/newsfirstlive-kannada/media/post_attachments/wp-content/uploads/2024/11/Sunita-williamas.jpg)
ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ ಹಾಗೂ ಅವರ ಸಹವರ್ತಿಯಾಗಿರುವ ಬಚ್ ವಿಲ್ಮೋರ್, ನಿಕ್ ಹಾಗ್ಯೂ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ರ್ಗೋರ್ಬುನೋವ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಹೊರಟಿದ್ದಾರೆ. ಸರಿ ಸುಮಾರು 9 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬದುಕು ಕಳೆದಿರುವ ಇವರು ಬುಧವಾರದಂದು ಭೂಮಿಗೆ ಬಂದು ಇಳಿಯಬೇಕಿತ್ತು. ಆದರೆ ಹವಾಮಾನ ಸಹಕಾರ ನೀಡದ ಕಾರಣದಿಂದಾಗಿ ಮುಂದೂಡಲಾಯ್ತು.
ಕೇವಲ 8 ದಿನಗಳ ಯೋಜನೆಯ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಹಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಬಂತು. ಉಭಯ ಗಗನಯಾತ್ರಿಗಳು ಭೂಮಿಗೆ ವಾಪಸ್ ಬರುವುದನ್ನು ಹಲವು ಬಾರಿ ಮುಂದೂಡಲಾಯ್ತು. ಇದರಿಂದ ಅವರ ಕುಟುಂಬಗಳು ಕೂಡ ಚಿಂತೆಗೆ ಈಡಾಗಿದ್ದವು. ಸುನೀತಾ ವಿಲಿಯಮ್ಸ್, ಬಚ್ ವಿಲ್ಮೋರ್ ಈಗಾಗಲೇ ಆರ್ಬಿಟಿಂಗ್ ಲ್ಯಾಬರೋಟರಿಯಲ್ಲಿ ಸುಮಾರು 900 ಗಂಟೆಗಳನ್ನು ಕಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ವನವಾಸಕ್ಕೆ ಸದ್ಯ ತೆರೆ ಬಿದ್ದಿದ್ದು, ಸುನೀತಾ ವಿಲಿಯಮ್ಸ್ ಮತ್ತು ಬಚ್ವೆಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಾಸ್ಸಾಗುವ ದಾರಿಯಲ್ಲಿದ್ದಾರೆ.
ಭೂಮಿಗೆ ಬಂದ ಬಳಿಕ ಸುನೀತಾ ಏನು ಮಾಡಲಿದ್ದಾರೆ?
ಸದ್ಯ ಎಲ್ಲರದ್ದೂ ಒಂದೇ ಪ್ರಶ್ನೆ. ಭೂಮಿಗೆ ವಾಪಾಸ್ಸಾದ ಬಳಿಕ ಸುನೀತಾ ವಿಲಿಯಮ್ಸ್ ಏನು ಮಾಡಲಿದ್ದಾರೆ ಅನ್ನೋದು. ಸುನೀತಾ ವಿಲಿಯಮ್ಸ್ ಯಾವುದೇ ಜೈವಿಕ ಮಕ್ಕಳನ್ನು ಹೊಂದಿಲ್ಲ. ಆದ್ರೆ ಅವರ ಮನೆಯಲ್ಲಿ ಅವರ ನೆಚ್ಚಿನ ಎರಡು ಶ್ವಾನಗಳಿವೆ. ಅವುಗಳನ್ನು ಪಾಲನೆ ಪೋಷಣೆ ಮಾಡುವಲ್ಲಿ ತೊಡಗಲಿದ್ದಾರೆ ಎಂದು ಸುನೀತಾ ವಿಲಿಯಮ್ಸ್ ಪತಿ ನಿವೃತ್ ಫೆಡರಲ್ ಮಾರ್ಶಲ್ ಮಿಚೆಲ್ ಜೆ ವಿಲಿಯಮ್ಸ್ ಹೇಳಿದ್ದಾರೆ.
ಇದನ್ನೂ ಓದಿ: ಹರಿಯಾಣದಿಂದ ನಾಸಾದವರೆಗೆ.. ಸುನೀತಾ ಭೂಮಿಗೆ ವಾಪಸ್ಸಾಗುವಾಗ ನೆನಪಾದರು ಕಲ್ಪನಾ ಚಾವ್ಲಾ
ಸುನೀತಾ ವಿಲಿಯಮ್ಸ್ ಅವರು ಎರಡು ಲ್ಯಾಬರಾಡರ್ ರಿಟ್ರೀವರ್ ತಳಿಯ ಶ್ವಾನಗಳಿವೆ. ಅವುಗಳನ್ನೇ ಮಕ್ಕಳಂತೆ ಸುನೀತಾ ವಿಲಿಯಮ್ಸ್ ನೋಡಿಕೊಳ್ಳುತ್ತಾರೆ. ಬಾಹ್ಯಾಕಾಶದಿಂದ ವಾಪಸ್ ಬಂದ ಬಳಿಕ ಸುನೀತಾ ವಿಲಿಯಮ್ಸ್ ಆ ಎರಡು ಶ್ವಾನಗಳನ್ನು ನೋಡಿಕೊಳ್ಳಲಿದ್ದಾರಂತೆ. ಅವುಗಳನ್ನು ಸಮುದ್ರಗಳ ಬಳಿ ಕರೆದುಕೊಂಡು ಹೋಗುವುದು. ಈಜಾಡಿಸುವುದು ಒಟ್ಟಾರೆ ಅವುಗಳ ಪೋಷಣೆಯತ್ತ ಗಮನವಿಟ್ಟು ಕಾಲ ಕಳೆಯಲಿದ್ದಾರೆ ಎಂದು ಅವರ ಪತಿ ಹೇಳಿದ್ದಾರೆ.
ಈಗಾಗಲೇ ಹೇಳಿದಂತೆ ಸುನೀತಾ ವಿಲಿಯಮ್ಸ್ ಮನೆಯಲ್ಲಿ ಎರಡು ಲ್ಯಾಬರಾಡರ್ ಜೊತೆಗೆ ಜಾಕ್ ರಸೇಲ್ ಟೆರಿಯರ್ ಬ್ರೀಡ್ನ ಗೋರ್ಬಿ ಎಂಬ ಶ್ವಾನವೂ ಸೇರಿ ಗನ್ನರ್ ಬೈಲಿ ರೊಟೊರ್ ಎಂಬ ಶ್ವಾನಗಳಿವೆ ಅವುಗಳನ್ನು ಕೇರ್ ಮಾಡಿಕೊಂಡು ಮುಂದಿನ ಜೀವನವನ್ನು ಸುನೀತಾ ವಿಲಿಯಮ್ಸ್ ಕಳೆಯಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಸಾವಿಗೆ ಸವಾಲು ಹಾಕಿದ್ದ ಗಟ್ಟಿಗಿತ್ತಿ.. ಕೊನೆಯ 1 ಗಂಟೆಯೇ ಸುನಿತಾ ವಿಲಿಯಮ್ಸ್ಗೆ ಅತಿ ದೊಡ್ಡ ಚಾಲೆಂಜ್!
ಈ ಹಿಂದೆಯೂ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಸುನೀತಾ ವಿಲಿಯ್ಸ್ ತಮ್ಮ ಕುಟುಂಬ ಹಾಗೂ ನನ್ನ ನೆಚ್ಚಿನ ಎರಡು ಶ್ವಾನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದೇ ಹೇಳಿದ್ದರು. ಅವುಗಳನ್ನು ಬಿಟ್ಟು ನಾನು ಇರುವುದು ಎಷ್ಟು ಕಷ್ಟವಿದೆಯೋ. ಅವುಗಳಿಗೂ ಕೂಡ ಅಷ್ಟೇ ಕಷ್ಟವಾಗಲಿದೆ ಎಂದು ಹೇಳಿದ್ದರು
ಭೂಮಿಗೆ ಬಂದ ಮೇಲೆ ಸುನೀತಾ ವಿಲಿಯಮ್ಸ್ ಎಂದಿನಂತೆ ನಿತ್ಯತಮ್ಮ ಶ್ವಾನಗಳಿಗೆ ವಾಕಿಂಗ್ ಹಾಗೂ ರನ್ನಿಂಗ್ ಮಾಡಿಸಲಿದ್ದಾರೆ. ಆ ನಿತ್ಯದ ಕಾರ್ಯವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಈ ಹಿಂದೆ ಬಾಹ್ಯಾಕಾಶದಲ್ಲಿ ಇದ್ದಾಗಲೇ ಹೇಳಿಕೊಂಡಿದ್ದರು. ನಾನು ನನ್ನ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗುವುದು, ಮುಂಜಾವಿನ ಬೆಳಕಿನ ಹಕ್ಕಿಗಳ ಚಿಲಿಪಿಲಿ ಕೇಳುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ