newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್​; ನಟ ದರ್ಶನ್​ಗೆ ಯಾವ್ಯಾವ ಶಿಕ್ಷೆ ನೀಡ್ಬೋದು ಗೊತ್ತಾ?

Share :

Published June 16, 2024 at 6:10am

    ಪಟ್ಟಣಗೆರೆ ಶೆಡ್​ಗೆ ದರ್ಶನ್ ಬಂದು ಹೋಗಿರುವ ಸಿಸಿಟಿವಿ ದೃಶ್ಯ ಲಭ್ಯ

    ನಟ ದರ್ಶನ್ ಹೊಡೆದಾಗಲೇ ಯುವಕ ಸತ್ತಿದ್ದು ಎಂದ ಆರೋಪಿ ವಿನಯ್​

    ಮೃತ ರೇಣುಕಾಸ್ವಾಮಿ ಮೃತದೇಹದಲ್ಲಿ ದರ್ಶನ್ ಫಿಂಗರ್ ಪ್ರಿಂಟ್ ಪತ್ತೆ

ಪುಂಡಾಟದ ಹೇಳಿಕೆಗಳು. ಮಾತಿಗೆ ಫಿಲ್ಟರೇ ಇಲ್ಲ. ಸಿಕ್ಕ ಸಿಕ್ಕವರ ಮೇಲೆ ದರ್ಪ. ದಶಕದಿಂದ ಶುರುವಾದ ಕ್ರೈಂ ದಶಾವತಾರ, ಹತ್ಯೆಯ ಹಂತಕ್ಕೆ ತಲುಪಿದೆ. ತುಂಬಿದ ಕೊಡ ತುಳುಕೋದಿಲ್ಲ ಅನ್ನೋದು ನಿಜ. ಆದ್ರೆ, ಈ ಕೊಡದಲ್ಲಿ ತುಂಬಿದ್ದು ಬರೀ ಪಾಪ ಕರ್ಮಗಳೇ. ಆ ಎಲ್ಲಾ ಕರ್ಮಗಳು ರಿಟರ್ನ್ಸ್​​​ ಆಗಿವೆ. ಮೋಜು-ಮಸ್ತಿ, ಮದಿರೆಯಿಂದ ಮಾನ ಕಳ್ಕೊಂಡವನಿಗೆ ಪೊಲೀಸ್​​​ ಕಪ್​​ ಬಿದ್ದಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧಿತ ಆರೋಪಿಯಾಗಿದ್ದ ನಟ ಮೇಲೆ IPC 302 ಸೆಕ್ಷನ್ ದಾಖಲಾಗಿದೆ. ಪ್ರಾಥಮಿಕವಾಗಿ 302 & 201 ಅಡಿ ಕೇಸ್ ದಾಖಲಾಗಿದೆ. ಮುಂದೆ 364, 120ಬಿ ಸೆಕ್ಷನ್​​ಗಳು ಸೇರಿಸೋ ಸಾಧ್ಯತೆಯೂ ಇದೆ.

ಇದನ್ನೂ ಓದಿ: ನಟ ದರ್ಶನ್ ‘die hard fans’ಗೆ ಸ್ಟಾರ್ ಡೈರೆಕ್ಟರ್‌ ರಾಮ್‌ಗೋಪಾಲ್ ವರ್ಮಾ ಎಚ್ಚರಿಕೆ; ಏನಂದ್ರು?

ನಟ ದರ್ಶನ್​ಗೆ ಯಾವ್ಯಾವ ಶಿಕ್ಷೆ ನೀಡಬಹುದು?

ಶಿಕ್ಷೆ 01 : IPC 201 ಅಡಿ ಸಾಕ್ಷಿ ತಿರುಚುವುದು ಅಥವಾ ನಾಶ ಯತ್ನಕ್ಕೆ ಜೀವಾವಧಿ
ಶಿಕ್ಷೆ 02 : IPC 364 ಅಡಿ ಜೀವಾವಧಿ ಅಥವಾ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ಶಿಕ್ಷೆ 03 : IPC 120ಬಿ ಸೇರಿಸಿದ್ರೆ ಜೀವಾವಧಿ ಅಥವಾ10 ವರ್ಷ ಕಠಿಣ ಸೆರೆಯ ಸಜೆ

ನಟ ದರ್ಶನ್ ಇದ್ದ ಬಗ್ಗೆ ಸಾಕ್ಷಿ?

ಸಾಕ್ಷಿ 1 : ಶೆಡ್​ಗೆ ದರ್ಶನ್ ಬಂದು ಹೋಗಿರುವ ಸಿಸಿಟಿವಿ ದೃಶ್ಯಗಳು
ಸಾಕ್ಷಿ 2 : ದರ್ಶನ್​ನ CDR ರಿಪೋರ್ಟ್ ಸಹ ಸ್ಪಷ್ಟವಾಗಿ ಹೋಲಿಕೆ
ಸಾಕ್ಷಿ 3 : ದರ್ಶನ್​ಗೆ ರೇಣುಕಾಸ್ವಾಮಿ ಕರೆತಂದ ಬಗ್ಗೆ ಫೋನ್​​​ ಕಾಲ್
ಸಾಕ್ಷಿ 4 : ಆರೋಪಿ ವಿನಯ್​ ಕಾಲ್ ಮಾಡಿ ಮಾಹಿತಿ ಕೊಟ್ಟ ಡಿಟೇಲ್ಸ್
ಸಾಕ್ಷಿ 5 : ಆದಾದ ಬಳಿಕ ಪವಿತ್ರಗೌಡಗೆ ಕರೆ ಮಾಡಿರೋದು ಸಹ ಪತ್ತೆ
ಸಾಕ್ಷಿ 6 : ಪವಿತ್ರಾ ಮನೆ ಬಳಿ ಹೋಗಿ ದರ್ಶನ್​ ಕರೆತಂದ ಸಾಕ್ಷಿ ಲಭ್ಯ
ಸಾಕ್ಷಿ 7 : ಈ ಬಗ್ಗೆ ಸಿಡಿಆರ್ ಮತ್ತು ಸಿಸಿಟಿವಿ ಸಾಕ್ಷಿಗಳು ಪತ್ತೆಯಾಗಿವೆ
ಸಾಕ್ಷಿ 8 : ಮಹಜರ್ ವೇಳೆ ಪಂಚರ ಮುಂದೆ ದರ್ಶನ್ ಒಪ್ಪಿದ ಹೇಳಿಕೆ

ಇದನ್ನೂ ಓದಿ: VIDEO: ದರ್ಶನ್​ ಬದುಕಿಗೆ ಶನಿಯಾಗಿ ಬಂದಳು ಪವಿತ್ರಾ.. ಶಿಷ್ಯನ ಬಗ್ಗೆ ಬೇಸರ ಹೊರಹಾಕಿದ ಅಡ್ಡಂಡ ಕಾರ್ಯಪ್ಪ

ದರ್ಶನ್ ಕೊಲೆಯಲ್ಲಿ ಭಾಗಿಗೆ ಸಾಕ್ಷಿ?

ಸ್ವತಃ ದರ್ಶನ್ ಬಗ್ಗೆ ಆತನ ಅಪ್ತ ವಿನಯ್ ಕೊಟ್ಟ ಹೇಳಿಕೆ ಮುಳುವಾಗಿದೆ. ದರ್ಶನ್ ಹೊಡೆದಾಗಲೇ ರೇಣುಕಾ ಸತ್ತಿದ್ದು ಅಂತ ವಿನಯ್​ ಹೇಳಿಕೆ ನೀಡಿದ್ದಾನೆ. ಅಲ್ಲದೆ, ದರ್ಶನ್ ಹಲ್ಲೆ ಮಾಡಿರೋ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ದೀಪಕ್​​ ಹಲ್ಲೆ ಮಾಡಿದ ವಿಡಿಯೋ ರೆಕಾರ್ಡ್ ಮಾಡ್ಕೊಂಡಿದ್ದಾನೆ. ಸದ್ಯ ಇದೇ ದೀಪಕ್​​ನಿಂದ 164 ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಮಹಜರ್ ವೇಳೆ ಆತನ ಎತ್ತಿ ಎಸೆದ ಬಗ್ಗೆ ಹತ್ಯೆ ಆರೋಪಿ ದರ್ಶನ್ ಒಪ್ಪಿದ್ದು, ಟೆಂಪೋ ಟ್ರಾವೆಲ್ಲರ್​ಗೆ ರೇಣುಕಾ ತಲೆ ಬಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಶೆಡ್​ನಲ್ಲಿ ಮೃತನ ಬಯೋಲಾಜಿಕಲ್ ಎವಿಡೆನ್ಸ್ ಸಿಕ್ಕಿವೆ. ಮೃತನ ರಕ್ತ, ಫಿಂಗರ್ ಪ್ರಿಂಟ್, ಕೂದಲು & ಚರ್ಮದ ತುಂಡು ಲಭ್ಯ ಆಗಿವೆ. ಈ ಮೂಲಕ ರೇಣುಕಾಸ್ವಾಮಿ ಶೆಡ್​ನಲ್ಲೇ ಸತ್ತಿದ್ದು ಕನ್ಫರ್ಮ್ ಆಗಿದೆ. ಜತೆಗೆ ಹಲ್ಲೆ ಮಾಡಿದ ವೆಪನ್ಸ್​ಗಳು ಸೀಜ್​​ ಮಾಡಲಾಗಿದೆ.

ಹಲ್ಲೆ ಮಾಡಿದ ವೆಪನ್ಸ್ ಸೀಜ್

ರಿಪೀಸ್, ಸ್ಟಿಕ್ ಮತ್ತು ಹಗ್ಗದಿಂದ ಹಲ್ಲೆ ಮಾಡಲಾಗಿತ್ತು.. ಸದ್ಯ ಆ ರಿಪೀಸ್, ಸ್ಟಿಕ್ ಮತ್ತು ಹಗ್ಗವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.. ರೇಣುಕಾ ಮೃತದೇಹದಲ್ಲಿ ದರ್ಶನ್ ಪಿಂಗರ್ ಪ್ರಿಂಟ್ ಸಹ ಪತ್ತೆ ಆಗಿದೆ.. ಅಲ್ಲದೇ ವೆಪನ್​ ಮೇಲೂ ದರ್ಶನ್ ಪಿಂಗರ್ ಪ್ರಿಂಟ್ ಇದೆ. ಇನ್ನು, ಟೆಂಪೋ ಟ್ರಾವೆಲ್ಲರ್, ಕೃತ್ಯಕ್ಕೆ ಬಳಸಿದ ವಾಹನಗಳನ್ನ ಸೀಜ್ ಮಾಡ್ಲಾಗಿದೆ. ಈ ಪ್ರಕರಣದಲ್ಲಿ ತುಂಬಾ ಇಂಪಾರ್ಟೆಂಟ್​​ ಅಂದ್ರೆ ಮರಣೊತ್ತರ ಪರೀಕ್ಷೆ. ಈ ಪರೀಕ್ಷೆಯಲ್ಲಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದೆ ಅಂತ ವರದಿ​​ ನೀಡ್ಲಾಗಿದೆ. ಕುತ್ತಿಗೆ, ಮೂಗು ಕಟ್ ಆಗಿದೆ, ತಲೆ ಒಡೆದಿದೆ. ದೇಹಕ್ಕೆ ಬರೆ ಹಾಕಿರೋ ಬಗ್ಗೆಯೂ ಗೊತ್ತಾಗಿದೆ. ಪೋಸ್ಟ್​​​ಮಾರ್ಟ್​ಂ ರಿಪೋರ್ಟ್​​ನಲ್ಲಿ 15ಕ್ಕೂ ಹೆಚ್ಚು ಕಡೆ ಗಾಯಗಳು ಪತ್ತೆ ಆಗಿವೆ. ಸದ್ಯ ದರ್ಶನ್​​​ನ ಅಟ್ಟಹಾಸಕ್ಕೆ ಜೈಲು ಸೇರುವ ಸಾಧ್ಯತೆಗಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್​; ನಟ ದರ್ಶನ್​ಗೆ ಯಾವ್ಯಾವ ಶಿಕ್ಷೆ ನೀಡ್ಬೋದು ಗೊತ್ತಾ?

https://newsfirstlive.com/wp-content/uploads/2024/06/darshan28.jpg

Load More