ದೇಶದ ಜನತೆ ಬಯಸಿದ ಕ್ರಮ ಖಚಿತ.. ರಾಜನಾಥ್ ಸಿಂಗ್ ಬಿಗ್​ ಸ್ಟೇಟ್​​ಮೆಂಟ್..!

author-image
Ganesh
Updated On
ದೇಶದ ಜನತೆ ಬಯಸಿದ ಕ್ರಮ ಖಚಿತ.. ರಾಜನಾಥ್ ಸಿಂಗ್ ಬಿಗ್​ ಸ್ಟೇಟ್​​ಮೆಂಟ್..!
Advertisment
  • ಭಾರತ ಮತ್ತು ಪಾಕ್​ ನಡುವೆ ಯುದ್ಧದ ವಾತಾವರಣ
  • ಪಾಕ್​​ ವಿರುದ್ಧದ ಕ್ರಮದ ಬಗ್ಗೆ ರಕ್ಷಣಾ ಸಚಿವರು ಏನಂದ್ರು?
  • ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ತಯಾರಿ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತೊಮ್ಮೆ ದೊಡ್ಡ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನೀವು ಬಯಸುವುದು ಖಂಡಿತವಾಗಿಯೂ ನಡೆಯುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ ಎಂದಿದ್ದಾರೆ.

ಸಶಸ್ತ್ರ ಪಡೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವುದು. ಭಾರತದ ಬಗ್ಗೆ ದುಷ್ಟ ಉದ್ದೇಶಗಳನ್ನು ಹೊಂದಿರುವವರಿಗೆ ಸೂಕ್ತ ಉತ್ತರ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ದೆಹಲಿಯಲ್ಲಿ ಕಾರ್ಯಕ್ರಮವೊಂದನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಏನೆಂಬುದು ಚೆನ್ನಾಗಿ ತಿಳಿದಿದೆ. ಅವರ ಕೆಲಸದ ನೀತಿ, ದೃಢನಿಶ್ಚಯ ಮತ್ತು ಅಪಾಯಗಳನ್ನು ತೆಗೆದುಕೊಳ್ಳುವ ರೀತಿ ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ.

ಇದನ್ನೂ ಓದಿ: ಲೈಟ್ ಹಾಕಬೇಡಿ, ದೀರ್ಘಕಾಲಿಕ ರಜೆ ಇಲ್ಲ -ಗಡಿಯಿಂದ ಮತ್ತೊಂದು ಬಿಗ್​ಅಪ್​ಡೇಟ್ಸ್​..!

ಪಹಲ್ಗಾಮ್‌ ದಾಳಿ ಬಳಿಕ ಭಾರತ-ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಯುದ್ಧದ ಕಾರ್ಮೋಡಗಳು ಗಾಢವಾಗಿವೆ. ಕಳೆದ ರಾತ್ರಿ ಭಾರತೀಯ ಸೇನೆಯಿಂದ ಗಡಿ ಭಾಗದಲ್ಲಿ ಮಿಲಿಟರಿ ಡ್ರಿಲ್ ಕೈಗೊಳ್ಳಲಾಗಿದೆ. ಪಂಜಾಬ್‌ನ ಫಿರೋಜಪುರ ಗಡಿ ಭಾಗದಲ್ಲಿ ರಾತ್ರಿ 9 ರಿಂದ 9.30ರ ಸಮಯದಲ್ಲಿ ಭಾರತೀಯ ಸೈನಿಕರು ಡ್ರಿಲ್ ನಡೆಸಿದ್ದಾರೆ.

ಗಡಿಭಾಗದಲ್ಲಿರೋ ಜನರು ಯಾವುದೇ ಕಾರಣಕ್ಕೂ ಲೈಟ್ ಉರಿಸದಂತೆ ಸೈನಿಕರು ಮನವಿ ಮಾಡಿದ್ದಾರೆ. ಲೌಡ್ ಸ್ಪೀಕರ್ ಮೂಲಕ ಗ್ರಾಮಗಳಿಗೆ ತೆರಳುವಂತೆ ಘೋಷಣೆ ಮಾಡಿದ್ದಾರೆ. ಗಡಿಭಾಗದ ಜನರಿಗೆ ಮನೆಗಳ ಲೈಟ್ ಉರಿಸದಂತೆ ಸೇನೆ ಮನವಿ ಮಾಡಿರೋದು ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ತಯಾರಿ ನಡೆಸಿರೋ ಮುನ್ಸೂಚನೆ ಎನ್ನಲಾಗ್ತಿದೆ.

ಇದನ್ನೂ ಓದಿ: ಜನಿವಾರ ತೆಗೆಸಿದ ಗೊಂದಲದಲ್ಲಿ ರಿಜಿಸ್ಟರ್ ನಂಬರ್ ತಪ್ಪಾಗಿ ಬರೆದೆ.. ನೀಟ್ ವಿದ್ಯಾರ್ಥಿ ಮನವಿ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment