/newsfirstlive-kannada/media/post_attachments/wp-content/uploads/2024/04/Whatsapp-2.jpg)
ಜನಪ್ರಿಯ ಮೆಟಾ ಒಡೆತನದ ವಾಟ್ಸಪ್​​ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಸದ್ಯದಲ್ಲೇ ಸ್ಟೇಟಸ್ ಅವಧಿಯನ್ನ 2 ನಿಮಿಷಕ್ಕೆ ಏರಿಕೆ ಮಾಡಲು ಮುಂದಾಗಿದೆ.
ಇಡೀ ಜಗತ್ತಿನಾದ್ಯಂತ ಬಹುತೇಕರು ಬಳಸೋ ಏಕೈಕ ಮೆಸೇಜಿಂಗ್​ ಆ್ಯಪ್​ ವಾಟ್ಸಪ್​​. ಇದು ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ಕೂಡ ಹೌದು. ಅದರೀಗ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಾಟ್ಸಪ್​​ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತರಲಿದೆ. ಅದರಂತೆ ಸ್ಟೇಟಸ್​ ವಿಡಿಯೋ ಮಿತಿಯನ್ನು ಏರಿಕೆ ಮಾಡಲು ಹೊರಟಿದೆ.
ದೀರ್ಘಾವಧಿ ವಿಡಿಯೋ ಹಂಚಿಕೆ
ಈಗಾಗಲೇ ವಾಟ್ಸಪ್​ ಬಳಸುವವರು 1 ನಿಮಿಷ ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್​ ಮಾಡಬಹುದಾಗಿದೆ. ಇದು ಸದ್ಯದಲ್ಲೇ 2 ನಿಮಿಷ ಆಗಲಿದ್ದು, ಆಗ ದೀರ್ಘಾವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ.
ಅಂದಹಾಗೆ ವಾಟ್ಸ್​ಆ್ಯಪ್​ನಲ್ಲಿ​ ಮೊದಲು 30 ಸೆಕೆಂಡ್‌ಗಳ ವಿಡಿಯೋವನ್ನು ಸ್ಟೇಟಸ್ ಹಾಕಿಕೊಳ್ಳಬಹುದಾಗಿತ್ತು. ಬಳಿಕ ಇದರ ಅವಧಿಯನ್ನು 1 ನಿಮಿಷಕ್ಕೆ ಹೆಚ್ಚಿಸಲಾಯ್ತು. ಈಗ ಮುಂದಿನ ದಿನಗಳಲ್ಲಿ ಇದರ ಅವಧಿಯನ್ನು 2 ನಿಮಿಷಕ್ಕೆ ಏರಿಕೆ ಮಾಡಲಿದ್ದಾರೆ. ಆಗ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಮೊಬೈಲ್​ ಸಾಫ್ಟ್​ವೇರ್​ ಅಪ್ಡೇಟ್​ ಮಾಡಿಕೊಂಡು ಬಳಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us