ಡೋಲೋ 650 ಪ್ರಿಯರೇ ಎಚ್ಚರ ಎಚ್ಚರ.. ನಿಮ್ಮ ಜೀವಕ್ಕೆ ಸಂಚಕಾರ ಬಂದೀತು ಹುಷಾರ್..!

author-image
Veena Gangani
Updated On
ಡೋಲೋ 650 ಪ್ರಿಯರೇ ಎಚ್ಚರ ಎಚ್ಚರ.. ನಿಮ್ಮ ಜೀವಕ್ಕೆ ಸಂಚಕಾರ ಬಂದೀತು ಹುಷಾರ್..!
Advertisment
  • ಅತಿಯಾದ ಡೋಲೋ 650 ಬಳಕೆಯಿಂದ ಏನೆಲ್ಲಾ ಆಗುತ್ತೆ?
  • ಡೋಲೋ 650 ಕಡಿವಾಣ ಅಗತ್ಯ ಇದ್ಯಾ? ವೈದ್ಯರು ಹೇಳೋದೇನು?
  • ಗರ್ಭಿಣಿ ಹಾಗೂ ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಅಪಾಯಕಾರಿ

ಬೆಂಗಳೂರು: ಸಾಮಾನ್ಯವಾಗಿ ಜ್ವರ, ತಲೆ ನೋವು, ಮೈ ಕೈ ನೋವು ಬಂದರೆ ಸಾಕಷ್ಟು ಮಂದಿ ಡೋಲೋ 650 ಮಾತ್ರೆ ತೆಗೆದುಕೊಳ್ಳುತ್ತಾರೆ. ಇದೀಗ ಅತಿಯಾದ ಡೋಲೋ 650 ಬಳಕೆಯಿಂದ ಲಿವರ್ ಡ್ಯಾಮೇಜ್ ಸಾಧ್ಯತೆ ಇದೆ. ಯಕೃತ್ತು ಮೂತ್ರಪಿಂಡ ಮೇಲೆ ಕರಿ ನೆರಳು ಬೀಳುವ ಚಾನ್ಸಸ್ ಇದೆಯಂತೆ. ಹೀಗಾಗಿ ವೈದ್ಯರು ಗರ್ಭಿಣಿ ಹಾಗೂ ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಸಲಹೆ ನೀಡುತ್ತಿದ್ದಾರೆ.

ಇದನ್ನೂ ಓದಿ:BREAKING: ಕುರಿ ಖರೀದಿಗೆ ಹೊರಟ್ಟಿದ್ದಾಗ ಭೀಕರ ಅಪಘಾತ; ಸ್ಥಳದಲ್ಲೇ 4 ಮಂದಿ ಸಾವು

ತಜ್ಞ ವೈದ್ಯರು ಡೋಲೋ 650 ಬಳಕೆಗೆ ಕಡಿವಾಣ ಅಗತ್ಯ ಅಂತಿದ್ದಾರೆ. ಡೋಲೊ 650 ಮಾತ್ರೆಯನ್ನು ಭಾರತೀಯರು ಕ್ಯಾಡ್ಬೆರಿ ಜೆಮ್ಸ್ ತರ ನುಂಗ್ತಾರಂತೆ. ಭಾರತೀಯರ ವಿಢಂಬನೆ ಮಾಡಿದ್ದಾರೆ ಅಮೇರಿಕಾ ಪ್ರಖ್ಯಾತ ವೈದ್ಯ ಡಾಕ್ಟರ್ ಪಾಲ್. ಸದ್ಯ ಡೋಲೋ 650 ತೆಗೆದುಕೊಳ್ಳಬೇಕಾ ಅಥವಾ ಬೇಡ್ವಾ ಎಂಬ ಚರ್ಚೆ ನಡೆಯುತ್ತಿದೆ. ನೀವು ಮೈಕೈ ನೋವು, ತಲೆ ನೋವು ಅಂತ ಚಿಕ್ಕ ವಿಚಾರಕ್ಕೂ ಡೋಲೋ 650 ತೆಗೆದುಕೊಳ್ಳುತ್ತಿರೇ ಈಗಲೇ ನಿಲ್ಲಿಸಿಬಿಡಿ.

ಡೋಲೋ 650 ತೆಗೆದುಕೊಂಡರೇ ಏನೆಲ್ಲಾ ಸಮಸ್ಯೆ ಸಾಧ್ಯತೆ?

  • ವಾಕರಿಕೆ
  • ವಾಂತಿ
  • ಮಲಬದ್ಧತೆ
  • ತಲೆತಿರುಗುವಿಕೆ
  • ಅರೆನಿದ್ರಾವಸ್ಥೆ ಸಂಭವ
  • ದೀರ್ಘಕಾಲದವರೆಗೆ ಇವುಗಳನ್ನು ಸೇವಿಸಿದರೆ ದಣಿವು
  • ಉಸಿರಾಟದ ತೊಂದರೆ
  • ರಕ್ತಹೀನತೆ ಮತ್ತು ಮೂತ್ರಪಿಂಡಳಿಗೆ ಸಮಸ್ಯೆ
  • ಹೃದ್ರೋಗ ಮತ್ತು ಪಾರ್ಶ್ವವಾಯು, ಇತ್ಯಾದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment