/newsfirstlive-kannada/media/post_attachments/wp-content/uploads/2024/10/trachoma.jpg)
ಭಾರತದಲ್ಲಿ ಟ್ರಾಕೋಮಾ ಎಂಬ ಕಣ್ಣಿನ ಸಮಸ್ಯೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲಾಗಿದೆ. ಇದು ಮನುಷ್ಯರಿಗೆ ಜೀವನಪೂರ್ತಿ ಕುರುತನ ತಂದೊಡ್ಡುವಂತಹ ಕಣ್ಣಿನ ಸಮಸ್ಯೆ. ಸಾರ್ವಜನಿ ಆರೋಗ್ಯ ಹಿತಾಸಕ್ತಿ ದೃಷ್ಟಿಯಿಂದಾಗಿ, ಭಾರತ ವಿಶ್ವಸಂಸ್ಥೆಯಲ್ಲಿ ನೇಪಾಳ ಹಾಗೂ ಮಯನ್ಮಾರ್​ನೊಂದಿಗೆ ಕೈಜೋಡಿಸುವ ಮೂಲಕ ಒಂದು ಆರೋಗ್ಯ ಸಮಸ್ಯೆಯನ್ನು ಮೆಟ್ಟಿ ನಿಂತಿದೆ. ಕೇವಲ ಭಾರತ ಮಾತ್ರವಲ್ಲ ಒಟ್ಟು 19 ಆಗ್ನೇಯ ಏಷ್ಯಾದ ರಾಷ್ಟ್ರಗಳು ಈ ಒಂದು ಸಾಧನೆಯನ್ನು ಮಾಡಿವೆ. ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದ ಟ್ರಾಕೋಮಾವನ್ನು ಈ ಎಲ್ಲಾ ರಾಷ್ಟ್ರಗಳು ಸರ್ವಪ್ರಯತ್ನದಿಂದ ದೂರ ಇಟ್ಟಿವೆ. ಆದ್ರೆ ಈ ಸಮಸ್ಯೆ ಇಂದಿಗೂ 44 ರಾಷ್ಟ್ರಗಳಲ್ಲಿ ಹಾಗೆಯೇ ಇದೆ. ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿಲ್ಲ. ಹೇಗೆ ಪೋಲಿಯೋವನ್ನು ನಿರ್ಮೂಲನೆ ಮಾಡಲಾಯ್ತಾ ಹಾಗೆ ಟ್ರಾಕೋಮಾವನ್ನು ಕೂಡ ಭಾರತದಲ್ಲಿ ನಿರ್ಮೂಲನೆ ಮಾಡಲಾಗಿದೆ.
ಇದನ್ನೂ ಓದಿ:ಝೀರೋ ಸ್ಟೇಜ್.. ಕ್ಯಾನ್ಸರ್​ನ ಈ ಲಕ್ಷಣಗಳು ಕಂಡು ಬಂದ್ರೆ ಕೂಡಲೇ ಎಚ್ಚೆತ್ತುಕೊಳ್ಳಬೇಕು..!
ಹಾಗಿದ್ರೆ ಏನಿದು ಟ್ರಾಕೋಮಾ? ಇದರ ಲಕ್ಷಣಗಳೇನು? ಅನ್ನೋದು ನೋಡುವುದಾದ್ರೆ.ಟ್ರಾಕೋಮಾ ಅಂದ್ರೆ ಅದು ಒಂದು ಕುರುಡುತನವನ್ನು ಸೃಷ್ಟಿ ಮಾಡುವ ಸೋಂಕು. ಸ್ವಚ್ಛತೆಯ ಕೊರತೆ ಹಾಗೂ ಕಲುಷಿತ ನೀರಿನಿಂದಾಗಿ ಹರಡುವ ಸೋಂಕು ಇದಾಗಿರುವುದರಿಂದ. ಇದರಿಂದ ಜೀವನಪೂರ್ತಿ ಕುರುಡುತನದಿಂದ ಬಳಲುವಂತಹ ಸಮಸ್ಯೆಗಳು ಎದುರಾಗುತ್ತವೆ. ಕಲುಷಿತ ನೀರು ಕಣ್ಣು, ಮೂಗು ಹಾಗೂ ಗಂಟಲಿಗೆ ಸೇರುವುದರಿಂದ ಈ ಸೋಂಕು ಹರಡುತ್ತದೆ ಎನ್ನಲಾಗುತ್ತದೆ. ಟ್ರಾಕೋಮಾದ ಲಕ್ಷಣಗಳನ್ನು ಗುರುತಿಸುವುದಾದ್ರೆ. ವಿಪರೀತ ಕಣ್ಣುಗಳು ಕೆಂಪಾಗುವುದು, ಕಣ್ಣು ರೆಪ್ಪೆಗಳು ಊದಿಕೊಳ್ಳುವುದು, ಮಂಜು ಮಂಜಾಗುವ ದೃಷ್ಟಿ, ಕಣ್ಣಿನಿಂದ ವಿಪರೀತವಾಗಿ ನೀರು ಸೋರುವುದು. ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ನೀವು ವೈದ್ಯರನ್ನು ಕಾಣುವುದು ಒಳ್ಳೆಯದು.
ಇದನ್ನೂ ಓದಿ:ನಿತ್ಯ ಸಾಯಂಕಾಲ ಈ ವ್ಯಾಯಾಮಗಳನ್ನು ಮಾಡುವ ರೂಢಿ ಇಟ್ಟುಕೊಳ್ಳಿ, ತೂಕವನ್ನು ಕಳೆದುಕೊಳ್ಳಿ
ಇನ್ನು ಟ್ರಾಕೋಮಾಗೆ ನೀಡುವ ಚಿಕಿತ್ಸೆಗಳು ಕೂಡ ಅನೇಕ ರೀತಿಯಲ್ಲಿವೆ. ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಒಂದು ಸುರಕ್ಷಿತ ಚಿಕಿತ್ಸೆಯ ವಿಧಾನವನ್ನು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಸಲಹೆಗಳ ಪ್ರಕಾರ ಟ್ರಾಕೋಮಾ ಸೋಂಕಿಗೆ ತುತ್ತಾಗಿ ಅದು ಕುರುಡುತನ ಹಂತಕ್ಕೆ ತಲುಪಿದಾಗ ಶಸ್ತ್ರಚಿಕತ್ಸೆ ಮಾಡಿ ಅದನ್ನು ಸರಿಮಾಡಲಾಗುತ್ತದೆ. ಇನ್ನು ಸೋಂಕು ನಿವಾರಿಸುವ ಆ್ಯಂಟಿಬಯೋಟಿಕ್​ ಔಷಧಿಗಳನ್ನು ನೀಡುವ ಮೂಲಕ ಇದನ್ನು ನಿವಾರಿಸಲಾಗುತ್ತದೆ. ಅದರಲ್ಲೂ ಅಜಿಂಥ್ರೊಮಸಿಯಂತ ಸೋಂಕು ನಿವಾರಕ ಮಾತ್ರೆಗಳನ್ನು ಈ ಒಂದು ಟ್ರಾಕೋಮಾ ಸಮಸ್ಯೆಗೆ ನೀಡಲಾಗುತ್ತದೆ. ಇದರೊಂದಿಗೆ ಮುಖವನ್ನು ಸ್ವಚ್ಛಗೊಳಿವಾಗಿಟ್ಟುಕೊಳ್ಳಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಾಗೂ ಜನರು ವಾಸಿಸುವ ಪರಿಸರದಲ್ಲಿ ಸುಧಾರಣೆ ತರುವ ಮೂಲಕ ಅವರಿಗೆ ಸರಿಯಾದ ಶುದ್ಧವಾದ ನೀರನ್ನು ಪೂರೈಕೆ ಮಾಡುವುದರ ಮೂಲಕ ಈ ಒಂದು ಟ್ರಾಕೋಮಾವನ್ನು ಗೆದ್ದು ನಿಲ್ಲಬಹುದು. ಆಗ್ನೇಯ ಏಷ್ಯಾದ 19 ದೇಶಗಳು ಇದೇ ವಿಧಾನವನ್ನು ಅನುಸರಿಸಿ ಈ ಟ್ರಾಕೋಮಾವನ್ನು ನಿರ್ಮೂಲನೆಗೊಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us