/newsfirstlive-kannada/media/post_attachments/wp-content/uploads/2024/04/Whatsapp-1.jpg)
ಮೆಟಾ ಒಡೆತನದ ವಾಟ್ಸ್​ಆ್ಯಪ್​ ಸದಾ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಲೇ ಇರುತ್ತದೆ. ಅದರಂತೆ ಈಗ ತನ್ನ ಬಳಕೆದಾರರಿಗೆ ಹಳೆಯ ಚಾಟ್​​ಗಳನ್ನು ಸುಲಭವಾಗಿ ಹುಡುಕಲು ಅನುವು ಮಾಡಿಕೊಡುವ ಫೀಚರ್​​ ಪರಿಚಯಿಸಲು ಮುಂದಾಗಿದೆ. ನೂತನ ವೈಶಿಷ್ಟ್ಯಕ್ಕೆ ಚಾಟ್​​ ಫಿಲ್ಟರ್​ ಎಂದು ಹೆಸರಿಡಲು ಮುಂದಾಗಿದೆ.
ವಾಟ್ಸ್​​ಆ್ಯಪ್​ ಚಾಟ್​​ ಫಿಲ್ಟರ್​ ಮುಂದಿನ ದಿನಗಳಲ್ಲಿ ಪರಿಚಯಿಸಲಿದೆ. ಇದನ್ನು ಗೂಗಲ್​ ಪ್ಲೇ ಸ್ಟೋರ್​​ ಮೂಲಕ ಅಪ್ಡೇಟ್​​ ಮಾಡಿಕೊಳ್ಳಬಹುದಾಗಿದೆ. ಹೊಸ ವೈಶಿಷ್ಟ್ಯದಿಂದ ಬಳಕೆದಾರರಿಗೆ ನಿರ್ದಿಷ್ಟ ಚಾಟ್​​​ ಮತ್ತು ಸಂಪರ್ಕವನ್ನು ಸುಲಭವಾಗಿ ಸಾಧಿಸಲು ಅನುಮತಿಸುತ್ತದೆ.
/newsfirstlive-kannada/media/post_attachments/wp-content/uploads/2024/04/Whatsapp-2.jpg)
ಏನಿದು ಚಾಟ್​​ ಫಿಲ್ಟರ್​?
ವಾಟ್ಸ್​ಆ್ಯಪ್​​ ಅಭಿವೃದ್ಧಿ ಪಡಿಸುತ್ತಿರುವ ಹೊಸ ಚಾಟ್​​ ಫಿಲ್ಟರ್​​ ಹಳೆಯ ಚಾಟ್​​ಗಳನ್ನು ಹುಡುಕುವ ಪ್ರಕ್ರಿಯೆಯನ್ನು ಏಕರೂಪವಾಗಿ ವಿನ್ಯಾಸಗೊಳಿಸಿದೆ ಎಂದು ಹೇಳಲಾಗುತ್ತಿದೆ. ಬಳಕೆದಾರರು ತಮಗೆ ಬೇಕೆನಿಸಿದ ಹಳೆಯ ಚಾಟ್​​ಗಳನ್ನು ನೋಡಲು ಕಸ್ಟಮ್​​ ಫಿಲ್ಟರ್​ ಮಾಡಬಹುದಾಗಿದೆ.
ವಾಟ್ಸ್​ಆ್ಯಪ್​​ ಬಳಕೆದಾರರ ಅನುಭವವನ್ನು ಸುಧಾರಿಸುವ ಉದ್ದೇಶದಿಂದ ಹೊಸ ಹೊಸ ಫೀಚರ್​ ಪರಿಚಯಿಸುತ್ತಿರುತ್ತದೆ. ಇತ್ತೀಚೆಗೆ ವಾಟ್ಸ್​ಆ್ಯಪ್​​ ಮೆಟಾ AIಗಾಗಿ ಧ್ವನಿ ಚಾಟ್​​​ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದರ ಮೂಲಕ ಹೊಸ ಚಾಟ್​​ ಥೀಮ್​, ಸುಧಾರಿತ ವಿಡಿಯೋ ಕರೆ, ಅಪರಿಚಿತ ಸಂಪರ್ಕ ನಿರ್ಬಂಧನೆ ಮತ್ತು ಹೊಸ ಭದ್ರತಾ ನವೀಕರಗಳನ್ನು ಒಳಗೊಂಡಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us