ಸದ್ಯದಲ್ಲೇ ವಾಟ್ಸಾಪ್, Instagramಗೆ ಎಐ ಚಾಟ್ಬಾಟ್ ಸೇವೆ
ಮೆಟಾ AI ಶೀಘ್ರದಲ್ಲೇ ಎಲ್ಲ ವಾಟ್ಸ್ಆ್ಯಪ್ ಬಳಕೆದಾರರಿಗೆ ಲಭ್ಯ
ಗೂಗಲ್ ಫೋಟೋ ಅಪ್ಲಿಕೇಶನ್ಗೂ ಎಐ ಚಾಲಿತ ಫೀಚರ್..!
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್. ಸದ್ಯ ವಾಟ್ಸ್ಆ್ಯಪ್ನಲ್ಲಿ ದಿನಕ್ಕೊಂದು ಹೊಸ ಫೀಚರ್ ನೀಡಲಾಗುತ್ತಿದೆ. ಅದರಲ್ಲೂ ಈಗ ವಾಟ್ಸ್ಆ್ಯಪ್ ತನ್ನ ಯೂಸರ್ಸ್ಗೆ ಮತ್ತೊಂದು ವಿಶೇಷ ಫೀಚರ್ ಕೊಟ್ಟಿದೆ. ಅದು ಪ್ರತಿ ದಿನ ಸಿಗುವ ಒಂದು ಎಐ ಫೀಚರ್ ಆಗಿದೆ. ಈಗಾಗ್ಲೇ ಕೆಲವರಿಗೆ ಈ ಫೀಚರ್ ಸಿಕ್ಕಿದ್ದು, ಕೆಲವರಿಗೆ ಮುಂಬರುವ ದಿನಗಳಲ್ಲಿ ಗೊತ್ತಾಗಬಹುದು.
ಇತ್ತೀಚೆಗೆ ಜನ ಹೆಚ್ಚಾಗಿ ಟೈಮ್ ಸ್ಪೆಂಡ್ ಮಾಡೋದು ಅಂದ್ರೆ ಅದು ವಾಟ್ಸ್ ಆ್ಯಪ್ನಲ್ಲಿ.. ಇದನ್ನೇ ಎನ್ಕ್ಯಾಶ್ ಮಾಡಿಕೊಂಡಿರೋ ಮೆಟಾ, ಮೆಟಾ ಎ ಐ ಅನ್ನೋ ಹೊಸದೊಂದು ಫೀಚರ್ನ ಪರಿಚಯಿಸಿದ್ದಾರೆ. ಇದು ವರ್ಚ್ಯುಯಲ್ ಅಸಿಸ್ಟೆಂಟ್ ಆಗಿದ್ದು, ಬಳಕೆದಾರರು ಕೇಳಿದ ಪ್ರಶ್ನೆಗೆ ಮಾಹಿತಿ ನೀಡುತ್ತದೆ.
ಅದು ಎಷ್ಟರಮಟ್ಟಿಗೆ ಅಂದ್ರೆ ನೀವು ಯಾರೋ ಸ್ನೇಹಿತರ ಜೊತೆ ಚಾಟ್ ಮಾಡುತ್ತಿದ್ದೀರಿ ಎಂದು ಭಾಸವಾಗುತ್ತದೆ. ಯಾವುದೇ ಪ್ರಶ್ನೆ ಕೇಳಿ.. ಸಾಮಾನ್ಯ ಜ್ಞಾನ, ಕ್ರೀಡೆ, ಸಿನಿಮಾ ಹೀಗೆ ಯಾವುದೇ ಕ್ಷೇತ್ರದ ಬಗ್ಗೆ ಪ್ರಶ್ನೆ ಕೇಳಿದ್ರೂ ಕ್ಷಣಾರ್ಧದಲ್ಲಿ ಬಹುತೇಕ ಸರಿಯಾದ ಉತ್ತರವನ್ನೇ ಕೊಡುತ್ತದೆ.
ಬರೀ ಪ್ರಶ್ನೆಗೆ ಉತ್ತರವಷ್ಟೇ ಅಲ್ಲದೇ ನಾವು ಸ್ಕ್ರೀನ್ ಮೇಲೆ ತೋರಿಸಿದಂತೆ ಸಂದರ್ಭವನ್ನು ವಿವರಿಸಿದ್ರೆ ಅದಕ್ಕೆ ಹೊಂದುವಂತ ಫೋಟೋ ಕೂಡ ಒದಗಿಸುತ್ತದೆ. ಸದ್ಯ ಈ ಫೀಚರ್ ವಾಟ್ಸ್ ಆ್ಯಪ್ನ ಎಲ್ಲಾ ಬಳಕೆದಾರರಿಗೂ ಲಭ್ಯವಿಲ್ಲ.. ಕೆಲ ಆಯ್ದ ಬಳಕೆದಾರರಿಗೆ ಈ ಮಾತ್ರ ಈ ವಿಶೇಷ ಸೌಲಭ್ಯ ಲಭ್ಯವಿದೆ.
2022ರಲ್ಲಿ ಆರಂಭವಾದ ಮೆಟಾ ಎ ಐ ಸದ್ಯ ಭಾರತದಲ್ಲೂ ಕೆಲ ಬಳಕೆದಾರನ್ನು ರೀಚ್ ಆಗಿದೆ. ಜೊತೆಗೆ ಬಳಕೆದಾರರ ಮನ ಗೆಲ್ಲುವಲ್ಲಿ ಯಶಸ್ವಿ ಕೂಡ ಆಗಿದೆ. ಇನ್ನೂ ಸಂತೋಷದ ವಿಚಾರ ಏನಂದ್ರೆ ಮೆಟಾ ಎ ಐ ಗೆ ನನ್ನಂತೆ ಕನ್ನಡ ಚೆನ್ನಾಗಿಯೇ ಬರುತ್ತದೆ. ನಾವು ಹೇಳಿದ ಹಾಗೇ ಇದು ಕೆಲ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಟ್ರಯಲ್ ಹಂತದಲ್ಲಿರೋ ಈ ಫೀಚರ್ ಆದಷ್ಟು ಬೇಗ ನಿಮ್ ವಾಟ್ಸ್ ಆ್ಯಪ್ ಅಕೌಂಟ್ಗೂ ಬರುತ್ತೆ. ಈ ಸೇವೆಯನ್ನು ನೀವು ಕೂಡ ಅನುಭವಿಸಿದ ಆನಂದಿಸಬಹುದು.
ಇದನ್ನೂ ಓದಿ: ಟಾಸ್ ಗೆದ್ದ ಆರ್ಸಿಬಿ ಕ್ಯಾಪ್ಟನ್ ಫಾಫ್ ಮತ್ತೆ ತಪ್ಪು ಮಾಡಿದ್ರಾ? ಆ ನಿರ್ಧಾರ ಎಷ್ಟು ಸರಿ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್