/newsfirstlive-kannada/media/post_attachments/wp-content/uploads/2025/01/mokshitha4.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಫಿನಾಲೆಗೆ ಹತ್ತಿರವಾಗುತ್ತಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇದೀಗ 9 ಸ್ಪರ್ಧಿಗಳು ಸಖತ್​ ಖುಷಿಯಲ್ಲಿದ್ದಾರೆ. ಹೌದು, ಬಿಗ್​ಬಾಸ್​ ಈ ವಾರ ಸ್ಪರ್ಧಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್​ಗಳನ್ನು ನೀಡುತ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಗೆ ಭವ್ಯಾ ಗೌಡ, ತ್ರಿವಿಕ್ರಮ್​ ಹಾಗೂ ರಜತ್​ ಕಿಶನ್​ ಫ್ಯಾಮಿಲಿಯವರು ಬಂದಿದ್ದರು.
/newsfirstlive-kannada/media/post_attachments/wp-content/uploads/2025/01/mokshitha5.jpg)
ಇಂದು ಬಿಗ್​ಬಾಸ್​ ಮನೆಗೆ ಮೋಕ್ಷಿತಾ ಪೈ, ಉಗ್ರಂ ಮಂಜು ಹಾಗೂ ಗೌತಮಿ ಕುಟುಂಬಸ್ಥರು ಬಂದಿದ್ದಾರೆ. ಇಂದು ಬಿಗ್​ಬಾಸ್​ ಮನೆಗೆ ಮೋಕ್ಷಿತಾ ಕುಟುಂಬ ಬಂದಿದ್ದು, ಅಕ್ಕ-ತಮ್ಮನ ಭಾವನಾತ್ಮಕ ಕ್ಷಣಗಳನ್ನು ಕಂಡು ಬಿಗ್​​ಬಾಸ್​ ಮನೆ ಸದಸ್ಯರು ಕಣ್ಣೀರಿಟ್ಟಿದ್ದಾರೆ. ಹೊಸ ವರ್ಷದಂದೇ ಮೋಕ್ಷಿತಾ ಫ್ಯಾಮಿಲಿ ಬಿಗ್​ಬಾಸ್​ ಅಂತ ದೊಡ್ಡ ಮನೆಗೆ ಬಂದಿದೆ. ತಂದೆ, ತಾಯಿ ಹಾಗೂ ಸಹೋದರನನ್ನು ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಹೋದರನನ್ನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2025/01/mokshitha7.jpg)
ಇನ್ನೂ, ಬಿಗ್​ಬಾಸ್​ ಪರಪಂಚ ನೀನೇ ನನ್ನ ಪರಪಂಚ ನೀನೆ ಹಾಡು ಹಾಕಿ ಮೋಕ್ಷಿತಾ ಪೈ ಅವರ ಕುಟುಂಬಸ್ಥರನ್ನು ವೆಲ್​ಕಮ್​ ಹೇಳಿದ್ದರು. ತಮ್ಮನನ್ನು 94 ದಿನಗಳ ನಂತರ ನೋಡಿದ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದಾದ ಬಳಿ ತಮ್ಮನಿಗೆ ನಾನು ಯಾರು ಅಂತ ಗೊತ್ತಾಗುತ್ತಿಲ್ವಾ ನಿನಗೆ ಅಂತ ಕೇಳಿದ್ದಾರೆ. ಆದರೆ ಅದಕ್ಕೆ ಅವರ ತಮ್ಮ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಲ್ಲ.
/newsfirstlive-kannada/media/post_attachments/wp-content/uploads/2025/01/mokshitha4.jpg)
ಇದಾದ ಬಳಿಕ ಮನೆ ಮಂದಿ ಮೋಕ್ಷಿತಾ ಪೈ ತಮ್ಮ ಮಂಜುನಾಥ್​ನನ್ನು ಮನೆಯ ಒಳಗೆ ಕರೆದುಕೊಂಡು ಮಾತಾಡಿಸಿದ್ದಾರೆ. ಅಲ್ಲದೇ ತಮ್ಮನ ಬಗ್ಗೆ ಭಾವುಕರಾಗಿದ್ದಾ ಮಾತಾಡಿದ ಮೋಕ್ಷಿತಾ, ನನ್ನ ತಮ್ಮ ಹುಟ್ಟಿದ ಮೇಲೆ ನನಗೆ ಜವಾಬ್ದಾರಿ ಜಾಸ್ತಿ ಆಯ್ತು. ಬರೀ ಅವನಿಗೆ ಅಕ್ಕ ಮಾತ್ರ ಅಲ್ಲ, ಅಮ್ಮ ಕೂಡ ಆಗಿದ್ದೀನಿ, ಚಿಕ್ಕ ವಯಸ್ಸಿನಿಂದಲೂ ಅವನೇ ನನ್ನ ಪ್ರಪಂಚ, ನಾನು ಏನೇ ಮಾಡಿದ್ದರು ಅವನಿಗೋಸ್ಕರನೇ ಅಂತ ಎಲ್ಲರ ಮುಂದೆಯೇ ಕಣ್ಣೀರು ಹಾಕಿದ್ದಾರೆ. ಅಪ್ಪ-ಅಮ್ಮನಿಗೆ ಮೋಕ್ಷಿತಾ ಪೈ ಹಾಗೂ ಮಂಜುನಾಥ್ ಇಬ್ಬರು ಮಕ್ಕಳಿದ್ದಾರೆ. ಮೋಕ್ಷಿತಾ ಅವರ ತಮ್ಮ ಫಿಸಿಕಲಿ ಮತ್ತು ಮೆಂಟಲಿ ಚಾಲೆಂಜ್ ಕಿಡ್ ಆಗಿದ್ದಾರೆ. ಆತನನ್ನು ಮೋಕ್ಷಿತಾ ಪೈ ಅವರೇ ನೋಡಿಕೊಳ್ಳುತ್ತಿದ್ದರಂತೆ. ಸದ್ಯ ಮೋಕ್ಷಿತಾ ಅವರು ಬಿಗ್​ಬಾಸ್​ ಮನೆಗೆ ಬಂದಿದ್ದ ಕಾರಣ ಅವರ ತಂದೆ ತಾಯಿ ಮಂಜುನಾಥ್​ ಅವರನ್ನು ನೋಡಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us