/newsfirstlive-kannada/media/post_attachments/wp-content/uploads/2024/04/Chicken.jpg)
ಯುಗಾದಿಯ ಹೊಸ ತೊಡಕು ಹಿನ್ನೆಲೆಯಲ್ಲಿ ಇವತ್ತು ಎಲ್ಲರ ಮನೆಯಲ್ಲೂ ಘಮ.. ಘಮಿಸುವ ಭರ್ಜರಿ ಮಾಂಸದೂಟ ಇರುತ್ತದೆ. ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿರುವ ಜನರು ಹೋಳಿಗೆ ಊಟ ತಿಂದು ಬಾಯಿ ಸಿಹಿ ಮಾಡಿಕೊಂಡಿದ್ದಾರೆ. ಹಾಗೇ ಇಂದು ಹೊಸ ತೊಡಕುಗಾಗಿ ಮಸಾಲೆ ಹಾಕಿ ರುಚಿಕಟ್ಟಾಗಿ ಮಾಡಿರುವ ಮಾಂಸದೂಟವನ್ನ ಜನರು ತುಸು ಜಾಸ್ತಿಯೇ ತಿಂದು ಬಿಡುತ್ತಾರೆ. ಆದರೆ ಹೀಗೆ ತಿನ್ನುವ ಮೊದಲು ಹೊಟ್ಟೆಯಲ್ಲಿ ಅದು ಜೀರ್ಣಾವಾಗಲು ಏನೇನು ಕುಡಿಯಬೇಕು ಎನ್ನುವ ಬಗ್ಗೆ ಇಲ್ಲಿದೆ ಟಿಪ್ಸ್​.
/newsfirstlive-kannada/media/post_attachments/wp-content/uploads/2024/04/HEALTH_2-1.jpg)
ಮಾಂಸದೂಟ ತಿಂದ ಮೇಲೆ ಅದು ಯಾಕೋ ಹೊಟ್ಟೆಯಲ್ಲಿ ಕರಗುತ್ತಿಲ್ಲ ಎಂದು ಯೋಚನೆ ನಿಮ್ಮಲ್ಲಿ ಕಾಡಲು ಶುರು ಮಾಡುತ್ತದೆ. ಈ ರೀತಿ ಆಗಬಾರದು ಎಂದರೆ ಮಟನ್ ಪೀಸ್ ತಿಂದ ಬಳಿಕ ಪಾನೀಯ ರೀತಿಯ ಜ್ಯೂಸ್ ಕುಡಿದರೆ ಒಳ್ಳೆಯದು. ಅದು ಹೊಟ್ಟೆಯಲ್ಲಿನ ಆಹಾರ ಜೀರ್ಣ ಮಾಡಲು ಸಹಾಯ ಮಡುತ್ತದೆ. ಇದರಿಂದ ನಿಮ್ಮಲ್ಲಿರುವ ಯೋಚನೆ ದೂರವಾಗುತ್ತದೆ. ಹೊಟ್ಟೆಯಲ್ಲಿ ಮಟನ್​ ಪೀಸ್​ ಕರಗಲು ಏನೇನು ಕುಡಿಯಬೇಕು ಎಂಬುವ ಮಾಹಿತಿ ನೋಡೋಣ.
ಹರ್ಬಲ್ ಟೀ: ಪುದೀನಾ ಅಥವಾ ಶುಂಠಿ ಹಾಕಿ ಮಾಡಿದಂತಹ ಚಹಾವನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ವೃದ್ಧಿಸುತ್ತದೆ. ಪುದೀನಾ, ಶುಂಠಿಯಲ್ಲಿ ಕೆಫೀನ್ ಇಲ್ಲದಿರುವುದರಿಂದ ಆಹಾರ ಬೇಗನೆ ಕರಗಿಸುತ್ತದೆ.
ನಿಂಬೆಹಣ್ಣು: ನಿಂಬೆಹಣ್ಣಿನ ಜೊತೆಗೆ ಬೆಚ್ಚಗಿನ ನೀರು ಅಥವಾ ನಾರ್ಮಲ್​ ನೀರು ಸೇರಿಸಿ ಜ್ಯೂಸ್ ರೀತಿ ಮಾಡಿಕೊಂಡು ಕುಡಿಯಬಹುದು.
/newsfirstlive-kannada/media/post_attachments/wp-content/uploads/2024/04/HEALTH_1-1.jpg)
ನೀರು: ಕುಡಿಯುವ ನೀರು ತಟಸ್ಥ ಮತ್ತು ಹೈಡ್ರೇಟಿಂಗ್ ಆಯ್ಕೆಯಾಗಿದ್ದರಿಂದ ಹೊಟ್ಟೆಯಲ್ಲಿನ ಮಾಂಸ ಸೇರಿದಂತೆ ಯಾವುದೇ ಆಹಾರವನ್ನು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಮಜ್ಜಿಗೆ: ನಮ್ಮಲ್ಲಿ ಮೊದಲಿನಿಂದಲೂ ಜೀರ್ಣಕ್ರಿಯೆಗಾಗಿ ಮಜ್ಜಿಗೆಯನ್ನು ಊಟದ ನಂತರ ಕುಡಿಯುತ್ತಾರೆ. ಇದು ಈಗಲೂ ಸಾಕಷ್ಟು ಜನರು ಮಾಡುತ್ತಿದ್ದಾರೆ. ಹೊಸತೊಡಕು ಮಾಂಸದೂಟದ ನಂತರ ಮಜ್ಜಿಗೆ ಕುಡಿಯುವುದು ಒಳ್ಳೆಯದೇ ಆಗಿರುತ್ತದೆ.
ಇದನ್ನೂ ಓದಿ:ರಜನಿ, ಪ್ರಭಾಸನ್ನೇ ಮೀರಿಸಿದ ಅಲ್ಲು ಅರ್ಜುನ್​; ಅಬ್ಬಬ್ಬಾ! ಪುಷ್ಪಾ-2ಗೆ ಇಷ್ಟು ಕೋಟಿ ತಗೊಂಡ್ರಾ?
/newsfirstlive-kannada/media/post_attachments/wp-content/uploads/2024/04/BNG_BBMP.jpg)
ಹಣ್ಣಿನ ಜ್ಯೂಸ್: ಹಣ್ಣುಗಳಿಂದ ಮಾಡಿದಂತಹ ಜ್ಯೂಸ್ ಕುಡಿಯುವುದರಿಂದಲೂ ಹೊಟ್ಟೆಯಲ್ಲಿನ ಆಹಾರ ಕರಗುತ್ತದೆ.
ವೈನ್-ಬಿಯರ್: ಕೆಲವರು ಊಟದ ಜೊತೆಗೆ ಒಂದು ಲೋಟ ವೈನ್ ಅಥವಾ ಬಿಯರ್ ಸೇವನೆ ಮಾಡುತ್ತಾರೆ. ಇವುಗಳನ್ನ ಮಿತವಾಗಿ ಬಳಸಬೇಕು. ಏಕೆಂದರೆ ಎಲ್ಲರಿಗೂ ಇದು ರೂಢಿ ಇರಲ್ಲ. ಹೀಗಾಗಿ ಅಭ್ಯಾಸ ಇರುವವರು ಮಾತ್ರ ಮಾಡಿದರೆ ಉತ್ತಮ. ಅಲ್ಲದೇ ಮದ್ಯಪಾನ ಆರೋಗ್ಯಕ್ಕೆ ಹಾನಿ ಮಾಡುವುದರಿಂದ ಕುಡಿಯದೇ ಇದ್ದರೂ ಒಳ್ಳೆಯದು.
ಲಸ್ಸಿ: ಮೊಸರಿಗೆ ಜೀರಿಗೆ, ಪುದೀನಾ ಸೇರಿ ಇನ್ನೊಂದೆರಡು ಮಸಾಲೆ ವಸ್ತುಗಳನ್ನ ಹಾಕಿ ಸುವಾಸನೆಯುಕ್ತವಾಗಿ ಮಾಡಿ ಕುಡಿಯಬಹುದು. ಊಟದ ನಂತರ ಲಸ್ಸಿಯನ್ನು ಸೇವೆನೆಯಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಒಟ್ಟಾರೆ ಹಬ್ಬ-ಹರಿದಿನಗಳು ಬಂದು ಅಂದರೆ ಸಿಕ್ಕಾಪಟ್ಟೆ ತಿನ್ನಲು ಹೋಗಿ ಅದೆಷ್ಟೋ ಮಂದಿ ಆಸ್ಪತ್ರೆ ಸೇರುತ್ತಾರೆ. ಅತಿಯಾದರೆ ಎಲ್ಲವೂ ವಿಷ ಎಂಬ ಮಾತಿದೆ. ಅದರಂತೆ ಹಬ್ಬದ ಸಡಗರದಲ್ಲಿ ಮಾಂಸಗಳು, ವಿವಿಧ ಖಾದ್ಯಗಳನ್ನು ಮಿತಿ ಮೀರಿ ಸೇವನೆ ಮಾಡೋದ್ರಿಂದ ಆರೋಗ್ಯಕ್ಕೆ ಅಪಯಾಕಾರಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದ್ದು, ಸಂಭ್ರಮಗಳಲ್ಲಿ ಮೈಮರೆಯದಿರಿ.
ವಿಶೇಷ ವರದಿ: ಭೀಮಪ್ಪ ಡಿಜಿಟಲ್ ಡೆಸ್ಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us