RCB ಫ್ಯಾನ್ಸ್‌ಗೆ ಡಬಲ್ ಟೆನ್ಷನ್.. ಇಂದು IPL ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಏನಾಗುತ್ತೆ?

author-image
admin
Updated On
RCB ಫ್ಯಾನ್ಸ್‌ಗೆ ಡಬಲ್ ಟೆನ್ಷನ್.. ಇಂದು IPL ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಏನಾಗುತ್ತೆ?
Advertisment
  • 18 ವರ್ಷದಿಂದ ಕೋಟ್ಯಾಂತರ RCB ಅಭಿಮಾನಿಗಳ ಕಾತರ
  • ಅಹ್ಮದಾಬಾದ್‌ ಮೋದಿ ಸ್ಟೇಡಿಯಂನಲ್ಲಿ 2 ದಿನದಿಂದ ಮಳೆ
  • ಮಳೆಯಿಂದ ಪಂದ್ಯ ಕೊಚ್ಚಿ ಹೋದ್ರೆ ಐಪಿಎಲ್ ನಿಯಮ ಏನು?

RCB ಈ ಬಾರಿ ಯಾರೋ ಒಬ್ಬರು ಇಬ್ಬರನ್ನ ಹೊಡೆದು ಫೈನಲ್‌ಗೆ ಹೋಗಿಲ್ಲ. ಬೆಂಗಳೂರು ರಾಯಲ್ ಚಾಲೆಂಜರ್ಸ್‌ ಹೊಡೆದಿರೋದೆಲ್ಲ ಬಲಿಷ್ಠ ತಂಡಗಳನ್ನೇ. ಇದೀಗ RCB ಚೊಚ್ಚಲ ಟ್ರೋಫಿ ಗೆದ್ದು ಬೀಗೋಕೆ ಒಂದೇ ಮೆಟ್ಟಿಲು ಬಾಕಿ. ಇಂದು ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಸೆಣಸಾಟ ನಡೆಸಲಿದೆ.

IPL 18 ಸೀಸನ್. RCB ಅಭಿಮಾನಿಗಳಿಗೆ ಸಾಮಾನ್ಯವಲ್ಲ. ವಿರಾಟ್ ಕೊಹ್ಲಿ ಜೆರ್ಸಿ ನಂಬರ್ 18. ಈ ಸಲ ಕಪ್ ಗೆಲ್ಲೋದು ಕಿಂಗ್ ಕೊಹ್ಲಿ ಅಂತ ಫ್ಯಾನ್ಸ್ ನಂಬಿದ್ದಾರೆ. ಕಳೆದ 18 ವರ್ಷಗಳಿಂದ ರಾಮನಿಗಾಗಿ ಶಬರಿ ಕಾದಂತೆ ಕಾಯೋ ಕಾಲ ಮುಗಿಯುವ ಹಂತ ತಲುಪಿದೆ.

ಐಪಿಎಲ್‌ 18ರಲ್ಲಿ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಆರ್‌ಸಿಬಿ ಕಾಣಿಸಿಕೊಂಡಿದೆ. ಫೈನಲ್‌ಗೆ ಮೊದಲ ತಂಡವಾಗಿ ಲಗ್ಗೆ ಇಟ್ಟಿದೆ. ಇದೀಗ ಪಂಜಾಬ್‌ನ ಬಗ್ಗು ಬಡಿದು ಗೆಲುವಿನ ಕಿರೀಟ ಮುಡಿಗೇರಿಸಿಕೊಳ್ಳಲು ಸಜ್ಜಾಗಿದೆ. ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ ಕಪ್ ಗೆದ್ದು ಬರಲಿ ಅಂತ ಅಭಿಮಾನಿಗಳ ಪ್ರಾರ್ಥನೆ ಕೂಡ ಜೋರಾಗಿದೆ.

publive-image

ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ಅಂದ್ರೆ ಬರೀ ಕ್ರಿಕೆಟ್ ಟೀಂ ಅಲ್ಲ. ಅದೊಂದು ಎಮೋಷನ್. 18 ವರ್ಷದಿಂದ ಕೋಟ್ಯಾಂತರ ಅಭಿಮಾನಿಗಳು ಆರಾಧಿಸುತ್ತಿರೋ ತಂಡ. ಸದ್ಯ ಐಪಿಎಲ್ ಸೀಸನ್ 18ರಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿದ್ದು, ಕಪ್ ಗೆಲ್ಲೋ ನಂಬಿಕೆ ಹೆಚ್ಚಾಗಿದೆ. ಐಪಿಎಲ್‌ ಫೈನಲ್‌ಗೆ ಕ್ಷಣಗಣನೆ ಶುರುವಾಗಿರುವಾಗಲೇ RCB ಫ್ಯಾನ್ಸ್ ಕನಸಿಗೆ ಮಳೆರಾಯ ಅಡ್ಡಿಯಾಗಿದ್ದಾನೆ.

ಇದನ್ನೂ ಓದಿ: RCB ಟ್ರೋಫಿ ವನವಾಸಕ್ಕೆ ಅಂತ್ಯ ಹಾಡ್ತಾರಾ ಪಂಚ ‘ಪಾಂಡವರು’.. ಮ್ಯಾಜಿಕ್​ ಮಾಡಿದ್ರೆ ಗೆಲುವು ಫಿಕ್ಸ್! 

ಗುಜರಾತ್‌ನ ಅಹ್ಮದಾಬಾದ್‌ನಲ್ಲಿರೋ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸತತ 3 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಪಂಜಾಬ್‌, ಮುಂಬೈ ಕ್ವಾಲಿಫೈಯರ್ 2 ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದ. ಕ್ವಾಲಿಫೈಯರ್ 2 ಪಂದ್ಯಕ್ಕೆ ರಿಸರ್ವ್‌ ಡೇ ಇಲ್ಲದೇ ಇರೋದ್ರಿಂದ ಮಿಡ್ ನೈಟ್ ಆದ್ರೂ ಪಂದ್ಯವನ್ನು ಆಡಿಸಲಾಗಿತ್ತು.

publive-image

ಅಹ್ಮದಾಬಾದ್‌ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ ಫೈನಲ್ ಕದನ ಫಿಕ್ಸ್ ಆಗಿದೆ. ಆದರೆ ಮಳೆಯ ಭೀತಿ ಅಭಿಮಾನಿಗಳನ್ನ ಬಿಟ್ಟು ಬಿಡದೇ ಕಾಡುತ್ತಿದೆ. ನಿನ್ನೆ ಕೂಡ ಅಹಮದಾಬಾದ್‌ನಲ್ಲಿ ವರುಣನ ಅಬ್ಬರ ಜೋರಾಗಿತ್ತು. ಇಂದಿನ ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ.

publive-image

ಫೈನಲ್‌ ಪಂದ್ಯ ರದ್ದಾದ್ರೆ ಏನಾಗುತ್ತೆ?
ಐಪಿಎಲ್ ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಮತ್ತೊಂದು ಮೀಸಲು ದಿನ (Reserve Day) ಇದೆ. ಅಂದ್ರೆ ಮಂಗಳವಾರ ಮಳೆಯಿಂದ ಪಂದ್ಯ ರದ್ದಾದ್ರೆ ಬುಧವಾರ ಐಪಿಎಲ್‌ ಫೈನಲ್‌ ಪಂದ್ಯ ನಿಗಧಿಯಾಗಲಿದೆ. ಒಂದು ವೇಳೆ ಮಂಗಳವಾರ, ಬುಧವಾರ 2 ದಿನವೂ ಮಳೆಯಿಂದ ಪಂದ್ಯ ಕೊಚ್ಚಿ ಹೋದ್ರೆ ಐಪಿಎಲ್ ನಿಯಮಾವಳಿಯಂತೆ ಪಂಜಾಬ್ ಕಿಂಗ್ಸ್ ಈ ಬಾರಿ ಕಪ್ ಗೆಲ್ಲಲಿದೆ. ಲೀಗ್ ಹಂತದ ಪಾಯಿಂಟ್ಸ್‌ ಆಧಾರದಲ್ಲಿ ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್‌ಗೆ ಐಪಿಎಲ್ ಟ್ರೋಫಿಯನ್ನು ಘೋಷಣೆ ಮಾಡಲಾಗುತ್ತದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment