/newsfirstlive-kannada/media/post_attachments/wp-content/uploads/2025/05/RCB_IPL_WIN.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಎರಡು ಐಪಿಎಲ್ ಸೀಸನ್- 18 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಈಗ ಕ್ವಾಲಿಫೈಯರ್- 1ಕ್ಕೆ ಎಂಟ್ರಿ ಕೊಟ್ಟಿವೆ. ಇಂದಿನ ಈ ಪಂದ್ಯ ಎರಡು ತಂಡಗಳಿಗೂ ಬಹುಮುಖ್ಯವಾಗಿರುತ್ತದೆ. ಯಾವ ತಂಡ ಗೆಲ್ಲುತ್ತದೆಯೋ ಆ ಟೀಮ್ ನೇರವಾಗಿ ಫೈನಲ್ಗೆ ಪ್ರವೇಶ ಪಡೆಯಲಿದೆ. ಒಂದು ವೇಳೆ ಮಳೆಯಿಂದ ಕ್ವಾಲಿಫೈಯರ್- 1 ಪಂದ್ಯ ರದ್ದು ಆದರೆ ಏನ್ ಗತಿ?.
ಚಂಡೀಗಢ ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ಇಂದು ಕ್ವಾಲಿಫೈಯರ್- 1ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ತಂಡ ಅಖಾಡಕ್ಕೆ ಧುಮುಕಲಿವೆ. ಈ ಪಂದ್ಯದಲ್ಲಿ ಯಾವುದೇ ತಂಡ ಸೋತರೂ ಇನ್ನೊಂದು ಅವಕಾಶ ಇರುತ್ತದೆ. ಗೆದ್ದ ತಂಡ ಫೈನಲ್ಗೆ ಹೆಜ್ಜೆ ಇಡಲಿದೆ. ಈ ಎರಡು ನಡೆಯಂದಂತೆ ವರುಣರಾಯ ಆರ್ಭಟ ಮಾಡಿ ಮ್ಯಾಚ್ ವಾಶ್ಔಟ್ ಆದರೆ ಯಾವ ತಂಡಕ್ಕೆ ಹೆಚ್ಚು ಅನುಕೂಲ ಆಗಿರುತ್ತದೆ ಎಂದರೆ..
ಇದನ್ನೂ ಓದಿ:ದಿಗ್ವೇಶ್ ರಾಠಿ ಮಂಗಾಟಕ್ಕೆ ಸೊಪ್ಪು ಹಾಕದ ಪಂತ್; ಆರ್ಸಿಬಿ ಫ್ಯಾನ್ಸ್ ಹೃದಯ ಗೆದ್ದ LSG ನಾಯಕ..! VIDEO
ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್- 1 ಪಂದ್ಯ ಮಳೆಯಿಂದ ವಾಶ್ಔಟ್ ಆದರೆ ಇದರ ಹೆಚ್ಚಿನ ಲಾಭ ಪಂಜಾಬ್ ಕಿಂಗ್ಸ್ಗೆ ಇದೆ. ಎರಡು ತಂಡಗಳ ಅಂಕಗಳು (19) ಸಮವಾಗಿದ್ದರೂ ನೆಟ್ ರನ್ರೇಟ್ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪಂಜಾಬ್ ತಂಡದ ನೆಟ್ ರನ್ರೇಟ್ +0.372 ಇದೆ. ಆರ್ಸಿಬಿಯ ನೆಟ್ ರನ್ರೇಟ್ +0.301 ಇದೆ. ಆರ್ಸಿಬಿಗಿಂತ ಪಮಜಾಬ್ ಒಳ್ಳೆಯ ರನ್ ರೇಟ್ನಲ್ಲಿದೆ. ಹೀಗಾಗಿ ಫೈನಲ್ಗೆ ಹೋಗುವ ಅವಕಾಶ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ಗೆ ಇದೆ.
ಈಗಾಗಲೇ ಭಾರತ ಹಾಗೂ ಪಾಕ್ ನಡುವಿನ ಘರ್ಷಣೆಯಿಂದ ಒಂದು ವಾರ ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿ ಮತ್ತೆ ಆರಂಭಿಸಲಾಗಿದೆ. ಹೀಗಾಗಿ ಕ್ವಾಲಿಫೈಯರ್- 1ರ ಪಂದ್ಯಕ್ಕೆ ವಿಶೇಷವಾದ ಸಮಯ ಅಥವಾ ದಿನವನ್ನು ನೀಡಲಾಗುವುದಿಲ್ಲ. ಪಂದ್ಯಕ್ಕೆ ಮಳೆ ಬಂದರೆ ಎಲ್ಲ ರೀತಿಯಿಂದಲೂ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶ ಮಾಡೋದು ಖಚಿತವಾಗಿರುತ್ತದೆ. ಇನ್ನು ಈ ಎಲ್ಲವನ್ನು ಗಮನಿಸಿದರೆ ಪಂದ್ಯ ನಡೆಯುವ ವೇಳೆ ವರುಣದೇವ ಅಡ್ಡಿ ಮಾಡದಂತೆ ಇರಲಿ ಎಂದು ಆರ್ಸಿಬಿ ಫ್ಯಾನ್ಸ್ ಪ್ರಾರ್ಥಿಸಬೇಕು ಎನ್ನುವಂತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ