newsfirstkannada.com

ವರದಕ್ಷಿಣೆ ದಾಹ, ಅಕ್ರಮ ಸಂಬಂಧ.. ಫೈವ್‌ಸ್ಟಾರ್ ಹೋಟೆಲ್‌ ಮ್ಯಾನೇಜರ್ ಹೆಂಡ್ತಿ ಕೊಲೆಗೆ ಕಾರಣವೇನು?

Share :

Published January 24, 2024 at 8:36pm

Update January 24, 2024 at 8:41pm

  ತವರಿನಿಂದ ವಾಪಸ್ಸಾಗಿದ್ದವಳ ಕಡಲ ತೀರದಲ್ಲಿ ಕೊಂದಿದ್ದ ಗಂಡ

  ಪತಿಯೊಂದಿಗೆ ಬೀಚ್‌ಗೆ ಕಾಲಿಟ್ಟ ಪತ್ನಿ ದೀಕ್ಷಾ ಹೆಣವಾಗಿದ್ದೇಗೆ?

  ಪಾಪಿ ಪತಿಗಿತ್ತಾ ಅಕ್ರಮ ಸಂಬಂಧ? ಇದೇನಾ ಕೊಲೆಗೆ ಕಾರಣ?

ಗೋವಾದ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದ ಪತಿ ತನ್ನನ್ನು ಚೆನ್ನಾಗಿ ನೋಡಿಕೊಳ್ತಾನೆ. ಸುಂದರ ಬದುಕು ಕಟ್ಟಿಕೊಳ್ಳಬಹುದು ಅಂತ ಈಕೆ ಅದೆಷ್ಟು ಆಸೆ ಇಟ್ಟುಕೊಂಡು ಗಂಡನೊಟ್ಟಿಗೆ ಗೋವಾಕ್ಕೆ ಬಂದಿದ್ದಳೋ ಆದ್ರೆ.. ಜಸ್ಟ್ ಎರಡೇ ವರ್ಷಕ್ಕೆ ಆಕೆಯ ಆಸೆ, ಕನಸುಗಳನ್ನಷ್ಟೇ ಅಲ್ಲ. ಆಕೆಯನ್ನೂ ಮುಗಿಸಿಬಿಟ್ಟಿದ್ದಾನೆ ಕಿರಾತಕ ಗಂಡ. ಹಾಗಾದ್ರೆ, ತನ್ನ ಪತ್ನಿಯನ್ನು ಬೀಚ್‌ಗೆ ಕರೆದೊಯ್ದು ನೀರಿನಲ್ಲಿ ಮುಳುಗಿಸಿ ಕೊಂದಿದ್ಯಾಕೆ ಪಾಪಿ ಪತಿ? ಇವನ ಕ್ರೌರ್ಯದ ಹಿಂದಿನ ಅಸಲಿಯತ್ತೇನು ಅನ್ನೋದು ರೋಚಕ.

ಉತ್ತರ ಪ್ರದೇಶದ ಲಕ್ನೌನಿಂದ ಬಂದು ಗೋವಾದ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ಈ ಗೌರವ್ ತನ್ನ ಪತ್ನಿಯನ್ನ ಬೀಚ್ ಬಳಿ ಕರೆದುಕೊಂಡು ಬಂದು ನೀರಿನಲ್ಲಿ ಉಸಿರುಗಟ್ಟಿಸಿ ಕೊಂದಿದ್ದ. ನಂತರ ಪತ್ನಿ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಳೆಂದು ಕಥೆ ಕಟ್ಟಿದ್ದ. ಬೀಚ್‌ನಲ್ಲಿದ್ದ ಜನರೆದುರು ಮೊಸಳೆ ಕಣ್ಣೀರಿಟ್ಟಿದ್ದ. ಇವನ ನಾಟಕದ ದೃಶ್ಯ ಪ್ರವಾಸಿಗರೊಬ್ಬರ ಮೊಬೈಲ್‌ನಲ್ಲಿ ರೆಕಾರ್ಡ್ ಕೂಡ ಆಗಿತ್ತು.

ಕೊನೆಗೆ, ಪೋಸ್ಟ್‌ಮಾರ್ಟಂ ರಿಪೋರ್ಟ್‌ನಲ್ಲಿ ಅದೊಂದು ಕೊಲೆ ಅಂತ ತಿಳಿದುಬಂದಾಗ ಪೊಲೀಸರು ಈತನನ್ನ ತೀವ್ರ ವಿಚಾರಣೆ ಮಾಡಿದ್ರು. ಇನ್ನು ತನ್ನ ಸುಳ್ಳು ನಡೆಯೋದಿಲ್ಲ ಅಂತ ಗೊತ್ತಾದ್ಮೇಲೆ ಪಾಪಿ ಗಂಡ ಸತ್ಯ ಬಾಯ್ಬಿಟ್ಟಿದ್ದ. ನಾನು ನನ್ನ ಪತ್ನಿಯನ್ನು ಕೊಲ್ಲಲೆಂದೇ ಬೀಚ್ ಬಳಿ ಕರೆತಂದಿದ್ದೆ. ಅಂದುಕೊಂಡಂತೆಯೇ ಆಕೆಯನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದೆ ಅಂತ ತಪ್ಪೊಪ್ಪಿಕೊಂಡಿದ್ದಾನೆ.

ಹಾಗಾದ್ರೆ, ಉತ್ತರಪ್ರದೇಶದಿಂದ ಗೋವಾಕ್ಕೆ ಬಂದು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ಈ ಗೌರವ್ ತನ್ನ ಪತ್ನಿಯನ್ನು ಕೊಂದಿದ್ಯಾಕೆ? ಪತ್ನಿ ಪ್ರಾಣ ತೆಗೆಯುವಂತ ಕ್ರೂರತನಕ್ಕೆ ಈ ಪಾಪಿ ಪತಿ ಮುಂದಾಗಿದ್ಯಾಕೆ ಅಂದ್ರೆ ನಮ್ಮೆದುರು ತೆರೆದುಕೊಳ್ಳೋದು ಮೂರ್ಮೂರು ರಹಸ್ಯ!

ವರದಕ್ಷಿಣಿಗೆಗಾಗಿ ಪತ್ನಿಯನ್ನು ಪೀಡಿಸ್ತಿದ್ನಂತೆ ಪಾಪಿ ಗಂಡ!?
ಆಸ್ತಿ ಮಾರಿ ಮದುವೆ ಮಾಡಿಕೊಟ್ಟರೂ ತೀರದ ದುಡ್ಡಿನ ದಾಹ!?
ಉತ್ತರ ಪ್ರದೇಶದ ಲಕ್ನೌನ ನಿವಾಸಿಯಾಗಿದ್ದ ದೀಕ್ಷಾಳನ್ನ ಮದುವೆಯಾಗಿದ್ದ ಗೌರವ್‌ಗೆ ದುಡ್ಡಿನ ದಾಹವಿತ್ತಂತೆ. ಮದುವೆಯಾಗುವಾಗಲೇ ಕಂಡೀಷನ್ ಮೇಲೆ ಕಂಡೀಷನ್ ಹಾಕಿ ತಾಳಿ ಕಟ್ಟಿದ್ನಂತೆ. ಇವನ ಬೇಡಿಕೆಗಳನ್ನು ಪೂರೈಸೋದಕ್ಕೆ ದೀಕ್ಷಾಳ ತಂದ ತನ್ನ ಆಸ್ತಿಯನ್ನೇ ಮಾರಿದ್ರಂತೆ. 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ರಂತೆ. ಅದ್ಧೂರಿ ಮದುವೆ ಮಾಡಿಕೊಟ್ಟು, ಬೆಲೆ ಬಾಳೋ ಉಡುಗೊರೆಗಳನ್ನು ನೀಡಿದರೂ ಕೂಡ ಗೌರವ್‌ಗೆ ದುಡ್ಡಿನ ದಾಹ ಕಡಿಮೆ ಆಗಿರಲಿಲ್ವಂತೆ. ದೀಕ್ಷಾಳೊಂದಿಗೆ ಕಾಸ್ಟ್ಲಿ ಮದುವೆ ಮಾಡ್ಕೊಂಡು ವಾಪಸ್ ಗೋವಾಕ್ಕೆ ಬಂದ ಬಳಿಕವೂ ಈತ ಪತ್ನಿಗೆ ದುಡ್ಡಿಗಾಗಿ ಪೀಡಿಸ್ತಿದ್ನಂತೆ. ನಿಮ್ಮಪ್ಪನಿಗೆ ಹೇಳಿ ದುಡ್ಡು ಕೊಡಿಸು ಅಂತೆಲ್ಲಾ ಬಲವಂತ ಮಾಡ್ತಿದ್ನಂತೆ. ಹೊಸ ಕಾರು ತಗೋಬೇಕು ಹಾಗಾಗಿ 12 ಲಕ್ಷ ರೂಪಾಯಿ ಕೊಡಿ ಅಂತ ದೀಕ್ಷಾಳ ತಂದೆಗೆ ದುಂಬಾಲು ಬಿದ್ದಿದ್ನಂತೆ.

ಇದೇ ಕಾರಣಕ್ಕೆ ದೀಕ್ಷಾ ಮತ್ತು ಗೌರವ್ ನಡುವೆ ಜಗಳವಾಗಿತ್ತಂತೆ. ಶಾಕಿಂಗ್ ವಿಚಾರ ಏನಂದ್ರೆ 2022 ರಲ್ಲಿ ಈ ಪಾಪಿ ಗೌರವ್‌ನನ್ನು ಮದುವೆಯಾಗಿ ಗೋವಾಕ್ಕೆ ಬಂದಿದ್ದ ದೀಕ್ಷಾ ಕೆಲ ತಿಂಗಳ ಹಿಂದಷ್ಟೇ ತವರಿಗೆ ಹೋಗಿದ್ಲಂತೆ. ಗಂಡನ ಕಿರುಕುಳ ತಾಳದೆ ಲಕ್ನೌನ ತಂದೆ ಮನೆಗೆ ತೆರಳಿದ್ದ ದೀಕ್ಷಾಳನ್ನು ಈ ಪಾಪಿ ಗಂಡನೇ ವಾಪಸ್ ಕರೆಸಿಕೊಂಡಿದ್ನಂತೆ. ಗಂಡ ವಾಪಸ್ ಕರೀತಿರೋದನ್ನು ನೋಡಿ ಬದಲಾಗಿದ್ದಾನೆ ಅನ್ಕೊಂಡು ಓಡೋಡಿ ಬಂದಿದ್ದಾಕೆಯನ್ನ ಈ ಕಿರಾತಕ ಕೊಂದೇ ಮುಗಿಸಿದ್ದಾನೆ.

ಪಾಪಿ ಪತಿಯ ತಪ್ಪೊಪ್ಪಿಗೆ!
ಕೊಲೆ ಮಾಡುವ ಉದ್ದೇಶದಿಂದಲೇ ನಾನು ನನ್ನ ಪತ್ನಿ ದೀಕ್ಷಾಳನ್ನ ಬೀಚ್‌ಗೆ ಕರೆದುಕೊಂಡು ಬಂದಿದ್ದೆ. ಆಕೆಯನ್ನ ಮುಗಿಸಿ ಬಿಡಬೇಕೆಂದು ಮೊದಲೇ ನಿರ್ಧರಿಸಿದ್ದೆ. ಹಾಗಾಗಿ ಪತ್ನಿಯೊಂದಿಗೆ ಬೀಚ್‌ಗೆ ಬಂದು ಕಲ್ಲುಬಂಡೆಗಳಿರೋ ಜಾಗವನ್ನು ಗುರುತಿಸಿಕೊಂಡೆ. ಅಲ್ಲಿಗೆ ಪತ್ನಿಯನ್ನು ಕರೆದುಕೊಂಡು ಬಂದು ನೀರಿನಲ್ಲಿ ಆಕೆಯನ್ನು ಮುಳುಗಿಸಿ ಉಸಿರುಗಟ್ಟಿಸಿದೆ. ಆಕೆ ಉಸಿರು ನಿಲ್ಲಿಸೋವರೆಗೂ ನೀರನಲ್ಲಿ ಮುಳುಗಿಸಿದೆ. ಸಾವನ್ನಪ್ಪಿರೋದು ಖಚಿತವಾಗ್ತಿದ್ದಂತೆ ಅಲ್ಲಿಯೇ ಆಕೆಯ ದೇಹವನ್ನು ಬಿಟ್ಟುಬಂದೆ. ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಆಕೆಯೇ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಳು ಅಂತ ಪ್ರವಾಗಿಸರನ್ನು ನಂಬಿಸಲು ಮುಂದಾದೆ.
– ಗೌರವ್ ಕಟಿಯಾರ್, ಪತ್ನಿಯನ್ನು ಕೊಂದ ಗಂಡ

ಅಸಲಿಗೆ ಪತ್ನಿ ದೀಕ್ಷಾಳನ್ನು ನೀರಿನಲ್ಲಿ ಮುಳುಗಿಸಿ ಕೊಂದವನು ನಾನೇ ಅಂತ ಗಂಡ ಗೌರವ್ ತಪ್ಪೊಪ್ಪಿಕೊಂಡಿದ್ದಾನಾದರೂ ಕೊಲೆಗೆ ನಿಖರ ಕಾರಣವೇನು ಅನ್ನೋ ಬಗ್ಗೆ ಆತ ಸರಿಯಾದ ಮಾಹಿತಿ ಕೊಟ್ಟಿಲ್ಲ ಅಂತ ಹೇಳಲಾಗ್ತಿದೆ. ಹಾಗಾಗಿ ಪೊಲೀಸರು ಹಲವಾರು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಗೌರವ್ ತನ್ನ ಪತ್ನಿಯನ್ನು ಕೊಲೆ ಮಾಡೋದರ ಉದ್ದೇಶವೇನಾಗಿತ್ತು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಮುಂದಾಗಿದ್ದಾರೆ. ವರದಕ್ಷಿಣೆ ವಿಚಾರವಾಗಿ ನಡೆಯುತ್ತಿದ್ದ ಜಗಳದ ಕಾರಣಕ್ಕಾಗಿಯೇ ಕಿರಾತಕ ಪತಿ ಗೌರವ್ ತನ್ನ ಪತ್ನಿಯನ್ನು ಕೊಂದಿರೋ ಶಂಕೆ ಹುಟ್ಟಿದೆ. ಜೊತೆಯಲ್ಲಿ ಅಕ್ರಮ ಸಂಬಂಧದ ಅನುಮಾನ ಕೂಡ ಶುರುವಾಗಿದೆ.

ಗೋವಾದ ಫೈವ್ ಸ್ಟಾರ್‌ ಹೋಟೆಲ್‌ನ ಮ್ಯಾನೇಜರ್ ಆಗಿರೋ ಗೌರವ್‌ಗೆ ಬೇರೊಬ್ಬ ಮಹಿಳೆ ಜೊತೆ ಸಂಬಂಧವಿತ್ತಂತೆ. ಈ ವಿಚಾರವಾಗಿಯೂ ಪತ್ನಿ ದೀಕ್ಷಾ ಜೊತೆಯಲ್ಲಿ ಗೌರವ್ ಜಗಳವಾಡಿದ್ದನಂತೆ. ಬೇರೊಬ್ಬಳೊಟ್ಟಿಗೆ ಪ್ರೀತಿಯ ಮೋಹದಲ್ಲಿ ಬಿದಿದ್ದ ಪಾಪಿ ಪಾತಿ ತನ್ನ ದಾರಿಗೆ ಅಡ್ಡಿಯಾಗುತ್ತಿದ್ದಾಳೆಂಬ ಕಾರಣಕ್ಕಾಗಿ ಪತ್ನಿಯನ್ನು ಕೊಂದಿದ್ದಾನೆ ಎಂಬ ಗುಮಾನಿಯಿದೆ.

ಈತ ಯಾವ ಕಾರಣಕ್ಕಾಗಿಯಾದ್ರೂ ಈ ಕೃತ್ಯ ಎಸಗಿರಲಿ ಗಂಡನ ಜೊತೆ ಸುಖ ಸಂಸಾರ ಮಾಡೋ ಕನಸು ಕಂಡಿದ್ದಾಕೆ ಮಾತ್ರ ಕಡಲ ತೀರದ ಅಲೆಗಳ ನಡುವೆ ಹೆಣವಾಗಿದ್ದು ಮಾತ್ರ ಘೋರ. ಪತ್ನಿಯನ್ನು ಕೊಂದು ಆಕಸ್ಮಿಕ ಸಾವು ಎಂಬ ಕಥೆ ಕಟ್ಟಿ ಬಚಾವಾಗಲು ಮುಂದಾಗಿದ್ದ ಪಾಪಿ ಪತಿಯ ಮುಖವಾಡ ಕಳಚಿಬಿದಿದ್ದು ಕಿಲ್ಲರ್ ಗಂಡ ಪೊಲೀಸರ ಅತಿಥಿಯಾಗಿದ್ದಾನೆ.

ನಿನ್ನ ಸಹವಾಸವೇ ಬೆೇಡ ಅಂತ ತವರುಮನೆ ಸೇರಿಕೊಂಡಿದ್ದವಳನ್ನ ಪಾಪಿ ಗಂಡ ವಾಪಸ್ ಕರೆಸಿಕೊಂಡು ಕೊಂದು ಮುಗಿಸಿದ್ದಾನೆ. ಮದುವೆಯಾದ ಆರಂಭದಲ್ಲಿ ಸುಖ ಸಂಸಾರ ಸಾಗಿಸೋ ಕನಸು ಕಂಡಿದ್ದಾಕೆ ಕಡಲ ತೀರದ ಅಲೆಗಳ ನಡುವೆ ಹೆಣವಾಗಿದ್ದು ಮಾತ್ರ ಘೋರ. ಪತ್ನಿಯನ್ನು ಕೊಂದು ಆಕಸ್ಮಿಕ ಸಾವು ಎಂಬ ಕಥೆ ಕಟ್ಟಿ ಬಚಾವಾಗಲು ಮುಂದಾಗಿದ್ದ ಪಾಪಿ ಪತಿ ಜೈಲು ಸೇರಿದ್ದಾನೆ. ಆತನಿಗೆ ಕಠಿಣ ಶಿಕ್ಷೆಯಾಗಲಿ ಅನ್ನೋದು ಮನೆ ಮಗಳನ್ನು ಕಳೆದುಕೊಂಡಿರೋ ಹೆತ್ತವರ ಆಕ್ರೋಶದ ಮಾತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರದಕ್ಷಿಣೆ ದಾಹ, ಅಕ್ರಮ ಸಂಬಂಧ.. ಫೈವ್‌ಸ್ಟಾರ್ ಹೋಟೆಲ್‌ ಮ್ಯಾನೇಜರ್ ಹೆಂಡ್ತಿ ಕೊಲೆಗೆ ಕಾರಣವೇನು?

https://newsfirstlive.com/wp-content/uploads/2024/01/death-2024-01-24T201454.416.jpg

Load More