/newsfirstlive-kannada/media/post_attachments/wp-content/uploads/2024/04/whatsapp-3.jpg)
ವಾಟ್ಸ್ಆ್ಯಪ್ ಬಳಸುತ್ತಿದ್ದೀರಾ?. ಹಾಗಿದ್ರೆ ನಿಮಗೊಂದು ಖುಷಿಯ ಸಂಗತಿ ಇಲ್ಲಿದೆ. ಮೆಟಾ ಒಡೆತನದ ವಾಟ್ಸ್ಆ್ಯಪ್ ಸದಾ ಒಂದಲ್ಲಾ ಒಂದು ಫೀಚರ್ಸ್ ಪರಿಚಯಿಸುತ್ತಲೇ ಇರುತ್ತದೆ. ಅದರಂತೆಯೇ ಇದೀಗ ಬಳಕೆದಾರರಿಗೆ ಸಂತಸ ನೀಡುವ ಹೊಸ ಫೀಚರ್ಸನ್ನು ಶೀಘ್ರದಲ್ಲೇ ಪರಿಚಯಿಸಲಿದೆಯಂತೆ. ಹಾಗಿದ್ರೆ ಆ ನ್ಯೂ ಫೀಚರ್ ಏನದು?. ಈ ಸ್ಟೋರಿ ಓದಿ.
ವಾಟ್ಸ್ಆ್ಯಪ್ ವಿವಿಧ ಭಾಷೆಗಳನ್ನು ಸುಲಭವಾಗಿ ಭಾಷಾಂತರಿಸುವ ಅತ್ಯಾಧುನಿಕ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಇಂಗ್ಲಿಷ್, ರಷ್ಯಾ, ಸ್ಪ್ಯಾನಿಷ್, ಹಿಂದಿ, ಪೋರ್ಚುಗೀಸ್ ಸೇರಿದಂತೆ ಅನೇಕ ಭಾಷೆಯನ್ನು ಟ್ರಾನ್ಸ್ಲೇಟ್ ಮಾಡುವ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅದಕ್ಕಾಗಿ ವಾಟ್ಸ್ಆ್ಯಪ್ ಬಳಕೆದಾರರು ಭಾಷಾ ಪ್ಯಾಕ್ ಅನ್ನು ಡೌನ್ಲೋಡ್ ಮಾಡಬೇಕಿದೆ.
? WhatsApp beta for Android 2.24.15.9: what's new?
WhatsApp is working on a feature to translate all chat messages, and it will be available in a future update!https://t.co/Nz2qabck6Kpic.twitter.com/EPD9DRPyo1
— WABetaInfo (@WABetaInfo)
📝 WhatsApp beta for Android 2.24.15.9: what's new?
WhatsApp is working on a feature to translate all chat messages, and it will be available in a future update!https://t.co/Nz2qabck6Kpic.twitter.com/EPD9DRPyo1— WABetaInfo (@WABetaInfo) July 12, 2024
">July 12, 2024
ಇದನ್ನೂ ಓದಿ: ನಂಬಿದ್ರೆ ನಂಬಿ.. ಸತ್ತವರನ್ನು ಬದುಕಿಸುತ್ತಂತೆ ಈ ಕಂಪನಿ!
ಪ್ರಾರಂಭದಲ್ಲಿ ಭಾರತೀಯ ಬಳಕೆದಾರರಿಗೆ ಇಂಗ್ಲಿಷ್, ಹಿಂದಿ ಭಾಷೆಗಳನ್ನು ಭಾಷಾಂತರಿಸುವ ಆಯ್ಕೆ ಸಿಗಲಿದೆ. ಆದರೆ ಭವಿಷ್ಯದಲ್ಲಿ ಸ್ಥಳೀಯ ಭಾಷೆಗಳನ್ನು ವ್ಯಾಟ್ಸ್ಆ್ಯಪ್ ಅನ್ನು ಸೇರಲಿದೆ ಎನ್ನಲಾಗುತ್ತಿದೆ. ಅಪ್ಲಿಕೇಶನ್ ಬಳಸುತ್ತಿರುವಾಗಲೇ ಸಂದೇಶಗಳನ್ನು ಭಾಷಾಂತರಿಸಲು ಇದು ಅನುವು ಮಾಡಿಕೊಡುತ್ತದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಇದ್ದಕ್ಕಿದ್ದಂತೆಯೇ ಕುಸಿದ 2 ಅಂತಸ್ತಿನ ಶಾಲೆ.. 22 ಸಾವು, 132 ವಿದ್ಯಾರ್ಥಿಗಳ ರಕ್ಷಣೆ
ಪ್ರಸ್ತುತ ನೂತನ ಫೀಚರ್ ಆ್ಯಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ನವೀಕರಣ ಆವೃತ್ತಿ 2.24.15.8ನಲ್ಲಿ ಮಾತ್ರ ಕಂಡುಬರುತ್ತದೆ. ಸದ್ಯದಲ್ಲೇ ಹೊಸ ಫೀಚರ್ ಎಲ್ಲರಿಗೂ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ