/newsfirstlive-kannada/media/post_attachments/wp-content/uploads/2024/04/whatsapp-3.jpg)
ವಾಟ್ಸಪ್​​ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಪ್ಲಾಟ್​ಫಾರ್ಮ್​​. ಬಹುತೇಕ ದೇಶಗಳಲ್ಲಿ ವಾಟ್ಸಪ್​ ಬಳಸುತ್ತಿದ್ದಾರೆ. ಮಾತ್ರವಲ್ಲದೆ, ದೈನಂದಿನ ವ್ಯವಹಾರದಿಂದ ಹಿಡಿದು, ಫೋಟೋ, ವಿಡಿಯೋ, ಫೈಲ್ಸ್​​ಗಳನ್ನು ಇದರ ಮೂಲಕ ಹಂಚಿಕೊಳ್ಳಲು ಯೋಗ್ಯವಾಗಿದೆ. ಹೀಗಿರುವಾಗ ವಾಟ್ಸಪ್ ಭಾರತದಲ್ಲಿ ತನ್ನ ಬಳಕೆದಾರರಿಗೆಂದು ಹೊಸ ಫೀಚರ್​​ ಪರಿಚಯಿಸಲು ಮುಂದಾಗಿದೆ.
ಮೆಸೇಂಜರ್​ ಆ್ಯಪ್​ ವಾಟ್ಸಪ್​ ಸದಾ ನವೀಕರಣ ಜೊತೆಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುತ್ತದೆ. ಆದರೀಗ ಇನ್​ಸ್ಟಾಗ್ರಾಂನಂತೆ ಹೋಲುವ ಸಂದೇಶವನ್ನು ಎರಡು ಬಾರಿ ಟ್ಯಾಪ್​ ಮಾಡುವ ಮೂಲಕ ಪ್ರತಿಕ್ರಿಯಿಸಲು ಅನುವು ಮಾಡಿಕೊಡುವ ಹೊಸ ಫೀಚರನ್ನು ಪರಿಚಯಿಸಲು ಪ್ಲಾನ್​ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ವಾಬೇಟಾಇನ್​ಫೋ ಪ್ರಕಾರ, ನೂತನ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದ್ದು, ಮುಂದಿನ ತಿಂಗಳು ಭಾರತೀಯರಿಗೆ ಸಿಗಲಿದೆ. ಅಂದಹಾಗೆ ಈ ಫೀಚರ್ ಫೋಟೋ, ವಿಡಿಯೋ, ಜಿಫ್​ ಸೇರಿದಂತೆ ಸ್ಕ್ರೀನ್​ ಬದಲಾಯಿಸದೇ ತ್ವರಿತವಾಗಿ ಪ್ರತಿಕ್ರಿಯಿಸಬಹುದಾಗಿದೆ. ಜೊತೆಗೆ ಸಂವಹನಕ್ಕೂ ಇದು ಅನುಕೂಲಕರವಾಗಿದೆ.
/newsfirstlive-kannada/media/post_attachments/wp-content/uploads/2024/12/WhatsApp-1.jpg)
ಸಾಮಾನ್ಯವಾಗಿ ವಾಟ್ಸಪ್​ನಲ್ಲಿ ಸಂದೇಶಗಳಿಗೆ ಮರು ಪ್ರತಿಕ್ರಿಯಿಸಲು ಕೆಲವು ಸೆಕೆಂಡು ತೆಗೆದುಕೊಳ್ಳುತ್ತದೆ. ಆದರೆ ಇದರ ಮೂಲಕ ಸಂದೇಶ, ಫೈಲ್​ಗಳಿಗೆ ಸುಲಭವಾಗಿ ಪ್ರತಿಕ್ರಿಯಿಸಬಹುದಾಗಿದೆ.
ಡಬಲ್​ ಟ್ಯಾಪ್​​ ವೈಶಿಷ್ಟ್ಯವು ಸಂದೇಶಗಳಿಗೆ ವೇಗವಾಗಿ ಪ್ರತಿಕ್ರಿಯಿಸುವ ಮೂಲಕ ಬಳಕೆದಾರರ ಸಂವಹನವನ್ನು ವೇಗಗೊಳಿಸುತ್ತದೆ. ಅಂದಹಾಗೆಯೇ ವಾಟ್ಸಪ್​ ಈ ವೈಶಿಷ್ಟ್ಯವನ್ನು ಯಾವಾಗ ಪರಿಚಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಅಂದಾಜಿನ ಮೇರೆಗೆ ಮುಂಬರುವ ದಿನಗಳಲ್ಲಿ ನೂತನ ಫೀಚರ್​ ಬಳಕೆದಾರನ್ನು ಸೇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us