Advertisment

ಭಾಷೆ ಇನ್ಮುಂದೆ ಅಡ್ಡಿ ಆಗಲ್ಲ; WhatsAppನಿಂದ ಬಳಕೆದಾರರಿಗೆ ಗುಡ್​​ನ್ಯೂಸ್​..!

author-image
Ganesh
Updated On
Whatsapp ನಲ್ಲಿ ಅಪ್ಪಿ ತಪ್ಪಿಯೂ ಹೀಗೆ ಮಾಡಿಬಿಟ್ರೆ ಜೈಲು ಶಿಕ್ಷೆ ಆಗುತ್ತೆ; ಇರಲಿ ಎಚ್ಚರ!
Advertisment
  • ಮೆಟಾದಿಂದ WhatsApp ಬಗ್ಗೆ ಮಹತ್ವದ ಘೋಷಣೆ
  • ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್​ ಪರಿಚಯ
  • ಮತ್ತಷ್ಟು ಅಪ್​ಡೇಟ್​ ಆಗ್ತಿದೆ ನಿಮ್ಮ ನೆಚ್ಚಿನ ವಾಟ್ಸ್​ಆ್ಯಪ್

ಮೆಟಾ ಕಂಪನಿಯ WhatsApp ಅಪ್ಲಿಕೇಶನ್ ವಿಶ್ವದಾದ್ಯಂತ ಬಳಸುತ್ತಾರೆ. ಭಾರೀ ಜನಪ್ರಿಯತೆ ಪಡೆದುಕೊಂಡಿರುವ ಈ ​ಆ್ಯಪ್​​ಗೆ ಮೆಟಾ ಆಗಾಗ ಹೊಸ ಟಚ್ ಕೊಡುತ್ತದೆ. ಬಳಕೆದಾರರ ಅನುಕೂಲಕ್ಕಾಗಿ ಅನೇಕ ಹೊಸ ವೈಶಿಷ್ಟ್ಯಗಳನ್ನು ಈಗಾಗಲೇ ಪರಿಚಯಿಸಿದೆ.

Advertisment

ಶೀಘ್ರದಲ್ಲಿಯೇ ಕ್ವಿಕ್ ಟ್ರಾನ್ಸ್​ಲೇಷನ್ (Quick translation) ಎಂಬ ಹೊಸ ಫೀಚರ್ ಪರಿಚಯಿಸುವುದಾಗಿ ಮೆಟಾ ಪ್ರಕಟಿಸಿದೆ. ಈ ಹೊಸ ಫೀಚರ್ ಕೋಟ್ಯಾಂತರ ಬಳಕೆದಾರರಿಗೆ ಅನುಕೂಲ ಆಗಲಿದೆ.

ಫೀಚರ್ಸ್​ ಏನೇನು..?
WhatsAppನಲ್ಲಿ ಚಾಟ್ ಮಾಡುವಾಗ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ವಾಟ್ಸ್ ಆ್ಯಪ್​ ಮೂಲಕ ಟೈಪ್, ಆಡಿಯೋ, ಆಡಿಯೋ ಕಾಲ್, ವಿಡಿಯೋ ಕಾಲ್ ಮೂಲಕ ಸಂದೇಶ ಕಳುಹಿಸಬಹುದು. ಅದಕ್ಕೆ ಭಾಷೆ ಪ್ರಮುಖ ಅಂಶ. ಇಂಥ ಪರಿಸ್ಥಿತಿಯಲ್ಲಿ ನೀವು ಬೇರೆ ಭಾಷೆಯಲ್ಲಿ ಮಾತನಾಡುವ ವ್ಯಕ್ತಿಯೊಂದಿಗೆ ಮಾತನಾಡಲು ಬಯಸಿದರೆ, ಅನುವಾದ ಅಪ್ಲಿಕೇಶನ್ಸ್​ ಮೂಲಕ ಅವರು ಹೇಳುವ ಮಾಹಿತಿಯನ್ನು ಅನುವಾದಿಸಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಅಪ್ಲಿಕೇಶನ್‌ ಮೂಲಕ ಅನುವಾದಿಸುವುದು ಸವಾಲಿನ ಕೆಲಸ. ಹೀಗಾಗಿ ತನ್ನ ಗ್ರಾಹಕರ ಬಳಕೆಗೆ ಅನುಕೂಲ ಆಗಲಿ ಎಂದು ವಾಟ್ಸ್​ಆ್ಯಪ್​​ಗೆ ಹೊಸ ಫೀಚರ್​ ಪರಿಚಯಿಸಲು ಮುಂದಾಗಿದೆ.

ಇದರೊಂದಿಗೆ ಸಂದೇಶಗಳನ್ನು ಸುಲಭವಾಗಿ WhatsAppನಲ್ಲಿ ಅನುವಾದಿಸಬಹುದು. ಭಾಷಾಂತರಿಸಲು ಮತ್ತು ಉತ್ತರಗಳನ್ನು ಒದಗಿಸಲು ಇತರೆ ಅಪ್ಲಿಕೇಶನ್ಸ್ ಮೊರೆ ಹೋಗೋದನ್ನು ತಪ್ಪಿಸಲಿದೆ. ಇದು ವಾಟ್ಸ್​ಆ್ಯಪ್ ಬಳಕೆದಾರರಿಗೆ ತುಂಬಾನೇ ಅನುಕೂಲ ಆಗಲಿದೆ.

Advertisment

ಹೇಗೆ ಕಾರ್ಯನಿರ್ವಹಿಸ್ತದೆ?
WhatsApp ಅಪ್ಲಿಕೇಶನ್‌ನಲ್ಲಿ ಕ್ವಿಕ್ ಟ್ರಾನ್ಸ್​ಲೇಟರ್ ಬಳಸಲು ಲ್ಯಾಂಗ್ವೇಜ್ ಪ್ಯಾಕ್ಸ್ ಡೌನ್‌ಲೋಡ್ ಮಾಡಬೇಕಾಗುತ್ತದೆ. ಅದರ ಮೂಲಕ WhatsApp ಅಪ್ಲಿಕೇಶನ್ ಒಳಬರುವ ಪಠ್ಯ ಸಂದೇಶಗಳ ಭಾಷೆಯನ್ನು ಪತ್ತೆ ಮಾಡುತ್ತದೆ. ಬಳಕೆದಾರರ ಆದ್ಯತೆಗಳಿಗೆ ಅನುಗುಣವಾಗಿ ಮಾಹಿತಿ ನೀಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment