/newsfirstlive-kannada/media/post_attachments/wp-content/uploads/2024/04/RCB-KOHLI-1.jpg)
ಸೋಲು.. ಸೋಲು.. ಸೋಲು.. ಹೋಮ್​​​ಗ್ರೌಂಡ್​ನಲ್ಲಿ ಶುಭಾರಂಭ ಮಾಡಿದ ಆರ್​ಸಿಬಿ ಇದೀಗ ಹ್ಯಾಟ್ರಿಕ್ ಸೋಲು ಕಂಡಿದೆ. ದಯನೀಯ ವೈಫಲ್ಯ, ತಂಡದ ದುಸ್ಥಿತಿಗೆ ಕಾರಣನೇ ಈ ಫ್ಲಾಪ್ ಸ್ಟಾರ್ಸ್​. ಈ ಸ್ಟಾರ್​​ಗಳು ಆರ್ಭಟಿಸಿ ತಂಡದ ಮಾನ ಉಳಿಸ್ತಾರೆ ಅಂತಾ ಅಂದುಕೊಂಡ್ರೆ ಇವ್ರು ಮಾನವನ್ನ ಹರಾಜು ಹಾಕಿದ್ದಾರೆ.
ಫ್ಲಾಪ್​​​, ಫ್ಲಾಪ್​​, ಫ್ಲಾಪ್​​​..! ಇವರೇ ನೋಡಿ ಆರ್​ಸಿಬಿ ಫ್ಲಾಪ್ ಸ್ಟಾರ್ಸ್​. 17ನೇ ಐಪಿಎಲ್​​​ ಆವೃತ್ತಿಯಲ್ಲಿ ಸ್ಟಾರ್​​ಗಳು ಅಟ್ಟರ್​​ ಫ್ಲಾಪ್​ ಶೋ ನೀಡ್ತಿದ್ದಾರೆ. ಕ್ಯಾಪ್ಟನ್ ಫಾಫ್​ ಡುಪ್ಲೆಸಿ, ಗ್ಲೆನ್​ ಮ್ಯಾಕ್ಸ್​ವೆಲ್​​​, ಕ್ಯಾಮರೂನ್ ಗ್ರೀನ್ ಹಾಗೂ ರಜತ್ ಪಟೀದಾರ್​​​! ಇವರ ದಯನೀಯ ವೈಫಲ್ಯ ತಂಡವನ್ನ ಹ್ಯಾಟ್ರಿಕ್​​​​ ಸೋಲಿನ ಪ್ರಪಾತಕ್ಕೆ ತಳ್ಳಿದೆ.
ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ PSI ಜಗದೀಶ್ ಬರ್ಬರ ಹತ್ಯೆ ಕೇಸ್; ಅಪರಾಧಿಗೆ ಜೀವಾವಧಿ ಶಿಕ್ಷೆ
ಸ್ಟಾರ್ ಬ್ಯಾಟ್ಸ್​​ಮನ್ ಅನ್ನಿಸಿಕೊಂಡ ಗ್ಲೆನ್ ಮ್ಯಾಕ್ಸ್​​ವೆಲ್​ ಆಡುವ ರೀತಿನಾ ಇದು? ನಿಜಕ್ಕೂ ಶೇಮ್ ಆಗ್ಬೇಕು.. ಆಸಿಸ್​ ಪರ ಅಬ್ಬರಿಸಿ ಬೊಬ್ಬಿರುವ ಮ್ಯಾಕ್ಸಿ, ಆರ್​ಸಿಬಿ ಪರ ಒಂದೊಂದು ರನ್​ಗೂ ಹೆಣಗಾಡ್ತಿದ್ದಾರೆ. ಐದು ಪಂದ್ಯವಾಡಿ, ಬರೀ 32 ರನ್ ಗಳಿಸಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
‘ಫ್ಲಾಫ್​​’ ಡುಪ್ಲೆಸಿ, 5 ಪಂದ್ಯ..109 ರನ್​​​..!
ಕ್ಯಾಪ್ಟನ್​​​​​​​​ ಫಾಫ್​​​ ಡುಪ್ಲೆಸಿ ಕಥೆನೂ ಏನು ಭಿನ್ನವಾಗಿಲ್ಲ. ಕನ್ಸಿಸ್ಟನ್ಸಿ ಪದವನ್ನ ಮರೆತು, ಅತಿ ಕೆಟ್ಟ ಪ್ರದರ್ಶನ ನೀಡ್ತಿದ್ದಾರೆ. ಒಂದೂ ಅರ್ಧಶತಕ ಗಳಿಸದ ಡುಪ್ಲೆಸಿಸ್ 5 ಪಂದ್ಯದಿಂದ ಜಸ್ಟ್​​ 109 ರನ್ನಷ್ಟೇ ಗಳಿಸಿದ್ದಾರೆ. ಕ್ಯಾಪ್ಟನ್ ಆಗಿಯೂ ಡುಪ್ಲೆಸಿ ಫೇಲ್ಯೂರ್ ಆಗಿದ್ದು, ತಂಡಕ್ಕೆ ದೊಡ್ಡ ಸೆಟ್​ಬ್ಯಾಕ್ ಆಗಿದೆ.
ಇಂಡಿಯನ್​ ಪ್ಲೇಯರ್​ ರಜತ್ ಪಟಿದಾರ್​​ಗೂ ಡುಪ್ಲೆಸಿ ಹಾಗೂ ಮ್ಯಾಕ್ಸ್​ವೆಲ್​ ಗಾಳಿ ಬೀಸಿದೆ. ಮಧ್ಯಮ ಕ್ರಮಾಂಕದಲ್ಲಿ ತಂಡದ ಮಾನ ಕಾಪಾಡ್ತಾರೆ ಅಂದುಕೊಂಡ್ರೆ, ನಡು ನೀರಲ್ಲಿ ಕೈ ಬಿಡ್ತಿದ್ದಾರೆ. ಆಡಿದ್ದು 4 ಇನ್ನಿಂಗ್ಸ್​​.. ಕಡಿದು ಗುಡ್ಡೆ ಹಾಕಿರೋದು ಬರೀ 50 ರನ್​​​.
ಇದನ್ನೂ ಓದಿ: ಯುಗಾದಿ ಹಬ್ಬದಂದೇ ದಾರುಣ ಘಟನೆ; ಬೈಕ್ ಅಪಘಾತದಲ್ಲಿ ತಂದೆ-ಮಗ ದಾರುಣ ಸಾವು
ಆಲ್​ರೌಂಡರ್ ಗ್ರೀನ್ ಕಥೆಯಂತೂ ಕೇಳೋದೆ ಬೇಡ ಬಿಡಿ. 5 ಪಂದ್ಯದಿಂದ 68 ರನ್ ಬಾರಿಸಿದ್ದಾರೆ. ಇನ್ನೂ ಬೌಲಿಂಗ್​​​​ನಲ್ಲಿ ಬೇಟೆಯಾಡಿದ್ದು 2 ವಿಕೆಟ್ ಮಾತ್ರ. ಇಂತಹ ಫ್ಲಾಪ್ ಆಟಗಾರನನ್ನ 17.5 ಕೋಟಿಗೆ ಬಿಡ್​​​​ ಮಾಡಬೇಕಿತ್ತಾ ಅಂತ ಫ್ಯಾನ್ಸ್ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ಇವರಷ್ಟೇ ಅಲ್ಲ.. ಅನೂಜ್ ರಾವತ್ ಹಾಗೂ ಯಶ್​ ದಯಾಳ್​ ಕೂಡ ನಂಬಿಕೆ ಹುಸಿಯಾಗಿಸಿದ್ದಾರೆ. ಕೊಟ್ಟ ಕುದುರೆ ಏರಲಾರದ ಈ ಆರ್​ಸಿಬಿ ಫ್ಲಾಪ್​ ಸ್ಟಾರ್ಸ್​ ಮುಂದಿನ ಪಂದ್ಯದಲ್ಲಾದ್ರೂ ರಿದಮ್​ ಕಂಡುಕೊಳ್ಳಬೇಕಿದೆ. ಇಲ್ದಿದ್ರೆ ಆರ್​​ಸಿಬಿ ಗೆಲುವಿನ ಕನಸು ಕನಸಾಗೇ ಉಳಿಯಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್