/newsfirstlive-kannada/media/post_attachments/wp-content/uploads/2024/11/WhatsApp.jpg)
WhatsApp ಗ್ರೂಪ್! ಮಾತುಕತೆಗಳ ಅಪ್ಡೇಟೆಡ್ ಅರಳಿಕಟ್ಟೆ! ಈ ಸೋಶಿಯಲ್ ಮೀಡಿಯಾ ವೇದಿಕೆಯು ಸದ್ಯ ಟ್ರೆಂಡಿಂಗ್ನಲ್ಲಿದೆ. ಸಭೆ, ಸಮಾರಂಭ, ವಿಶೇಷ ಮಾಹಿತಿಗಳು ಸೇರಿದಂತೆ ಎಲ್ಲಾ ವಿಚಾರಗಳೂ WhatsApp ಗ್ರೂಪ್ ಮೂಲಕವೇ ಸಾದಾ-ಸೀದಾ ಆಗಿಬಿಟ್ಟಿವೆ! ಅದು ಏನೇ ಇರಲಿ, ಇನ್ಮುಂದೆ ಗ್ರೂಪ್ ಕ್ರಿಯೇಟ್ ಆಗಬೇಕು ಅಂದರೆ ಪರವಾನಗಿ ಪಡೆದುಕೊಳ್ಳಬೇಕು. ಸರ್ಕಾರಕ್ಕೆ ಹಣ ಕಟ್ಟಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ.
ಸದ್ಯ ಭಾರತದಲ್ಲಿ ಈ ಕಾನೂನು ಬಂದಿಲ್ಲ. ಮುಂದೊಂದು ದಿನ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಜಿಂಬಾಬ್ವೆ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ. ಎಲ್ಲಾ WhatsApp ಗುಂಪು ನಿರ್ವಾಹಕರು (ಅಡ್ಮಿನ್), ಜಿಂಬಾಬ್ವೆಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (POTRAZ)ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅಲ್ಲಿನ ಸರ್ಕಾರ ಹೇಳಿದೆ.
ಇದನ್ನೂ ಓದಿ: BSNL: ಹೊಸ ಲೋಗೋ ಪರಿಚಯಿಸಿದ ಬಿಎಸ್ಎನ್ಎಲ್! ಏನು ವಿಶೇಷತೆ ಗೊತ್ತಾ?
WhatsApp ಗ್ರೂಪ್ ರಚಿಸಲು ಪರವಾನಗಿ ಅಗತ್ಯವಿದೆ. ಪರವಾನಿಗೆ ಪಡೆಯಲು ಹಣವನ್ನು ಪಾವತಿಸಬೇಕು. ಒಂದು ಪರವಾನಗಿಗೆ ಕನಿಷ್ಠ ರೂಪಾಯಿ 4220 ವೆಚ್ಚವಾಗಲಿದೆ ಎಂದು ಜಿಂಬಾಬ್ವೆಯ ಐಟಿ ಸಚಿವ ಟಟೆಂಡಾ ಮಾವೆಟೆರಾ ಘೋಷಣೆ ಮಾಡಿದ್ದಾರೆ.
ಯಾಕೆ ಈ ಕ್ರಮ..?
ಸುಳ್ಳು ಸುದ್ದಿಗಳು ಮತ್ತು ಸುಳ್ಳು ಪೋಸ್ಟ್‌ಗಳನ್ನು ಹತ್ತಿಕ್ಕುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ. ದೇಶದ ದತ್ತಾಂಶ ಸಂರಕ್ಷಣಾ ಕಾಯ್ದೆಯಡಿ ಹೊಸ ನಿಯಮಗಳನ್ನು ತರಲಾಗುತ್ತಿದೆ. ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳು ಸದಸ್ಯರ ಫೋನ್ ಸಂಖ್ಯೆಗಳನ್ನು ಹೊಂದಿರುತ್ತಾರೆ. ಹೀಗಾಗಿ ಸರ್ಕಾರದ ಪ್ರಕಾರ ಅವರು ಡೇಟಾ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಬರುತ್ತಾರೆ ಎಂದು ಜಿಂಬಾಬ್ವೆ ಸರ್ಕಾರ ಹೇಳಿದೆ. ಇದರಿಂದ ಸರ್ಕಾರಕ್ಕೆ ತಪ್ಪು ಮಾಹಿತಿಯ ಮೂಲ ಪತ್ತೆ ಹಚ್ಚಲು ಸಹಾಯ ಆಗಲಿದೆ.
ಜನ ಏನು ಹೇಳುತ್ತಿದ್ದಾರೆ?
ಹೊಸ ನಿಯಮದ ಪ್ರಕಾರ ಅಡ್ಮಿನ್ ಗ್ರೂಪ್ ಕ್ರಿಯೇಟ್ ಮಾಡಲು ಸರ್ಕಾರದಿಂದ ಪರವಾನಗಿ ಪಡೆದುಕೊಳ್ಳಬೇಕು. ಅದಕ್ಕಾಗಿ ಆಪರೇಟರ್ ಸರ್ಕಾರಕ್ಕೆ ಕೆಲವು ವೈಯಕ್ತಿಕ ಮಾಹಿತಿಗಳನ್ನು ನೀಡಬೇಕು. ಒಂದಿಷ್ಟು ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಭದ್ರತೆಗಾಗಿ ಈ ಕಾನೂನು ಅಗತ್ಯ ಎಂದು ಸರ್ಕಾರ ಹೇಳಿದೆ. ಆದರೆ ಇದು ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಅಲ್ಲಿನ ಜನರು ಭಾವಿಸಿದ್ದಾರೆ. ವಾಟ್ಸ್ಆ್ಯಪ್ ಕೂಡ ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿದೆ. ಈ ಹೊಸ ನಿಬಂಧನೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ನಿಯಮ ಕಠಿಣವಾಗಿದೆ ಮತ್ತು ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಲ್ಲಿ ಇಲ್ಲಿ ಅಲೆಯೋದು ಬಿಟ್ಬಿಡಿ.. ಇನ್ಮುಂದೆ ವಾಟ್ಸ್ಆ್ಯಪ್ನಲ್ಲೇ ಟ್ರಾಫಿಕ್ ಚಲನ್ ಪಾವತಿಸಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ