newsfirstkannada.com

ದೊಡ್ಮನೆಯಲ್ಲಿ ಮೊದಲ ಡಿವೋರ್ಸ್.. ನಟ ಯುವ ರಾಜ್‌ಕುಮಾರ್, ಶ್ರೀದೇವಿ ವಿಚ್ಛೇದನಕ್ಕೆ ಕಾರಣವೇನು?

Share :

Published June 10, 2024 at 1:33pm

Update June 10, 2024 at 1:34pm

  ಕಳೆದ ಆರೇಳು ತಿಂಗಳಿಂದ ಯುವ ರಾಜ್‌ಕುಮಾರ್ -ಶ್ರೀದೇವಿ ದೂರ.. ದೂರ

  ಈ ಹಿಂದೆ ದೊಡ್ಮನೆ ಪ್ರತಿ ಕಾರ್ಯಕ್ರಮದಲ್ಲಿ ಇರ್ತಿದ್ದ ಶ್ರೀದೇವಿ ಈಗ ನಾಪತ್ತೆ

  ಇದ್ದಕ್ಕಿದ್ದ ಹಾಗೆ ಯುವರಾಜ್ ಜೊತೆ ಅಂತರ ಕಾಯ್ದುಕೊಂಡಿದ್ದೇಕೆ ಪತ್ನಿ ಶ್ರೀದೇವಿ?

ಬೆಂಗಳೂರು: ಸ್ಯಾಂಡಲ್‌ವುಡ್ ಯುವ ನಟ, ರಾಘವೇಂದ್ರ ರಾಜ್‌ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್‌ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ದೊಡ್ಮನೆ ಮಗ ಗುರು ರಾಜ್‌ಕುಮಾರ್ ಡಿವೋರ್ಸ್‌ಗೆ ಮುಂದಾಗಿದ್ದು, ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ದೂರವಾಗಲು ನಿರ್ಧರಿಸಿದ್ದಾರೆ.

ಸ್ಯಾಂಡಲ್​ವುಡ್‌ನ ದೊಡ್ಮನೆಯಲ್ಲಿ ಬೆಳಕಿಗೆ ಬಂದಿರೋ ಮೊದಲ ಡಿವೋರ್ಸ್ ಕೇಸ್ ಇದಾಗಿದೆ. ಕಳೆದ 4 ದಿನಗಳ ಹಿಂದೆಯೇ ಯುವ ರಾಜ್‌ಕುಮಾರ್ ಅವರು ಫ್ಯಾಮಿಲಿ ಕೋರ್ಟ್​​ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: BREAKING: ಸ್ಯಾಂಡಲ್​ವುಡ್‌ನಲ್ಲಿ ಮತ್ತೊಂದು ಡಿವೋರ್ಸ್‌; ವಿಚ್ಛೇದನಕ್ಕೆ ಯುವ ರಾಜ್​ಕುಮಾರ್ ಡಿಸೈಡ್‌! 

ಜೂನ್ 6ನೇ ತಾರೀಕು ಎಂಸಿ ಌಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ಯುವ ರಾಜ್​ಕುಮಾರ್ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ಯುವ ರಾಜ್‌ಕುಮಾರ್ ಅವರು ಡಿವೋರ್ಸ್ ಕೇಳಿದ್ದಾರೆ. ಈ ಅರ್ಜಿ ಪುರಸ್ಕರಿಸಿರುವ ಕೋರ್ಟ್ ಜುಲೈ ತಿಂಗಳ 4ನೇ ತಾರೀಕಿಗೆ ವಿಚಾರಣೆಯನ್ನು ನಿಗದಿ ಮಾಡಿದೆ.

ಪತ್ನಿಯಿಂದ ಟಾರ್ಚರ್ ಆರೋಪ!
ಯುವರಾಜ್‌ಕುಮಾರ್ ಅವರು ತಮ್ಮ ವಿಚ್ಛೇದನದ ಅರ್ಜಿಯಲ್ಲಿ ಪತ್ನಿಯ ವಿರುದ್ಧ ಕ್ರೌರ್ಯ ಹಾಗೂ ಅಗೌರವದಿಂದ ನೋಡಿಕೊಂಡ ಆರೋಪ ಮಾಡಿದ್ದಾರೆ. ಪತ್ನಿಯಿಂದ ಮಾನಸಿಕ ಟಾರ್ಚರ್ ಆರೋಪ ಮಾಡಿ ಯುವ ರಾಜ್‌ಕುಮಾರ್ ಅವರು ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ನಿವೇದಿತಾಗೆ ಡಿವೋರ್ಸ್ ಕೊಟ್ಟಿದ್ದು ಯಾಕಂದ್ರೆ.. ಕೊನೆಗೂ ಕಾರಣ ಹೇಳಲು ಮುಂದೆ ಬಂದ ಚಂದನ್! 

ಯುವ-ಶ್ರೀದೇವಿ ದೂರ.. ದೂರ
ಕಳೆದ ಆರೇಳು ತಿಂಗಳ ಹಿಂದೆಯೇ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಅವರು ದೂರ, ದೂರ ಆಗಿದ್ದರು. ಹಲವು ತಿಂಗಳಿಂದ ಯುವ ಜೊತೆ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಈ ಹಿಂದೆ ದೊಡ್ಮನೆಯ ಪ್ರತಿ ಕಾರ್ಯಕ್ರಮದಲ್ಲಿ ಇರ್ತಿದ್ದ ಶ್ರೀದೇವಿ ಅವರು ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಯುವ ಸಿನಿಮಾ ಮಹೂರ್ತಕ್ಕೆ ಇದ್ದರೂ ರಿಲೀಸ್​ ವೇಳೆ ಶ್ರೀದೇವಿ ಅವರು ನಾಪತ್ತೆ ಆಗಿದ್ದರು. ಇದ್ದಕ್ಕಿದ್ದ ಹಾಗೆ ಯುವರಾಜ್ ಜೊತೆ ಅಂತರ ಕಾಯ್ದುಕೊಂಡು ಯುವ ಸಿನಿಮಾದ ಶೂಟಿಂಗ್, ಪ್ರಮೋಷನ್​ಗೂ ನಾಪತ್ತೆಯಾಗಿದ್ದರು.

ದೊಡ್ಡನೆಯಿಂದ ಈಗಾಗ್ಲೆ ದೂರ ಆಗಿರೋ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ತೆಗೆದುಕೊಳ್ಳಲು ಯುವರಾಜ್‌ಕುಮಾರ್ ನಿರ್ಧಾರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೊಡ್ಮನೆಯಲ್ಲಿ ಮೊದಲ ಡಿವೋರ್ಸ್.. ನಟ ಯುವ ರಾಜ್‌ಕುಮಾರ್, ಶ್ರೀದೇವಿ ವಿಚ್ಛೇದನಕ್ಕೆ ಕಾರಣವೇನು?

https://newsfirstlive.com/wp-content/uploads/2024/06/Yuva-Rajkumar-Divorce-2.jpg

Load More