ಹಫೀಜ್ ಅಡಗುತಾಣ ಉಡಾಯಿಸಿದ ರಫೇಲ್.. ಪಾಕ್ ಮೇಲೆ ಭಾರತ ಪ್ರಯೋಗಿಸಿದ ಅಸ್ತ್ರಗಳು ಯಾವ್ಯಾವುದು?

author-image
Ganesh
Updated On
ಹಫೀಜ್ ಅಡಗುತಾಣ ಉಡಾಯಿಸಿದ ರಫೇಲ್.. ಪಾಕ್ ಮೇಲೆ ಭಾರತ ಪ್ರಯೋಗಿಸಿದ ಅಸ್ತ್ರಗಳು ಯಾವ್ಯಾವುದು?
Advertisment
  • ಪಾಕ್​ನ JF -17 ಯುದ್ಧ ವಿಮಾನವೂ ಉಡೀಸ್​
  • ಉಗ್ರರ 9 ನೆಲೆಗಳ ಮೇಲೆ ಭಾರತದಿಂದ ಅಟ್ಯಾಕ್
  • ದಾಳಿಯಲ್ಲಿ 70ಕ್ಕೂ ಹೆಚ್ಚು ಉಗ್ರರು ಸಾವು

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಆರಂಭಿಸಿದೆ. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿದೆ. ಭಾರತೀಯ ಸೇನೆ ಹಾಗೂ ಭಾರತೀಯ ವಾಯುಪಡೆ ಜಂಟಿಯಾಗಿ ಆಪರೇಷನ್ ಸಿಂಧೂರ್ ಆರಂಭಿಸಿವೆ. ಮುರೀದ್ಕೆ, ಮುಜಾಫರ್​ಬಾದ್, ಬಹಾವಲ್​ಪುರ್, ಕೋಟ್ಲಿ, ಚಾಕ್​ಅಮ್ರು, ಗುಲ್​ಪುರ್, ಭಿಂಬರ್​ ಪ್ರದೇಶಗಳಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿಯಾಗಿದೆ.

ಇನ್ನು ಭಾರತೀಯ ವಾಯುಪಡೆಯು ರಫೇಲ್‌ ಜೆಟ್​ ಯುದ್ಧ ವಿಮಾನ ಬಳಿಕ ಸ್ಕಲ್ಪ್ ಕ್ಷಿಪಣಿಯನ್ನು ಉಡಾಯಿಸಿದೆ. ವಿಶೇಷ ಅಂದರೆ ಹಫೀಜ್ ಸಯೀದ್ ಅಡಗುತಾಣದ ಮೇಲೆ ಅಟ್ಯಾಕ್ ಮಾಡಲಾಗಿದೆ. ಪಾಕಿಸ್ತಾನಕ್ಕೆ ಚೀನಾ ನೀಡಿದ್ದ ಜೆಫ್​-17 ಯುದ್ಧ ವಿಮಾನವನ್ನೂ ಹೊಡೆದುರುಳಿಸಲಾಗಿದೆ.

ಭಾರತ ಯಾವೆಲ್ಲ ಅಸ್ತ್ರ ಬಳಸಿದೆ..?

  • ಭಾರತೀಯ ವಾಯುಪಡೆಯು ರಫೇಲ್​ನ ಸ್ಕಾಲ್ಪ್ ಮಿಸೈಲ್ ಬಳಸಿ ದಾಳಿ
  •  ಜೊತೆಗೆ ಬ್ರಹ್ಮೋಸ್ ಮಿಸೈಲ್ ಮೂಲಕವೂ ಉಗ್ರರ ನೆಲೆಗಳ ಮೇಲೆ ಅಟ್ಯಾಕ್
  •  ಪಾಕ್‌ ಟೆರರ್ ಕಂಟ್ರೋಲ್ ರೂಮುಗಳನ್ನೇ ಧ್ವಂಸ ಮಾಡಿದ ಭಾರತ
  •  ಪಾಕ್ ಐಎಸ್‌ಐ-ಟೆರರ್ ಕಂಟ್ರೋಲ್ ರೂಮ್​ ಕೂಡ ಧ್ವಂಸಗೊಂಡಿದೆ
  •  ಹ್ಯಾಮರ್ ಬಾಂಬ್ ಬಳಸಿ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ
Advertisment