​Whatsappನಲ್ಲಿ ಸ್ಟೇಟಸ್ ಹಾಕೋರಿಗೆ ಗುಡ್ ​ನ್ಯೂಸ್.. ಬಂದಿದೆ ಮತ್ತೊಂದು ಹೊಸ ಫೀಚರ್; ಏನದು?

author-image
Veena Gangani
Updated On
ಹೊಸ ವರ್ಷದಿಂದ ಈ ಆ್ಯಂಡ್ರಾಯ್ಡ್​ ಮತ್ತು ಸ್ಮಾರ್ಟ್​​ಫೋನ್​ಗಳಲ್ಲಿ ವಾಟ್ಸಾಪ್ ಬಂದ್?
Advertisment
  • ವಾಟ್ಸಾಪ್​ ಬಳಕೆದಾರರಿಗೆ ಗುಡ್​ನ್ಯೂಸ್​ ಕೊಟ್ಟ ಮೆಟಾ ಕಂಪನಿ
  • ​Whatsappನಲ್ಲಿ ಸ್ಟೇಟಸ್ ಹಾಕೋರೆಲ್ಲಾ ಈ ಸ್ಟೋರಿ ಓದಿ
  • ಇನ್​ಸ್ಟಾಗ್ರಾಮ್, ಫೇಸ್​ಬುಕ್​ನಂತೆ ಮತ್ತೊಂದು ಫೀಚರ್ ಬಂದಿದೆ

ದಿನ ಬೆಳಗಾದರೇ ಸಾಕು ಜನ ದೇವರ ಫೋಟೋ ನೋಡ್ತಾರೋ ಇಲ್ವೊ ಗೊತ್ತಿಲ್ಲ. ಆದ್ರೆ ವಾಟ್ಸಾಪ್​ ಅಂತೂ ಪಕ್ಕಾ ನೋಡೇ ನೋಡ್ತಾರೆ. ಯಾರು ಮೆಸೇಜ್ ಮಾಡಿದ್ದಾರೆ? ಎಷ್ಟು ಮೆಸೇಜ್​ ಬಂದಿವೆ. ಇದನ್ನ ತಿಳಿದುಕೊಳ್ಳೋದಕ್ಕೆ ಜನಕ್ಕೆ ಕುತೂಹಲ. ಅಲ್ಲದೇ ದಿನ ಒಂದಲ್ಲಾ ಒಂದು ವಾಟ್ಸಾಪ್​ನಲ್ಲಿ ಸ್ಟೇಟಸ್ ಹಾಕುವವರಿಗೆ ಗುಡ್​ನ್ಯೂಸ್​ ಅಂತಲೇ ಹೇಳಬಹುದು.

ಇದನ್ನೂ ಓದಿ: ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್​ ಎಸ್ಕೇಪ್​..! Video

publive-image

ಹೌದು, ಮೆಸೇಜ್ ಮತ್ತು ಕಾಲ್​ಗಳನ್ನು ಫ್ರೀಯಾಗಿ ಮಾಡಬಹುದಾದ ಮೇಟಾದ ಮತ್ತೊಂದು ವೇದಿಕೆ ಅಂದ್ರೆ ಅದು ವಾಟ್ಸಾಪ್​. ಈ ಒಂದು ಆ್ಯಪ್ ಜಗತ್ತಿನ ಪ್ರತಿಯೊಂದು ಸ್ಮಾರ್ಟ್​ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್​ಗಳಲ್ಲಿ ಇದ್ದೇ ಇರುತ್ತೆ. ಇದು ಖಾಯಂ ಆಗಿ ಸರಳವಾಗಿ ನಡೆಯಬೇಕು ಅಂದ್ರೆ ಅದನ್ನು ಆಗಾಗ ಅಪ್​ಡೇಟ್​ ಮಾಡಿಕೊಳ್ಳುತ್ತಲೇ ಇರಬೇಕು. ಆದ್ರೆ ಮೆಟಾ ಕಂಪನಿ ಸ್ಟೇಟಸ್ ಹೊಸ ಫೀಚರ್​ ಅನ್ನು ಬಿಟ್ಟಿದೆ. ಅದುವೇ ಮ್ಯೂಸಿಕ್​.

publive-image

ಮೆಟಾ ಕಂಪನಿಯೂ ಜನಕ್ಕೆ ಮತ್ತಷ್ಟೂ ಹತ್ತಿರವಾಗಿದೆ. ಈ ಹಿಂದೆ ಇನ್​ಸ್ಟಾಗ್ರಾಮ್, ಫೇಸ್​ಬುಕ್​ನಲ್ಲಿ ಮಾತ್ರ ಫೋಟೋಗೆ ಹಾಡನ್ನು ಹಾಕಬಹುದಾಗಿತ್ತು. ಆದರೆ ಇದೀಗ ಮೆಟಾ ಕಂಪನಿ ವಾಟ್ಸಾಪ್​ನಲ್ಲೂ ಈ ಫೀಚರ್ ತಂದಿದೆ. ಅಂದರೆ ವಾಟ್ಸಾಪ್​ ಬಳಕೆದಾರರು ಇನ್ಮುಂದೆ ಫೋಟೋ ಅಥವಾ ವಿಡಿಯೋ ಜೊತೆಗೆ ನಿಮಗೆ ಇಷ್ಟ ಇರುವ ಸಾಂಗ್​ ಅನ್ನು ಹಾಕಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment