/newsfirstlive-kannada/media/post_attachments/wp-content/uploads/2024/12/NITISH-KUMAR-REDDY-1.jpg)
ಮೆಲ್ಬರ್ನ್ ಕ್ರಿಕೆಟ್ ಅಂಗಳದಲ್ಲಿ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾಗೆ ಪ್ರತಿರೋಧ ತೋರಬಲ್ಲ ಮೊತ್ತವನ್ನು ಕಲೆಹಾಕಲು ಸಹಾಯಕವಾಗಿದ್ದು ನಿತೀಶ್ ರೆಡ್ಡಿ. 21 ವರ್ಷದ ಯುವಕ, ಘಟಾಘಟಿಗಳೇ ಎದುರಿಸಲಾಗದ ಬೌಲರ್ಗಳನ್ನ ಎದುರಿಸಿ ಹಲವು ಆಯಾಮಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಮರ್ಯಾದೆಯನ್ನು ಕಾಪಾಡಿದ್ದ. ಇವರ ಒಂದು ಸೆಂಚುರಿ ಟೀಂ ಇಂಡಿಯಾದ ಮೊತ್ತ 350 ದಾಟುವ ಮಟ್ಟಕ್ಕೆ ತೆಗೆದುಕೊಂಡು ಹೋಗಿತ್ತು. ಇಂದು ನಾಲ್ಕನೇ ದಿನದಾಟ ಮುಗಿದ ಮೇಲೆ ಮಾತನಾಡಿರುವ ನಿತೀಶ್ ರೆಡ್ಡಿ ತಮ್ಮ ಮನದಾಳದ ಮಾತುಗಳನ್ನ ಹೊರ ಹಾಕಿದ್ದಾರೆ.
ಕೆಲವರಿಗೆ ನನ್ನ ಸಾಮರ್ಥ್ಯದ ಮೇಲೆ ಅನುಮಾನವಿತ್ತು, ಇವನು ಐಪಿಎಲ್ ಆಡುವ ಯಂಗ್ಸ್ಟಾರ್ ಇಂತಹ ಬಿಗ್ ಸಿರೀಸ್ಗಳಲ್ಲಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದರು ಅವರಿಗೆ ನಾನು ಏನು ಎಂಬುದನ್ನು ಸಾಬೀತು ಮಾಡಿ ತೋರಿಸಬೇಕಿತ್ತು. ನಾನು ಕ್ರಿಕೆಟ್ ಅಂಗಳಕ್ಕೆ ಇಳಿದಿದ್ದು ನನ್ನನ್ನು ನಾನು 100 ಪರ್ಸೆಂಟ್ ತಂಡಕ್ಕೆ ಅರ್ಪಿಸಿಕೊಂಡಿದ್ದೇನೆ ಎಂಬ ಸಂದೇಶ ಕೊಡುವುದು ನನ್ನ ಉದ್ದೇಶವಾಗಿತ್ತು ಎಂದು ನಿತೀಶ್ ಹೇಳಿದ್ದಾರೆ.
ತನ್ನ ಯಶಸ್ಸಿನ ಬಗ್ಗೆ ಮಾತನಾಡಿರುವ ನಿತೀಶ್ ರೆಡ್ಡಿ, ನಿಮಗೆ ಇದು ಬೇರೆಯವರಿಗೆ ಕಳೆದ ಮೂರು ನಾಲ್ಕು ತಿಂಗಳಿಂದ ನಡೆದಿರುವ ಪ್ರಯತ್ನ ಅನಿಸಿರಬಹುದು. ಆದರೆ ನಾನು ಇಷ್ಟೊಂದು ಸಜ್ಜಾಗಿ ಬರಲು ಕಳೆದ ಎರಡು ಮೂರು ವರ್ಷಗಳಿಂದ ಹೋರಾಡುತ್ತಿದ್ದೇನೆ. ನನ್ನ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೇಲೆ ಸಾಕಷ್ಟು ಪರಿಶ್ರಮ ಹಾಕಿದ್ದೇನೆ ಎಂದು ನಿತೀಶ್ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: KL ರಾಹುಲ್ ಅತ್ಯದ್ಭುತವಾಗಿ ಕಾಲುಗಳಲ್ಲಿ ಹಿಡಿದಿದ್ದ ಕ್ಯಾಚ್.. ಅಂಪೈರ್ ಯಾಕೆ ಔಟ್ ಕೊಡಲಿಲ್ಲ?
2024ರ ಐಪಿಎಲ್ ಮುಗಿದ ನಂತರ ನಾನು ಸಾಕಸ್ಟು ಪ್ರಾಕ್ಟಿಸ್ ಮಾಡಿದ್ದೇನೆ. ಗಂಟೆಗೆ 145 ಕಿಮೀ ವೇಗವಾಗಿ ನುಗ್ಗಿ ಬರುವ ಬೌಲ್ನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿತುಕೊಂಡಿದ್ದೇನೆ. ನನ್ನ ಮೊದಲ ಐಪಿಎಲ್ ಪಂದ್ಯಾವಳಿಗಳು ಮುಗಿದ ನಂತರ ನಾನು ಯಾವ ಯಾವ ಏರಿಯಾದಲ್ಲಿ ದುರ್ಬಲನಾಗಿದ್ದೇನೆ ಎಂಬುದನ್ನು ಅರಿತು ಅದರ ಮೇಲೆ ಹೆಚ್ಚು ಫೋಕಸ್ ಹಾಕಿ, ಸುಧಾರಿಸಿಕೊಂಡಿದ್ದೇನೆ ಎಂದು ನಿತೀಶ್ ಹೇಳಿದ್ದಾರೆ.
ಇನ್ನು ತಂದೆ ಮುತ್ಯಾಲು ಕಣ್ಣೀರಿನ ಬಗ್ಗೆ ಮಾತನಾಡಿದ ರೆಡ್ಡಿ. ನನ್ನ ಕ್ರಿಕೆಟ್ ಜೀವನಕ್ಕಾಗಿ ಅವರು ದೊಡ್ಡ ದೊಡ್ಡ ತ್ಯಾಗಗಳನ್ನೇ ಮಾಡಿದ್ದಾರೆ. ಕೇಂದ್ರ ಸರ್ಕಾರದ ನೌಕರಿಯನ್ನೇ ನನ್ನ ಕ್ರಿಕೆಟ್ ಕರಿಯರ್ಗಾಗಿ ಬಿಟ್ಟು ಬಂದಿದ್ದಾರೆ. ನನ್ನ ಮೇಲೆ ಅತಿಹೆಚ್ಚು ನಂಬಿಕೆ ಇಟ್ಟ ಜೀವ ಅಂದ್ರೆ ಅದು ನನ್ನ ತಂದೆ. ಅವರೇ ನನ್ನನ್ನು ಪ್ರಾಕ್ಟಿಸ್ ಹಾಗೂ ಜಿಮ್ಗೆ ಕರೆದುಕೊಂಡು ಹೋಗುತ್ತಿದ್ದರು. ಅವರಂತಹ ತಂದೆಯ ಮಗನಾಗಿದ್ದಕ್ಕೆ ನಾನು ನಿಜಕ್ಕೂ ಪುಣ್ಯ ಮಾಡಿದ್ದೇನೆ ನನ್ನ ಮೊದಲ ಶತಕ ನನ್ನ ತಂದೆಗೆನೇ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜೈಸ್ವಾಲ್ 2 ಬಿಗ್ ಮಿಸ್ಟೇಕ್ಸ್, ತಂಡಕ್ಕೆ ಭಾರೀ ಪೆಟ್ಟು.. ಕೈಬೀಸಿ ಕೋಪ ತೀರಿಸಿಕೊಂಡ ಕ್ಯಾಪ್ಟನ್!
ಇನ್ನು ನಿತೀಶ್ ನೂರು ರನ್ ಗಳಿಸಿದಾಗ ವಿರಾಟ್ ಕೊಹ್ಲಿ ಎದ್ದು ನಿಂತು ಚಪ್ಪಾಳೆಯನ್ನು ಹೊಡೆದಿದ್ದರು. ಇದರ ಬಗ್ಗೆ ಮಾತನಾಡಿದ ನಿತೀಶ್, ಕೊಹ್ಲಿ ಪರ್ತ್ನಲ್ಲಿ ಸೆಂಚುರಿ ಹೊಡೆದಾಗ ನಾನು ನಾನ್ ಸ್ಟ್ರೈಕರ್ ಎಂಡ್ನಲ್ಲಿದ್ದೆ. ಈಗ ನಾನು ಶತಕ ಗಳಿಸಿದಾಗ ಕೊಹ್ಲಿ ನನ್ನನ್ನು ಅಭಿನಂದಿಸಿದರು, ಅಷ್ಟೇ ಅಲ್ಲ, ನೀನು ಶತಕ ಹೊಡೆಯುವ ಮೂಲಕ ತಂಡವನ್ನು ಮರಳಿ ಆಟಕ್ಕೆ ತಂದು ನಿಲ್ಲಿಸಿದೆ ಎಂದು ಹೊಗಳಿದರು ಅಂತ ನಿರೀಶ್ ರೆಡ್ಡಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ