VIDEO: ಡ್ರೋನ್ ಪ್ರತಾಪ್‌, ಜಗ್ಗೇಶ್ ಮಧ್ಯೆ ನಿಜಕ್ಕೂ ನಡೆದಿದ್ದೇನು? ಅಸಲಿ ವಿಷಯ ಬಾಯ್ಬಿಟ್ಟ ಗೆಳೆಯ!

author-image
admin
Updated On
VIDEO: ಡ್ರೋನ್ ಪ್ರತಾಪ್‌, ಜಗ್ಗೇಶ್ ಮಧ್ಯೆ ನಿಜಕ್ಕೂ ನಡೆದಿದ್ದೇನು? ಅಸಲಿ ವಿಷಯ ಬಾಯ್ಬಿಟ್ಟ ಗೆಳೆಯ!
Advertisment
  • ಜಗ್ಗೇಶ್ ಅಣ್ಣ ನಿಮ್ಮ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದು ಯಾಕೆ?
  • ಡ್ರೋನ್ ಪ್ರತಾಪ್ ಹೇಳಿದ್ದ ಗುಟ್ಟು ಬಿಚ್ಚಿಟ್ಟ ಮಂಡ್ಯದ ಚಂದನ್ ಗೌಡ
  • ನಿನ್ನ ಹೆಸರು ಹಾಳು ಮಾಡ್ತೀನಿ ಅಂತ ಬೆದರಿಕೆ ಹಾಕಿದ್ರಾ ಜಗ್ಗೇಶ್‌?

ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ ರನ್ನರ್‌ ಅಪ್ ಡ್ರೋನ್ ಪ್ರತಾಪ್ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿದೆ. ಮಂಡ್ಯದ ಚಂದನ್ ಕುಮಾರ್ ಗೌಡ ಎಂಬುವವರು ಡ್ರೋನ್ ಪ್ರತಾಪ್ ಅವರಿಂದ 2 ಲಕ್ಷ ರೂಪಾಯಿ ಹಣ ವಂಚನೆ ಆಗಿದೆ. ಜಿಲ್ಲಾಪಂಚಾಯಿತಿಗೆ ಜೆಡಿಎಸ್‌ ಟಿಕೆಟ್ ಕೊಡಿಸುವ ನೆಪದಲ್ಲಿ ಮೋಸ ಮಾಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಡ್ರೋನ್ ಪ್ರತಾಪ್ ವಿರುದ್ಧ ಆರೋಪ ಮಾಡುವುದರ ಜೊತೆಗೆ ಚಂದನ್ ಕುಮಾರ್ ಗೌಡ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಡ್ರೋನ್ ಪ್ರತಾಪ್ ಜೊತೆ ನಾನು ಹಲವು ದಿನಗಳ ಕಾಲ ಇದ್ದೆ. ಆಗ ಡ್ರೋನ್ ಪ್ರತಾಪ್ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

publive-image

ಕೆಲ ವರ್ಷಗಳ ಹಿಂದೆ ನಟ ಜಗ್ಗೇಶ್ ಹಾಗೂ ಡ್ರೋನ್ ಪ್ರತಾಪ್ ಮಧ್ಯೆ ನಡೆದ ವಾಗ್ವಾದ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಆದರೆ ಅಸಲಿ ಕಾರಣ ಏನು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಇದೀಗ ಡ್ರೋನ್ ಪ್ರತಾಪ್ ಜೊತೆಗಿದ್ದ ಚಂದನ್ ಕುಮಾರ್ ಗೌಡ ಅವರೇ ಅಸಲಿ ವಿಷ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಡ್ರೋನ್ ಪ್ರತಾಪ್‌ ಮೇಲೆ ಗಂಭೀರ ಆರೋಪ; HDK ಹೆಸರಿನಲ್ಲಿ ಲಕ್ಷ, ಲಕ್ಷ ವಂಚನೆ?


">February 3, 2024

ಜಗ್ಗೇಶ್‌ ಮಗನಿಗೋಸ್ಕರ ಮನಸ್ತಾಪ? 

ನಾನು ಡ್ರೋನ್ ಪ್ರತಾಪ್ ಅವರ ಬಳಿ ಜಗ್ಗೇಶ್ ಅವರ ಬಗ್ಗೆ ಕೇಳಿದ್ದೆ. ಜಗ್ಗೇಶ್ ಅಣ್ಣ ನಿಮ್ಮ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದು ಯಾಕೆ ಅಂತ ನಾನು ಕೇಳಿದ್ದೆ. ಪ್ರಾಬ್ಲಂ ಏನಾಯ್ತು? ಅಂತಹ ದೊಡ್ಡ ವ್ಯಕ್ತಿ ಸುಖಾಸುಮ್ಮನೆ ನಿಮ್ಮ ಬಗ್ಗೆ ಮಾತನಾಡುತ್ತಾರಾ ಎಂದು ನಾನು ಕೇಳಿದ್ದೆ. ಅದಕ್ಕೆ ಡ್ರೋನ್ ಪ್ರತಾಪ್ ಹೇಳಿದ್ರಂತೆ ಜಗ್ಗೇಶ್ ಅವರ ಹಿರಿಯ ಮಗ ಒಂದು ಕಂಪನಿ ಸ್ಟಾರ್ಟ್‌ ಅಪ್ ಮಾಡಬೇಕಿತ್ತು. ಆ ಕಂಪನಿಯಲ್ಲಿ ಡ್ರೋನ್ ಪ್ರತಾಪ್ ಸಿಇಒ ಅಥವಾ ಮ್ಯಾನೇಜರ್ ಆಗಿರಬೇಕಿತ್ತು. ಜಗ್ಗೇಶ್ ಮಗನ ಕೈ ಕೆಳಗೆ ಕೆಲಸ ಮಾಡಬೇಕು. ಆಗ ಮಾತ್ರ ಬಂಡವಾಳ ಹಾಕಿ ನಿನಗೆ ಸಪೋರ್ಟ್‌ ಮಾಡ್ತೀನಿ. ಇಲ್ಲ ಅಂದ್ರೆ ನಾನು ನಿನಗೆ ಸಪೋರ್ಟ್ ಮಾಡಲ್ಲ. ನಿನ್ನ ಹೆಸರು ಹಾಳು ಮಾಡ್ತೀನಿ ಅಂತ ಮಾತಾಡಿದ್ದಾರೆ. ಅದಕ್ಕೋಸ್ಕರನೇ ಜಗ್ಗೇಶ್ ಅವರಿಗೂ ನನಗೂ ಜಗಳ ಆಗಿದೆ ಎಂದು ಡ್ರೋನ್ ಪ್ರತಾಪ್ ಹೇಳಿದ್ದರಂತೆ ಎಂದು ಚಂದನ್ ಕುಮಾರ್ ಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment