ವಾಟ್ಸ್ಆ್ಯಪ್ ಪರಿಚಯಿಸುತ್ತಿರುವ ಹೊಸ ಫೀಚರ್ ಏನು ಗೊತ್ತಾ?
ಇನ್ಮುಂದೆ ಸಂದೇಶಗಳಿಗೆ ರಿಯಾಕ್ಷನ್ ಮಾಡೋದು ಮತ್ತಷ್ಟು ಸುಲಭ
ಸಂದೇಶಗಳಿಗೆ ವೇಗವಾಗಿ ಸಂವಹನ ನಡೆಸಲು ಈ ಫೀಚರ್ ತರಲಾಗುತ್ತಿದ್ಯಾ?
ವಾಟ್ಸ್ಆ್ಯಪ್ ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಪ್ಲಾಟ್ಫಾರ್ಮ್. ಬಹುತೇಕ ದೇಶಗಳಲ್ಲಿ ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ. ಮಾತ್ರವಲ್ಲದೆ, ದೈನಂದಿನ ವ್ಯವಹಾರದಿಂದ ಹಿಡಿದು, ಫೋಟೋ, ವಿಡಿಯೋ, ಫೈಲ್ಸ್ಗಳನ್ನು ಇದರ ಮೂಲಕ ಹಂಚಿಕೊಳ್ಳಲು ಯೋಗ್ಯವಾಗಿದೆ. ಹೀಗಿರುವಾಗ ವಾಟ್ಸ್ಆ್ಯಪ್ ಭಾರತದಲ್ಲಿ ತನ್ನ ಬಳಕೆದಾರರಿಗೆಂದು ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ಅದೇನು ಗೊತ್ತಾ? ಈ ಸ್ಟೋರಿ ಓದಿ.
ವಾಟ್ಸ್ಆ್ಯಪ್ ಸದಾ ನವೀಕರಣ ಜೊತೆಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುತ್ತದೆ. ಆದರೀಗ ಇನ್ಸ್ಟಾಗ್ರಾಂನಂತೆ ಹೋಲುವ ಸಂದೇಶವನ್ನು ಎರಡು ಬಾರಿ ಟ್ಯಾಪ್ ಮಾಡುವ ಮೂಲಕ ಪ್ರತಿಕ್ರಿಯಿಸಲು ಅನುವು ಮಾಡಿಕೊಡುವ ಹೊಸ ಫೀಚರನ್ನು ಪರಿಚಯಿಸಲು ಮುಂದಾಗಿದೆ.
ಇದನ್ನೂ ಓದಿ: ಹೊಸ ಅಡ್ವೆಂಚರ್ ಮಾದರಿಯನ್ನು ಪರಿಚಯಿಸಿದ ಜಾವ ಯೆಜ್ಡಿ! ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?
ವಾಬೇಟಾಇನ್ಫೋ ಪ್ರಕಾರ, ನೂತನ ವೈಶಿಷ್ಟ್ಯವು ಪರೀಕ್ಷಾ ಹಂತದಲ್ಲಿದ್ದು, ಮುಂಬರುವ ತಿಂಗಳು ಭಾರತೀಯರಿಗೆ ಸಿಗಲಿದೆ. ಅಂದಹಾಗೆಯೇ ಈ ಫೀಚರ್ ಫೋಟೋ, ವಿಡಿಯೋ, ಜಿಫ್ ಸೇರಿದಂತೆ ಸ್ಕ್ರೀನ್ ಬದಲಾಯಿಸದೇ ತ್ವರಿತವಾಗಿ ಪ್ರತಿಕ್ರಿಯಿಸಬಹುದಾಗಿದೆ. ಜೊತೆಗೆ ಸಂವಹನಕ್ಕೂ ಇದು ಅನುಕೂಲಕರವಾಗಿದೆ.
ಇದನ್ನೂ ಓದಿ: ವಯನಾಡು ಭೂಕುಸಿತ ಪ್ರದೇಶದಲ್ಲಿ ಕಳ್ಳರ ಕಾಟ! ನೊಂದ ಜೀವಗಳಿಗೆ ಶುರುವಾಗಿದೆ ಮತ್ತೊಂದು ಟೆನ್ಶನ್
ಸಾಮಾನ್ಯವಾಗಿ ವಾಟ್ಸ್ಆ್ಯಪ್ನಲ್ಲಿ ಸಂದೇಶಗಳಿಗೆ ಮರು ಪ್ರತಿಕ್ರಿಯಿಸಲು ಕೆಲವು ಸೆಕೆಂಡು ತೆಗೆದುಕೊಳ್ಳುತ್ತದೆ. ಆದರೆ ಇದರ ಮೂಲಕ ಸಂದೇಶ, ಫೈಲ್ಗಳಿಗೆ ಸುಲಭವಾಗಿ ಪ್ರತಿಕ್ರಿಯಿಸಬಹುದಾಗಿದೆ.
ಡಬಲ್ ಟ್ಯಾಪ್ ವೈಶಿಷ್ಟ್ಯವು ಸಂದೇಶಗಳಿಗೆ ವೇಗವಾಗಿ ಪ್ರತಿಕ್ರಿಯಿಸುವ ಮೂಲಕ ಬಳಕೆದಾರರ ಸಂವಹನವನ್ನು ವೇಗಗೊಳಿಸುತ್ತದೆ. ಅಂದಹಾಗೆಯೇ ವಾಟ್ಸ್ಆ್ಯಪ್ ಈ ವೈಶಿಷ್ಟ್ಯವನ್ನು ಯಾವಾಗ ಪರಿಚಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಅಂದಾಜಿನ ಮೇರೆಗೆ ಮುಂಬರುವ ದಿನಗಳಲ್ಲಿ ನೂತನ ಫೀಚರ್ ಬಳಕೆದಾರನ್ನು ಸೇರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ