ಫೋನ್ ಪದೇ ಪದೆ ಬಿಸಿ ಆಗಲು ಕಾರಣ ನೀವೇ.. ಈ ತಪ್ಪುಗಳನ್ನು ಮಾಡಲೇಬೇಡಿ..!

author-image
Ganesh
Updated On
ಫೋನ್ ಪದೇ ಪದೆ ಬಿಸಿ ಆಗಲು ಕಾರಣ ನೀವೇ.. ಈ ತಪ್ಪುಗಳನ್ನು ಮಾಡಲೇಬೇಡಿ..!
Advertisment
  • ಫೋನ್ ಜಾಸ್ತಿ ಹೀಟ್ ತಪ್ಪಿಸಲು ಏನು ಮಾಡಬೇಕು?
  • ಒಂದು ಸಣ್ಣ ತಪ್ಪುಗಳಿಂದ ಫೋನ್ ಬಿಸಿ ಆಗುತ್ತದೆ
  • ಫೋನ್ ಸೇಫ್ ಆಗಿಟ್ಟುಕೊಳ್ಳಲು ಇಲ್ಲಿದೆ ಪರಿಹಾರ

ನಿಮಗೆ ಗೊತ್ತಾ..? ಸ್ಮಾರ್ಟ್‌ಫೋನ್ ಬಿಸಿಯಾಗೋದು ದೊಡ್ಡ ಸಮಸ್ಯೆ. ಇದರಿಂದ ಫೋನ್‌ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದಲ್ಲದೆ ಬ್ಯಾಟರಿಯ ಜೀವಿತಾವಧಿಯನ್ನೂ ಕಡಿಮೆ ಮಾಡ್ತದೆ. ನಿಮ್ಮ ಫೋನ್ ಮತ್ತೆ ಮತ್ತೆ ಬಿಸಿಯಾಗುತ್ತಿದೆ ಅಂದ್ರೆ ನೀವು ಸಣ್ಣ ತಪ್ಪುಗಳನ್ನು ಮಾಡ್ತಿದ್ದೀರಿ ಎಂದರ್ಥ.

ಕಾರಣಗಳೇನು?

  • ನಿರಂತರವಾಗಿ ಗೇಮ್ ಆಡುವುದು, ವೀಡಿಯೋ ವೀಕ್ಷಿಸುವುದು ಅಥವಾ ಭಾರೀ ಅಪ್ಲಿಕೇಶನ್ಸ್ ಬಳಸುವುದರಿಂದ ಫೋನ್ ಬಿಸಿಯಾಗಬಹುದು. ಇದರಿಂದ ಪ್ರೊಸೆಸರ್ ಮೇಲೆ ಹೆಚ್ಚು ಒತ್ತಡ ಬಿದ್ದು ಬಿಸಿಯಾಗಲು ಕಾರಣವಾಗುತ್ತದೆ.
  • ಚಾರ್ಜ್ ಮಾಡುವಾಗ ಫೋನ್ ಬಳಸುವುದು: ಅನೇಕರು ಕರೆ ಮಾಡುವಾಗ ಬ್ರೌಸ್ ಮಾಡುವಾಗ ಅಥವಾ ಗೇಮಿಂಗ್ ಮಾಡುವಾಗ ಫೋನ್ ಚಾರ್ಜ್ ಮಾಡುತ್ತಾರೆ. ಹೀಗೆ ಮಾಡುವುದರಿಂದ ಬ್ಯಾಟರಿ ಮತ್ತು ಪ್ರೊಸೆಸರ್ ಮೇಲೆ ಲೋಡ್ ಬೀಳುತ್ತದೆ. ಇದರಿಂದ ನಿಮ್ಮ ಫೋನ್ ಬಿಸಿಯಾಗುತ್ತದೆ.
  • ಅಪ್ಲಿಕೇಶನ್ಸ್ ಮತ್ತು ಗೇಮ್ಸ್​ ಬಳಕೆ: ಗ್ರಾಫಿಕ್ಸ್ ಹೊಂದಿರುವ ಆಟಗಳು, ಭಾರೀ ಅಪ್ಲಿಕೇಶನ್ಸ್​ ಪ್ರೊಸೆಸರ್, ಜಿಪಿಯು ಮೇಲೆ ಹೆಚ್ಚಿನ ಹೊರೆ ಹಾಕುತ್ತವೆ. ಇದು ಹೆಚ್ಚು ಬಿಸಿಯಾಗಲು ಕಾರಣವಾಗುತ್ತದೆ.
  • ಬ್ರೈಟ್​ನೆಸ್:  ಸ್ಕ್ರೀನ್ ಬ್ರೈಟ್‌ನೆಸ್ ಹೆಚ್ಚು ಇಟ್ಟುಕೊಂಡರೆ ಬ್ಯಾಟರಿ ಬೇಗ ಖಾಲಿ ಆಗುತ್ತದೆ. ಅಲ್ಲದೇ ಫೋನ್ ಬಿಸಿ ಆಗಲು ಪ್ರಾರಂಭವಾಗುತ್ತದೆ.
  • ದುರ್ಬಲ ನೆಟ್‌ವರ್ಕ್ ಸಿಗ್ನಲ್ ಇದ್ದಾಗ ಫೋನ್ ನಿರಂತರವಾಗಿ ಸಿಗ್ನಲ್‌ಗಾಗಿ ಹುಡುಕುತ್ತದೆ. ಈ ಕಾರಣದಿಂದಾಗಿ ಬ್ಯಾಟರಿ ಮತ್ತು ಪ್ರೊಸೆಸರ್ ಬಿಸಿಯಾಗುತ್ತದೆ.
  • ಬಿಸಿ ವಾತಾವರಣದಲ್ಲಿ ಅಥವಾ ನೇರ ಸೂರ್ಯನ ಬೆಳಕಿನಲ್ಲಿ ಫೋನ್ ಇಡೋದ್ರಿಂದ ಫೋನ್ ಬಿಸಿ ಆಗುತ್ತದೆ.

ಪರಿಹಾರ ಏನು..?

  • ಚಾರ್ಜ್ ಮಾಡುವಾಗ ಫೋನ್ ಬಳಸಬೇಡಿ, ರೆಸ್ಟ್ ಮೂಡ್​​ನಲ್ಲಿರಿಸಿ
  • ಭಾರೀ ಅಪ್ಲಿಕೇಶನ್ಸ್​ ಕಡಿಮೆ ಬಳಸಿ
  • ಫೋನ್ ಹೆಚ್ಚು ಬಿಸಿಯಾಗುತ್ತಿದ್ದರೆ ಬ್ಯಾಕ್ ಕವರ್ ತೆಗೆದುಹಾಕಿ
  • ತಂಪಾದ ಸ್ಥಳದಲ್ಲಿರಿಸಿ
  • ಸಾಫ್ಟ್‌ವೇರ್ ಅಪ್​​ಡೇಟ್​ ಮಾಡಿ

ಸ್ಮಾರ್ಟ್‌ಫೋನ್ ಬಿಸಿಯಾಗುವುದು ಸಹಜ. ಅದರಿಂದ ಅಪಾಯ ಕೂಡ ಇದೆ. ಈ ಸಣ್ಣ ತಪ್ಪುಗಳನ್ನು ಸರಿಪಡಿಸುವ ಮೂಲಕ ನಿಮ್ಮ ಫೋನ್ ಹೆಚ್ಚು ಬಿಸಿಯಾಗದಂತೆ ಉಳಿಸಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment