ಪಹಲ್ಗಾಮ್‌ ನರಮೇಧ: ಉಗ್ರರು ಕೇಳಿದ ಈ ‘ಕಲ್ಮಾ’ ಎಂದರೇನು? ಇಸ್ಲಾಂನಲ್ಲಿ ಅದರ ಮಹತ್ವ ಏನು?

author-image
admin
Updated On
ಪಹಲ್ಗಾಮ್‌ ನರಮೇಧ: ಉಗ್ರರು ಕೇಳಿದ ಈ ‘ಕಲ್ಮಾ’ ಎಂದರೇನು? ಇಸ್ಲಾಂನಲ್ಲಿ ಅದರ ಮಹತ್ವ ಏನು?
Advertisment
  • ಪಹಲ್ಗಾಮ್‌ನಲ್ಲಿ ನಿಮಗೆ ಕಲ್ಮಾ ಬರುತ್ತಾ ಎಂದು ಕೇಳಿದ ಉಗ್ರರು
  • ಕಲ್ಮಾ ಪಠಣ ಮಾಡಿದ ದೇಬಾಶಿಶ್ ಭಟ್ಟಾಚಾರ್ಯ ಬಚಾವ್‌ ಆದರು
  • ಲಾ ಇಲಾಹ ಇಲ್ಲಲ್ಲಾಹ್ ಎಂದರೂ ಬಿಡದೇ ಕೊಂದ ಭಯೋತ್ಪಾದಕರು

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಮಾಡುವಾಗ ಹಿಂದೂಗಳನ್ನೇ ಟಾರ್ಗೆಟ್‌ ಮಾಡಿದ್ದರು. ಪ್ರವಾಸಿಗರಲ್ಲಿ ಹಿಂದೂ ಯಾರು? ಮುಸ್ಲಿಂ ಯಾರು ಅನ್ನೋದನ್ನ ಖಚಿತ ಪಡಿಸಿಕೊಳ್ಳಲು ಹಲವು ತಂತ್ರಗಳನ್ನ ಅನುಸರಿಸಿದ್ದಾರೆ. ಹಿಂದೂಗಳ ಪ್ಯಾಂಟ್‌ ಬಿಚ್ಚಿಸಿ ನೋಡಿರೋದು ಒಂದು ಆದ್ರೆ ನಿಮಗೆ ಕಲ್ಮಾ ಬರುತ್ತಾ ಎಂದು ಕೇಳಿ, ಕಲ್ಮಾ ಪಠಣ ಮಾಡಿದವರನ್ನ ಬಿಟ್ಟು ಕಲ್ಮಾ ಹೇಳಲು ಬಾರದಿದ್ದವರಿಗೆ ಗುಂಡಿಕ್ಕಿ ಕೊಂದಿದ್ದಾರೆ.

ಪಹಲ್ಗಾಮ್‌ ಸಂತ್ರಸ್ತರು ಉಗ್ರರು ಕಲ್ಮಾ ಕೇಳಿ ನಡೆಸಿದ ಭಯಾನಕ ಕೃತ್ಯಗಳ ಬಗ್ಗೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ದೇಬಾಶಿಶ್ ಭಟ್ಟಾಚಾರ್ಯ ಅವರು ಉಗ್ರರ ಮುಂದೆ ಕಲ್ಮಾವನ್ನು ಜೋರಾಗಿ ಹೇಳಿದ್ದು, ಪ್ರಾಣಾಪಾಯದಿಂದ ಬಚಾವ್ ಆಗಿದ್ದೇನೆ ಎಂದಿದ್ದಾರೆ. ಅಸ್ಸಾಂ ಮೂಲದ ಸಹಾಯಕ ಪ್ರೊಫೆಸರ್‌ಗೆ ಕಲ್ಮಾ ಬಗ್ಗೆ ಅಧ್ಯಯನ ನಡೆಸಿದ್ದು ಜೀವ ಉಳಿಸಲು ನೆರವಾಗಿದೆ.

publive-image

ಇದನ್ನೂ ಓದಿ: ಕೆಲವೇ ನಿಮಿಷಗಳ ಹಿಂದೆ ರೀಲ್ಸ್ ಮಾಡಿದ್ದ ಮಂಜುನಾಥ್ ದಂಪತಿ.. ವಿಡಿಯೋ ನೋಡಿದ್ರೆ ಕರುಳು ಚುರ್ ಅನ್ನುತ್ತೆ.. 

ಇನ್ನು, ಕ್ರಿಶ್ಚಿಯನ್ ಸಮುದಾಯ ವ್ಯಕ್ತಿಗೆ ಉಗ್ರರು ಕಲ್ಮಾ ಹೇಳಲು ಕೇಳಿದ್ದಾರೆ. ಆಗ ಕಲ್ಮಾ ಹೇಳದ ಹಿನ್ನೆಲೆಯಲ್ಲಿ ಗುಂಡು ಹಾರಿಸಿದರು ಎಂದು ಅಂತ್ಯಕ್ರಿಯೆ ವೇಳೆ ಮೃತ ವ್ಯಕ್ತಿಯ ಪತ್ನಿ ಕಣ್ಣೀರು ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಕರುಣಾಜನಕವಾಗಿದೆ.


">April 25, 2025

ಇಸ್ಲಾಂನ ಈ ‘ಕಲ್ಮಾ’ ಎಂದರೇನು?
ಕಲ್ಮಾ ಅನ್ನೋದು ಇಸ್ಲಾಂ ಧರ್ಮದಲ್ಲಿ ಅಲ್ಲಾಹನ ಏಕತೆಯ ಮೇಲಿನ ನಂಬಿಕೆಯನ್ನು ದೃಢೀಕರಿಸುವ ಘೋಷಣೆ. ಕಲ್ಮಾ ಅಂದ್ರೆ ಲಾ ಇಲಾಹ ಇಲ್ಲಲ್ಲಾಹ್ ಎನ್ನುತ್ತಾ ಪ್ರವಾದಿ ಮೊಹಮ್ಮದ್‌ ಮೇಲಿನ ನಂಬಿಕೆಗೆ ಪ್ರಾರ್ಥನೆ ಸಲ್ಲಿಸುವುದು.

ಕಲ್ಮಾ ಅನ್ನೋದು ಪ್ರತಿಯೊಬ್ಬ ಮುಸ್ಲಿಂರಿಗೂ ಗೊತ್ತಿರಲೇಬೇಕು. ಇದು ಇಸ್ಲಾಮಿಕ್ ನಂಬಿಕೆಯ ಮೂಲವನ್ನು ಪ್ರತಿನಿಧಿಸುತ್ತದೆ.

ಮುಸ್ಲಿಂ ಬಾಂಧವರು ನಿರಂತರವಾಗಿ ಕಲ್ಮಾ ಪಠಿಸುವುದರಿಂದ ನಾವು ಅಲ್ಲಾನನ್ನು ಮಾತ್ರ ಆರಾಧಿಸುವುದನ್ನು ದೃಢಪಡಿಸಿಕೊಳ್ಳುತ್ತಾರೆ.

ಕಲ್ಮಾ ಅನ್ನೋದು ಸಾರ್ವಜನಿಕವಾಗಿ ಮುಸ್ಲಿಮರಿಗೆ ವೈಯಕ್ತಿಕ ಚಿಂತನೆ ಮತ್ತು ನಂಬಿಕೆಯ ದೃಢೀಕರಣ ನೀಡುತ್ತದೆ.

ಇಸ್ಲಾಂ ಧರ್ಮದಲ್ಲಿ 6 ವಿವಿಧ ಕಲ್ಮಾಗಳಿವೆ. ಈ 6 ಕೂಡ ಒಂದೊಂದು ವಿಶಿಷ್ಟ ಉದ್ದೇಶದ ಸಂದೇಶವನ್ನು ಸಾರಿ ಹೇಳುತ್ತದೆ.

1. ಕಲ್ಮಾ ತಯ್ಯಿಬ್ (ಶುದ್ಧತೆ)
2. ಕಲ್ಮಾ ಶಹಾದಾ (ಸಾಕ್ಷ್ಯ)
3. ಕಲ್ಮಾ ತಮ್ಜೀದ್ (ವೈಭವೀಕರಣ)
4. ಕಲ್ಮಾ ತೌಹೀದ್ (ಏಕತೆ)
5. ಕಲ್ಮಾ ಅಸ್ತಗ್ಫರ್ (ಪಶ್ಚಾತ್ತಾಪ)
6. ಕಲ್ಮಾ ರದ್ದೆ ಕುಫ್ರ್ (ಅಪನಂಬಿಕೆಯನ್ನು ತಿರಸ್ಕರಿಸುವುದು)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment