ಆಫ್​​ಲೈನ್​​ನಲ್ಲೂ ಫೋಟೋ, ವಿಡಿಯೋ ಶೇರ್​ ಮಾಡೋ ಫೀಚರ್​​; ವಾಟ್ಸಪ್​​ ಬಳಕೆದಾರರಿಗೆ ಗುಡ್​ನ್ಯೂಸ್​​

author-image
Ganesh Nachikethu
Updated On
ಅಬ್ಬಬ್ಬಾ! ಇನ್ಮುಂದೆ ವಾಟ್ಸ್​ಆ್ಯಪ್​​ನಲ್ಲಿ ಇಡೀ ಜಗತ್ತನ್ನೇ ಕಾಣಬಹುದು! ಏನಿದು ಹೊಸ ಫೀಚರ್​​?
Advertisment
  • ಆಫ್​ಲೈನ್​ ಮೋಡ್​ನಲ್ಲಿ ಕಾರ್ಯ ನಿರ್ವಹಿಸಲಿದೆ ವಾಟ್ಸಪ್!
  • ಇಂಟರ್​ನೆಟ್​ ಇಲ್ಲದೆ ಫೋಟೋ, ವಿಡಿಯೋ ಹಂಚುವ ಫೀಚರ್​
  • ನೂತನ ಫೀಚರ್​ ಮೇಲೆ ಕೆಲಸ ಮಾಡುತ್ತಿದೆ ಮೆಟಾ ಒಡೆತನದ ಆ್ಯಪ್​

ಜನಪ್ರಿಯ ವಾಟ್ಸಪ್​ ಈ ಮೊದಲು 2GB ಫೈಲ್​ ಹಂಚುವ ಹೊಸ ಫೀಚರ್​ ಪರಿಚಯಿಸಿತ್ತು. ಆದರೀಗ ಮೆಟಾ ಒಡೆತನದ ಈ ಅಪ್ಲಿಕೇಶನ್​ ಇಂಟರ್​ನೆಟ್​ ಇಲ್ಲದೆ ಫೈಲ್​ ಅಥವಾ ಫೋಟೋ ಶೇರ್​ ಮಾಡುವ ಆಯ್ಕೆಯನ್ನು ಸದ್ಯದಲ್ಲೇ ಪರಿಚಯಿಸಲಿದೆ ಎಂದು ವರದಿಯಾಗಿದೆ.

ಅಚ್ಚರಿ ಸಂಗತಿ ಎಂದರೆ ಆಫ್​ಲೈನ್​ ಮೋಡ್​ನಲ್ಲಿ ಫೈಲ್​ ಹಂಚುವ ಆಯ್ಕೆಯನ್ನು ಪರಿಚಯಿಸಲಿದೆ ಎಂಬ ಸುದ್ದಿ. ಅದಕ್ಕಾಗಿ ಬ್ಲೂಟೂತ್​ ಸಹಾಯ ಪಡೆಯಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ ವಾಟ್ಸಪ್​ ​ಆಫ್​ಲೈನ್​ನಲ್ಲಿ ಫೋಟೋ ಹಂಚುವ ಫೀಚರ್​ ಬಗ್ಗೆ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ. ಅದರೊಂದಿಗೆ ಬೀಟಾ ಆವೃತ್ತಿಯೊಂದಿಗೆ ನೂತನ ಫೀಚರ್​ ಅನ್ನು ಪರೀಕ್ಷಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

publive-image

ಏನಿದು ಹೊಸ ಫೀಚರ್​​?

ಅಂದಹಾಗೆ ಆಫ್​ಲೈನ್​ ಮೋಡ್​ನಲ್ಲಿ ಫೈಲ್​ ಹಂಚಿಕೊಳ್ಳುವ ಹೊಸ ಫೀಚರ್​ ವಾಟ್ಸಪ್​​ನಲ್ಲಿ ಗೋಚರಿಸಲಿದೆಯಂತೆ. ಇದರ ಮೂಲಕ ಗ್ಯಾಲರಿಯಲ್ಲಿರುವ ಫೋಟೋ, ವಿಡಿಯೋ ಅಥವಾ ಫೈಲ್​ ಹಂಚಿಕೊಳ್ಳಬಹುದಾಗಿದೆ. ಇನ್ನು ಈ ಫೀಚರ್​ ಬೇಡವಾದರೆ ನಿಷ್ಕ್ರೀಯಗೊಳಿಸಬಹುದಾದ ಆಯ್ಕೆ ವಾಟ್ಸಪ್​ ​ನೀಡಲಿದೆಯಂತೆ.

ಇಷ್ಟು ದಿನ ವಾಟ್ಸಪ್​ ​ಇಂಟರ್​ನೆಟ್​ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅದರ ಮೂಲಕ ಫೋಟೋ, ವಿಡಿಯೋ, ಫೈಲ್​ಗಳನ್ನು ಕಳುಹಿಸಲಾಗುತ್ತಿತ್ತು. ಆದರೆ ಇದೀಗ ಇಂಟರ್​ನೆಟ್​ ಇಲ್ಲದೆಯೇ ಅಥವಾ ಆಫ್​ಲೈನ್​ ಮೋಡ್​ನಲ್ಲಿ ಫೈಲ್​ ಕಳುಹಿಸಲು ಸಾಧ್ಯವಾಗುವುದನ್ನು ಕಾಣಲು ಬಳಕೆದಾರರು ಕಾದುಕುಳಿತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment