/newsfirstlive-kannada/media/post_attachments/wp-content/uploads/2025/03/alcohol-smell.jpg)
ಮದ್ಯಪಾನ ಮಾಡುವುದೇ ಆರೋಗ್ಯಕ್ಕೆ ಹಾನಿಕರ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೂ ಕೂಡ ಇದು ಒಂದು ಅಭ್ಯಾಸವಾಗಿ, ಚಟವಾಗಿ ಇನ್ನು ಕೆಲವರಿಗೆ ವ್ಯಸನವಾಗಿ ಮಾನವ ಜಗತ್ತಿನಲ್ಲಿ ಉಳಿದುಕೊಂಡಿದೆ. ಗುಂಡು ಹೊಡೆದ ಗಂಡುಗಳು ಮೊದಲು ಹೆದರುವುದೇ ತಮ್ಮ ಪತ್ನಿಗೆ ಅಥವಾ ಕುಟುಂಬದವರಿಗೆ. ವಾಸನೆ ಬಂದರೇ ಉಗಿಸಿಕೊಳ್ಳಬೇಕಾಗುತ್ತದೆ ಎಂಬ ಭಯ. ಕುಡಿದರೆ ವಾಸನೆ ಕಡಿಮೆ ಬರಬೇಕು ಎಂದು ಯೋಗರಾಜ್ ಭಟ್ಟರು ಹಾಡನ್ನೇ ಬರೆದಿದ್ದಾರೆ. ಆದರೆ ದುರ್ನಾತ ಎನ್ನುವುದು ಮದ್ಯದ ಗುಣ. ಅದನ್ನು ಮುಚ್ಚಿಡಲು ಪಾನ್, ಗುಟ್ಕಾ, ಮೌತ್ಫ್ರೆಶ್ನರ್ ಏನೆಲ್ಲಾ ತಿಂದು ತಂತ್ರ ಹೂಡಿದರು, ಅದು ಅವೆಲ್ಲವನ್ನೂ ಬೇಧಿಸಿಕೊಂಡು ನಿಮ್ಮ ಕುಟುಂಬದವರ ಮೂಗಿಗೆ ರಾಚುತ್ತದೆ ನೀವು ಒಳಗಿಳಿಸಿರುವ ಮದ್ಯ.
ಕಾರಣ ಶರಾಬನ್ನು ತಯಾರು ಮಾಡುವಾಗ ಅನೇಕ ಕೆಮಿಕಲ್ಗಳನ್ನು ಬಳಸಲಾಗುತ್ತದೆ. ಅವು ತಮ್ಮದೇ ಆದ ವಾಸನೆಯನ್ನು ಹೊಂದಿರುತ್ತವೆ. ಈ ಮದ್ಯ ನಿಮ್ಮ ಹೊಟ್ಟೆಯಲ್ಲಿ ಹೋದಾಗ ಸರಳವಾಗಿ ಬಾಯಿಯಿಂದ ಮದ್ಯದ ಸ್ಮೆಲ್ ಆಚೆ ಬರುತ್ತದೆ. ಆದರೆ ಈ ಒಂದು ಟ್ರಿಕ್ನ್ನು ನೀವು ಯೂಸ್ ಮಾಡಿದರೆ ಎಣ್ಣೆಯ ವಾಸನೆ ಬರೋದು ಬಹುತೇಕ ಕಡಿಮೆ. ಕಡಿಮೆ ಏನು ಬರೋದೇ ಇಲ್ಲ.
ಇದನ್ನೂ ಓದಿ:ಇವು ಭಾರತದ ಮೂಲವಲ್ಲದ ಭಾರತೀಯರೇ ಇಷ್ಟಪಟ್ಟು ಸೇವಿಸುವ ಖಾದ್ಯಗಳು! ಯಾವುವು ಗೊತ್ತಾ?
ನೀವು ಈ ಒಂದು ಫಲವನ್ನು ಡ್ರಿಂಕ್ ಮಾಡುವ ಸಮಯದಲ್ಲಿ ಸೇವಿಸಿದರೆ ನಿಮ್ಮ ಬಾಯಿಯಿಂದ ಮದ್ಯದ ವಾಸನೆ ಬರುವುದಿಲ್ಲ. ಹೀಗಾಗಿ ಮಾಡಿದ ಮೇಲೆ ಅದರ ವಾಸನೆ ಬರಬಾರದು ಅಂದ್ರೆ ಈ ಒಂದು ಐಡಿಯಾ ಫಾಲೋ ಮಾಡಿ.
ನೀವು ಮದ್ಯಪಾನ ಮಾಡುವಾಗ ಇಲ್ಲವೇ ಮದ್ಯಪಾನ ಮಾಡಿದ ಮೇಲೆ ಪೇರಳೆ ಹಣ್ಣನ್ನು ತಿಂದು ನೋಡಿ. ಒಂದು ವೇಳೆ ನೀವು ಮದ್ಯಪಾನ ಮಾಡಿದ ಮೇಲೆ ಈ ಪೇರಳೆ ಹಣ್ಣನ್ನು ತಿಂದಿದ್ದೇ ಆದರೆ ನಿಮ್ಮ ಬಾಯಿಯಿಂದ ಮದ್ಯದ ವಾಸನೇ ಒಂದೇ ಒಂದು ಚಿಟಕೆಯಷ್ಟು ಕೂಡ ಬರುವುದಿಲ್ಲ.
ಇದನ್ನೂ ಓದಿ:ರಾತ್ರಿ ಊಟ ಆಗುತ್ತಿದ್ದಂತೆ ಈ ತಪ್ಪು ಮಾಡ್ತಿದ್ರೆ ಇಂದೇ ಬಿಟ್ಟುಬಿಡಿ! ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ
ಅನೇಕರು ಈ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಿದ್ದಾರೆ. ಇದನ್ನು ಅಳವಡಿಸಿಕೊಂಡವರಲ್ಲಿ ಇದು ಪರಿಣಾಮವನ್ನು ಬೀರಿದೆ ಕೂಡ. ಹೀಗಾಗಿ ಕುಡಿದ ಮೇಲೆ ವಾಸನೆ ಬರದೇ ಇರುವಂತೆ ಮಾಡಲು ಇರುವ ಟ್ರಿಕ್ ಇದು. ಪೇರಳೆ ಹಣ್ಣು ಮದ್ಯಪಾನದ ನಂತರ ಸೇವಿಸಿದರೆ, ಮದ್ಯದ ವಾಸನೆ ಬರುವುದಿಲ್ಲ. ಆದರೆ ನೆನಪಿರಲಿ ಮದ್ಯಪಾನ ಯಾವತ್ತಿಗೂ ಒಳ್ಳೆಯದಲ್ಲ. ಅದೊಂದು ರೂಢಿಯಾಗಿಯೋ, ಅಭ್ಯಾಸವಾಗಿಯೋ, ಚಟವಾಗಿಯೋ ಇಲ್ಲವೇ ವ್ಯಸನವಾಗಿಯೋ ಇದ್ದರು ಅದು ಪ್ರಾಣಕ್ಕೆ ಕಂಟಕವೇ. ನಾವು ತಿಂಗಳಿಗೊಮ್ಮೆ ವಾರಕ್ಕೊಮ್ಮೆ ಮಾತ್ರ ಕುಡಿಯುತ್ತೇವೆ ಅಂತ ನಿಮ್ಮ ವಾದವಾದರೇ, ನೀವು ವಿಷವನ್ನು ಇನ್ಸ್ಟಾಲ್ಮೆಂಟ್ ಮೇಲೆ ಸೇವಿಸುತ್ತಿದ್ದೀರಿ ಅಂತಲೇ ಅರ್ಥ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ