/newsfirstlive-kannada/media/post_attachments/wp-content/uploads/2025/07/PRAJWAL_REVANNA-1.jpg)
ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ನಿರೀಕ್ಷೆಯಲ್ಲಿ ಮಾಜಿ ಸಂಸದ ಪ್ರಜ್ವಲ್​ ರೇವಣ್ಣಗೆ ಮತ್ತೆ ಆಘಾತವಾಗಿದೆ. ಜಾಮೀನಿಗಾಗಿ ಜನಪ್ರತಿನಿಧಿಗಳ ನ್ಯಾಯಾಯದಲ್ಲಿ 2ನೇ ಬಾರಿ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದೆ. ಈಗಾಗಲೇ 14 ತಿಂಗಳಿಂದ ಜೈಲಿನಲ್ಲಿರುವ ಪ್ರಜ್ವಲ್​ಗೆ ಮತ್ತಷ್ಟು ದಿನ ಜೈಲೇ ಗತಿ ಆಗಿದೆ.
ಹೊಳೆನರಸೀಪುರ ಪ್ರಕರಣದಲ್ಲಿ ಪ್ರಜ್ವಲ್​ ರೇವಣ್ಣಗೆ ಮತ್ತೆ ಶಾಕ್​
ಪ್ರಜ್ವಲ್​ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ. ಜನ ಸೇವೆ ಮೂಲಕ ಜೆಡಿಎಸ್​ ಪಕ್ಷವನ್ನು ಕಟ್ಟ ಬೇಕಿದ್ದ ನಾಯಕ. ಮಾಡಬಾರದ ಕೆಲಸ ಮಾಡಿ, ಜೈಲು ಕಂಬಿ ಹಿಂದೆ ಲಾಕ್​ ಆಗಿದ್ದಾರೆ. ಕಳೆದ 14 ತಿಂಗಳಿನಿಂದ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣಗೆ ಜನಪ್ರತಿನಿಧಿಗಳ ನ್ಯಾಯಾಲಯದ ಮತ್ತೊಮ್ಮೆ ಶಾಕ್​ ನೀಡಿದ್ದು, ಮತ್ತಷ್ಟು ದಿನ ಜೈಲೇ ಗತಿಯಾಗಿದೆ.
ಹೊಳೆನರಸೀಪುರ ಕೇಸ್​ನಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್​, ವಜಾಗೊಳಿಸಿ ಆದೇಶ ಹೊರಡಿಸಿದೆ.
ಪ್ರಜ್ವಲ್​ಗೆ ಮತ್ತಷ್ಟು ದಿನ ಜೈಲೇ ಗತಿ
- ಹೊಳೆನರಸೀಪುರ ಕೇಸ್​ನಲ್ಲಿ ಈ ಹಿಂದೆಯೂ ಬೇಲ್​ ಅರ್ಜಿ ಸಲ್ಲಿದ್ರು
- ಮೊದಲ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ
- ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎಲ್ಲ ಕಡೆ ವಜಾಗೊಂಡಿತ್ತು
- ಮತ್ತೆ ಜಾಮೀನು ಕೋರಿ ಕಳೆದ ಜೂನ್‌ನಲ್ಲಿ ಹೈಕೋರ್ಟ್‌ಗೆ ಅರ್ಜಿ
- ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚನೆ
- ಅರ್ಜಿ ಸಲ್ಲಿಸಿದ 10 ದಿನಗಳಲ್ಲಿ ಆದೇಶ ನೀಡುವಂತೆ ಸೂಚಿಸಿತ್ತು
- ಅದರಂತೆ ಜನಪ್ರತಿನಿಧಿಗಳ ಕೋರ್ಟ್​ಗೆ 2ನೇ ಬಾರಿ ಪ್ರಜ್ವಲ್​ ಅರ್ಜಿ
- ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನವಾಗಿ 14 ತಿಂಗಳು ಕಳೆದಿದೆ
- ಇದೇ ಕೇಸ್​ನಲ್ಲಿ HD.ರೇವಣ್ಣ ವಿರುದ್ಧದ ತನಿಖೆಗೆ ಹೈಕೋರ್ಟ್​ ತಡೆ
- ಹೀಗಾಗಿ ಪ್ರಜ್ವಲ್‌ಗೂ ಜಾಮೀನು ನೀಡುವಂತೆ ಕೋರಿದ್ದ ವಕೀಲರು
- ವಾದ- ಪತ್ರಿವಾದ ಆಲಿಸಿದ್ದ ಕೋರ್ಟ್​ ಇವತ್ತಿಗೆ ತೀರ್ಪು ಕಾಯ್ದಿಸಿತ್ತು
- ಇದೀಗ ತೀರ್ಪು ಪ್ರಕಟಿಸಿದ್ದು, ಪ್ರಜ್ವಲ್​ ಸಲ್ಲಿಸಿದ್ದ ಬೇಲ್​ ಅರ್ಜಿ ತಿರಸ್ಕಾರ
ಹಾಗಾದ್ರೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಪ್ರಜ್ವಲ್​ ರೇವಣ್ಣ ಬೇಲ್​ ಅರ್ಜಿ ವಜಾಗೊಳಿಸಲು ನೀಡಿರುವ ಕಾರಣವೇನು?.
ಜಾಮೀನು ನೀಡದಿರಲು ಕಾರಣಗಳೇನು?
- ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳಿವೆ
- ಇತರೆ ಮೂರು ಕೇಸ್​ಗಳಲ್ಲಿ ಇನ್ನೂ ಸಾಕ್ಷಿದಾರರ ವಿಚಾರಣೆ ಆಗಿಲ್ಲ
- ಪ್ರಜ್ವಲ್​ ರೇವಣ್ಣ ಮಾಜಿ ಸಂಸದರಾಗಿದ್ದು ಪ್ರಭಾವಿಗಳಾಗಿದ್ದಾರೆ
- ಒಂದ್ವೇಳೆ ಬೇಲ್​ ಕೊಟ್ರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು
- ಹೀಗಾಗಿ ಪ್ರಜ್ವಲ್​ ರೇವಣ್ಣಗೆ ಜಾಮೀನು ನೀಡಲು ಸಾಧ್ಯವಿಲ್ಲ
ಹೊಳೆನರಸೀಪುರ ಕೇಸ್​ನಲ್ಲಿ ಈ ಬಾರಿಯಾದರೂ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಪ್ರಜ್ವಲ್​ ರೇವಣ್ಣಗೆ ಮತ್ತೆ ನಿರಾಸೆ ಆಗಿದೆ. ಜುಲೈ 30ರಂದು ಹೊಳೆನರಸೀಪುರದ ಅತ್ಯಾಚಾರ ಕೇಸ್​ನ ತೀರ್ಪು ಪ್ರಕಟವಾಗಲಿದ್ದು, ಜುಲೈ 30 ಪ್ರಜ್ವಲ್​ ರೇವಣ್ಣ ಪಾಲಿಗೆ ಬಿಗ್​ ಡೇ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ