newsfirstkannada.com

ನಗುಮೊಗದ ರಾಮಲಲ್ಲಾ; ಏನಿದರ ವೈಶಿಷ್ಟ್ಯ ಎಂದು ತಿಳಿದುಕೊಳ್ಳಬೇಕೆ..? ಈ ಸ್ಟೋರಿ ಓದಿ!

Share :

Published January 19, 2024 at 10:26pm

Update January 19, 2024 at 10:34pm

    ಕೃಷ್ಣ ಶಿಲೆಯಿಂದ ಅರಳಿತು ಬಾಲರಾಮನ ಅಮೋಘ ಮೂರ್ತಿ

    ಬ್ರಹ್ಮಕಮಲದ ಮೇಲೆ ನಿಂತಿರುವ ಶ್ರೀರಾಮಲಲ್ಲಾನ ಮೂರ್ತಿ

    ರಾಮನ ಬಲಗೈನಲ್ಲಿ ಚಿನ್ನದ ಬಾಣ, ಎಡಗೈನಲ್ಲಿ ಚಿನ್ನದ ಬಿಲ್ಲು

ಕೋಟಿ ಹಿಂದೂಗಳ ಶತ ಶತಮಾನಗಳ ಕನಸು ನೇರವೇರಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಮರ್ಯಾದಾ ಪುರುಷೋತ್ತಮ ಬಾಲರಾಮನಾಗಿ ಅಯೋಧ್ಯೆಯ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಕೋಟಿ ಕಣ್ಣುಗಳ ಕಣ್ಮನ ಸೆಳೆಯುತ್ತಿರುವ ಈ ರಾಮಲಲ್ಲ ಮೂರ್ತಿಯ ವೈಶಿಷ್ಟವೇನು? ಅಷ್ಟಕ್ಕೂ ಈ ರಾಮಲಲ್ಲ ಮೂರ್ತಿಯ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರ ಕೆತ್ತಿರೋದೆಕೆ? ಅನ್ನೋದೇ ಸಖತ್ ಇಂಟ್ರೆ​​ಸ್ಟಿಂಗ್.

ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುವ ಬಾಲರಾಮನ ಮೂರ್ತಿ ಕೊನೆಗೂ ದರ್ಶನವಾಗಿದೆ. ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ಮೂರ್ತಿಯನ್ನ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಈ ಮೂರ್ತಿಯ ವೈಭೋಗವನ್ನು ನೋಡಲು ಎರಡು ಕಣ್ಣು ಸಾಲದು. ಕಲ್ಯಾಣಕ್ಕಾಗಿ ತಪಸ್ಸು, ವರ, ಶಾಪ, ಮೋಕ್ಷಗಳ ಕಾರಣಕ್ಕಾಗಿ ಭಗವಾನ್​ ವಿಷ್ಣು ಎತ್ತಿದ ಅವತಾರಗಳು ಒಂದೆರಡಲ್ಲ.. ಮಾನವನ ರಕ್ಷಣೆಗಾಗಿ ಮತ್ಸ್ಯ ಅವತಾರ, ಭೂಮಿಯ ರಕ್ಷಣೆಗಾಗಿ ವರಾಹ ಅವತಾರ, ಹಿರಣ್ಯ ಕಶಿಪುವಿನ ಸಂಹಾರಕ್ಕಾಗಿ ನರಸಿಂಹನ ಅವತಾರ, ಅಹಂಕಾರದ ದಮನಕ್ಕಾಗಿ ವಾಮನ ಅವತಾರ ಎತ್ತಿದ್ದ ವಿಷ್ಣು , ಪರಶುರಾಮನಾಗಿ ದುಷ್ಟ ಸಂಹಾರ ಮಾಡಿದ್ದ. ಆದ್ರೆ, ಇವೆಲ್ಲಾ ಅವತಾರಗಳಿಗಿಂತ ಸಾಕಷ್ಟು ವಿಭಿನ್ನ, ವಿಶೇಷ. ಹಾಗೂ ಲೋಕಕ್ಕೆ ಇಂದಿಗೂ ಆದರ್ಶವಾಗಿರೋ ಅವತಾರ ಅಂದ್ರೆ, ವಿಷ್ಣುವಿನ 7ನೇ ಶ್ರೇಷ್ಠ ಅವತಾರ ಪ್ರಭು ಶ್ರೀರಾಮನ ಅವತಾರ. ಇಂಥಾ ಪ್ರಭು ಶ್ರೀರಾಮ ಬಾಲರಾಮನಾಗಿ ಅಯೋಧ್ಯೆಯ ರಾಮಮಂದಿರದಲ್ಲಿ ವಿರಾಜಮಾನನಾಗಿದ್ದು, ಐದು ವರ್ಷದ ಮಗುವಿನ ತೇಜಸ್ಸು ಹೇಗಿರುತ್ತೋ ಹಾಗೆಯೇ ಬಾಲರಾಮನ ಮೂರ್ತಿಯಲ್ಲಿರುವ ತೇಜಸ್ಸು ದೇಶದ ಜನರ ಕಣ್ಮನ ಸೆಳೆಯುತ್ತಿದೆ. ಕೊನೆಗೂ ಆ ರಾಮ ಮೂರ್ತಿ ಗರ್ಭಗುಡಿಯಲ್ಲಿ ವಿರಾಜಮಾನವಾಗಿ ಕೋಟಿ ಕಣ್ಣುಗಳ ಕನಸು ನನಸಾಗಿದೆ.

ರಾಮನ ವಿಗ್ರಹದ ಪ್ರಭಾವಳಿಯ ಸುತ್ತ ದಶಾವತಾರದ ಕೆತ್ತನೆ

ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮನ ಮೂರ್ತಿಯನ್ನ ಕರ್ನಾಟಕದಲ್ಲಿ ಸಿಕ್ಕಿರುವ ಕೃಷ್ಣ ಶಿಲೆಯಿಂದ ಕೆತ್ತನೆ ಮಾಡಲಾಗಿದೆ. ಈ ಮೊದಲು ನೇಪಾಳದ ಸಾಲಿಗ್ರಾಮದಿಂದ ಮೂರ್ತಿ ಕೆತ್ತನೆಯನ್ನ ಮಾಡೋದಕ್ಕೆ ನಿರ್ಧರಿಸಲಾಗಿತ್ತು. ಆದ್ರೆ ಅದಕ್ಕಿಂತ ಕೃಷ್ಣ ಶಿಲೆಯೇ ಶ್ರೇಷ್ಠವಾಗಿದ್ದು ಇದೇ ಕಾರಣಕ್ಕೆ ರಾಮಲಲ್ಲ ಈ ಕೃಷ್ಣ ಶಿಲೆಯಲ್ಲೇ ಅರಳಿದ್ದಾನೆ. ಈ ರಾಮನ ಮೂರ್ತಿಯಲ್ಲಿ ಗಮನ ಸೆಳೆಯುತ್ತಿರೋದು ವಿಗ್ರಹದ ಪ್ರಭಾವಳಿಯ ಸುತ್ತವಿರುವ ದಶಾವತಾರದ ಮೂರ್ತಿ ಕೆತ್ತನೆ. ರಾಮ ಮೂರ್ತಿ ಪ್ರಭಾವಳಿಯಲ್ಲಿ ರಾಮನ ಹತ್ತು ಅವತಾರಗಳು ಕಾಣಬಹುದಾಗಿದೆ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ ಈ ಐದು ಅವತಾರಗಳು ಮೂರ್ತಿಯ ಬಲಬಾಗದಲ್ಲಿ ಕೆತ್ತಿದ್ರೆ. ಮೂರ್ತಿಯ ಎಡಭಾಗದಲ್ಲಿ ಪರುಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿಯ ಅವತಾರಗಳನ್ನ ಕೆತ್ತನೆ ಮಾಡಲಾಗಿದೆ.

ಪ್ರಭಾವಳಿಯ ಬಲಭಾಗಕ್ಕೆ ಹನುಮ, ಎಡಭಾಗಕ್ಕೆ ಗರುಡ ಕೆತ್ತನೆ

ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ಬಾಲರಾಮನ ಪ್ರಭಾವಳಿಯ ಬಲ ಭಾಗದಲ್ಲಿ ರಾಮ ಬಂಟ ಹನುಮನ ಕೆತ್ತನೆಯಿದ್ರೆ. ಎಡ ಭಾಗದಲ್ಲಿ ವಿಷ್ಣುವಿನ ವಾಹನ ಗರುಡನನ್ನ ಕೆತ್ತನೆ ಮಾಡಲಾಗಿದೆ. ಈ ಮೂಲಕ ನಾರಾಯಣ ಮತ್ತು ಸಾಕ್ಷಾತ ರಾಮ ಬೇರೆಯಲ್ಲ ಅನ್ನೋದನ್ನ ಮೂರ್ತಿ ಸಾರಿ ಹೇಳ್ತಿದೆ. ಸಾಮಾನ್ಯವಾಗಿ ಬ್ರಹ್ಮ ಕಮಲದ ಮೇಲೆ ಬ್ರಹ್ಮ ದ್ಯಾನ ಮಾಡೋದನ್ನ ನೀವು ನೋಡಿಯೇ ಇರ್ತಿರಾ.. ಈ ಬ್ರಹ್ಮ ಕಮಲವನ್ನು ದೈವಿಕ ಹೂ ಅಂತಲೂ ಕರೆಯಲಾಗುತ್ತೆ. ಹೀಗಾಗಿ ಅಯೋಧ್ಯೆಯ ಬಾಲರಾಮನು ಇದೇ ಬ್ರಹ್ಮ ಕಮಲದ ಮೇಲೆ ನಿಂತಿರೋದು ಮೂರ್ತಿಯ ದೈವಿಕ ಸ್ವರೂಪಕ್ಕೆ ಮತ್ತಷ್ಟು ಕಳೆ ತಂದುಕೊಟ್ಟಿದೆ.

ಎದೆಯ ಮೇಲೆ ಕಂಠಿಹಾರ.. ಸಂಸ್ಕೃತದಲ್ಲಿ ಓಂ ರಚನೆ!

ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮನ ಬಲಗೈಯಲ್ಲಿ ಚಿನ್ನದ ಬಾಣ, ಮತ್ತು ರಾಮನ ಎಡಗೈನಲ್ಲಿ ಚಿನ್ನದ ಬಿಲ್ಲು ಇಡಲಾಗುತ್ತೆ. ಹೀಗಾಗಿ ರಾಮಲಲ್ಲ ಭಕ್ತ ಸಮೂಹಕ್ಕೆ ಧನುರ್ಧಾರಿಯಾಗಿ ದರ್ಶನ ನೀಡಲಿದ್ದಾನೆ. ಇನ್ನು ಶ್ರೀರಾಮನ ಎದೆಯ ಮೇಲೆ ಕಂಠಿಹಾರವಿದ್ದು, ಮೇಲಿನ ಭಾಗದಲ್ಲಿ ಸೂರ್ಯ ಮತ್ತು ಚಕ್ರವನ್ನು ಕೆತ್ತನೆ ಮಾಡಲಾಗಿದೆ. ಆ ಚಕ್ರದ ಕೆಳಗೆ ಶಂಖವಿದ್ದು, ಶಂಖದ ಕೆಳ ಭಾಗದಲ್ಲಿ ಸಂಸ್ಕೃತದಲ್ಲಿ ಓಂ ಅಂತ ಕೆತ್ತನೆ ಮಾಡಿರೋದು ತುಂಬಾ ವಿಶೇಷ.

ಶಂಖ ಚಕ್ರ, ಕೀರ್ತಿಮುಖ, ಸರ್ವಾಂಗ ಸುಂದರ ಶ್ರೀರಾಮ

ರಾಮನ ಮೂರ್ತಿಯ ಮೇಲ್ಬಾಗದಲ್ಲಿ ಶಂಖ ಚಕ್ರ ಮತ್ತು ಕೀರ್ತಿಮುಖ ರಚನ ಮಾಡಲಾಗಿದೆ. ಹೀಗೆ ಬಾಲರಾಮ 16 ಆಭರಣಗಳು, 16 ತತ್ವಗಳು, 32 ಲಕ್ಷಣಗಳಿಂದ ಸರ್ವಾಂಗ ಸುಂದರನಾಗಿ ಕಂಗೊಳಿಸ್ತಿದ್ದಾನೆ. ಶ್ರೀರಾಮ ಬಾಲರಾಮನಾಗಿ ವಿರಾಜಮಾನನಾಗಿರುವ ಗರ್ಭಗುಡಿ ಕೂಡ ಅಚ್ಚರಿಯ ಕಲಾಕೃತಿಗಳಿಂದ ಕೂಡಿದೆ. ರಾಮಮಂದಿರದೊಳಗಿನ ಅತ್ಯದ್ಭುತ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಗರ್ಭಗುಡಿಯೊಳಗೆ ಲಯಕಾರಕ ಅನಂತಶಯನ ವಿಷ್ಣು-ಮಹಾಲಕ್ಷ್ಮೀ, ಮತ್ತು ಸೃಷ್ಟಿಕರ್ತ ಬ್ರಹ್ಮ, ಕತೃಕಾರಕ ಶಿವ, ನಾರದಮುನಿ, ಗರುಡ ಮೂರ್ತಿ ಕೆತ್ತನೆ ಕಾಣಬಹುದಾಗಿದೆ. ಇನ್ನೂ ಗರ್ಭಗುಡಿಯ ಪ್ರಾಂಗಣದ ಮೇಲೆ ಭಕ್ತಾಂಜನೇಯ ವಿರಾಜಮಾನನಾಗಿದ್ದಾನೆ.

ಜನವರಿ 22ರ ಮಧ್ಯಾಹ್ನ 12 ಗಂಟೆ 20 ನಿಮಿಷಕ್ಕೆ ರಾಮಮಂದಿರದ ಈ ಬೃಹತ್ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಆ ಬಳಿಕ ಭಕ್ತರಿಗೆ ಗರ್ಭಗುಡಿ ಮತ್ತು ರಾಮಲಲ್ಲಾನ ದರ್ಶನ ಭಾಗ್ಯ ಸಿಗಲಿದೆ. ವಿಶೇಷ ಏನಂದ್ರೆ.. ನೂತನ ರಾಮಮಂದಿರದ ಗರ್ಭಗುಡಿ ಜಗತ್ತಿನಲ್ಲೇ ಅತೀ ದೊಡ್ಡ ಹಿಂದೂ ದೇಗುಲದ ಗರ್ಭಗುಡಿ ಎನಿಸಿಕೊಳ್ಳಲಿದೆ. 20 ಅಡಿ ಅಗಲ.. 161 ಅಡಿ ಎತ್ತರ ಹೊಂದಿರೋ ರಾಮಮಂದಿರದ ಗರ್ಭಗುಡಿ ನಿಜಕ್ಕೂ ವೈಭವದ ಸಂಕೇತವೇ ಸರಿ. ಇಲ್ಲಿತನಕ ಅಂದ್ರೆ ರಾಮಮಂದಿರ ಗರ್ಭಗುಡಿ ನಿರ್ಮಾಣಕ್ಕೂ ಮೊದಲು.. ಗುಜರಾತ್‌ನ ಸೋಮನಾಥ್ ಜ್ಯೋತಿರ್ಲಿಂಗ ದೇಗುಲದ ಗರ್ಭಗುಡಿ ಜಗತ್ತಿನ ಅತಿದೊಡ್ಡ ಗರ್ಭಗುಡಿಯಾಗಿತ್ತು. ಇನ್ನುಮುಂದೆ ರಾಮಲಲ್ಲಾ ವಿರಾಜಮಾನನಾಗಲಿರೋ ರಾಮಮಂದಿರ ದೇಗುಲದ ಗರ್ಭಗುಡಿ ಜಗತ್ತಿಗೇ ಅತಿದೊಡ್ಡ ಗರ್ಭಗುಡಿಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಗುಮೊಗದ ರಾಮಲಲ್ಲಾ; ಏನಿದರ ವೈಶಿಷ್ಟ್ಯ ಎಂದು ತಿಳಿದುಕೊಳ್ಳಬೇಕೆ..? ಈ ಸ್ಟೋರಿ ಓದಿ!

https://newsfirstlive.com/wp-content/uploads/2024/01/RAMA-12.jpg

Load More