newsfirstkannada.com

ಅಯೋಧ್ಯೆ ಅಧಿಪತಿಗೆ ಅನೇಕ ರೂಪ.. ಬಾಲ ರಾಮನ ಬಗ್ಗೆ ಪುರಾಣ ಹೇಳೋದೇನು?

Share :

Published January 20, 2024 at 10:28pm

  ಕಾಕಭುಶುಂಡಿಯ ಜೊತೆ ರಾಮಲಲ್ಲಾನ ತುಂಟಾಟಗಳು

  ರಾಮಲಲ್ಲಾನ ಮೂರ್ತಿ ಬಗ್ಗೆ ಹೆಚ್ಚು ಪ್ರಸ್ತಾಪವಿಲ್ಲ ಯಾಕೆ?

  ರಾಮನ ಗುರುತಿನ ಅನ್ವೇಷಣೆಗೆ ರಾಮಾಯಣವೇ ದಾರಿ!

ಅಯೋಧ್ಯೆ ದಾಶರಧಿ ನಡೆದಾಡಿದ ಪುಣ್ಯಭೂಮಿ. ರಾಮಲಲ್ಲಾ ತನ್ನ ಪುಟ್ಟ ಪುಟ್ಟ ಪಾದಗಳಲ್ಲಿ ಗೆಜ್ಜೆ ಸದ್ದಿನಿಂದ ಅಯೋಧ್ಯೆ ಅರಮನೆಯ ಅಂಗಳ ಪೂರ್ತಿ ಓಡಾಡಿದ್ದ ಜಾಗ. ನಾಲ್ಕು ಜನ ಅಣ್ಣತಮ್ಮಂದಿರಿಂದ ಅರಮನೆ ಅಕ್ಷರಶಃ ಫಳಫಳಿಸುತ್ತಿತ್ತು. ಮೂವರು ಅಮ್ಮಂದಿರ ಮಡಿಲು ಸ್ವರ್ಗಕ್ಕಿಂತ ಹೆಚ್ಚಾಗಿತ್ತು. ಅದನ್ನ ಕಂಡ ದಶರಥ ಮಹಾರಾಜ ಪುತ್ರೋತ್ಸಾಹ ತುಂಬಿ, ಆನಂದದ ಕಡಲಲ್ಲಿ ತೇಲುತ್ತಿದ್ದ. ಆ ದಿನ ಅಯೋಧ್ಯೆಯಲ್ಲಿ ಬಾಲ ರಾಮನ ಪುಟ್ಟ ಪುಟ್ಟ ಪುಳಕ ಹೆಜ್ಜೆಗಳು, ಅವನ ತುಂಟಾಟಗಳು ಈಗ ಮತ್ತೆ ಅಯೋದ್ಯೆಗೆ ಮರಳಿ ಬಂದತಿವೆ. ರಾಮಲಲ್ಲಾನ ಪಾದ ಸ್ಪರ್ಶದಿಂದ, ಅಯೋಧ್ಯೆಗೆ ಕೋಟಿ ಸೂರ್ಯರ ಕಾಂತಿ ಬಂದಿದೆ ಅನ್ನೋದು ಇತ್ತೀಚೆಗೆ ಕೇಳಿ ಬರ್ತಿರೋ ಮಾತುಗಳು. ಅಯೋಧ್ಯೆ ಮಂದಿರ ಮತ್ತೆ ರಘುವಂಶವನ್ನ ಒಟ್ಟುಗೂಡಿಸಿದೆ ಅಂದ್ರೆ ತಪ್ಪಾಗೋದಿಲ್ಲ.

ಪುರಾಣಗಳಲ್ಲೂ ಬಾಲರಾಮ ವಿಗ್ರಹದ ಬಗ್ಗೆ ಹೆಚ್ಚು ಮಾಹಿತಿಯಿಲ್ಲ?

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗ್ತಿರೋ ರಾಮಲಲ್ಲಾನ ವಿಗ್ರಹದ ಬಗ್ಗೆ ಇದೂವರೆಗೂ ಹೆಚ್ಚು ಎಲ್ಲೂ ಪ್ರಸ್ತಾಪವಿಲ್ಲ. ಅಷ್ಟೇಯಲ್ಲ ಬಾಲರಾಮ ವಿಗ್ರಹದ ಬಗ್ಗೆ ಯಾಕೆ ಎಲ್ಲೂ ಹೇಳಿಲ್ಲ, ಯಾವ ಪುರಾಣಗಳಲ್ಲೂ ಯಾಕೆ ಪ್ರಸ್ತಾಪಿಸಿಲ್ಲ ಅನ್ನೋ ಪ್ರಶ್ನೆ ಈಗೀಗ ಹುಟ್ಟಿಕೊಂಡಿದೆ. ರಾಮ ಮೊದಲು ಸಾಮಾನ್ಯ ಮನುಷ್ಯನಾಗಿ, ನಂತರ ರಾಜನಾಗಿದ್ದ ಆ ನಂತರವೇ ದೇವರು ಅಂತ ಪೂಜೆಗಳನ್ನ ಪಡೆದುಕೊಂಡಿದ್ದ ಅನ್ನೋದು ಕೇಳಿಬರುವ ಪ್ರಮುಖ ಕಥೆ. ರಾಮ ಮೊದಲು ಮನುಷ್ಯನಾಗಿಯೇ ಜನ್ಮ ಪಡೆದಿದ್ದ. ಹಾಗಾಗಿ, ರಾಮ ಹುಟ್ಟಿ 27 ವರ್ಷ ಆಗುವವರೆಗೂ ಅವನು ದೇವರು ಅಂತಾ ಯಾರಿಗೂ ಗೊತ್ತಾಗಿಲ್ಲ. ಹಾಗಿದ್ಮೇಲೆ ಬಾಲ ರಾಮನನ್ನ ದೇವರು ಅಂತಾ ಯಾರ್​​ ಪೂಜೆ ಮಾಡ್ತಾರೆ ಅಲ್ವಾ? ವಿಗ್ರಹಗಳನ್ನ ಹೇಗೆ ನಿರ್ಮಿಸ್ತಾರೆ ಅನ್ನೋದು ಸಣ್ಣ ಲಾಜಿಕ್. ಬಟ್​​,​​ ಇದೇ ಕಂಕ್ಲೂಷನ್ ಅಲ್ಲ. ಬಾಲ ರಾಮನ ವಿಗ್ರಹ ಎಲ್ಲೂ ಇಲ್ಲದೇ ಇರಬಹುದು ಆದ್ರೆ, ಬಾಲ್ಯದಲ್ಲಿ ರಾಮ ದೇವರಾಗಿದ್ದ ಅಂತ ಹೇಳೋದಕ್ಕೆ ತುಳಸಿದಾಸರ ರಾಮ ಚರಿತೆಯಲ್ಲಿ ಮತ್ತೊಂದು ರುಜುವಿದೆ.

ಸಪ್ತ ಚಿರಂಜೀವಿಗಳ ನಡುವೆ ಮತ್ತೊಬ್ಬ ಚಿರಂಜೀವಿ ಇದ್ದಾನಾ?

ರಾಮನ ಬಾಲ್ಯದ ಬಗ್ಗೆ ತಿಳಿಯೋದು ಸಹ ನಿರ್ಣಾಯಕವಾಗಿರುತ್ತೆ. ರಾಮನ ಬಗ್ಗೆ ಯಾವಾಗ ಪ್ರಸ್ಥಾಪ ಬಂದರೂ, ರಾಮಯಾಣದ ಕಥೆ ಮುನ್ನಲೆಗೆ ಬರಲೇಬೇಕು. ರಾಮಾಯಣ ಗ್ರಂಥ ಇಡೀ ಪ್ರಪಂಚಕ್ಕೆ ಗೊತ್ತಾಗಿದ್ದು ಮಹರ್ಷಿ ವಾಲ್ಮಿಕಿಯಿಂದಲೇ ಆದ್ರೂ, ರಾಮಾಯಣವನ್ನ ವಾಲ್ಮೀಕಿಗೂ ಮುನ್ನ ಹನುಮಂತ ಕಲ್ಲಿನ ಮೇಲೆ ಕೆತ್ತಿಬಿಟ್ಟಿದ್ದ ಅಂತಾ ಪುರಾಣಗಳು ಹೇಳಿದ್ದಿದೆ. ವಾಲ್ಮೀಕಿ ಆದ್ರೂ, ಹನುಮಂತನಾದ್ರೂ ಇಬ್ಬರೂ, ರಾಮ ರಾಜ್ಯವಾಳಿದ್ದಾಗಿನಿಂದ ಕಾಡಿಗೆ ಹೋಗುವವರೆಗೂ, ಮತ್ತೆ ರಾಜ್ಯವನ್ನಾಳಿದ್ದ ಬಗ್ಗೆ ಹೇಳಿದಾರೆ. ರಾಮಾಯಣ ಆರಂಭಕ್ಕೂ ಮುನ್ನ, ಅಂದ್ರೆ ರಾಮ ಅಯೋಧ್ಯೆಯಲ್ಲಿ ಹುಟ್ಟಿ ಬೆಳೆಯುವ ದಿನಗಳನ್ನ ಹತ್ತಿರ ಇದ್ದು ನೋಡಿದ ಒಂದು ಮಹಾನ್​​ ಜೀವಿ ಈಗಲೂ ಇದೆಯಂತೆ. ಅಶ್ವಥಾಮ, ಬಲಿ, ವ್ಯಾಸ, ಆಂಜನೇಯ, ವಿಭೀಷಣ, ಕೃಪಾ, ಪರಶುರಾಮ. ಇವರಲ್ಲದೇ ಮಾರ್ಕಂಡೇಯನೂ ಸಹ ಈ ಸಾಲಿಗೆ ಸೇರುತ್ತಾನೆ. ಆದ್ರೆ, ಈ ಸಾಲಲ್ಲಿ ಮತ್ತೊಬ್ಬ ಚಿರಂಜೀವಿಯೂ ಇದ್ದಾನೆ. ಆತ ಬೇಱರು ಅಲ್ಲ ಕಾಗೆ ರೂಪದಲ್ಲಿರೋ ಕಾಕಭುಶುಂಡಿ.

ಬಾಲರಾಮನ ಜೊತೆ ಆಟವಾಡುತ್ತಿದ್ದ ಕಾಕಭುಶುಂಡಿ!

ರಾಮನ ಬಾಲ್ಯವನ್ನ ದಶರಥ ಕುಟುಂಬಕ್ಕೆ ಬಿಟ್ಟರೇ, ನಂತರ ಆ ಮಹಾ ದೃಶ್ಯ ಕಾವ್ಯವನ್ನ ಪಕ್ಕದಲ್ಲೇ ಇದ್ದು ನೋಡಿ, ವರ್ಣಿಸಿದ್ದು ಮಾತ್ರ ಕಾಕಭುಶುಂಡಿ ಅಂತಾ ಹೇಳಲಾಗುತ್ತೆ. ಈತನ ಬಗ್ಗೆ ಕೇಳೋದಕ್ಕೆ ತುಂಬಾ ಆಸಕ್ತಿಕರ ವಿಷ್ಯಗಳಿವೆ. ಆದ್ರೆ, ಆ ಪುಟ ತೆರೆದರೆ ದಿನಗಳೇ ಬೇಕಾಗುತ್ತೆ. ಈ ಕಾಕಭುಶುಂಡಿ ಬಗ್ಗೆ ಮೊದಲು ಪ್ರಸ್ಥಾಪ ತಂದಿದ್ದೇ ಪರಮಶಿವನಂತೆ. ಯಾವುದೋ ಒಂದು ಸಭೆಯಲ್ಲಿ ತನ್ನ ಮಾವ ಪ್ರಜಾಪತಿ ದಕ್ಷ ಬಂದಾಗ ಎಲ್ಲಾ ದೇವರುಗಳು ಎದ್ದು ನಿಂತರೂ ಶಿವ ಮಾತ್ರ ಎದ್ದು ನಿಲ್ಲಲಿಲ್ಲವಂತೆ. ಅದೇ ಕಾರಣಕ್ಕೆ ದಕ್ಷ ಅಳಿಯನ ಮೇಲೆ ಧ್ವೇಷ ಕಟ್ಟಿಕೊಂಡು, ತಾನೂ ನಿರ್ವಹಿಸಿದ್ದ ಒಂದು ಮಹಾ ಯಜ್ಞಕ್ಕೆ ಶಿವನಿಗೇ ಆಹ್ವಾನ ನೀಡ್ಲಿಲ್ಲವಂತೆ. ಶಿವನ ಪತ್ನಿ ಸತಿ ಸೀದಾ ಅಪ್ಪನ ಮನೆಗೋಗಿ, ನನ್ನ ಪತಿಯನ್ನ ಯಾಕೆ ಯಜ್ಞಕ್ಕೆ ಕರೆದಿಲ್ಲ ಅಂತ ಪ್ರಶ್ನಿಸಿದಾಗ, ಅಲ್ಲೂ ದಕ್ಷ ಮಗಳನ್ನ ಸೇರಿ ಶಿವನನ್ನೂ ನಿಂದಿಸಿ ಅಗೌರವ ತೋರ್ತಾನಂತೆ. ಆಗ ಸತಿ ಕೋಪಗೊಂಡು ಕಾಲ ಬೆರಳಿನಿಂದ ಬೆಂಕಿ ಹೊತ್ತಿಸಿ ಆಹುತಿ ಆಗಿಬಿಡ್ತಾಳೆ. ಆಗ ಶಿವ ರುದ್ರನಾಗಿ ಸೃಷ್ಟಿಯನ್ನ ಅಲ್ಲೋಲ ಕಲ್ಲೋಲ ಮಾಡಿದಾಗ, ವಿಷ್ಣುವಿನ ಚಕ್ರದಿಂದ ಶಿವನ ಕೋಪ ತಣ್ಣಗಾಗುತ್ತೆ. ಪತ್ನಿ ಸಾವಿನಿಂದ ನೊಂದು, ಕಾಡಿನಲ್ಲಿ ಅಲೆಯುವಾಗ ಒಂದು ಮರದ ಕೆಳಗೆ ರಾಮಾಯಣವನ್ನ ಬೋಧನೆ ಮಾಡ್ತಾ ಕಂಡವನೇ ಈ ಕಾಕಭುಶುಂಡಿ ಎನ್ನುವ ಮಾತಿದೆ.

ಕಾಕಭುಶುಂಡಿ ಹನುಮನಂತೆ ಶ್ರೀರಾಮ ಚಂದ್ರ ಪ್ರಭುವಿಗೆ ಪರಮ ಭಕ್ತ. ಈತ ಹೇಳ್ತಿದ್ದ ರಾಮಾಯಣದ ಕತೆ ಕೋಟಿ ಸೂರ್ಯರೆ ಕೇಳುವಂತಿತ್ತಂತೆ. ಅದು ಮನುಷ್ಯರಿಗೂ ಸಿಗುವ ಲಕ್ಷ ಶ್ಲೋಕಗಳುಳ್ಳ ರಾಮಾಚರಿತ ಮಾನಸ ಕೇಳಿ ಶಿವನೇ ಸ್ಥಬ್ದವಾಗಿದ್ದನಂತೆ. ಪ್ರತಿ ತ್ರೇತಾಯುಗದಲ್ಲಿ ಕಾಗೆ ರೂಪದಲ್ಲಿ ಕಾಕಭೂಶುಂಡಿ ಅಯೋಧ್ಯೆಗೆ ಭೇಟಿ ಕೊಡ್ತಾ ಇರ್ತಾನಂತೆ. ಪ್ರತಿ ತ್ರೇತಾಯುಗಾನಾ..? ಈ ವಿಷ್ಯ ಸ್ವಲ್ಪ ಅಯೋಮಯ ಮಾಡಿ ಬಿಡುತ್ತೆ ಅಲ್ವಾ. ವೇದ, ಪುರಾಣಗಳ ಪ್ರಕಾರ, ಕಾಕಭುಶುಂಡಿ ಇಲ್ಲಿವರೆಗೂ 11 ರಾಮಾಯಣಗಳನ್ನ, 16 ಮಹಾಭಾರತಗಳನ್ನ ನೋಡಿದ್ದಾನಂತೆ. ಇದಂತೂ ನಿಜಕ್ಕೂ ಸೊಜಿಗವೇ. ಕಾಕಭುಶುಂಡಿ ಒಬ್ಬ ಟೈಮ್​​ ಟ್ರ್ಯಾವೆಲರ್ ಅಂತಾನೇ ಹೇಳಲಾಗುತ್ತೆ. ಅಂದ್ರೆ, ಅವನು ಸಮಯದ ಜೊತೆಗೆ ಪ್ರಯಾಣ ಮಾಡ್ತಿದ್ದದ್ದು​​ ಅವನಿಗೆ ಸಿಕ್ಕಿದ್ದ ಒಂದು ವರ. ನಿಜಕ್ಕೂ ರಾಮಾಯಣ ಅವನಿಗೆ ಗೊತ್ತಾದ ಮೇಲೆ ಆ ಸಮಯ ಪ್ರಯಾಣದ ​​ಮೂಲಕವೇ ಮತ್ತೆ ಅಯೋಧ್ಯೆಗೆ ಹೋಗಿ ರಾಮನ ಬಾಲ್ಯಲೀಲೆಗಳನ್ನ, ರಾಮನ ಮಹೋತ್ಸವಗಳನ್ನ ಕಣ್ಣಾರೆ ನೋಡಿ ಸಂತೋಷ ಪಡುತ್ತಾ, ಪ್ರತಿ ರಾಮಾಯಣದಲ್ಲಿ ರಾಮ ಹುಟ್ಟಿದಾಗ ಐದು ವರ್ಷಗಳವರೆಗೂ ಅಯೋಧ್ಯೆಯಲ್ಲೇ ಇರ್ತಾನಂತೆ. ಹೀಗೆ 11 ಬಾರಿ ಮಾಡಿದ್ದಾನಂತೆ. ಅಂದ್ರೆ 11 ರಾಮಾಯಣಗಳನ್ನ ನೋಡಿದ್ದಾನೆ ಅಂತಾ ಅರ್ಥ. ಯಾಕಂದ್ರೆ, ರಾಮನ ಆ ಬಾಲ್ಯ ಲೇಲೆಗಳನ್ನ ನೋಡೋದೆ ಅವನಿಗೆ ಸಂತೋಷವಂತೆ.

ಕೋಟಿ ಬ್ರಹ್ಮಾಂಡವನ್ನ ನೋಡಿ ಕಾಕಭುಶುಂಡಿ ಗದ್ಗದಿತ!

ಕಾಕಭುಶುಂಡಿ ರಾಮಲಲ್ಲಾನ ಅಂಬೆಗಾಲಿನ ಓಡಾಟ, ಅವನ ಆ ಮುದ್ದು ಮುಖವನ್ನ ನೋಡ್ತಾ. ಕಾಗೆ ರೂಪದಲ್ಲಿ ರಾಮನ ಸುತ್ತ ಸುತ್ತುತಿರ್ತಾನೆ. ಅಯೋಧ್ಯೆಯ ಅಂಗಳದಲ್ಲಿ ಬಿದ್ದ ರಾಮನ ಎಂಜಲು ತಿಂಡಿಗಳನ್ನ ತಿಂತಾ. ರಾಮನ ಆಟ ಪಾಠಗಳನ್ನ ನೋಡಿ ಎಲ್ಲಿಲ್ಲಿದ್ದ ಸಂತೋಷ ಪಡ್ತಾನೆ. ಬಾಲರಾಮನ ಸ್ಪುರದ್ರೂಪವನ್ನ ವರ್ಣಿಸುತ್ತಾ, ಆ ನೀಲಿ ಬಣ್ಣದ ದೇಹಕಾಂತಿ, ಬಿಲ್ಲಿನಂತಾ ಹುಬ್ಬುಗಳು, ತಾವರೆಯಂತ ಕಣ್ಣುಗಳು, ಹೂದಳದಂತಾ ತುಟಿಗಳು, ಆ ಮುದ್ದು ನಗೆ. ಆ ಪುಟ್ಟ ರಾಮ ಕುಣಿದು ಕುಲ್ಪಳಿಸುತ್ತ. ಕಿಲ ಕಿಲ ನಗುತ್ತಾ. ತೊದಲು ಮಾತುಗಳನ್ನಾಡುತ್ತಾ ತನ್ನ ಸುತ್ತ ಸುತ್ತೋದನ್ನ ನೋಡೋದೇ ಹಬ್ಬ ಅಂತೇ. ಒಂದ್ಸರಿ ಬಾಲರಾಮ ತನ್ನ ನೆರಳನ್ನ ಹಿಡಿಯೋಕೆ ಹೋಗ್ತಾ. ಪಕ್ಷಿಯ ಹಾಗಿದ್ದ ಕಾಕಭುಶುಂಡಿಯನ್ನೂ ಹಿಡಿಯೋಕೆ ಹೋದನಂತೆ, ಕಾಕಭುಶುಂಡಿ ಓಡೋಕೆ ಶುರು ಮಾಡಿದ್ದನಂತೆ. ಆಗ ಅವನು ರಾಮನ ಕಾಲು ಮುಟ್ಟೋಕೆ ಹೋದಾಗ ರಾಮ ಹೆದರುವಂತೆ ಮಾಡಿದ್ದನಂತೆ. ಆಗ ರಾಮ ಇಷ್ಟೊಂದು ನಟನೆ ಯಾಕ್ ಮಾಡ್ತಾನೆ ಅಂತಾ ದೂರ ಹೋಗೋಕೆ ಶುರು ಮಾಡಿದ್ದನಂತೆ. ಆಗ ರಾಮ ಅಂಬೆಗಾಲು ಇಡ್ತಾ ಕಾಕಭುಶುಂಡಿ ಕಡೆ ಬರ್ತಾ ಇದ್ದಾಗ, ಅವನು ಮೇಲೆ ಹಾರಿದ್ದನಂತೆ. ರಾಮ ಎರಡು ಕೈಗಳನ್ನ ಮೇಲೆ ಚಾಚಿದಾಗ ಬ್ರಹ್ಮ.. ವಿಷ್ಣು.. ಮಹೇಶ್ವರ ಅಂತಾ, ಮೂರು ಲೋಕ ಸುತ್ತಿಬಿಟ್ನಂತೆ. ಆದ್ರೆ ರಾಮನ ಕೈಗಳು ಮಾತ್ರ ಹಿಂದಿಂದೆಯೇ ಹೋಗಿದ್ವಂತೆ.

ಕಾಕಭುಶುಂಡಿ ಎಲ್ಲಿ ಹೋದ್ರೂ ರಾಮನ ಕೈಗಳು ಅವನಿಗೆ ಹತ್ರವೇ ಇದ್ದದ್ದು ನೋಡಿ, ಕಾಗೆ ಕಣ್ಮುಚ್ಚಿಬಿಟ್ಟಿತಂತೆ ಅಷ್ಟೇ, ಕಣ್ಣು ಬಿಡುವಷ್ಟರಲ್ಲಿ ಅವನು ಮತ್ತೆ ಅಯೋಧ್ಯೆಯಲ್ಲಿದ್ದ. ರಾಮ ಅವನ್ನನ್ನ ನೋಡಿ ಮುಗುಳ್ನಗುತ್ತಾ, ಬಾಯಿ ತೆಗೆದನಂತೆ. ಆಗ ಯಾವುದೋ ಶಕ್ತಿ ಕಾಕಭುಶುಂಡಿಯನ್ನ ಸೆಳೆಯುತ್ತೆ ಅಲ್ಲಿ ಅದ್ಭುತ ನಡೆಯುತ್ತೆ. ರಾಮನ ಬಾಯೊಳಗೆ ಹೋಗಿದ್ದ ಕಾಕಭುಶುಂಡಿಗೆ ಎಷ್ಟೋ ಕೋಟಿ ಕೋಟಿ ಬ್ರಹ್ಮರು.. ಶಿವರೂಪಗಳು.. ನಕ್ಷತ್ರಗಳು.. ಸೌರಮಂಡಲಗಳು, ಋಷಿಮುನಿಗಳು.. ವಿಶಾಲ ಗ್ರಹಗಳು.. ಸಮುದ್ರ.. ನದಿಗಳು.. ಸೃಷ್ಟಿ ವಿಚಿತ್ರ.. ಜನ.. ವಿಚಿತ್ರ ಜಂಗಮ ಜೀವಿಗಳನ್ನ ನೋಡಿ ಅಚ್ಚರಿಯಾಗಿತ್ತು. ಆ ರೀತಿ ರಾಮನ ಒಳಗೆ ಅನಂತ ಸೃಷ್ಟಿ ನೋಡಿ ಕಾಕಾಭುಶುಂಡಿಗೆ ತಲೆ ಧಿಮ್​​ ಅಂದೋಗಿತ್ತು. ರಾಮ ಮೆಲ್ಲಗೆ ನಗುತ್ತಾ ಬಾಯಿ ತೆಗೆದಾಗ ಅವನು ಹೊರಗೆ ಬಂದು ರಾಮನಿಗೆ ದೊಡ್ಡ ಭಕ್ತನಾಗಿಬಿಟ್ಟನಂತೆ.

ಈ ಕಥೆಯಿಂದ ತಿಳಿದಿದ್ದು ಏನು ಅಂದ್ರೆ ದಶವತಾರಗಳಲ್ಲಿ ಏಳನೇ ಅವತಾರ ರಾಮ ಹುಟ್ಟಿದಾಗಿನಿಂದಲೇ ದೇವರ ರೂಪ ಅನ್ನೋದು. ಆದ್ರೆ ಆ ದೈವ ಅಂಶ ಒಳಗೆ ಇದ್ದು, ಮನುಷ್ಯನಂತೆ ಬದುಕಿ, ಮನುಷ್ಯರಿಗೆ ಆದರ್ಶವಾಗಿ, ವೈಕುಂಠಕ್ಕೆ ಹೋದ ಅನ್ನೋದು ಅಂತಿಮ ಕಥೆ. ಆದ್ರೆ, ರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದರಿಂದ ಕಾಕಭುಶುಂಡಿ ತೋರಿಸಿದಂತೆ ಅಲ್ಲಿ ಬಾಲ ರಾಮನ ಲೀಲೆಗಳೂ ಇವೆ. ಕಾಕಭುಶುಂಡಿ ಇನ್ನೂ ಬದುಕೇ ಇದ್ದಾನೆ ಅಂತ ಹೇಳಲಾಗ್ತಿದೆ ಆದ್ರೂ, ಬಾಲ ರಾಮನ ವಿಗ್ರಹದ ಬಗ್ಗೆ ಅವನೂ ಸಹ ಎಲ್ಲೂ ಹೇಳಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗ್ತಾ ಇರೋದ್ರಿಂದ ಅಲ್ಲಿ ಬಾಲ ರಾಮನೇ ಸೂಕ್ತ ಅಂತಲೂ ಹೇಳಲಾಗ್ತಿದೆ. ಈ ಬಗ್ಗೆ ಧರ್ಮಶಾಸ್ತ್ರಜ್ಞರು ಹೇಳಿದ್ದು ಕೂಡ ರೋಚಕವಾಗಿಯೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ಅಧಿಪತಿಗೆ ಅನೇಕ ರೂಪ.. ಬಾಲ ರಾಮನ ಬಗ್ಗೆ ಪುರಾಣ ಹೇಳೋದೇನು?

https://newsfirstlive.com/wp-content/uploads/2024/01/rama-lile-3.jpg

Load More