/newsfirstlive-kannada/media/post_attachments/wp-content/uploads/2024/04/whatsapp-3.jpg)
ದಿನ ನಿತ್ಯದ ಜೀವನದಲ್ಲಿ Whatsapp ಬದುಕಿನ ಪ್ರಮುಖ ಭಾಗವಾಗಿಬಿಟ್ಟಿದೆ. ಅದು ನಮ್ಮನ್ನ ಪ್ರತಿದಿನ ಚಾಟಿಂಗ್, ವಿಡಿಯೋ, ಫೋಟೋಗಳಲ್ಲಿ ಬ್ಯುಸಿ ಆಗಿಡುತ್ತದೆ. ನಿಮಗೆ ಇದು ಗೊತ್ತಿರಲಿ. ವಾಟ್ಸ್ಆ್ಯಪ್ ದುರುಪಯೋಗಪಡಿಸಿಕೊಂಡರೆ ನೀವು ಜೈಲಿಗೂ ಹೋಗಬಹುದು. ಹುಷಾರಾಗಿರಿ!
ಏನ್ ಮಾಡಿದ್ರೆ ಜೈಲು ಶಿಕ್ಷೆ..?
ಆಕ್ಷೇಪಾರ್ಹ ವಿಷಯ: WhatsApp ನಲ್ಲಿ ಅಶ್ಲೀಲ, ಹಿಂಸಾತ್ಮಕ ಅಥವಾ ಧರ್ಮದ ಕುರಿತ ಆಕ್ಷೇಪಾರ್ಹ ವಿಷಯವನ್ನು ಕಳುಹಿಸುವುದು ಕಾನೂನಿನ ಪ್ರಕಾರ ಅಪರಾಧ. ಐಟಿ ಆಕ್ಟ್-2000 ರ ಸೆಕ್ಷನ್ 67ರ ಪ್ರಕಾರ ಜೈಲು ಶಿಕ್ಷೆ ಮತ್ತು ದಂಡ ಬೀಳಲಿದೆ.
ಸುಳ್ಳು ಸುದ್ದಿ: ಗ್ರೂಪ್‌ಗಳಲ್ಲಿ ಸುಳ್ಳು ಸುದ್ದಿ ಕಳುಹಿಸುವುದು ಮತ್ತು ವದಂತಿ ಹರಡುವುದು ಅಪರಾಧ. ಸಮಾಜದಲ್ಲಿ ಅಶಾಂತಿ ಹರಡುತ್ತದೆ. ಐಪಿಸಿ ಸೆಕ್ಷನ್ 505 ರ ಪ್ರಕಾರ ವದಂತಿಗಳನ್ನು ಹರಡುವ ವ್ಯಕ್ತಿಗೆ ಜೈಲು ಶಿಕ್ಷೆ ಆಗಲಿದೆ.
ಇದನ್ನೂ ಓದಿ:ಫೋನ್ ಪದೇ ಪದೆ ಬಿಸಿ ಆಗಲು ಕಾರಣ ನೀವೇ.. ಈ ತಪ್ಪುಗಳನ್ನು ಮಾಡಲೇಬೇಡಿ..!
ಬೆದರಿಕೆಗಳು: WhatsApp ನಲ್ಲಿ ಯಾರಿಗಾದರೂ ಬೆದರಿಕೆ ಅಥವಾ ಬೆದರಿಕೆ ಸಂದೇಶ ಕಳುಹಿಸುವುದು ಅಪರಾಧ. ಐಪಿಸಿ ಸೆಕ್ಷನ್ 503ರ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಶಿಕ್ಷೆಗೆ ಅವಕಾಶ ಇದೆ.
ದ್ವೇಷ ಹರಡುವುದು: WhatsApp ನಲ್ಲಿ ಜನಾಂಗೀಯ, ಧಾರ್ಮಿಕ ಅಥವಾ ಸಾಮಾಜಿಕ ದ್ವೇಷವನ್ನು ಹರಡುವ ಸಂದೇಶ ಕಳುಹಿಸಿದ್ರೆ ಶಿಕ್ಷೆ ಗ್ಯಾರಂಟಿ.
ಮಕ್ಕಳ ಕುರಿತ ವಿಚಾರ: ಯಾವುದೇ ಮಕ್ಕಳ ಲೈಂಗಿಕ ನಿಂದನೆಯ ವಿಷಯವನ್ನು WhatsApp ನಲ್ಲಿ ಹಂಚಿಕೊಳ್ಳುವಂತಿಲ್ಲ. ಇದು ಕಾನೂನು ಬಾಹಿರ. ಪೋಕ್ಸೊ ಕಾಯ್ದೆಯಡಿ ಶಿಕ್ಷೆ ಆಗಲಿದೆ.
ಸರ್ಕಾರಿ ದಾಖಲೆಗಳ ನಕಲಿ: ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ನಂತಹ ಸರ್ಕಾರಿ ದಾಖಲೆಗಳ ನಕಲು ಪ್ರತಿಗಳನ್ನು ಮಾಡುವುದು ಅಥವಾ ಅವುಗಳನ್ನು ಹಂಚಿಕೊಳ್ಳುವುದು ಅಪರಾಧ.
ತಪ್ಪಿಸುವುದು ಹೇಗೆ?
- ಯಾವುದೇ ಸಂದೇಶ ಫಾರ್ವರ್ಡ್ ಮಾಡುವ ಮೊದಲು ಸತ್ಯಾಸತ್ಯತೆ ತಿಳಿಯಿರಿ
- ಸೂಕ್ಷ್ಮ ವಿಷಯಗಳ ಕುರಿತು ಯಾವುದೇ ವಿಷಯವನ್ನು ಹಂಚಿಕೊಳ್ಳಬೇಡಿ
- WhatsApp ಗ್ರೂಪ್ನಲ್ಲಿ ಪೋಸ್ಟ್ ಮಾಡಲಾದ ವಿಷಯವನ್ನು ಮೇಲ್ವಿಚಾರಣೆ ಮಾಡಿ
WhatsApp ಉತ್ತಮ ಸಂವಹನ ಮಾಧ್ಯಮವಾಗಿದೆ. ಅದರ ದುರುಪಯೋಗ ದುಬಾರಿಯಾಗಿದೆ. ಅದನ್ನು ಜವಾಬ್ದಾರಿಯುತವಾಗಿ ಬಳಸಿ. ಜೈಲಿಗೆ ಹಾಗಲು ಕಾರಣರಾಗಬೇಡಿ.
ಇದನ್ನೂ ಓದಿ:ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ಆಯ್ಕೆ; ಯಾರು ಇವರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ