/newsfirstlive-kannada/media/post_attachments/wp-content/uploads/2025/02/SUNDAR-PICHAI.jpg)
ಫ್ರಾನ್ಸ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿ ಮಾಡಿದ್ದಾರೆ. ಭೇಟಿಯ ಬಳಿಕ ಭಾರತಕ್ಕೆ ಎಐ ತಂತ್ರಜ್ಞಾನವನ್ನು ತರುವ ಒಂದು ಅದ್ಭುತ ಅವಕಾಶ ದೊರಕಿದೆ ಎಂದು ಸುಂದರ್ ಪಿಚೈ ಹೇಳಿದ್ದಾರೆ. ಎಐ ಸಮಿತಿಗೆ ಅಂತಲೇ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್​ಗೆ ಪ್ರವಾಸ ಬೆಳೆಸಿದ್ದಾರೆ. ಇದೇ ವೇಳೆ ಗೂಗಲ್​​ನ ಸಿಇಒ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್​ ಅಂದ್ರೆ ಕೃತಕ ಬುದ್ಧಿಮತ್ತೆಯ ಬಗ್ಗೆ ಹಲವು ಗಂಟೆಗಳ ಕಾಲ ಮಾತನಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/SUNDAR-PICHAI-1.jpg)
ಮೋದಿ ಭೇಟಿ ಮಾಡಿದ ಬಳಿಕ ಮಾತನಾಡಿದ ಸುಂದರ್​ ಪಿಚೈ, ಪ್ಯಾರಿಸ್​ನಲ್ಲಿ ನಡೆದ ಎಐ ಆ್ಯಕ್ಷನ್ ಸಮಿತ್​ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದು ತುಂಬಾ ಸಂತೋಷವಾಯ್ತು. ನಾವು ಭಾರತದಲ್ಲಿ ಎಐ ಪರಿಚಯಿಸುವ ಅದ್ಭುತ ಅವಕಾಶಗಳ ಬಗ್ಗೆ ಮತನಾಡಿದೆವು. ಭಾರತದ ಡಿಜಿಟಲ್ ಟ್ರಾನ್ಸಫಾರ್ಮೇಷನ್​ನಲ್ಲಿ ನಾವು ಒಟ್ಟಿಗೆ ಜೊತೆಯಾಗೆ ಹೇಗೆ ಕೆಲಸ ಮಾಡಬಹುದು ಎಂಬುದರ ಬಗ್ಗೆಯೂ ಚರ್ಚೆ ಮಾಡಿದೆವು ಎಂದು ಪಿಚೈ ಹೇಳಿದ್ದಾರೆ
ಇದನ್ನೂ ಓದಿ:BREAKING: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ
ಇದಕ್ಕೂ ಹಿಂದಿನ ದಿನ ಭಾರತ-ಫ್ರಾನ್ಸ್ ಸಿಇಒ ಫೋರಮ್ ಉದ್ದೇಶಿಸಿ ಪ್ಯಾರಿಸ್​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಒಂದು ವೇದಿಕೆ ಆರ್ಥಿಕತೆಯನ್ನು ಬಲತುಂಬುವುದಕ್ಕೆ ಹಾಗೂ ನಾವಿನ್ಯತೆಯನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಹೇಳಿದ್ದಾರೆ. ಫ್ರಾನ್ಸ್ ಮತ್ತು ಭಾರತೀಯ ಉದ್ಯಮಿಗಳು ಒಟ್ಟಾಗಿ ಸೇರಿಕೊಂಡು ಹಲವು ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಲಭಿಸುವ ಕಾರ್ಯವನ್ನು ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us