newsfirstkannada.com

ಪವಿತ್ರಾ ಗೌಡ ಮಾತ್ರವಲ್ಲ ಆ ನಟಿಗೂ ಖಡಕ್​ ವಾರ್ನಿಂಗ್​ ಕೊಟ್ಟ ದರ್ಶನ್​​ ಪತ್ನಿ; ಏನಿದು ಸ್ಟೋರಿ..?

Share :

Published January 26, 2024 at 3:19pm

    ಪವಿತ್ರಾರ ಪೋಸ್ಟ್‌ಗೆ ಮಧ್ಯ ರಾತ್ರಿಯೇ ದರ್ಶನ್ ಪತ್ನಿ ಕೌಂಟರ್!

    ಪವಿತ್ರಾ ಗೌಡರ ಆ ಫೋಟೋಸ್ ಹೊರಬಿಟ್ಟಿದ್ಯಾಕೆ ದರ್ಶನ್ ಪತ್ನಿ?

    ‘ಆ’ ಕಿರುತೆರೆ ನಟಿಗೂ ಖಡಕ್ ವಾರ್ನಿಂಗ್ ಕೊಟ್ಟಿದ್ದ ವಿಜಯಲಕ್ಷ್ಮೀ!

ಹೊಸ ಸಮರ.. ಫೋಟೋ ಸಮರ.. ಇದು ಸೆಲೆಬ್ರಿಟಿ ಮಹಿಳಾಮಣಿಗಳ ದೊಡ್ಡ ಸಮರ. ಕೆಲವೊಮ್ಮೆ ಕೆಲವರು ಹೊತ್ತಿಸೋ ಕಿಡಿ ದೊಡ್ಡಮಟ್ಟದ ಜ್ವಾಲೆಯಾಗಿ ತನ್ನನ್ನೇ ಸುಡಬಹುದು ಅನ್ನೋ ಅರಿವು ಅವರಿಗೆ ಇರೋದಿಲ್ಲ. ಇದೀಗ ಅಂಥದ್ದೇ ತಪ್ಪನ್ನ ದರ್ಶನ್​ ಆಪ್ತ ಗೆಳತಿ ಪವಿತ್ರಾ ಗೌಡ ಮಾಡಿದ್ರಾ ಅನ್ನೋದೇ ಸದ್ಯಕ್ಕೆ ಹುಟ್ಟಿರೋ ಅನುಮಾನ. ಅದಕ್ಕೆ ಕಾರಣ ತಾವು ಹಾಕಿರೋ ಫೋಟೋಗಳಿಂದ ಮತ್ತೊಂದು ಮನೆಯಲ್ಲಿ ಹೊತ್ತಿರುವ ಬೆಂಕಿ. ಅಷ್ಟಕ್ಕೂ ಪವಿತ್ರ ಗೌಡ ತಮ್ಮ ನಡೆಯ ಆಳ ಅಪಾಯವನ್ನ ಅರಿತೇ ಈ ರೀತಿ ಮಾಡಿದ್ರಾ ಗೊತ್ತಿಲ್ಲ. ಇನ್ನೊಂದು ಹೆಣ್ಣಿನ ಜೊತೆಗೆ ತನ್ನ ಪತಿಯನ್ನ ನೋಡಿ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪತ್ನಿ ಕೆರಳಿ ಕೆಂಡವಾಗಿರೋದಂತೂ ಸತ್ಯ. ಇದು ಹೊಸ ಯುದ್ಧಕ್ಕೆ ನಾಂದಿ ಹಾಡಿರೋದೂ ಸತ್ಯವೇ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿರೋ ಫೋಟೋಗಳನ್ನ ಹಂಚಿಕೊಂಡು ನಮ್ಮದು 10 ವರ್ಷಗಳ ಸಂಬಂಧ. ನಮ್ಮ ರಿಲೇಶನ್‌ಶಿಪ್‌ಗೆ ದಶಕವಾಯ್ತು ಅಂತಾ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿರೋ ಪವಿತ್ರಾ ಗೌಡ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು ಕೆರಳುವಂತೆ ಮಾಡಿದ್ದಾರೆ. ಪವಿತ್ರಾ ಗೌಡರ ಇನ್‌ಸ್ಟಾದಲ್ಲಿ ಈ ಪೋಸ್ಟ್ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ದರ್ಶನ್ ಪತ್ನಿ ಕೌಂಟರ್ ಪೋಸ್ಟ್ ಮಾಡಿ ಆಕ್ರೋಶ ಹೊರಗೆಡವಿದ್ದಾರೆ. ಪವಿತ್ರಾ ಗೌಡ ಅವರ ಮೇಲೆ ನೇರವಾದ ಆರೋಪ ಮಾಡಿರೋ ವಿಜಯಲಕ್ಷ್ಮಿಯವರು ಕಾನೂನು ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ಪವಿತ್ರಾ ಗೌಡ ಅವರು ತಮ್ಮ ಇನ್‌ಸ್ಟಾದಲ್ಲಿ ದರ್ಶನ್ ಜೊತೆಗಿನ ಪೋಟೋಗಳನ್ನ ಪೋಸ್ಟ್ ಮಾಡಿ ತಮ್ಮದು 10 ವರ್ಷಗಳ ಸಂಬಂಧ ಅಂತಾ ಹೇಳಿಕೊಂಡಿರೋದ್ರ ಅಸಲಿಯತ್ತೇನು? ಅದು ಯಾವ ರೀತಿಯ ಸಂಬಂಧ ಎಂಬ ಪ್ರಶ್ನೆಗಳು ಹುಟ್ಟೇ ಹುಟ್ಟುತ್ವೆ ಅಲ್ವಾ?

ದಿನಸಿ ಅಂಗಡಿ ವ್ಯಾಪಾರಿ ಆಗಿದ್ದ ಪವಿತ್ರಾ ಗೌಡ ಪತಿ?
ಜಗ್ಗುದಾದ ಸಿನಿಮಾ ಆಡಿಷನ್​ ವೇಳೆ ದರ್ಶನ್​​-ಪವಿತ್ರಾ ಪರಿಚಯ!

ಅಷ್ಟಕ್ಕೂ ದರ್ಶನ್​​ ಜೊತೆಗಿರೋ ಫೋಟೋಸ್​ ಹಾಕಿ ವಿವಾದದ ಕೇಂದ್ರ ಬಿಂದುವಾಗಿರೋ ಈ ಪವಿತ್ರಾ ಗೌಡ ಯಾರು? ಅವರು ದರ್ಶನ್ ಸಂಪರ್ಕಕ್ಕೆ ಬಂದದ್ದು ಹೇಗೆ ಎಂಬ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡ್ತಿವೆ. ಪವಿತ್ರಾ ಗೌಡ ಅವರು 2013ರಲ್ಲಿ ತೆರೆಕಂಡ ಛತ್ರಿಗಳು ಸಾರ್ ಛತ್ರಿಗಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಎನ್ನಲಾಗಿದೆ. ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಪವಿತ್ರಾ ಗೌಡ ಅವರು ಸಿನಿರಂಗಕ್ಕೆ ಎಂಟ್ರಿಯಾದ ಬಳಿಕ ನಾಲ್ಕೈದು ಸಿನಿಮಾಗಳಲ್ಲಿಯೂ ನಟಿಸಿದ್ದರಂತೆ. ಇನ್ನು ಪವಿತ್ರಾ ಗೌಡ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡ್ತಿವೆ. ಅವರಿಗೆ 18ನೇ ವಯಸ್ಸಿಗೆ ಸಂಜಯ್ ಸಿಂಗ್ ಎಂಬವರ ಜೊತೆ ಮದುವೆಯಾಗಿತ್ತಂತೆ. ದಿನಸಿ ಅಂಗಡಿ ವ್ಯಾಪಾರಿಯಾಗಿದ್ದ ಸಂಜಯ್ ಸಿಂಗ್ ಜೊತೆ ಪವಿತ್ರಾ ಗೌಡ ಅವರು ಪ್ರೀತಿಸಿ ದಾಂಪತ್ಯ ಜೀವನ ಆರಂಭಿಸಿದ್ರಂತೆ. ಪ್ರೀತಿಸಿ ಮದುವೆಯಾಗಿದ್ದ ಪವಿತ್ರಾ ಮತ್ತು ಸಂಜಯ್ ಸಿಂಗ್ ಜೋಡಿ ಚಾಮರಾಜಪೇಟೆಯಲ್ಲಿ ವಾಸವಿದ್ದರಂತೆ. ಆ ಸಂದರ್ಭದಲ್ಲೇ ಪವಿತ್ರಾ ಗೌಡ ಅವರು ಹೆಣ್ಣುಮಗುವಿಗೂ ಜನ್ಮನೀಡಿದ್ದರಂತೆ. ಖುಷಿ ಗೌಡ ಸಂಜಯ್ ಸಿಂಗ್ ಮತ್ತು ಪವಿತ್ರಾ ದಂಪತಿಗೆ ಜನಿಸಿದ ಮಗಳು ಎನ್ನಲಾಗ್ತಿದೆ. ವಿಜಯಲಕ್ಷ್ಮಿಯವರೂ ಕೂಡ ತಮ್ಮ ಕೌಂಟರ್ ಪೋಸ್ಟ್‌ನಲ್ಲಿ ಇದೇ ವಿಚಾರವನ್ನ ಹೊರಗೆಡವಿದ್ದಾರೆ. ಇನ್ನು ಪವಿತ್ರಾ ಗೌಡ ಅವರು ಮದುವೆಯಾದ ಕೆಲ ವರ್ಷಗಳ ಬಳಿ ಪತಿಯಿಂದ ದೂರವಾಗಿದ್ದಾರೆ ಎನ್ನಲಾಗಿದೆ.

ಅದಾದ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟು ಕೆಲ ಸಿನಿಮಾಗಳಲ್ಲಿ ನಟಿಸಿದ್ರು. ಹೀಗೆ ನಟ ದರ್ಶನ್ ನಟನೆಯ ಜಗ್ಗುದಾದ ಸಿನಿಮಾದ ಆಡಿಷನ್ಸ್‌ಗೆಂದು ಪವಿತ್ರಾ ತೆರಳಿದ್ದಾಗ ದರ್ಶನ್‌ ಜೊತೆ ಪರಿಚಯ ಆಯ್ತಂತೆ. ಅಲ್ಲಿಂದ ದರ್ಶನ್ ಆಪ್ತ ಬಳಗದಲ್ಲಿ ಪವಿತ್ರಾ ಗೌಡ ಗುರುತಿಸಿಕೊಂಡಿದ್ದಾರೆ. ಸದ್ಯ ಪವಿತ್ರಾ ಗೌಡ ಅವರು ಬೆಂಗಳೂರಿನಲ್ಲಿ ಬಟ್ಟೆ ಉದ್ಯಮದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಆದ್ರೆ.. ಕೆಲ ವರ್ಷಗಳಿಂದಲೂ ದರ್ಶನ್ ಜೊತೆ ಪವಿತ್ರಾ ಗೌಡ ಹೆಸರು ಕೇಳಿಬರ್ತಿತ್ತು. ದರ್ಶನ್‌ರ ಜೊತೆ ಪವಿತ್ರಾ ಗೌಡರ ಫೋಟೋಗಳು ವೈರಲ್ ಆಗ್ತಿದ್ವು. ಈ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಗಳು ಶುರುವಾಗಿದ್ವು. ಆದ್ರೆ.. ಇದೇ ಮೊದಲ ಬಾರಿಗೆ ಖುದ್ದು ಪವಿತ್ರಾ ಗೌಡ ಅವರು ದರ್ಶನ್ ಜೊತೆಗಿರೋ ಫೋಟೋ ಪೋಸ್ಟ್ ಮಾಡಿ ತಮ್ಮದು 10 ವರ್ಷಗಳ ಸಂಬಂಧ ಎಂದು ಬರೆದುಕೊಂಡಿದ್ದಾರೆ. ಇದು ಸಂಚಲನಕ್ಕೆ ಕಾರಣವಾಗಿದ್ರೆ, ದರ್ಶನ್ ಪತ್ನಿ ಕೆಂಗಣ್ಣಿಗೆ ತುತ್ತಾಗಿದೆ.

ಇನ್ನು, ನಟ ದರ್ಶನ್ ಜೊತೆಯಲ್ಲಿ ಮೊದಲ ಬಾರಿಗೆ ಪವಿತ್ರಾ ಗೌಡ ಹೆಸರು ಚಾಲ್ತಿಗೆ ಬಂದಿದ್ದು 2017ರಲ್ಲಿ ಎಂಬ ಸುದ್ದಿಗಳಿವೆ. ಪವಿತ್ರಾ ಗೌಡ ಅವರು 2017 ರಲ್ಲಿ ಮೊದಲ ಬಾರಿಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್ ಜೊತೆಗಿರೋ ಫೋಟೋವನ್ನು ಪ್ರೊಫೈಲ್‌ ಆಗಿ ಹಾಕಿಕೊಂಡಿದ್ರಂತೆ. ಅಲ್ಲಿಂದ ದರ್ಶನ್ ಮತ್ತು ಪವಿತ್ರಾ ಗೌಡ ಬಗ್ಗೆ ಸುದ್ದಿಗಳು ಹರಿದಾಡಲು ಶುರುವಾಗಿದ್ವು. ಅಲ್ಲದೇ ಪವಿತ್ರಾ ಗೌಡ ಮತ್ತು ದರ್ಶನ್ ಕುಟುಂಬಸ್ಥರ ಜೊತೆಗಿನ ಕೆಲವೊಂದು ಫೋಟೋಗಳೂ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ವು. ದರ್ಶನ್ ತಾಯಿ ಸೇರಿದಂತೆ ದರ್ಶನ್ ಕುಟುಂಬಸ್ಥರ ಜೊತೆ ಪವಿತ್ರಾ ಗೌಡ ಅವರು ತೆಗೆಸಿಕೊಂಡಿದ್ದ ಆ ಫೋಟೋಗಳನ್ನು ನೋಡಿದೋರು ದರ್ಶನ್ ಮತ್ತು ಪವಿತ್ರಾ ಗೌಡ ಅವರ ನಡುವೆ ಏನೋ ನಡೀತಿದೆ ಅಂತ ಮಾತಾಡಿಕೊಂಡಿದ್ದಂತೂ ಸುಳ್ಳಲ್ಲ! ಇದೀಗ ಖುದ್ದು ಪವಿತ್ರಾ ಗೌಡ ಅವರೇ ಪೋಸ್ಟ್ ಮಾಡಿರೋ ಈ ಫೋಟೋಗಳು ಕೆಲವೊಂದು ಪ್ರಶ್ನೆಗಳನ್ನು ಹುಟ್ಟಿಸಿವೆ. ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಆ ರಿಲೇಶನ್‌ಶಿಪ್ ಯಾವ ರೀತಿಯದ್ದು ಎಂಬ ಚರ್ಚೆ ಶುರುವಾಗಿದೆ. ಮತ್ತೊಂದು ವಿಚಾರ ಅಂದ್ರೆ.. ಬುಧವಾರ ರಾತ್ರಿ ಪವಿತ್ರಾ ಗೌಡ ದರ್ಶನ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡೋಕೂ ಮೊದ್ಲು ದರ್ಶನ್ ಜೊತೆಯಲ್ಲೇ ಇದ್ದರಾ ಎಂಬ ಪ್ರಶ್ನೆಯೂ ಹುಟ್ಟಿದೆ.

ಹೌದು, ಪವಿತ್ರ ಗೌಡ ಅವರು ತಮ್ಮ ಮಗಳ ಜೊತೆ ಕಬಿನಿಯಲ್ಲಿದ್ದರು. ದರ್ಶನ್ ಕೂಡ ಅವರ ಜೊತೆಯಲ್ಲೇ ಇದ್ದರು ಎಂಬ ಸುದ್ದಿಗಳಿವೆ. ಇದಕ್ಕೆ ಪುಷ್ಠಿ ನೀಡುವಂತೆ ಪವಿತ್ರ ಗೌಡ ಅವರ ಇನ್ಸ್ಟಾ ಗ್ರಾಂನ ಸ್ಟೋರಿ ವೈರಲ್ ಆಗಿದೆ. ವೈರಲ್ ಆದ ಫೋಟೋದಲ್ಲಿ ಪವಿತ್ರ ಗೌಡ ಕ್ಯಾಮೆರಾ ಹಿಡಿದಿರೋ ಫೋಟೋದಲ್ಲಿ ‘Caught her today Kabini Forest Karnataka’ ಎಂದು ದಿನಾಂಕ ಹಾಗೂ ದಿನದ ಸಮೇತ ಬರೆದುಕೊಂಡಿದ್ದಾರೆ. ಪವಿತ್ರಾ ಗೌಡ ಕಬಿನಿಯಲ್ಲಿ ತೆಗೆಸಿಕೊಂಡಿರೋ ಫೋಟೋದಲ್ಲಿ ದರ್ಶನ್ ಜೊತೆಯಲ್ಲಿದ್ದಾರೆ. ಹಾಗಾಗಿ ಕಬಿನಿ ಭೇಟಿಯ ನೆನಪಿಗಾಗಿ ಬುಧವಾರ ರಾತ್ರಿ ದರ್ಶನ್ ಜೊತೆಗಿನ 10 ವರ್ಷದ ಸಂಬಂಧದ ಬಗ್ಗೆ ಪೋಸ್ಟ್ ಮಾಡಿದರಾ ಎಂಬ ಪ್ರಶ್ನೆ ಹುಟ್ಟಿದೆ. ಸದ್ಯ ಚರ್ಚೆಯಾಗ್ತಿರೋ ಮತ್ತೊಂದು ವಿಚಾರ ಅಂದ್ರೆ.. ದರ್ಶನ್ ಜೊತೆ ಪವಿತ್ರಾ ಗೌಡ, ಪವಿತ್ರಾ ಗೌಡರ ಆಪ್ತಬಳಗ ಕಬಿನಿಗೆ ಹೋಗಿರೋ ಬಗ್ಗೆ ವಿಜಯಲಕ್ಷ್ಮಿಗೆ ತಿಳಿದಿತ್ತಾ ವಿಚಾರ ತಿಳಿದ ಬಳಿಕ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪತಿ ದರ್ಶನ್ ಮತ್ತು ಮಗನ ಜೊತೆಗಿರೋ ಫೋಟೋ ಹಾಕಿ ಇದು ನಮ್ಮ ಕುಟುಂಬ, ನಮಗಿರೋ ಒಬ್ಬನೇ ಮಗ ಎಂದು ಪೋಸ್ಟ್ ಹಾಕಿದ್ರಾ.. ಖಂಡಿತ ಗೊತ್ತಿಲ್ಲ. ಆದ್ರೆ.. ಇಂಥಾದ್ದೊಂದು ಚರ್ಚೆ ಹುಟ್ಟಿರೋದಂತೂ ಸತ್ಯ!

ಪವಿತ್ರಾ ಗೌಡ ವಿರುದ್ಧ ಕಾನೂನು ಸಮರ ಸಾರ್ತರಾ ದರ್ಶನ್ ಪತ್ನಿ?

ಪವಿತ್ರಾ ಗೌಡ ಅವರ ಪೋಸ್ಟ್ ವಿರುದ್ಧ ಕೆಂಡಾಮಂಡಲಗೊಂಡಿರೋ ವಿಜಯಲಕ್ಷ್ಮಿಯವರು ಕಾನೂನು ಸಮರ ಸಾರುವ ಎಚ್ಚರಿಕೆ ಕೊಟ್ಟಿದ್ದಾರೆ. ಪವಿತ್ರಾ ಗೌಡ ಅವರು ಸಮಾಜಕ್ಕೆ ತಪ್ಪು ಸಂದೇಶ ನೀಡ್ತಿದ್ದಾರೆ ಎಂದು ನೇರವಾಗಿ ಆರೋಪಿಸಿರೋ ವಿಜಯಲಕ್ಷ್ಮಿಯವರು ಅಂಥವರಿಗೆ ಶಿಕ್ಷೆಯಾಗಬೇಕು ಎಂದು ಸಿಟ್ಟು ಹೊರಗೆಡವಿದ್ದಾರೆ. ಹಾಗಾಗಿ ಪವಿತ್ರಾ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಸಂಘರ್ಷ ಅದ್ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದನ್ನ ಕಾದು ನೋಡಬೇಕಿದೆ. ಹೌದು ದರ್ಶನ್ ಸಂಸಾರದಲ್ಲಿ ‘ಪವಿತ್ರಾ ಗೌಡ’ ಹೆಸರಿನ ಬಿರುಗಾಳಿ ಏಳುತ್ತಾ ಎಂಬ ಚರ್ಚೆ ಶುರುವಾಗಿದೆ. ನಟ ದರ್ಶನ್ ಪತ್ನಿ ಮಾಡಿರೋ ಆರೋಪಗಳಿಗೆ ವಿಜಯಲಕ್ಷ್ಮಿ ಕೌಂಟರ್ ಕೊಡ್ತಾರಾ ಎಂಬ ಕುತೂಹಲ ಶುರುವಾಗಿದೆ. ಅಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪಷ್ಟನೆ ನೀಡ್ತಾರಾ ಅಥವಾ ಸಂಸಾರದ ಸಂಘರ್ಷವನ್ನು ಆಂತರಿಕವಾಗಿಯೇ ಬಗೆಹರಿಸಿಕೊಳ್ತಾರಾ ಎಂಬುದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ಗೌಡ ಮಾತ್ರವಲ್ಲ ಆ ನಟಿಗೂ ಖಡಕ್​ ವಾರ್ನಿಂಗ್​ ಕೊಟ್ಟ ದರ್ಶನ್​​ ಪತ್ನಿ; ಏನಿದು ಸ್ಟೋರಿ..?

https://newsfirstlive.com/wp-content/uploads/2024/01/dboss-22.jpg

Load More