newsfirstkannada.com

ನಾಳೆ ಗರ್ಭಗುಡಿಯಲ್ಲಿ ನಡೆಯೋ ದೈವೀ ಕಾರ್ಯಗಳು ಯಾವುವು? ಆ 84 ಸೆಕೆಂಡ್ ರಹಸ್ಯವೇನು..?

Share :

Published January 21, 2024 at 8:26pm

    ಆ ಗರ್ಭಗುಡಿಯಲ್ಲಿ ನಡೆಯೋ ದೈವೀ ಕಾರ್ಯಗಳು ಯಾವುವು?

    ಶಿಲೆಯನ್ನು ದೇವರನ್ನಾಗಿಸೋ ಪ್ರಕ್ರಿಯೆಯೇ ಪ್ರಾಣ ಪ್ರತಿಷ್ಠಾಪನೆ

    ಅಭಿಜಿತ್ ಮುಹೂರ್ತ , ಮೃಗಶೀರ್ಷ ನಕ್ಷತ್ರ , ಅಮೃತ ಸಿದ್ಧಿ ಯೋಗ!

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಕನಸು ನನಸಾಗಿದೆ. ರಾಮಮಂದಿರದಲ್ಲಿ ವಿರಾಜ ಮಾನನಾಗೋ ರಾಮಲಲ್ಲಾ ಮೂರ್ತಿಯನ್ನ ನೋಡಬೇಕೆಂಬ ಆಸೆ ಕೂಡ ನೆರವೇರಿದೆ. ಈಗ ಇಡೀ ದೇಶದ ಚಿತ್ತ ನೆಟ್ಟಿರೋದು ಗರ್ಭಗುಡಿಯಲ್ಲಿ ನಡೆಯಲಿರೋ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ. ಕೃಷ್ಣಶಿಲೆಯಿಂದ ಅರಳಿರೋ ಬಾಲರಾಮನ ಮೂರ್ತಿಗೆ ರಾಮಶಕ್ತಿ ತುಂಬುವ, ಶಿಲೆಯನ್ನ ದೇವರನ್ನಾಗಿಸೋ ರೋಮಾಂಚಕ ಕ್ಷಣವದು.

ಜನವರಿ 22 ಅಂದ್ರೆ ಸೋಮವಾರ ಮಧ್ಯಾಹ್ನ 12 ಗಂಟೆ 29ನೇ ನಿಮಿಷದ 8ನೇ ಸೆಕೆಂಡ್‌. ಈ ಸಮಯಕ್ಕಾಗಿ ಇಡೀ ದೇಶವೇ ತುದಿಗಾಲಲ್ಲಿ ಕಾಯುತ್ತಿದೆ. ಕೋಟಿ ಕೋಟಿ ರಾಮಭಕ್ತರ ಹತ್ತಾರು, ನೂರಾರು ವರ್ಷಗಳ ಕನಸು ನನಸಾಗುವ ಘಳಿಗೆಯದು. ಕರುನಾಡ ಕೃಷ್ಣಶಿಲೆಯಿಂದ ಕೆತ್ತಲಾದ ರಾಮಲಲ್ಲಾ ಮೂರ್ತಿಗೆ ರಾಮಶಕ್ತಿ ಆಹಾವನೆಯಾಗೋ. ರಾಮಮಂದಿರದಲ್ಲಿ ವಿಷ್ಣುಪ್ರಭೆ ಆವರಿಸೋ ಅದ್ಭುತ ಸಮಯವದು. ಭವ್ಯವಾದ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗೋದನ್ನ ಮುಕ್ಕೋಟಿ ದೇವರು ಕಣ್ತುಂಬಿಕೊಳ್ಳೋ ಮಹಾಕ್ಷಣವದು! ಹೌದು, ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಕಾರ್ಯ ಜನವರಿ 22ರ ಮಧ್ಯಾಹ್ನ ಜರುಗಲಿದೆ. ಗಂಟೆಗಳ ಕಾಲ ಮಂತ್ರಗಳನ್ನು ಪಠಿಸುತ್ತಾ ವೇದಗಳನ್ನು ಸ್ತುತಿಸುತ್ತಾ. ಹೋಮ, ಹವನ, ಯಜ್ಞಾದಿಗಳನ್ನು ಮಾಡುತ್ತಾ ಮಧ್ಯಾಹ್ನ 12 ಗಂಟೆ 29ನೇ ನಿಮಿಷದ 8ನೇ ಸೆಕೆಂಡ್‌ಗೆ ಸರಿಯಾಗಿ ಪ್ರಾಣಪ್ರತಿಷ್ಠಾಪನೆ ಕಾರ್ಯ ಆರಂಭವಾಗುತ್ತೆ. ಅಲ್ಲಿಂದ ಕೇವಲ 84 ಸೆಕೆಂಡ್‌ಗಳ ಒಳಗಾಗಿ ರಾಮಲಲ್ಲಾ ಮೂರ್ತಿಗೆ ಜೀವಕಳೆ ಬರುವ ಅಂದ್ರೆ, ಪ್ರಾಣಪ್ರತಿಷ್ಠಾಪನೆ ಕಾರ್ಯ ನೆರವೇರಬೇಕು. ಆ 84 ಸೆಕೆಂಡ್‌ಗಳು ಇಡೀ ದೇಶವನ್ನೇ ರೋಮಾಂಚನಗೊಳಿಸಲಿದೆ.

ಜನವರಿ 22 ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗಲು ಇದಾಗಲೇ ನರೇಂದ್ರ ಮೋದಿಯವರು 11 ದಿನಗಳ ವ್ರತಾಚರಣೆ ಆರಂಭಿಸಿದ್ದಾರೆ. ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮಮಂದಿರ ಗರ್ಭಗುಡಿಯಲ್ಲಿ ಅರ್ಚಕರ ಸಹಿತ ಕೆಲವೇ ಕೆಲವು ಮಂದಿ ಇರಲಿದ್ದಾರೆ. ಆ ಪೈಕಿ ನರೇಂದ್ರ ಮೋದಿ ಕೂಡ ಒಬ್ಬರು. ಹಾಗಾಗಿ, ರಾಮಭಕ್ತ ಮೋದಿ ರಾಮಸೇವೆಗಾಗಿ 11 ದಿನದ ವ್ರತ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ ರಾಮಲಲ್ಲಾ ವಿಗ್ರಹದ ಕಣ್ಣುಗಳನ್ನು ತೆರೆಯೋ ಸೌಭಾಗ್ಯ ಕೂಡ ಮೋದಿಯವರದ್ದಾಗಲಿದೆಯಂತೆ. ಆದ್ರೆ, ಅದರ ಬಗ್ಗೆ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಜನವರಿ 22ರಂದು ನಡೆಯಲಿರೋ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಕಾರ್ಯ ಹೇಗೆ ನಡೆಯಲಿದೆ. ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಪ್ರಕ್ರಿಯೆ ಹೇಗಿರಲಿದೆ.

ಗರ್ಭಗುಡಿಯಲ್ಲಿ ನಡೆಯೋ ದೈವೀ ಕಾರ್ಯಗಳು ಯಾವುವು?
ಶಿಲೆಯನ್ನು ದೇವರನ್ನಾಗಿಸೋ ಪ್ರಕ್ರಿಯೆಯೇ ಪ್ರಾಣ ಪ್ರತಿಷ್ಠಾಪನೆ!

ಪ್ರಾಣ ಪ್ರತಿಷ್ಠಾಪನೆಯ ಮೂಲ ಅರ್ಥ ವಿಗ್ರಹಕ್ಕೆ ಜೀವ ನೀಡುವುದು. ವೇದ, ಪುರಾಣಗಳಿಂದ ತೆಗೆದುಕೊಳ್ಳಲಾದ ಹಲವು ಆಚರಣೆಗಳ ಮೂಲಕ ಈ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಲಾಗುತ್ತೆ. ಶಿಲೆಯಿಂದ ಮೂರ್ತಿಯನ್ನು ಕೆತ್ತನೆ ಮಾಡಿದ ಸಂದರ್ಭದಲ್ಲಿ ಅದು ಕೇವಲ ಶಿಲೆಯ ಶಿಲ್ಪವಾಗಿಯಷ್ಟೇ ಇರುತ್ತೆ. ದೇವರ ರೂಪವಿದ್ದರೂ ದೇವರ ಶಕ್ತಿ ಇರೋದಿಲ್ಲ. ಹಾಗಾಗಿ, ಮೂರ್ತಿಗೆ ದೇವರ ಶಕ್ತಿ ತುಂಬಿ, ದೇವರು ಭಕ್ತರ ಪ್ರಾರ್ಥನೆಗಳನ್ನು ಸ್ವೀಕರಿಸಿ, ವರಗಳನ್ನು ನೀಡುವ ಜೀವ ತುಂಬಲಾಗುತ್ತೆ. ಶಿಲೆಯನ್ನು ದೇವರನ್ನಾಗಿಸೋ ಮೂರ್ತಿಗೆ ದೈವಿಕ ಶಕ್ತಿ ನೀಡುವ ಕಾರ್ಯವೇ ಪ್ರಾಣ ಪ್ರತಿಷ್ಠಾಪನೆ. 51 ಇಂಚಿನ ರಾಮಲಲ್ಲಾ ಮೂರ್ತಿಯನ್ನು ರಾಮಮಂದಿರದ ಗರ್ಭಗುಡಿಯಲ್ಲಿರಿಸಿ. ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಮಾಡುವ ಮಹಾಕಾರ್ಯ ಜನವರಿ 22ನೇ ತಾರೀಖು ನಡೆಯುತ್ತೆ. ಸೋಮವಾರ ಮಧ್ಯಾಹ್ನ 12.20ರಿಂದ 12.30ರ ನಡುವೆ ವಿಸ್ಮಯಕಾರಿ ವಿಧಿವಿಧಾನ ನೆರವೇರಲಿದೆ. ಇನ್ನು, ಜನವರಿ 22ರಂದೇ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಮಾಡೋದಕ್ಕೂ ಕಾರಣವಿದೆ.

ರಾಮ ಜನಿಸಿದ ಘಳಿಗೆ, ಪ್ರಾಣ ಪ್ರತಿಷ್ಠಾಪನೆ ಮುಹೂರ್ತಕ್ಕೆ ಹೊಂದಿಕೆ!

ಶ್ರೀರಾಮ ಅಭಿಜಿತ್ ಮುಹೂರ್ತ, ಮೃಗಶೀರ್ಷ ನಕ್ಷತ್ರ, ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗದ ಸಂಗಮ ಸಮಯದಲ್ಲಿ ಜನಿಸಿದನೆಂದು ಹೇಳಲಾಗುತ್ತೆ. ಈ ಎಲ್ಲಾ ಮಂಗಳಕರ ಅವಧಿಗಳು 22 ಜನವರಿ 2024ರಂದು ಹೊಂದಿಕೆಯಾಗುತ್ತವೆ. ಜನವರಿ 22ರಂದು ಮಧ್ಯಾಹ್ನ 12.16ರಿಂದ 12.59 ರ ನಡುವೆ ಅಭಿಜಿತ್ ಮುಹೂರ್ತವಿರುತ್ತೆ. ಹಾಗಾಗಿ, ಜನವರಿ 22 ರ ಮಧ್ಯಾಹ್ನ 12.20 ರಿಂದ 12.30 ರ ಒಳಗೆ ನೆರವೇರಲಿದೆ.

ಆ 84 ಸೆಕೆಂಡ್ ರಹಸ್ಯ!
ಅಭಿಜಿತ್ ಮುಹೂರ್ತ

ವೈದಿಕ ಜ್ಯೋತಿಷ್ಯದ ಪ್ರಕಾರ, ಅಭಿಜಿತ್ ಮುಹೂರ್ತವು ದಿನದ ಅತ್ಯಂತ ಮಂಗಳಕರ ಮತ್ತು ಶಕ್ತಿಯುತ ಸಮಯ. ಈ ಮುಹೂರ್ತ ಸುಮಾರು 48 ನಿಮಿಷಗಳವರೆಗೆ ಇರುತ್ತೆ. ಈ ಅವಧಿಯಲ್ಲಿ ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ಎಂದು ನಂಬಲಾಗುತ್ತೆ. ಹಿಂದೂ ಪುರಾಣಗಳ ಪ್ರಕಾರ, ಈ ಅಭಿಜಿತ್ ಮುಹೂರ್ತದ ಸಮಯದಲ್ಲಿ ಪಾಸಿಟಿವ್ ಎನರ್ಜಿ ಇರುತ್ತಂತೆ. ನಕಾರಾತ್ಮಕ ಶಕ್ತಿಗಳು ಮಾಯವಾಗುತ್ವಂತೆ. ಹಾಗಾಗಿ, ಅಭಿಜಿತ್ ಮುಹೂರ್ತದಲ್ಲೇ ಪ್ರಾಣಪ್ರತಿಷ್ಠಾಪನೆ ಕಾರ್ಯ ನಡೆಸಲಾಗುತ್ತೆ. ಮೃಗಶೀರ್ಷ ಎಂದರೆ ಜಿಂಕೆಯ ತಲೆ ಎಂದರ್ಥ. ಮೃಗಶೀರ್ಷ ನಕ್ಷತ್ರದಲ್ಲಿ ಜನಿಸಿದವರು ಸುಂದರ, ಆಕರ್ಷಕ, ಶ್ರಮಶೀಲ ಮತ್ತು ಬುದ್ಧಿವಂತರಾಗಿರುತ್ತಾರೆ ಅಂತ ನಂಬಲಾಗುತ್ತೆ. ಮೃಗಶೀರ್ಷ ನಕ್ಷತ್ರದ ಕಥೆಯಲ್ಲಿ, ರಾಕ್ಷಸರು ಅಮರತ್ವದ ದೇವರು ಮತ್ತು ಈ ನಕ್ಷತ್ರದ ಆಳುವ ಗ್ರಹವಾದ ಸೋಮನನ್ನು ಅಪಹರಿಸಿ ಕಮಲದೊಳಗೆ ಬಚ್ಚಿಟ್ಟರಂತೆ. ದೇವತೆಗಳು ಸಹಾಯಕ್ಕಾಗಿ ಜಿಂಕೆಗಳ ರಾಜ ಮೃಗಶೀರ್ಷನನ್ನು ಸಂಪರ್ಕಿಸಿದರಂತೆ, ಆಗ ಮೃಗಶೀರ್ಷ ಸೋಮನನ್ನು ಮುಕ್ತಗೊಳಿಸಿದರು ಎನ್ನಲಾಗುತ್ತೆ. ಹಾಗಾಗಿ, ಈ ಮೃಗಶೀರ್ಷ ನಕ್ಷತ್ರದ ಶಕ್ತಿಯಿರೋ ಸಮಯದಲ್ಲೇ ರಾಮಲಲ್ಲಾ ಮೂರ್ತಿಗೆ ಜೀವ ನೀಡುವ ಪ್ರಕ್ರಿಯೆ ನಡೆಯುತ್ತೆ.  ಸೋಮವಾರದ ಮೃಗಶೀರ್ಷ ನಕ್ಷತ್ರದಲ್ಲಿ ಅಮೃತ ಸಿದ್ಧಿ ಯೋಗ ಬರುತ್ತೆ. ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆಗೆಂದು ನಿಗಧಿಪಡಿಸಿರೋ ಸಮಯದಲ್ಲಿ ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗಗಳು ಬರೋದ್ರಿಂದಾಗಿ ಆ ಸಮಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ರಾಮಾನಂದಿ ಸಂಪ್ರದಾಯದ ಪ್ರಕಾರ ಪ್ರಾಣಪ್ರತಿಷ್ಠಾಪನೆ!

ರಾಮಮಂದಿರ ಲೋಕಾರ್ಪಣೆ ಮತ್ತು ಪ್ರಾಣಪ್ರತಿಷ್ಠಾಪನೆ ಕಾರ್ಯಗಳು ರಾಮಾನಂದಿ ಸಂಪ್ರದಾಯದ ಪ್ರಕಾರ ನಡೆಯಲಿವೆ. ರಾಮನಂದಿ ಅನ್ನೋದು ರಾಮನಿಂದ ಪ್ರಾರಂಭವಾದ ವಂಶವೆಂದು ಹೇಳಲಾಗುತ್ತೆ. ಇನ್ನು, ಈ ರಾಮನಂದಿ ವಂಶಸ್ಥರು ರೂಡಿಸಿಕೊಂಡು ಬಂದಿರೋ ಸಂಪ್ರದಾಯದ ಪ್ರಕಾರವೇ ದೇಗುಲ ಉದ್ಘಾಟನೆ ಮತ್ತು ರಾಮಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆಯಂತೆ. ನೀವಿಷ್ಟು ಹೊತ್ತು ಕೇಳಿದ್ದು ರಾಮಮಂದಿರ ಲೋಕಾರ್ಪಣೆ ಕಾರ್ಯದ ಸಂಪ್ರದಾಯ, ಪ್ರಾಣಪ್ರತಿಷ್ಠಾಪನೆಗೆ ನಿಗಧಿ ಪಡಿಸಿರೋ ಮುಹೂರ್ತದ ಹಿಂದಿನ ರಹಸ್ಯವನ್ನ. ಆದ್ರೆ, ಪ್ರಾಣಪ್ರತಿಷ್ಠಾಪನೆ ಕಾರ್ಯದಲ್ಲಿ ಅತ್ಯಂತ ರೋಚಕ ಎನ್ನಿಸೋದು ಆ ವಿಸ್ಮಯಕಾರಿ ವೇಳೆಯಲ್ಲಿ ನಡೆಯುವ ಆಚರಣೆಗಳು.

ಪ್ರಾಣಪ್ರತಿಷ್ಠಾಪನೆಯನ್ನ ನೆರವೇರಿಸುವ ಪರಿ ಹೇಗಿರುತ್ತೆ ಅಂತಾ ಕೇಳಿದ್ರೆ ಅಕ್ಷರಶಃ ರೋಮಾಂಚನವಾಗುತ್ತೆ. ರಾಮಲಲ್ಲಾ ಮೂರ್ತಿ ರಾಮಮಂದಿರದ ಗರ್ಭಗುಡಿ ಸೇರಿ ಅಲ್ಲಿ ರಾಮಶಕ್ತಿ ಆವಾಹನೆಯಾಗುವ ಆ ರೋಚಕ ಕ್ಷಣ ಹೇಗಿರುತ್ತೆ. ಹೌದು, ಪ್ರಾಣಪ್ರತಿಷ್ಠಾಪನೆಯನ್ನು ನೆರವೇರಿಸುವ ಪರಿ ಹೇಗಿರುತ್ತೆ ಅಂತ ಕೇಳಿದ್ರೆ ಅಕ್ಷರಶಃ ರೋಮಾಂಚನವಾಗುತ್ತೆ. ರಾಮಲಲ್ಲಾ ಮೂರ್ತಿ ರಾಮಮಂದಿರದ ಗರ್ಭಗುಡಿ ಸೇರಿ ಅಲ್ಲಿ ರಾಮಶಕ್ತಿ ಆವಾಹನೆಯಾಗುವ ಆ ರೋಚಕ ಕ್ಷಣ ಹೇಗಿರುತ್ತೆ. ಪ್ರಧಾನಿ ನರೇಂದ್ರ ಮೋದಿಯವರ ಯಾವ್ಯಾವ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ರಾಮನ ಮಹಾಪ್ರಭೆಗೆ ಸಾಕ್ಷಿಯಾಗಲಿರೋ ಆ ಜನವರಿ 22ರ ಪ್ರಾಣಪ್ರತಿಷ್ಠಾಪನೆ ರಹಸ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಗರ್ಭಗುಡಿಯಲ್ಲಿ ನಡೆಯೋ ದೈವೀ ಕಾರ್ಯಗಳು ಯಾವುವು? ಆ 84 ಸೆಕೆಂಡ್ ರಹಸ್ಯವೇನು..?

https://newsfirstlive.com/wp-content/uploads/2024/01/rama-14.jpg

Load More