newsfirstkannada.com

ವಿದೇಶದಲ್ಲೂ ರಾಮನ ಹೆಸರಲ್ಲೇ ಶಾಸನ; ರಾಮ‘ನಾಮ’ ರಹಸ್ಯ ರಾಘವನಷ್ಟೇ ಅಜರಾಮರ!

Share :

Published January 12, 2024 at 8:47pm

Update January 12, 2024 at 8:48pm

  ವಿದೇಶಿ ರಾಜಮನೆತನಗಳಲ್ಲಿ ಶ್ರೀ ರಾಮನ ಹೆಸರಲ್ಲಿ ಶಾಸನ

  ರಾಜರುಗಳಿಗೂ ರಾಮನ ಹೆಸರಿನ ಹಿಂದಿದೆ ಮಹಾರಹಸ್ಯ!

  ಧಾರ್ಮಿಕ-ರಾಜಕೀಯ ಸಿದ್ಧಾಂತಕ್ಕೆ ರಾಮನೇ ಸ್ಫೂರ್ತಿನಾ?

ರಾಮನ ಆಳ್ವಿಕೆ ಒಂದು ಆದರ್ಶದಂತಿದ್ರೆ, ರಾಮಾಯಣ ಬದುಕಿನ ಪಾಠ ತಿಳಿಸುವಂತಿದೆ. ರಾಮನ ಹೆಸರೇ ಅಖಂಡ ಶಕ್ತಿಗೆ ವಿಳಾಸವಾಗಿದ್ರೆ. ರಾಮರಾಜ್ಯ ನಿಜವಾದ ಆಳ್ವಿಕೆ ಅರ್ಥ ತಿಳಿಸುವಂತಿದೆ ಅನ್ನೋ ವಾಡಿಕೆ ಇದೆ. ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಅನ್ನೊ ರಾಮನ ಒಂದೇ ಒಂದು ಮಾತು. ರಾಜ ಅನ್ನಿಸಿಕೊಂಡವನ ಎದೆಗೆ ಪದ್ಮಶರಶಯ್ಯೆಯಂತೆ ಸೇರಿ, ಮಾದರಿಯಾಗಿ ಬಿಟ್ಟಿತ್ತು. ಮನುಜ ಮತದಲ್ಲೇ ಉತ್ತಮನಾಗಿದ್ದಕ್ಕಾಗಿ ರಾಮನನ್ನ ಪುರುಷೋತ್ತಮ ಅಂದ್ರು.

ರಾಮನಂತೆ ಬಾಳುವುದಕ್ಕೆ ಅದೆಷ್ಟು ಯಾಗ, ಯಜ್ಞಗಳನ್ನ ಮಾಡಿದ್ರೂ ಅದು ಸಾಧ್ಯವಾಗೋದಿಲ್ಲ ಅಂತ, ತೇತ್ರಾಯುಗದ ನಂತರದ ರಾಜರುಗಳಿಗೆ ಅರ್ಥವಾಗಿ ಬಿಟ್ಟಿತ್ತು. ಕನಿಷ್ಠ ಆತನ ಆದರ್ಶಗಳನ್ನಾದ್ರೂ ಅಳವಡಿಸಿಕೊಂಡು, ರಾಮನ ಹೆಸರನ್ನ ಇಟ್ಟುಕೊಂಡು ರಾಜ್ಯವಾಳೋಣ ಅನ್ನೋ ಒಂದು ಚಿಂತನೆಯ ಮೊಳಕೆ ಅಲ್ಲಿಂದಲೇ ಚಿಗುರೋಕೆ ಶುರುವಾಗಿತ್ತು. ಆದ್ರೆ ಅದು ಎಷ್ಟರ ಮಟ್ಟಿಗೆ ಅಂದ್ರೆ, ಇಡೀ ವಿಶ್ವಕ್ಕೆ ವ್ಯಾಪಿಸುವಷ್ಟು.

ಅಂತರಂಗದ ಆತ್ಮ ರಾಮ.. ರಾಮನೊಂದಿಗೆ ರಾಮರಾಜ್ಯ!
ರಾಮನ ಸುಗುಣಗಳನ್ನ ಅಳವಡಿಸಿಕೊಳ್ಳೋದು ಕಷ್ಟಸಾಧ್ಯ!

ಭಾರತ ಸೇರಿ ಅದೆಷ್ಟೋ ದೇಶಗಳಲ್ಲಿ ರಾಜಾಳ್ವಿಕೆ ಶುರುವಿನಿಂದ ಆಗಿನ ರಾಜರು ರಾಮನ ಆಳ್ವಿಕೆಯಲ್ಲಿ ಅನುಸರಿಸಿದ್ದ ವಿಧಾನಗಳನ್ನೇ ಪ್ರತಿಬಿಂಬಿಸಬೇಕು ಅಂತ ತಾಪತ್ರಯಪಟ್ಟಿದ್ರು. ಅದನ್ನೇ ಇಡೀ ವಿಶ್ವದ ರಾಜರು ಕನಸು ಕಂಡಿದ್ದರು. ಪ್ರಾಚೀನ ಕಾಲದ ರಾಜರುಗಳು ರಾಮನಾಮವನ್ನು, ಮಕ್ಕಳಿಗೆ ಇಟ್ಟುಕೊಂಡು ರಾಜ್ಯವನ್ನಾಳೋಕೆ ಬಿಡ್ತಿದ್ರಂತೆ. ರಾಮನ ಆ ಅದ್ಭುತವಾದ ಸುವರ್ಣ ಆಡಳಿತವನ್ನ ಪ್ರಸ್ತುತ ಜಗತ್ತಲ್ಲಿ ಮತ್ತೆ ಜಗಮಗಿಸಬೇಕು ಅನ್ನೋ ಚಡಪಡಿಕೆ, ಆಧುನಿಕ ವಿಲಕ್ಷಣ ಜಗತ್ತಿನಲ್ಲಿ ರಾಮನ ಆ ಉನ್ನತ ತತ್ವಗಳನ್ನ ಜಾರಿಗೆ ತರುವ ಪ್ರಯತ್ನ, ಚಟುವಟಿಕೆ ರೂಪಕ್ಕೆ ತರೋಕೆ ಹರಸಾಹಸ ಪಟ್ಟ ರಾಜರೆಷ್ಟೋ ಮಂದಿ ಇದಾರಂತೆ.

ರಾಮನ ಸುಗುಣಗಳನ್ನ ತಮ್ಮಲ್ಲಿ ಅಳವಡಿಸಿಕೊಳ್ಳೋದು ಕೊಂಚ ಕಷ್ಟವೇ ಆದ್ರೂ.. ಅದು ಕಷ್ಟ ಸಾಧ್ಯ ಅಂತಲೇ ಹೇಳಬಹುದು. ಯಾಕಂದ್ರೆ, ರಾಮ ಯಾವತ್ತಿಗೂ ಗಂಭೀರವಾದ, ಒಂದು ಹಂತದ ಸೀಮಿತದಲ್ಲಿದ್ದ ವ್ಯಕ್ತಿತ್ವವಂತೂ ಅಲ್ಲ. ರಾಮನ ತತ್ವ ತುಂಬಾ ಸೂಕ್ಷ್ಮವಾಗಿತ್ತು. ರಾಮನ ಶ್ರೇಷ್ಟ ಸಿದ್ಧಾಂತಕ್ಕೆ ಯಾವುದೇ ಬೇಲಿಗಳಿರಲಿಲ್ಲ. ರಾಮತತ್ವವನ್ನ ಬ್ರಹ್ಮಾಂಡದ ಯಾವುದೇ ಮೂಲೆಯಲ್ಲಿ, ಯಾರು ಬೇಕಾದ್ರೂ ಅಭ್ಯಾಸ ಮಾಡಬಹುದಾಗಿತ್ತು. ಅಸಾಮಾನ್ಯ ರಾಜನಾಗಿದ್ದರಿಂದ ರಾಜ ರಾಮ ಶಾಶ್ವತ ಆಶಾವಾದದ ಸಂಕೇತ ಅಂತ ಹೇಳ್ಬೋದು. ಇಲ್ಲಿ ರಾಮನ ಒಂದೇ ಒಂದು ಮಾತು ಇಡೀ ವಿಶ್ವ ರಾಜಮನೆತಗಳಿಗೆ, ಆಳ್ವಿಕೆ ಜ್ಞಾನದ ಬಾಗಿಲು ತೆರೆಸಿತ್ತು.

‘‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’’!
ಈ ಮಾತೇ ರಾಜರ ಎದೆಗೆ ಪದ್ಮಶರಶಯ್ಯೆಯಾಗಿತ್ತು!

ರಾಮ ರಾವಣರ ಯುದ್ಧದಲ್ಲಿ ರಾಮಗೆದ್ದ ನಂತರ ಲಂಕಾಗೆ ರಾಮನೇ ಅಧಿಪತಿ ಆಗ್ತಾನೆ ಅಂತಾ ಎಲ್ಲಾ ಅನ್ಕೊಂಡಿದ್ದಾಗ, ರಾಮ ರಾವಣನ ಸೋದರ ವಿಭೀಷಣನನ್ನ ಲಂಕಾಗೆ ರಾಜನನ್ನಾಗಿ ಮಾಡಿ, ಪಟ್ಟಾಭಿಷೇಕ ಮಾಡ್ತಾನೆ. ಆಗ ಯಾಕೆ ನೀನೆ ರಾಜನಾಗಬೋದಿತಲ್ವೇ ಅಂತ ತಮ್ಮ ಲಕ್ಷ್ಮಣ ಕೇಳಿದಾಗ ರಾಮ ಹೇಳಿದ ಮಾತೆ ಈ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎನ್ನುವ ಮಾತು. ಇದರ ಅರ್ಥ ಇಷ್ಟೇ. ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ಶ್ರೇಷ್ಠವಾದದ್ದು ಅಂತ. ಈ ಮಾತಲ್ಲಿ ಇಷ್ಟೇ ಅರ್ಥವಿಲ್ಲ. ರಾಮನ ದೇಶಭಕ್ತಿ ಇದೆ. ದಂಡೆತ್ತಿ ಹೋಗಿ, ದೋಚಿಕೊಳ್ಳುವ ರಾಜರಿಗೆ ಉಪದೇಶ ಇದೆ. ಇದಲ್ಲವೇ ನಿಜವಾದ ರಾಜಮಾರ್ಗ ಇದೆ. ನಿಜವಾದ ರಾಜನಿಗಿರುವ ವರ್ಚಸ್ಸು ಅಂತಾ ರಾಮನನ್ನ ಜಗದ ರಾಜರೇ ಮೆಚ್ಚಿಕೊಂಡಿದ್ದರಂತೆ

ವಿದೇಶಿ ರಾಜಮನೆತನಗಳಲ್ಲಿ ರಾಮನ ಹೆಸರಲ್ಲಿ ಶಾಸನ!
ಅಲ್ಲಿ ರಾಮನ ಗೌರವಾರ್ಥಕ್ಕೆ ರಾಜಧಾನಿ ಮಾಡಿದ್ದರು!

ಥೈಲ್ಯಾಂಡ್‌ನ ರಾಜಮನೆತನದ ಹಲವಾರು ರಾಜರು, ಈಗಿನ ರಾಜನನ್ನೂ ಸೇರಿ ಅದೆಷ್ಟೋ ಶತಮಾನಗಳಿಂದ ‘ರಾಮ’ ಅನ್ನೋ ಹೆಸರನ್ನೇ ಅಳವಡಿಸಿಕೊಂಡು ಬಂದಿದ್ದಾರಂತೆ. ಮೊದಲು ಸಿಯಾಮ್ ಆಗಿದ್ದ ಥೈಲ್ಯಾಂಡನ್ನ ಬ್ಯಾಂಕಾಕ್‌ ರಾಜಧಾನಿಯನ್ನಾಗಿ ಮಾಡುವ ಮುನ್ನ, ರಾಮನ ಗೌರವಾರ್ಥವಾಗಿ ಆಯುತ್ಯ ಅಂತ ಹೆಸರಿಟ್ಟಿದ್ರಂತೆ. ಇಲ್ಲಿ ಅಯೋಧ್ಯೆ ರೀತಿ ಥೈಲ್ಯಾಂಡ್​​ನಲ್ಲಿ ಆಯುತ್ಯ ಅಂತಾ ಇತ್ತಂತೆ. ರಾಮನ ಹೆಸರಿನ ಶಕ್ತಿ ನೋಡಿದ್ದ ವಿದೇಶಿ ರಾಜರು ರಾಮನಿಂದ ಪ್ರೇರೇಪಿತಗೊಂಡು, ತಮ್ಮ ಹೆಸರುಗಳಲ್ಲೂ ರಾಮ ಇರುವಂತೆ ನೋಡಿಕೊಂಡಿದ್ದರಂತೆ.

ಒಂದು ಮುಖ್ಯವಾದ ಉದಾಹರಣೆ ಎಂದರೆ, ಕೋರಿಯಾದಲ್ಲಿ ಇವತ್ತು ಕೂಡ ಅಯೋಧ್ಯೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಥೈಲ್ಯಾಂಡ್ ಬಾಲಿಯಲ್ಲಿ ರಾಮಾಯಣದ ನೃತ್ಯಗಳನ್ನು ಮಾಡಲಾಗುತ್ತದೆ. ಈಜಿಪ್ಟ್ ರಾಜಗಳ ಹೆಸರಗಳು ರಾಮೋಸೆಸ್​ ಎಂದು ಹೆಸರನ್ನು ಇಟ್ಟುಕೊಂಡಿದ್ದಾರೆ. ಈ ಎಲ್ಲ ಹೆಸರುಗಳು ರಾಮನಿಂದ ಬಂದಿದೆ.

ಬೈಟ್: ಡಾ. ಶಲ್ವಪಿಳ್ಳೈ ಅಯ್ಯಂಗಾರ್​​​,ಧರ್ಮ ಶಾಸ್ತ್ರಜ್ಞರು

ಅನಂತ ಪದ್ಮನಾಭನ ಬಳಿ ಇದ್ಯಾ ರಾಮನಾಮ ಮನೆತನ!?

ಕೇರಳದ ತಿರುವನಂತಪುರದ ರಾಜಮನೆತನವೂ ರಾಮನಾದಲ್ಲೇ ಬಂದವರಂತೆ. ಅವರ ಮನೆಯಲ್ಲಿ ಇರುವ ಪ್ರತಿ ರಾಜ ಕುಡಿಗೂ ರಾಮ ನಾಮಕ್ಕೂ ಬಿಡಿಸಲಾರದ ನಂಟಿದೆಯಂತೆ. ರಾಜಮನೆತನಗಳ ಜೊತೆಗೆ ರಾಮನ ಹೆಸರಲ್ಲಿ ಅದೆಷ್ಟೊ ಊರುಗಳೂ ಸಹ ಇವೆ. ರಾಜವಂಶಗಳೇ ರಾಮನ ನಾಮವನ್ನ ಇಷ್ಟು ವಿಸ್ತರಿಸಿದ್ರು ಅಂದ್ರೆ ತಪ್ಪಾಗೋದಿಲ್ಲ.

ಅನೇಕ ದೇಶಗಳು ರಾಮ ತತ್ವದಲ್ಲಿ ನಡೆಯುತ್ತಿದ್ದರೂ.. ಆಯುತ್ಯ.. ಈ ಪದ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿಯೇ ಬೇರುಗಳನ್ನ ಹೊಂದಿದೆ ಅಂತಲೇ ಹೇಳಬಹುದು. ಭಾರತದಲ್ಲಿನ ಅಯೋಧ್ಯೆ ಮತ್ತು ಥೈಲ್ಯಾಂಡ್‌ನ ಆಯುತ್ಯ ಎರಡು ವಿಭಿನ್ನ ದೇಶಗಳೇ ಆದ್ರೂ, ಈ ಎರಡು ರಾಷ್ಟ್ರಗಳನ್ನ ಅಲ್ಲಿನ ಜನರನ್ನ ಒಗ್ಗೂಡಿಸಿದ್ದು ಮಾತ್ರ ಶ್ರೀರಾಮ ಅನ್ನೋದು ಎಲ್ಲರ ನಂಬಿಕೆ. ಇಲ್ಲಿನ ಮೊದಲ ರಾಜನ ಹೆಸರು ರಾಜ ರಾಮತಿಬೋಡಿ ಆ ರಾಜನ ಹೆಸರೂ ಸಹ ರಾಮನಿಂದಲೇ ಶುರುವಾಗಿದೆ. ಸಿಯಾಮ್‌ನ ಚಕ್ರಿ ರಾಜವಂಶದ ಸ್ಥಾಪಕ ಮೊದಲನೆ ರಾಜರಾಮ, 1782ರಲ್ಲಿ ಸಿಂಹಾಸನ ಏರಿ, ಅಯುತ್ಯ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದಾಗ, ರಾಮತಿಬೋಡಿ ಅನ್ನೋ ಹೆಸರನ್ನ ಪಡೆದಿದ್ದನಂತೆ. ಆಗಿನಿಂದಲೇ ಥೈಲ್ಯಾಂಡ್‌ನ ಎಲ್ಲಾ ರಾಜರು ರಾಮ ಅನ್ನೋ ಹೆಸರನ್ನ ಅಸ್ಮಿತೆಯಂತೆ ಬಳಸಿಕೊಂಡಿದ್ದಾರೆ.

ರಾಮನಾಮದಲ್ಲೇ ಧಾರ್ಮಿಕ ಮತ್ತು ರಾಜಕೀಯ ಸಿದ್ಧಾಂತಗಳ ಜೊತೆಗೆ ಅಲ್ಲಿ ರಾಮಾಯಣದ ಉತ್ಸವಗಳನ್ನೂ ಮಾಡ್ತಾರೆ. ರಾಮ ಥಾಯ್ ಸಂಸ್ಕೃತಿಯಲ್ಲಿ ಅದೆಷ್ಟು ಬೇರೂರಿದ್ದಾನಂದ್ರೆ, ಆ ಜನ ಅಯೋಧ್ಯೆಯ ರಾಮ ಜನ್ಮಭೂಮಿಗೆ ಅಲ್ಲಿನ ಎರಡು ನದಿಗಳಿಂದ ನೀರು,ಅಲ್ಲಿನ ಮಣ್ಣನ್ನ ಕಳುಹಿಸಿ, ಉದ್ಘಾಟನೆಯನ್ನ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ 51 ದೇಶಗಳು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲಿವೆ. ರಾಜ ಅಂದ್ರೆ ಪ್ರಜೆಗಳನ್ನ ಕ್ಷೇಮವಾಗಿ ನೋಡಿಕೊಳ್ಳೊನಷ್ಟೇ ಅಲ್ಲ. ರಾಜರಿಗೂ ಮಾದರಿಯಾಗಿ ನಿಲ್ಲೋನು, ಹುಟ್ಟಿಗೆ ನಿಜವಾದ ಅರ್ಥ ತಿಳಿಸೋ ಜಗದೇಕ ಚಕ್ರವರ್ತಿ ರಾಮ ಅಂತ ಏಳನೇ ಅವತಾರ ಸಾರಿದ ವೇದಾಂಶ. ತಲಾತಲಾಂತರದಿಂದ ರಾಮನ ಹೆಸರು ಭಾರತದಲ್ಲಷ್ಟೇಯಲ್ಲ, ಇಡೀ ವಿಶ್ವದಲ್ಲಿ ಈಗಲೂ ಪ್ರಭಂಜಿಸುತ್ತಿದೆ ಅನ್ನೋದು ನಿಜಕ್ಕೂ ಬ್ರಹ್ಮಾನಂದವನ್ನುಣಿಸುವಂತದ್ದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದೇಶದಲ್ಲೂ ರಾಮನ ಹೆಸರಲ್ಲೇ ಶಾಸನ; ರಾಮ‘ನಾಮ’ ರಹಸ್ಯ ರಾಘವನಷ್ಟೇ ಅಜರಾಮರ!

https://newsfirstlive.com/wp-content/uploads/2024/01/ramanama-1.jpg

Load More