವುಡ್​ನಲ್ಲಿ ಹಲ್​ಚಲ್ ಎಬ್ಬಿಸಿಬಿಟ್ಟಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಟೇರನಿಗೆ ‘ಪವಿತ್ರಾ’ ಕಂಟಕ ಇದೇ ಮೊದಲಲ್ಲ.. ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದೇಕೆ? ಅಸಲಿ ಕಾರಣವೇನು?

https://newsfirstlive.com/wp-content/uploads/2024/06/darshan4.jpg

Load More