/newsfirstlive-kannada/media/post_attachments/wp-content/uploads/2024/12/WhatsApp-1.jpg)
WhatsApp, Instagram, Facebook ಬೆಳಕೆದಾರರಿಗೆ ನಿನ್ನೆ ದೊಡ್ಡ ಆಘಾತ ಕಾದಿತ್ತು. ರಾತ್ರಿ ಸುಮಾರು 11 ಗಂಟೆಯಿಂದ ಮೆಟಾ ಸರ್ವರ್ ಡೌನ್ ಆದ ಹಿನ್ನೆಲೆಯಲ್ಲಿ ಈ ಎಲ್ಲಾ ಅಪ್ಲಿಕೇಷನ್ಗಳು ಕೆಲಸ ಸ್ಥಗಿತಗೊಳಿಸಿದ್ದವು. ಇದರಿಂದ ಬಳಕೆದಾರರು ಕರೆ, ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗದೇ ತೊಂದರೆ ಅನಭವಿಸಿದರು.
ಕೇವಲ ಕರ್ನಾಟಕ, ಭಾರತದಲ್ಲಿ ಮಾತ್ರ ಈ ಸಮಸ್ಯೆ ಆಗಲಿಲ್ಲ. ಪ್ರಪಂಚದಾದ್ಯಂತ ಬಳಕೆದಾರರು ಆಘಾತಕ್ಕೆ ಒಳಗಾಗಿದ್ದರು. ಕೋಟ್ಯಾಂತರ ಜನರು ಯಾವುದೇ ಸಂದೇಶಗಳನ್ನು ಕಳುಹಿಸಲಾಗದೇ ಪೇಚಿಗೆ ಸಿಲುಕಿದ್ದರು. WhatsApp ಇನ್ನೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ.
ಇದನ್ನೂ ಓದಿ:₹2025ಕ್ಕೆ ಜಿಯೋ ಆಫರ್.. ನ್ಯೂ ಇಯರ್ ವೆಲ್‌ಕಮ್ ಪ್ಲಾನ್ ಬಿಡುಗಡೆ; ಗ್ರಾಹಕರಿಗೆ ಏನು ಲಾಭ?
ಅದರಲ್ಲಿ WhatsApp ಬಳಕೆದಾರರೇ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಡಿಟೆಕ್ಟರ್ ವೆಬ್‌ಸೈಟ್ ಪ್ರಕಾರ.. ರಾತ್ರಿ 11 ಗಂಟೆಗೆ 20 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಇನ್‌ಸ್ಟಾಗ್ರಾಮ್ ವಿರುದ್ಧ ಸುಮಾರು 15 ಸಾವಿರ, ಹಾಗೂ ಫೇಸ್‌ಬುಕ್ ಬಗ್ಗೆ 2.5 ಸಾವಿರ ದೂರುಗಳು ದಾಖಲಾಗಿವೆ ಎಂದು ತಿಳಿಸಿದೆ.
ಎಕ್ಸ್ನಲ್ಲಿ ದೂರು
ರಾತ್ರಿ 11 ಗಂಟೆಯವರೆಗೂ ಮೆಟಾ ಸರ್ವರ್ ಡೌನ್ ಆಗಿದ್ದರಿಂದ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಕೆಲಸ ಸ್ಥಗಿತಗೊಳಿಸಿವೆ. X ಬಳಕೆದಾರರು ಇದರ ಬಗ್ಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದರು. ನಂತರ X ನಲ್ಲಿ ಟ್ರೆಂಡಿಂಗ್ ಶುರುವಾಗಿದೆ. ರಾತ್ರಿ 11.45ರ ಅವಧಿಗೆ WhatsApp ಹೊರತುಪಡಿಸಿ ಕ್ರಮೇಣ ಎಲ್ಲಾ ಅಪ್ಲಿಕೇಷನ್ಗಳು ಕೆಲಸ ಮಾಡಲು ಶುರುಮಾಡಿದವು.
ಇದನ್ನೂ ಓದಿ:ಒಂದು ಲಕ್ಷ ರೂಪಾಯಿ ಕೊಡಿ, ಕಾರು ತೆಗೆದುಕೊಳ್ಳಿ.. 34 ಕಿಮೀ ಮೈಲೇಜ್ ಕಾರಿನ EMI ಎಷ್ಟು?
How X treats #instagram , #Facebook and #WhatsApp when they are down.
Do you Agree ?#whatsappdown#instagramdown#facebookdown
pic.twitter.com/YfWCyFMfUC— Neetu Khandelwal (@T_Investor_) December 11, 2024
https://twitter.com/suman_pakad/status/1866932686440538395
https://twitter.com/SocialistSpirit/status/1866946749006483770
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ