newsfirstkannada.com

ರಾಜಮನೆತನಕ್ಕೂ ಚಾಮುಂಡಿ ದೇವಾಲಯಕ್ಕೂ ಇರೋ ಸಂಬಂಧವೇನು? ದಾಖಲೆಗಳು ಏನು ಹೇಳ್ತಿವೆ?

Share :

Published August 11, 2024 at 11:40am

Update August 11, 2024 at 11:55am

    ಮೈಸೂರು ರಾಜಮನೆತನದ ಪ್ರಧಾನ ದೇವತೆಯೇ ಚಾಮುಂಡೇಶ್ವರಿ

    ಇಂದಿಗೂ ರಾಜಮನೆತನದ ಹೆಸರಲ್ಲಿ ಸಂಕಲ್ಪ ಮಾಡಿ ಪೂಜೆ ಮಾಡಲಾಗುತ್ತದೆ

    ದೇವಾಲಯದ ಪೂಜೆ ಖರ್ಚಿಗಾಗಿ ಭೂಮಿಯನ್ನ ಬಿಟ್ಟುಕೊಟ್ಟ ಒಡೆಯರ್

ಬೆಟ್ಟದ ಮೇಲೆ ಕುಳಿತಿರುವ ಚಾಮುಂಡೇಶ್ವರಿ ದೇವಿ ಮೈಸೂರು ರಾಜಮನೆತನದ ಪ್ರಧಾನ ದೇವತೆ. ಇಂದು ಸಹ ಅವರ ಮನೆತನದ ಹೆಸರಲ್ಲಿ ಸಂಕಲ್ಪ ಮಾಡಿ ಪೂಜೆ ಮಾಡಲಾಗುತ್ತದೆ. ಅನೇಕ ಹಳೆ ಸಂಪ್ರದಾಯ ಮತ್ತು ಪದ್ದತಿ ಆಚರಣೆಗಳನ್ನು ಮಾಡಲಾಗುತ್ತ್ತದೆ.

ದೇವಾಲಯದಲ್ಲಿ ಗೋಡೆಗಳು, ಅಡುಗೆ ಮನೆ, ಅಥಿತಿ ಗೃಹಗಳು ಸೇರಿ ಅನೇಕ ಅಭಿವೃದ್ದಿ ಕೆಲಸಗಳನ್ನು ಒಡೆಯರ್ ಮಾಡಿದ್ದಾರೆ. ಜೊತೆಗೆ ದೇವಾಲಯಕ್ಕೆ ಅನೇಕ ಚಿನ್ನಾಭರಣಗಳನ್ನು ನೀಡಿದ್ದಾರೆ. ದೇವಾಲಯದ ಪೂಜೆ ಖರ್ಚಿಗಾಗಿ ಭೂಮಿಯನ್ನ ಬಿಟ್ಟಿದ್ದಾರೆ. ಅದಕ್ಕಾಗಿ ನೂರಾರು ವರ್ಷಗಳಿಂದ ಸಂಕಲ್ಪ ಪೂಜೆ ನಡೆಯತ್ತಾ ಬಂದಿದೆ. ರಾಜಮನೆತದ ಹೆಸರಿನಲ್ಲಿಯೇ ಸಂಕಲ್ಪ ಮಾಡಿ ಪೂಜೆ ಆರಂಭ ಮಾಡಲಾಗುತ್ತದೆ. ಆದರಂತೆ ಚಾಮುಂಡಿ ಬೆಟ್ಟದಲ್ಲಿ ಅನೇಕ ಕಾರ್ಯಕ್ರಮ ಆಗುತ್ತವೆ. ದೇವಾಲಯವು ಇಂದು ಸಹ ರಾಜಮನೆತನದ ಅವಿಭಾಜ್ಯ ಅಂಗವಾಗಿದೆ.

ದಾಖಲೆಗಳು ಏನು ಹೇಳುತ್ತವೆ?

1831 ರಲ್ಲಿ ಬ್ರಿಟಿಷ್ ಸರ್ಕಾರ ಮೈಸೂರು ಆಡಳಿತ ವಹಿಸಿಕೊಂಡಿತ್ತು. ಆಗ ಮುಜರಾಯಿ ಕಮಿಷನ್​ಗೆ ಆಡಳಿತದ ವರ್ಗಾವಣೆ ಮಾಡಿತ್ತು. ಆನಂತರ ಅರಮನೆ ಮುಜರಾಯಿ ಸಂಸ್ಥೆಗಳು ಅಂತಾ ಬದಲಾವಣೆ ಮಾಡಲಾಯಿತು. ಆದರೆ ಅದು ಮಹಾರಾಜರ ಬಳಿಯೇ ಅಂದಿನಿಂದಲೂ ಉಳಿದುಕೊಂಡಿದೆ.

ಹೆಚ್ ಪಿ ಶಶಿಧರಮೂರ್ತಿಯವರ ಬುಕ್​ನಲ್ಲಿ ಈ ಬಗ್ಗೆ ಉಲ್ಲೇಖ ಇದೆ. ಕರ್ನಾಟಕ ಸ್ಟೇಟ್ ಆರ್ಚಿವ್ ಡಿಪಾರ್ಟ್​ಮೆಂಟ್ ಮುಜರಾಯಿ ಬುಕ್​ನಲ್ಲಿ ಈ ಕುರಿತಾಗಿ ಮಾಹಿತಿ ಇದೆ. ಚಾಮುಂಡಿ ಬೆಟ್ಟದ ಕಾರ್ಯಗಳು 1970 – 71ರಿಂದ ರಾಜಮನೆತನದ ಒಡೆತನದಲ್ಲಿ ನಡೆಯುತ್ತಿದ್ದವು. 1986 ರಲ್ಲಿ ಮೂರನೇ ಕೃಷ್ಣರಾಜ ಒಡೆಯರ್ ಸಾವನ್ನಪ್ಪುತ್ತಾರೆ. ಆಗ ಸರ್ಕಾರದ ಸುಪರ್ದಿಗೆ ನೀಡಲಾಗಿತ್ತು.

ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೇಲಿದೆಯಾ ಸಿದ್ದರಾಮಯ್ಯ ಸರ್ಕಾರದ ಕಣ್ಣು..? ರಿಟ್ ಅರ್ಜಿ ಸಲ್ಲಿಸಿದ ರಾಜಮಾತೆ

ಅಕ್ಟೋಬರ್​​ 20, 1908 ರಲ್ಲಿ ಮಹಾರಾಜರಿಂದ ಆದೇಶವನ್ನು ಮಾಡಿದ್ದರು. ಚಾಮುಂಡಿ ದೇವಾಲಯದ ಸೇರಿ 12 ದೇವಾಲಯಗಳ ಬಗ್ಗೆ ಆದೇಶ ಹೊರಡಿಸಿದ್ದರು. ದೇವಾಲಯಗಳನ್ನ ಅರಮನೆ ಇಲಾಖೆಗೆ ವರ್ಗಾಯಿಸಿ ಆದೇಶ ನೀಡಿದ್ದರು. ಅಷ್ಟು ದೇವಾಲಯಗಳನ್ನು ಓರ್ವ ಅಧಿಕಾರಿ ನೋಡಿಕೊಳ್ಳಲು ನೇಮಕಗೊಳಿಸಲು ಆದೇಶ ನೀಡಿದ್ದರು.

ಇದನ್ನೂ ಓದಿ: ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್​ ಸುಧೀರ್​- ಸೋನಲ್; ಸ್ಟಾರ್​ ಜೋಡಿ ಮದುವೆಗೆ ಯಾರೆಲ್ಲಾ ಭಾಗಿ?

ಜನವರಿ 20, 1909ರಲ್ಲಿ ಡಿಸಿ ಮೈಸೂರನ್ನು ಮ್ಯಾನೇಜ್ ಮಾಡಲು ಆದೇಶ ಹೊರಡಿಸುತ್ತಾರೆ. ಅದರಂತೆಯೇ ಏಪ್ರಿಲ್​ 14, 1920ರ ವೇಳೆ ಅರಮನೆಗೆ ಇಲಾಖೆ ಆಡಳಿತ ಮಂಡಳಿ ಆದೇಶ ನೀಡುತ್ತದೆ. ಅದರಲ್ಲಿ 29 ದೇವಾಲಯಗಳು ಮಹಾರಾಜರ ಆಡಳಿತದಲ್ಲಿದ್ದವು. ಜನವರಿ 23, 1950 ರಲ್ಲಿ ಭಾರತ ಸರ್ಕಾರ ಮತ್ತು ಮಹಾರಾಜರ ನಡುವೆ ಒಪ್ಪಂದ ನಡೆಯಿತು.

ಇದನ್ನೂ ಓದಿ: ರಸ್ತೆ ಬದಿ ವಾಹನ ನಿಲ್ಲಿಸುವವರೇ ಎಚ್ಚರ; ಹಾಡಹಗಲೇ ಕಿಲಾಡಿ ಕಳ್ಳ ಮಾಡಿದ್ದೇನು ನೋಡಿ

ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರುವಾಗ ಮೊದಲ ಒಪ್ಪಂದ ನಡೆಯಿತು. ಚಾಮುಂಡಿ ದೇವಾಲಯ ಸೇರಿ ಮಹಾರಾಜರ ಖಾಸಗಿ ಆಸ್ತಿಗಳ ಬಗ್ಗೆ ಮತ್ತು 29 ದೇವಾಲಯಗಳ ಮೇಲೆ ರಾಜಮನೆತದ ಪೂರ್ತಿ ಮಾಲಕತ್ವವಿದೆ ಎಂದು ಹೇಳಿತು.

ಆಗಸ್ಟ್​ 15, 47ರ ತನಕ ಇದ್ದ ಆಸ್ತಿಗಳ ಮೇಲೆ ಹಕ್ಕು ಹೊಂದಿರುವ ಒಪ್ಪಂದ ಮಾಡಲಾಯಿತು. ಇದಕ್ಕೆ ಮಹಾರಾಜ ಮತ್ತು ಸಿಎಸ್ ಆಫ್ ಭಾರತ ಸರ್ಕಾರದ ಸಹಿ ಇದೆ. ಫೆಬ್ರವರಿ 6, 1951ರ ಮೈಸೂರು ಸರ್ಕಾರದ ಆದೇಶದಲ್ಲಿಯೂ ಉಲ್ಲೇಖವಿದೆ. ಅರಮನೆ ಮುಜರಾಯಿ ಆಸ್ತಿಗಳು ಮಹಾರಾಜರಿಗೆ ಸೇರಿವೆ ಎಂದು ಆದೇಶವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಮನೆತನಕ್ಕೂ ಚಾಮುಂಡಿ ದೇವಾಲಯಕ್ಕೂ ಇರೋ ಸಂಬಂಧವೇನು? ದಾಖಲೆಗಳು ಏನು ಹೇಳ್ತಿವೆ?

https://newsfirstlive.com/wp-content/uploads/2024/08/narasimha-raja-wodeyar.jpg

Load More