newsfirstkannada.com

WATCH: ಅದೃಷ್ಟ ತರಬೇಕಿದ್ದ ಹೆಸರೇ ಪ್ರತಾಪ ಸಿಂಹಗೆ ಕೈ ಕೊಡ್ತಾ? ಯಡವಟ್ಟು ಆಗಿದ್ದೆಲ್ಲಿ?

Share :

Published March 13, 2024 at 12:07pm

Update March 13, 2024 at 12:18pm

    ಹೆಸರು ಬದಲಾವಣೆಯಿಂದ ಸಂಸದ ಪ್ರತಾಪ ಸಿಂಹ ಅದೃಷ್ಟ ಕೈ ಕೊಡ್ತಿದೆ!

    ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಯಲಲಿತಾ ಜೈಲಿಗೆ ಹೋಗಿದ್ದರು

    ಪ್ರತಾಪ ಸಿಂಹ ಹೆಸರು ಬದಲಾಯಿಸಿದ್ದು ಅನಾನುಕೂಲಕ್ಕೆ ಕಾರಣವಾಯ್ತಾ?

ಮೈಸೂರು: ಸಂಸದ ಪ್ರತಾಪ ಸಿಂಹ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಪ್ರತಾಪ ಸಿಂಹ ಅವರಿಗೆ ರಾಜಕೀಯದ ಅದೃಷ್ಟ ಕೈ ಕೊಟ್ಟಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರತಾಪ ಸಿಂಹ ಅವರು ಕಳೆದ ವರ್ಷ ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರು ಬದಲಿಸಿಕೊಂಡಿದ್ದರು. ರಾಜಕಾರಣಿಗಳಲ್ಲಿ ಹೆಸರು ಬದಲಿಸಿದ್ರೆ ಲಕ್​ ಚೇಂಜ್ ಆಗುತ್ತೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಹೆಸರು ಬದಲಿಸಿಕೊಂಡಿದ್ದರು. ಕಳೆದ ನವೆಂಬರ್ 24, 2023 ರಂದು ಇಂಗ್ಲೀಷ್‌ ಹೆಸರಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿದ್ದ ಪ್ರತಾಪ್ ಸಿಂಹ ಅವರು ಅಫಿಡವಿಟ್ ಮೂಲಕ ಹೊಸ ಹೆಸರು ಘೋಷಣೆ ಮಾಡಿಕೊಂಡಿದ್ದರು. Prathap simha ಎಂಬ ಹೆಸರನ್ನ Pratap Simmha ಎಂದು ಚೇಂಜ್ ಮಾಡಲಾಗಿತ್ತು.

ಹಿರಿಯ ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞರಾದ ಮೂಗುರು ಮಧು ದೀಕ್ಷಿತ್

‘Prathap simha’ ಟು ‘Pratap Simmha’

ಪ್ರತಾಪ ಸಿಂಹ ಅವರ ಹೆಸರು ಬದಲಾವಣೆಯ ಬಗ್ಗೆ ನ್ಯೂಸ್‌ ಫಸ್ಟ್‌ಗೆ ಹಿರಿಯ ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞರಾದ ಮೂಗುರು ಮಧು ದೀಕ್ಷಿತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹೌದು.. ಹೆಸರು ಬದಲಾವಣೆಯಿಂದ ಪ್ರತಾಪ ಸಿಂಹ ಅವರಿಗೆ ಅದೃಷ್ಟ ಕೈ ಕೊಡ್ತಿದೆ. ಹೆಸರು ಬದಲಾವಣೆಯಿಂದ ರಾಜಕಾರಣಿಗಳಿಗೆ ಸಿನಿಮಾ ನಟರಿಗೆ ಸಂಕಷ್ಟ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರಿನ ಮಹಾರಾಜ ಯಾರು..? ಯದುವೀರ್​​ ಒಡೆಯರ್​​ ವಿರುದ್ಧ ಪ್ರತಾಪ್​ ಸಿಂಹ ಘರ್ಜನೆ

ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರು ಹೆಸರು ಬದಲಿಸಿಕೊಂಡ ಮೇಲೆ ಸಂಕಷ್ಟ ಅನುಭವಿಸಿದರು. ಒಂದು ಹಂತದಲ್ಲಿ ಜೈಲಿಗೂ ಹೋಗಿದ್ದರು. ತಮಿಳುನಾಡಿದ ಮಾಜಿ ಸಿಎಂ ಜಯಲಲಿತಾ ಕೂಡ ಜೈಲಿಗೆ ಹೋಗಿದ್ದರು. ಹಲವು ಸಿನಿಮಾ ನಟರ ಸಿನಿಮಾಗಳು ಸೋತಿವೆ. ಹೆಸರು ಬದಲಾವಣೆಯಿಂದ ಯಶಸ್ಸು ಬದಲಾಗಲ್ಲ. ಜಾತಕದಿಂದ ಅವರ ಅದೃಷ್ಟ ಬದಲಾಗುತ್ತದೆ.

ಪ್ರತಾಪ ಸಿಂಹ ಅವರ ಹೆಸರಿನಲ್ಲಿ ನಂಬರ್ 7 ಬರುತ್ತದೆ. ಅದು‌ ಕೇತುವನ್ನ ಸೂಚಿಸುತ್ತದೆ. ಆದರೆ ಅವರು Pratap Simmha ಎಂದು ಬದಲಾಯಿಸಿಕೊಂಡು 6ನೇ ನಂಬರಿಗೆ ಬದಲಾಯಿಸಿಕೊಂಡ್ರು. ಅದು ಅವರಿಗೆ ಹೆಚ್ಚು ಅನಾನುಕೂಲಕ್ಕೆ ಕಾರಣವಾಗಿದೆ. ಬ್ರಹ್ಮಸೃಷ್ಠಿಯಲ್ಲಿ ಏನು ಮಾಡಲು ಸಾಧ್ಯವಿಲ್ಲ. ಆದರೆ ಅರ್ತ್ ಲಕ್, ಮ್ಯಾನ್ ಲಕ್ ಅಲ್ಲಿ ಬದಲಾದರೆ ನೆಗೆಟಿವಿಟಿ ಆಗುತ್ತದೆ. ಪ್ರತಾಪಸಿಂಹ ಅವರಿಗೂ ಸದ್ಯ ಆಗುತ್ತಿರುವುದು ಇದೇ ಎಂದು ಸಂಖ್ಯಾಶಾಸ್ತ್ರಜ್ಞರಾದ ಮೂಗುರು ಮಧು ದೀಕ್ಷಿತ್ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಅದೃಷ್ಟ ತರಬೇಕಿದ್ದ ಹೆಸರೇ ಪ್ರತಾಪ ಸಿಂಹಗೆ ಕೈ ಕೊಡ್ತಾ? ಯಡವಟ್ಟು ಆಗಿದ್ದೆಲ್ಲಿ?

https://newsfirstlive.com/wp-content/uploads/2023/11/Bjp-MP-Pratap-Simha.jpg

Load More