newsfirstkannada.com

ಮೈತ್ರಿ ಮುರಿದು ಬಿದ್ರೆ ಬಿಜೆಪಿಗೆ ಶಾಕ್ ನೀಡುತ್ತಾ ಜೆಡಿಎಸ್? ದಳಪತಿಗಳ ಪ್ಲಾನ್ B ರೆಡಿ; ಏನದು?

Share :

Published March 20, 2024 at 2:47pm

Update March 20, 2024 at 3:18pm

    ಕರ್ನಾಟಕದಲ್ಲಿ ದೋಸ್ತಿ ಹಸ್ತ ಚಾಚಿ ಕೈ ಕೊಟ್ಟ ಬಿಜೆಪಿಗೆ ಪಾಠ ಕಲಿಸುತ್ತಾ JDS?

    ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್​ನಿಂದ ಪ್ಲಾನ್ ‘B’ ರೆಡಿ

    ಕೋಲಾರ ಕ್ಷೇತ್ರ ಸಿಗದಿದ್ರೆ ಜೆಡಿಎಸ್​ ಅಭ್ಯರ್ಥಿಯನ್ನ ನಿಲ್ಲಿಸಲು ಚಿಂತನೆ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆಯ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಪ್ರಮುಖವಾಗಿ ಕೋಲಾರ ಟಿಕೆಟ್ ನೀಡುವ ವಿಚಾರದಲ್ಲಿ ಜೆಡಿಎಸ್ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ಲೋಕಸಭಾ ಎಲೆಕ್ಷನ್​ ಆರಂಭದಲ್ಲೇ ಮೈತ್ರಿಯಲ್ಲಿ ಬಿರುಕು ಉಂಟಾಗಿದೆ ಅನ್ನೋ ವಿಚಾರ ಚರ್ಚೆಯಾಗುತ್ತಿದೆ.

ರಾಜ್ಯದಲ್ಲಿ ಮೈತ್ರಿ ಮುರಿದು ಬಿದ್ರೆ ಜೆಡಿಎಸ್‌ ನಾಯಕರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶಾಕ್ ನೀಡುವ ಸಾಧ್ಯತೆ ಇದೆ. ಮೈತ್ರಿ ಮುರಿದು ಬಿದ್ರೆ ಬಿಜೆಪಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್​ನಿಂದ ಪ್ಲಾನ್ ‘ಬಿ’ ಕೂಡ ರೆಡಿಯಾಗಿದೆ.

ದಳಪತಿ ‘B’ ಪ್ಲಾನ್ ಏನು?
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗಾಗಿ ಜೆಡಿಎಸ್‌ ತನ್ನ ಕ್ಷೇತ್ರಗಳನ್ನು ತ್ಯಾಗ ಮಾಡಿದೆ. ಒಂದು ವೇಳೆ ಬಿಜೆಪಿ-ಜೆಡಿಎಸ್​ ಮೈತ್ರಿ ಮುರಿದ್ರೆ ಬಿಜೆಪಿ ವಿರುದ್ಧ JDS ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಪ್ರಮುಖವಾಗಿ ಕೋಲಾರದ ಟಿಕೆಟ್ ಸಿಗದಿದ್ರೆ ಜೆಡಿಎಸ್​ ಅಭ್ಯರ್ಥಿಯನ್ನ ನಿಲ್ಲಿಸಲು ಚಿಂತನೆ ನಡೆಸಲಾಗಿದೆ.

ಇದನ್ನೂ ಓದಿ: ‘ತಾಯಿ ಹೃದಯದ ಕುಮಾರಸ್ವಾಮಿ ಹೃದಯ ಚಿಕಿತ್ಸೆ ಯಶಸ್ವಿಯಾಗಲಿ’- ದೇವರ ಮೊರೆ ಹೋದ ಅಭಿಮಾನಿಗಳು

ದಳಪತಿಗಳ ಲೆಕ್ಕಾಚಾರದ ಪ್ರಕಾರ ಜೆಡಿಎಸ್​ ​ಬೆಂಬಲ ಇಲ್ಲದೆ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲೋದು ಕಷ್ಟ. ಹೀಗಾಗಿ ಮೈತ್ರಿ ಮುರಿದು ಬಿದ್ರೆ ಮೈಸೂರು, ಚಾಮರಾಜನಗರ, ತುಮಕೂರಲ್ಲಿ JDS ಸ್ಪರ್ಧಿಸುವ ಸಾಧ್ಯತೆ ಇದೆ.
ತುಮಕೂರಿನಲ್ಲಿ ಜೆಡಿಎಸ್ ಬೆಂಬಲವಿಲ್ಲದೆ ಬಿಜೆಪಿ ಗೆಲ್ಲೋದು ಕಷ್ಟ. ಮೈಸೂರು ಭಾಗದಲ್ಲಿ ಜೆಡಿಎಸ್ ಇಲ್ಲದೆ, ಬಿಜೆಪಿ ಗೆಲುವು ಸುಲಭವಲ್ಲ. ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಗೆಲುವು ಕಷ್ಟವಾಗಲಿದೆ. ಶಿವಮೊಗ್ಗ, ಕಲಬುರಗಿ, ರಾಯಚೂರಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಪ್ರಬಲವಾಗಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಖತಂ ಆದ್ರೆ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿಗೆ ಸೆಡ್ಡು ಹೊಡೆಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈತ್ರಿ ಮುರಿದು ಬಿದ್ರೆ ಬಿಜೆಪಿಗೆ ಶಾಕ್ ನೀಡುತ್ತಾ ಜೆಡಿಎಸ್? ದಳಪತಿಗಳ ಪ್ಲಾನ್ B ರೆಡಿ; ಏನದು?

https://newsfirstlive.com/wp-content/uploads/2023/09/MODI_HDD.jpg

Load More