/newsfirstlive-kannada/media/post_attachments/wp-content/uploads/2024/12/Golden-Dental-Man.jpg)
ಮನುಷ್ಯನ ಸೌಂದರ್ಯಕ್ಕೆ ಗರಿ ಮೂಡಿಸುವುದು ಅಂದರೆ ನಗು. ಆ ನಗು ಮತ್ತಷ್ಟು ಸುಂದರವಾಗಿಸಲು ನಮ್ಮ ಹಲ್ಲುಗಳು ಪಳಪಳ ಅಂತ ಹೊಳೆಯುತ್ತಿರಬೇಕು. ಆದರೆ ಬಿಳಿ, ಹೊಳೆಯುವ ಹಲ್ಲುಗಳನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಹಲ್ಲುಗಳ ವಿಡಿಯೋ ನೋಡಿದ್ರೆ ನಿಮಗೆ ಆಶ್ಚರ್ಯವಾಗಬಹುದು. ಇಲ್ಲೊಬ್ಬ ವ್ಯಕ್ತಿ ತನ್ನ ಮುಂಭಾಗದ ಹಲ್ಲುಗಳನ್ನೆಲ್ಲ ಕೀಳಿಸಿ ಚಿನ್ನದ ಹಲ್ಲುಗಳನ್ನು ಅಳವಡಿಸಿಕೊಳ್ಳುವ ಮೂಲಕ ಗೋಲ್ಡನ್ ಸ್ಮೈಲ್ ಬೀರಿದ್ದಾನೆ.
ಇದನ್ನೂ ಓದಿ: ಮಧ್ಯಾಹ್ನ ಒಂದು ಸಣ್ಣ ನಿದ್ದೆಗೆ ಜಾರುವುದರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
ಚಿನ್ನದ ಹಲ್ಲಿನ ವ್ಯಕ್ತಿಯನ್ನು ರಾಜನ್ ಚೌಧರಿ ಎಂದು ಗುರುತಿಸಲಾಗಿದೆ. ಈತ ನೈಸರ್ಗಿಕವಾದ ಹಲ್ಲುಗಳನ್ನು ಕೀಳಿಸಿಕೊಂಡು ಚಿನ್ನದ ಹಲ್ಲು ಅಳವಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಹಲ್ಲುಗಳ ಮೇಲೆ ರಾಜನ್ ಎಂದು ಬರೆಯಿಸಿಕೊಂಡಿದ್ದಾನೆ. ಚಿನ್ನದ ಹಲ್ಲುಗಳ ಮೇಲೆ ತಮ್ಮ ಹೆಸರು ಬರೆಸಿಕೊಂಡ ಮೊದಲ ಭಾರತೀಯ ವ್ಯಕ್ತಿ ರಾಜನ್ ಚೌಧರಿ ಎನ್ನಲಾಗುತ್ತಿದೆ.
View this post on Instagram
ಚಿನ್ನದ ಹಲ್ಲುಗಳು, ಹಲ್ಲು ಕಿತ್ತ ಜಾಗದಲ್ಲಿ ಮೃದುವಾದ ಅಥವಾ ಗಟ್ಟಿಯಾದ ರಚನೆಯ ಒಂದು ಭಾಗವಾಗಿದ್ದು, ಹಲ್ಲಿನ ಗೋಚರಿಸುವ ಭಾಗವನ್ನು ಚಿನ್ನದಿಂದ ಅಚ್ಚು ಮಾಡಿದ ರಚನೆಯನ್ನು ಕೂರಿಸಲಾಗಿದೆ.
ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಈ ವಿಡಿಯೋವನ್ನು ಕುತೂಹಲದಿಂದ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ರಾಜನ್ ಹಂಚಿಕೊಂಡಿರುವ ಚಿನ್ನದ ಹಲ್ಲಿನ ವಿಡಿಯೋಗೆ 12 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. 65,700 ಜನ ಲೈಕ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ