‘ತಂದೆ ತೀರಿ ಹೋದ 6 ತಿಂಗಳಿಗೆ ಬ್ರೇಕಪ್ ಆಯ್ತು‘.. ಮಾಜಿ ಗರ್ಲ್‌ಫ್ರೆಂಡ್ ಬಗ್ಗೆ ತ್ರಿವಿಕ್ರಮ್ ಹೇಳಿದ್ದೇನು?

author-image
Veena Gangani
Updated On
BBK11: ಮತ್ತೆ ಸುಳ್ಳು ಹೇಳಿ ತಗ್ಲಾಕೊಂಡ ತ್ರಿವಿಕ್ರಮ್.. ಕಿಚ್ಚ ಸುದೀಪ್ ಮ್ಯಾಕ್ಸಿಮಮ್ ಕ್ಲಾಸ್‌; ಹೇಳಿದ್ದೇನು?
Advertisment
  • ಮೊಟ್ಟ ಮೊದಲ ಬಾರಿಗೆ ಮಾಜಿ ಗರ್ಲ್‌ಫ್ರೆಂಡ್ ಬಗ್ಗೆ ಹೇಳಿದ್ದೇನು?
  • ಬಿಗ್​ಬಾಸ್​ನಿಂದ ಅಪಾರ ಫ್ಯಾನ್ಸ್​ಗಳನ್ನು ಗಳಿಸಿಕೊಂಡ ತ್ರಿವಿಕ್ರಮ್
  • ಬಿಗ್​ಬಾಸ್​ ಬರೋ ಮುನ್ನ ಪ್ರೀತಿಯಲ್ಲಿ ಬಿದ್ದಿದ್ದ ಬಿಗ್​​ಬಾಸ್​ ಸ್ಪರ್ಧಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಬಿಗ್​ಬಾಸ್​ ರನ್ನರ್ ಅಪ್​ ಆಗಿದ್ದ ತ್ರಿವಿಕ್ರಮ್​ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ತಮಿಳು ನಟ ವಿಶಾಲ್​ಗೆ ಕಾಡಿದ ಅನಾರೋಗ್ಯ.. ತುಳುನಾಡಿನ ದೈವದ ಮೊರೆ ಹೋದ ಸ್ಟಾರ್

publive-image

ಬಿಗ್​ಬಾಸ್​ ಮನೆಯಲ್ಲಿದ್ದಾಗ ತ್ರಿವಿಕ್ರಮ್ ಭವ್ಯಾ ಗೌಡಗೆ ಪ್ರಪೋಸ್ ಮಾಡಿದ್ದರ ಕುರಿತು ಸಾಕಷ್ಟು ಚರ್ಚೆ ಆಗಿತ್ತು. ಹೀಗಾಗಿ ಇವರಿಬ್ಬರು ಪ್ರೀತಿಯಲ್ಲಿದ್ದಾರೆ. ಮದುವೆ ಆಗೋದು ಕನ್ಫರ್ಮ್ ಅಭಿಮಾನಿಗಳು ಖುಷಿ ಆಗಿದ್ದರೆ. ಆದರೆ ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ತ್ರಿವಿಕ್ರಮ್ ಫ್ಯಾನ್ಸ್​ಗೆ ಶಾಕ್ ಕೊಟ್ಟರು. ಭವ್ಯಾ ನನಗಿಂತ ತುಂಬಾ ಚಿಕ್ಕವಳು, ಭವ್ಯಾನ ನಾನು ಜಸ್ಟ್ ಫ್ರೆಂಡ್ಸ್ ಅಂತ ಹೇಳಿಕೊಂಡಿದ್ದರು.

publive-image

ಈ ಮಧ್ಯೆ ತ್ರಿವಿಕ್ರಮ್ ತಮ್ಮ ಮಾಜಿ ಹುಡುಗಿ ಜೊತೆಗೀನ ಲವ್‌ ಬ್ರೇಕ್​ ಅಪ್​ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಱಪಿಡ್ ರಶ್ಮಿ ಅವರ ಸಂದರ್ಶನದಲ್ಲಿ ಭಾಗಿಯಾಗಿದ್ದ ತ್ರಿವಿಕ್ರಮ್, ನನ್ನ ತಂದೆ ತೀರಿಕೊಂಡ 6 ತಿಂಗಳಲ್ಲೇ ಪ್ರೀತಿಸಿದ ಹುಡುಗಿ ಜೊತೆ ಬ್ರೇಕಪ್ ಆಯ್ತು. ಈ ಹಿಂದೆ ಪ್ರೀತಿಯಲ್ಲಿ ಬಿದ್ದಿದ್ದೆ. ಆ ಹುಡುಗಿ ಮನೆ ಕಡೆ ಸೆಟಲ್ ಆಗಿದ್ದರು. ನಾನು ಸೆಟಲ್ ಆಗಬೇಕು ಅಂತ ಅವಳು ಬಯಸುತ್ತಿರಲಿಲ್ಲ. ಆದರೆ ನಾನು ಸೆಟಲ್ ಆಗಿರಲಿಲ್ಲ ಅನ್ನೋ ಕಾರಣಕ್ಕೆ ಅವರ ತಂದೆಯ ಒತ್ತಡ ಇತ್ತು. ಈ ವಿಚಾರ ನಮ್ಮಿಬ್ಬರ ಮಧ್ಯೆ ಅಂತರ ಸೃಷ್ಟಿ ಮಾಡುತ್ತದೆ ಅನ್ನೋ ಭಾವನೆಗೆ ಪರಸ್ಪರ ಮಾತನಾಡಿಕೊಂಡು ದೂರ ಆದೆವು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment