/newsfirstlive-kannada/media/post_attachments/wp-content/uploads/2025/02/DELHI-ELECTION-RESULT.jpg)
ದೆಹಲಿಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆಯಿಂದಲೇ ಶುರುವಾಗಿದೆ. ಅರಂಭದಿಂಧಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಬಂದಿದೆ. ಬೆಳಗ್ಗೆ 9 ಗಂಟೆಯ ವೇಳೆಯಲ್ಲಿ ಬಿಜೆಪಿ ಒಟ್ಟು 70 ಕ್ಷೇತ್ರಗಳ ಪೈಕಿ 50 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿತ್ತು. ಆಪ್ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಸದ್ಯ ಈಗ ಟ್ರೆಂಡ್ ಸಂಪೂರ್ಣ ಬದಲಾಗಿದೆ. ಬಿಜೆಪಿ 46 ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದ್ದರೆ. ಆಪ್ 24 ಕ್ಷೇತ್ರಗಳಲ್ಲಿ ಗಟ್ಟಿಯಾಗಿದೆ. ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿಯೂ ಕೂಡ ಮುನ್ನಡೆಯನ್ನು ಕಂಡಿಲ್ಲ.
ಇದನ್ನೂ ಓದಿ:ಕೇಜ್ರಿವಾಲ್ ಹ್ಯಾಟ್ರಿಕ್ ಕನಸು ಭಗ್ನ ಎಂದಿರುವ ಸಮೀಕ್ಷೆಗಳು.. ದೆಹಲಿ ದಂಗಲ್ ಕ್ಲೈಮ್ಯಾಕ್ಸ್ನಲ್ಲಿ ಭಾರೀ ಕುತೂಹಲ
ಇನ್ನು ಆಮ್ ಆದ್ಮಿ ಪಾರ್ಟಿಯ ಘಟಾಘಟಿ ನಾಯಕರಿಗೆ ಆರಂಭಿಕವಾಗಿ ದೊಡ್ಡ ಹೊಡೆತ ಬಿದ್ದಿತ್ತು. ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರಂಭದ ಎಲ್ಲ ಸುತ್ತುಗಳಲ್ಲಿಯೂ ಕೂಡ ಹಿನ್ನಡೆಯನ್ನು ಅನುಭವಿಸಿದ್ದರು ಸದ್ಯದ ಟ್ರೆಂಡ್ನಲ್ಲಿ ನವದೆಹಲಿ ಕ್ಷೇತ್ರದಲ್ಲಿ ಕೇವಲ 386 ಮತಗಳಿಂದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಇನ್ನು ದೆಹಲಿಯ ಹಾಲಿ ಮುಖ್ಯಮಂತ್ರಿ ಅತೀಶಿ ಬಿಜೆಪಿ ರಮೇಶ್ ಬಿದುರಿಯಾ ಎದುರು 1039 ವೋಟ್ಗಳಿಂದ ಕಲ್ಕಾಜಿ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ. ಇನ್ನು ಮಾಜಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಕೂಡ ಬಿಜೆಪಿ ತ್ರಿವಿಮದರ್ ಸಿಂಗ್ ಮರ್ವಾ ಎದುರು ಜಂಗ್ಪುರ್ ಕ್ಷೇತ್ರದಲ್ಲಿ 1314 ಮತಗಳಿಂದ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ದೆಹಲಿಯ ಆರೋಗ್ಯ ಸಚಿವ ಸೌರಭ ಭಾರದ್ವಾಜ್ ಕೂಡ ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.
ಸದ್ಯದ ಟ್ರೆಂಡ್ನಲ್ಲಿ ಬಿಜೆಪಿ 46 ಕ್ಷೇತ್ರಗಳಲ್ಲಿ ಬಿಗಿ ಹಿಡಿತ ಸಾಧಿಸಿದ್ದು. ಆಪ್ 24 ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಷ್ಟೇ ಸಫಲವಾಗಿದೆ. ಒಂದು ಕಾಲದಲ್ಲಿ ದೆಹಲಿಯನ್ನು ಭದ್ರಕೋಟೆಯನ್ನಾಗಿಸಿಕೊಂಡಿದ್ದ ಕಾಂಗ್ರೆಸ್ ಖಾತೆ ಕೂಡ ತೆರೆಯದೇ ಹೀನಾಯವಾಗಿ ಸೋತಿದೆ. ಸದ್ಯದ ಟ್ರೆಂಡ್ ಹೀಗಿದ್ದು ಇನ್ನು ಕೆಲವೇ ಗಂಟೆಗಳಲ್ಲಿ ಅಧಿಕೃತ ಫಲಿತಾಂಶ ಹೊರಬೀಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ