newsfirstkannada.com

ವಯನಾಡಿನಲ್ಲಿ ರಾಹುಲ್‌ಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ.. ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

Share :

Published April 3, 2024 at 6:24pm

Update April 3, 2024 at 6:16pm

  ವಯನಾಡು ಲೋಕಸಭಾ ಕ್ಷೇತ್ರ ಗೆಲ್ಲದಿದ್ರೆ I.N.D.I.A ಪಕ್ಷಕ್ಕೆ ಉಳಿಗಾಲವಿಲ್ಲ

  ಸಿಪಿಐ ಪಕ್ಷದ ಜನಪ್ರಿಯ ನಾಯಕಿ ಅನ್ನಿ ರಾಜಾ ಪ್ರಮುಖ ಎದುರಾಳಿ

  ಅಮೇಥಿಯಂತೆ ವಯನಾಡು ಕ್ಷೇತ್ರವನ್ನು ಕಬಳಿಸಲು ಸ್ಮೃತಿ ಇರಾನಿ ಪ್ಲಾನ್‌!

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ NDA ವಿರುದ್ಧ ಹೋರಾಡುತ್ತಿರುವ ವಿಪಕ್ಷಗಳ I.N.D.I.A ನಾಯಕರಿಗೆ 2024ರ ಲೋಕಸಭಾ ಚುನಾವಣೆ ನಿರ್ಣಾಯಕವಾಗಿದೆ. ಮೋದಿ, ಮೋದಿ ಅನ್ನೋ ಘೋಷಣೆ ಮಧ್ಯೆ ಭಾರತ್ ಜೋಡೋ, ಭಾರತ್ ಜೋಡೋ ನ್ಯಾಯ ಯಾತ್ರೆ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ವಯನಾಡು ಲೋಕಸಭಾ ಕ್ಷೇತ್ರವನ್ನ ಗೆಲ್ಲುವುದು ಅಷ್ಟೇ ಅನಿವಾರ್ಯವಾಗಿದೆ.

ಲೋಕಸಭಾ ಚುನಾವಣೆಯ ಪ್ರತಿಷ್ಠೆಯ ಮತಯುದ್ಧದಲ್ಲಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡು ಕ್ಷೇತ್ರದಿಂದ ಅಧಿಕೃತವಾಗಿ ಸ್ಪರ್ಧಿಸಿದ್ದಾರೆ. ವಯನಾಡಿನಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸುವ ಮುನ್ನ ರಾಹುಲ್ ಗಾಂಧಿ ಬೃಹತ್ ರೋಡ್‌ ಶೋ ನಡೆಸಿದರು. ರಾಹುಲ್ ಗಾಂಧಿ ಅವರಿಗೆ ಸಹೋದರಿ ಪ್ರಿಯಾಂಕಾ ವಾದ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿ ಕೆಲ ಹಿರಿಯ ನಾಯಕರು ಅವರಿಗೆ ಸಾಥ್ ನೀಡಿದ್ದರು. ಬೃಹತ್ ಜನಸಾಗರದ ಮಧ್ಯೆ ಶಕ್ತಿ ಪ್ರದರ್ಶಿಸಿದ ರಾಹುಲ್ ಗಾಂಧಿ ಅವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಬೃಹತ್‌ ರೋಡ್‌ ಶೋ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು ವಯನಾಡು ಜನತೆಗೆ ವಿಶೇಷವಾದ ಭರವಸೆ ನೀಡಿದ್ದಾರೆ. ಪ್ರಮುಖವಾಗಿ ಕಾಡಾನೆ ಜೊತೆ ಇಲ್ಲಿನ ಜನರು ನಿರಂತರ ಸಂಘರ್ಷ ನಡೆಸುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ವಯನಾಡು ಜನರ ಜೊತೆ ನಿಲ್ಲುತ್ತೇನೆ. ಕ್ಷೇತ್ರದ ಸವಾಲುಗಳನ್ನು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್ ಕೇಸ್; BL ಸಂತೋಷ್ ಹೇಳಿದ್ದೇನು?

ವಯನಾಡು ಹಾಲಿ ಸಂಸದರಾಗಿರುವ ರಾಹುಲ್ ಗಾಂಧಿ ಅವರು 2019ರ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. 2019ರಲ್ಲಿ ವಯನಾಡು ಕ್ಷೇತ್ರದಲ್ಲಿ ಒಟ್ಟು 10 ಲಕ್ಷ 92 ಸಾವಿರದ 197 ಮತಗಳು ಚಲಾವಣೆ ಆಗಿದ್ದವು. ಅದರಲ್ಲಿ ಕಾಂಗ್ರೆಸ್‌ ಬರೋಬ್ಬರಿ 7 ಲಕ್ಷ 06 ಸಾವಿರದ 367 ಮತಗಳು ಬಿದ್ದಿದ್ದವು. CPI ಪಕ್ಷದ ಅಭ್ಯರ್ಥಿ ಪಿ.ಪಿ ಸುನೀರ್‌ ಅವರಿಗೆ ಕೇವಲ 2 ಲಕ್ಷ 74 ಸಾವಿರದ 597 ಮತಗಳು ಚಲಾವಣೆ ಆಗಿದ್ದವು. ಬರೋಬ್ಬರಿ 4 ಲಕ್ಷ ಮತಗಳ ಅಂತರದಿಂದ ವಿಜಯೋತ್ಸವ ಆಚರಿಸಿದ್ದರು.

ಅಮೇಥಿಯಂತೆ ವಯನಾಡು ಬಿಜೆಪಿ ಟಾರ್ಗೆಟ್‌!
ಈ ಬಾರಿ ವಯನಾಡು ಲೋಕಸಭಾ ಕ್ಷೇತ್ರ ಕಳೆದ ಬಾರಿಯಂತೆ ಇಲ್ಲ. ಅಮೇಥಿಯಂತೆ ವಯನಾಡು ಕ್ಷೇತ್ರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರನ್ನೇ ಕಣಕ್ಕಿಳಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಈ ಬಾರಿ ಬಿಜೆಪಿ ಪಕ್ಷ ಒಂದೇ ಎದುರಾಳಿಯಲ್ಲ. CPI(M) ಕೂಡ ಕಾಂಗ್ರೆಸ್ ನಾಯಕನಿಗೆ ಫೈಟ್ ನೀಡುತ್ತಿದೆ.

ಕಳೆದ ಬಾರಿಯಂತೆ CPI ಕೂಡ ತನ್ನ ಅಭ್ಯರ್ಥಿಯನ್ನು ಈಗಾಗಲೇ ಕಣಕ್ಕಿಳಿಸಿದೆ. ವಯನಾಡು ಕ್ಷೇತ್ರವನ್ನು ತಮಗೆ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದ್ದ ಸಿಪಿಐ ಪಕ್ಷದ ಜನಪ್ರಿಯ ನಾಯಕಿ ಅನ್ನಿ ರಾಜಾ ಅವರನ್ನೇ ಕಣಕ್ಕಿಳಿಸಿದೆ. ಬಿಜೆಪಿ ನಾಯಕ ಕೆ. ಸುರೇಂದ್ರನ್ ಅವರಿಗೆ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಗೆದ್ದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಬೆಂಬಲ ಹಾಗೂ ತಂತ್ರಗಾರಿಕೆಯ ಸಲಹೆಯೂ ಇದೆ.

ನಾಳೆ ಸುರೇಂದ್ರನ್ ಅವರ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಸ್ಮೃತಿ ಇರಾನಿಯವರೂ ಕೂಡ ಸಾಥ್ ನೀಡುತ್ತಿದ್ದಾರೆ. ಈ ಬಿಗ್‌ಫೈಟ್‌ನಲ್ಲಿ ವಯನಾಡು ಲೋಕಸಭಾ ಕ್ಷೇತ್ರದ ರಿಸಲ್ಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗಳಿಸಿರುವ ಮತದಾನದ ಪ್ರಮಾಣವೂ ರಾಹುಲ್ ಗಾಂಧಿ ಅವರ ಪರವಾಗಿದೆ. 2009ರಲ್ಲಿ ಕಾಂಗ್ರೆಸ್ ಪಕ್ಷ ಶೇಕಡಾ 49.9ರಷ್ಟು ಮತಗಳಿಸಿದ್ರೆ, 2014ರಲ್ಲಿ ಶೇಕಡಾ 41.2ರಷ್ಟು, 2019ರಲ್ಲಿ ಬರೋಬ್ಬರಿ 64.7ರಷ್ಟು ಮತವನ್ನು ಕಾಂಗ್ರೆಸ್ ಪಕ್ಷ ಕಬಳಿಸಿಕೊಂಡಿದೆ.

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುವ ಏಪ್ರಿಲ್ 26ರಂದೇ ನೆರೆಯ ವಯನಾಡು ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆಯುತ್ತಿದೆ. ಜೂನ್ 4 ರಂದು ರಾಹುಲ್ ಗಾಂಧಿ ಸಂಸತ್ ಸ್ಥಾನದ ಭವಿಷ್ಯ ನಿರ್ಧಾರವಾಗಲಿದೆ.

ವಿಶೇಷ ವರದಿ: ಕೃಷ್ಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಯನಾಡಿನಲ್ಲಿ ರಾಹುಲ್‌ಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ.. ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

https://newsfirstlive.com/wp-content/uploads/2024/04/Rahul-Gandhi-Waynad-2.jpg

Load More