ವೈಟ್‌ಹೌಸ್‌ಗೆ ವಿಮಾನ ಬಂದು ಗುದ್ದಲು ಸಾಧ್ಯನಾ? ಅಮೆರಿಕಾ ಹೈಟೆಕ್‌ ಭದ್ರತಾ ವ್ಯವಸ್ಥೆಯ ಸೀಕ್ರೆಟ್​ ಇಲ್ಲಿದೆ!

author-image
Gopal Kulkarni
Updated On
ವೈಟ್‌ಹೌಸ್‌ಗೆ ವಿಮಾನ ಬಂದು ಗುದ್ದಲು ಸಾಧ್ಯನಾ? ಅಮೆರಿಕಾ ಹೈಟೆಕ್‌ ಭದ್ರತಾ ವ್ಯವಸ್ಥೆಯ ಸೀಕ್ರೆಟ್​ ಇಲ್ಲಿದೆ!
Advertisment
  • ಜನವರಿ 30 ರಂದು ಯುಎಸ್​ನಲ್ಲಿ ನಡೆದ ಭಾರೀ ವಿಮಾನ ದುರಂತ
  • ವೈಟ್​​ಹೌಸ್ ಎಷ್ಟು ಸೇಫ್ ಎಂದು ಪ್ರಶ್ನೆ ಹುಟ್ಟು ಹಾಕಿದ ಈ ಘಟನೆ
  • ವೈಟ್​ಹೌಸ್​ ಮೇಲೆ ಇಂತಹದೊಂದು ಘಟನೆ ನಡೆಯಲು ಸಾಧ್ಯನಾ?

ಜನವರಿ 30 ರಂದು ಅಮೆರಿಕಾದಲ್ಲಿ ನಡೆದ ಖಾಸಗಿ ಏರ್​ಲೈನ್ ಮತ್ತು ಮಿಲಟರಿ ಹೆಲಿಕಾಪ್ಟರ್ ನಡುವೆ ನಡೆದ ಡಿಕ್ಕಿಯಲ್ಲಿ ಹಲವಾರು ಜನ ಪ್ರಾಣ ಕಳೆದುಕೊಂಡರು ಅದರಲ್ಲಿದ್ದ ಯಾರೊಬ್ಬರು ಕೂಡ ಜೀವಂತವಾಗಿ ಉಳಿಯಲಿಲ್ಲ. ಇದು ವೈಟ್​ಹೌಸ್​ನ ವಾಷಿಗ್ಟನ್ ಡಿಸಿಯ ಬಳಿಯೇ ನಡೆದಿತ್ತು. ಅದು ಮಾತ್ರವಲ್ಲ ಈ ಘಟನೆ ನಡೆದ ಸ್ಥಳದಲ್ಲಿ ಹಲವು ನಿರ್ಬಂಧಿತ ವೈಟ್​ಹೌಸ್​ಗೆ ಸಂಬಂಧಿಸಿದ ಸರ್ಕಾರಿ ಕಚೇರಿಗಳ ಕಟ್ಟಡಗಳಿದ್ದವು. ಈ ಒಂದು ಘಟನೆ ನಡೆದ ಬಳಿಕ ಒಂದು ವೇಳೆ ವೈಟ್​ಹೌಸ್ ಮೇಲೆಯೇ ಇಂತಹದೊಂದು ಪ್ಲೇನ್ ಕ್ರ್ಯಾಶ್​ನಂತಹ ಘಟನೆ ನಡೆದರೆ ವೈಟ್​ಹೌಸ್ ಸುರಕ್ಷಿತವಾಗಿ ಉಳಿಯುತ್ತದಾ ಅನ್ನೋ ಪ್ರಶ್ನೆಗಳು ತೇಲಿ ಬಂದವು.

ಈ ಒಂದು ವಿಷಯವನ್ನು ಯುಎಸ್​ನ ಅಧ್ಯಕ್ಷರ ನಿವಾಸದ ಸಿಬ್ಬಂದಿಗಳು ತುಂಬಾ ಆಳವಾಗಿ ವಿವವನ್ನು ನೀಡಿವೆ. ಇಂತಹ ಅನಾಹುತಗಳನ್ನು ಎದುರಿಸಲು ವೈಟ್​ಹೌಸ್ ಹಲವು ವರ್ಷಗಳಿಂದಲೇ ಸಿದ್ಧವಿದೆ ಅಂತಹ ಸುರಕ್ಷಿತ ವ್ಯವಸ್ಥೆಯನ್ನು ವೈಟ್​ಹೌಸ್​ಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಅದು ಅಲ್ಲದೇ ಆ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಕೂಡ.

ನೋ ಫ್ಲೈ ಝೋನ್
ಇನ್ನು ವೈಟ್​ಹೌಸ್​ನ ರೂಲ್ಸ್ ಪ್ರಕಾರ ಯಾವುದೇ ಹೆಲಿಕಾಪ್ಟರ್, ವಿಮಾನಗಳು ವೈಟ್​ಹೌಸ್ ಮೇಲೆ ಹಾರಾಡಲು ಪರವಾನಿಗೆ ಇಲ್ಲ, ಅದನ್ನು ನೋ ಫ್ಲಯಿಂಗ್ ಝೋನ್ ಎಂದು ಘೋಷಿಸಲಾಗಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದ್ದೇ ಆದಲ್ಲಿ ಅವರು ಗಂಭೀರವಾದ ಪರಿಣಾಮವನ್ನು ಎದುರಿಸುತ್ತಾರೆ.

ಮಿಸೈಲ್ ಲಾಂಚರ್
ಇನ್ನು ವೈಟ್​ಹೌಸ್​ನಲ್ಲಿ ಮಿಸೈಲ್ ಸಿಸ್ಟಮ್ ಡಿಫೆನ್ಸ್​ನ್ನು ಕೂಡ ಅಳವಡಿಸಲಾಗಿದೆ. ಒಂದು ವೇಳೆ ಮಿಸೈಲ್ ದಾಳಿಯಂತಹ ಘಟನೆಗಳು ಸಂಭವಿಸಿದಲ್ಲಿ ಅದನ್ನು ಸಮರ್ಥವಾಗಿ ಎದುರಿಸುವ ವ್ಯವಸ್ಥೆಯನ್ನು ವೈಟ್​ಹೌಸ್​ನಲ್ಲಿ ಮಾಡಲಾಗಿದೆ. ಇನ್ನು ಇದೇ ರೀತಿ ಯಾವುದೇ ಎಲೆಕ್ಟ್ರಾನಿಕ್ ದಾಳಿಗಳು ನಡೆದರು ಕೂಡ ವೈಟ್​ ಹೌಸ್ ಅದನ್ನು ಕೂಡ ಸಮರ್ಥವಾಗಿ ಎದುರಿಸುವಂತಹ ಸಂರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ.

publive-image

ಇನ್ನು ವೈಟ್​ಹೌಸ್​ನ್ನು ಈ ರೀತಿಯ ಅಪಾಯದಿಂದ ಕಾಪಾಡಲು ಬಹುಪದರದ ರಕ್ಷಣಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಅಂದ್ರೆ ಡಬಲ್ ಲೇಯರ್​ ಸೆಕ್ಯೂರಿಟಿ ಸಿಸ್ಟಮ್ ಅಂತ.

ಇದನ್ನೂ ಓದಿ:BREAKING: ಭೀಕರ ವಿಮಾನ ಅಪಘಾತ.. ಪ್ರಯಾಣಿಕರಿದ್ದ ವಿಮಾನ ಹೆಲಿಕಾಪ್ಟರ್​ಗೆ ಡಿಕ್ಕಿ

ನೊರಾಡ್ ಅಂದ್ರೆ ನಾರ್ಥ್ ಅಮೆರಿಕಾ ಏರೋಸ್ಪೇಸ್​ ಡಿಫೆನ್ಸ್​ ಕಮಾಂಡ್​ ಇದು ಯುಎಸ್ ಮತ್ತು ಕೆನಾಡ ಗಡಿಯನ್ನು ಕಾಯುವ ದಳ. ಇದು ಎಫ್​-16 ಮತ್ತು ಎಫ್​22ನಂತಹ ವಿಮಾನಗಳನ್ನು ಹೊಂದಿದೆ. ದಿನದ 24 ಗಂಟೆಯೂ ವೈಟ್​ಹೌಸ್​ನ್ನು ಕಾಯುತ್ತವೆ. ಒಂದು ವೇಳೆ ವೈಟ್​ಹೌಸ್ ಫ್ಲೈ ಝೋನ್​ನಲ್ಲಿ ಯಾವುದಾದರು ವಿಮಾನ ಪ್ರವೇಶ ಪಡೆಯುತ್ತಿದೆ ಎಂಬುದು ಅದಕ್ಕೆ 10 ರಿಂದ 15 ನಿಮಿಷಗಳಲ್ಲಿ ಗೊತ್ತಾಗುತ್ತದೆ. ಕೂಡಲೇ ಅದಕ್ಕೆ ಈ ಎರಡು ವಿಮಾನಗಳು ಪ್ರತಿಕ್ರಿಯೆ ನೀಡುತ್ತವೆ.

ಇದನ್ನೂ ಓದಿ:Plane accident: ಆಕಾಶದಲ್ಲೇ ಅಪಘಾತ.. ಹೆಲಿಕಾಪ್ಟರ್​​ಗೆ ಡಿಕ್ಕಿಯಾಗಿ ನದಿಗೆ ಬಿದ್ದ 60 ಪ್ರಯಾಣಿಕರಿದ್ದ ವಿಮಾನ..

ಇನ್ನು ಫೆಡರಲ್ ಏವಿಯೆಷನ್ ಅಡ್ಮಿನಿಷ್ಟ್ರೇಷನ್ ಕೂಡ ಸದಾ ಚಟುವಟಿಕೆಯಲ್ಲಿ ಇರುತ್ತದೆ. ಯಾವುದಾದರೂ ಒಂದು ಏರ್​ಕ್ರಾಫ್ಟ್​ ರೂಟ್ ಇಲ್ಲವೇ ಸಂವಹನವನ್ನು ಕಳೆದುಕೊಂಡ ಕೂಡಲೇ ಅದು ನೊರಾಡಗೆ ಸಂದೇಶ ನೀಡುತ್ತದೆ.

ಇನ್ನು ವಾಷಿಂಗ್ಟನ್​ನಲ್ಲಿ ಏರ್ ಡಿಫೆನ್ಸ್​ ಐಡೆಂಟಿಫಿಕೇಷನ್ ಝೋನ್ ಇದೆ. ಎಲ್ಲ ಏರ್​ಕ್ರಾಫ್ಟ್​ಗಳು ಅವು ಹಾರಾಡುವ ಪ್ರದೇಶ ಹಾಗೂ ಅವುಗಳ ಗುರುತನ್ನು ಮೊದಲೇ ಈ ಈ ಝೋನ್​ಗೆ ತಿಳಿಸಿ ಟೇಕ್​ ಆಫ್ ಆಗಬೇಕು ಅಲ್ಲಿಯವರೆಗೂ ಅವುಗಳಿಗೆ ಟೇಕಾಫ್ ಆಗಲು ಅವಕಾಶ ನೀಡಲಾಗುವುದಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment