/newsfirstlive-kannada/media/post_attachments/wp-content/uploads/2025/01/WHATSAAP.jpg)
ಈಗೇನಿದ್ದರೂ WhatsApp ಜಮಾನ. ಅತ್ಯಂತ ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ WhatsApp ಒಂದು. ಅದಕ್ಕಿರುವ ಡಿಮ್ಯಾಂಡ್ ಅರಿತುಕೊಂಡಿರುವ ವಾಟ್ಸ್ಆ್ಯಪ್, ತನ್ನ ಬಳಕೆದಾರರನ್ನು ಮತ್ತಷ್ಟು ಆಕರ್ಷಿಸಲು ಹೊಸ ಫೀಚರ್ಸ್ ನೀಡುತ್ತಿದೆ.
ಕಾಲಕಾಲಕ್ಕೆ ಆಪ್ಷನ್ ಬದಲಾಯಿಸುವ ಮೂಲಕ ಹೆಚ್ಚು ಬಳಕೆದಾರರನ್ನು ಹೊಂದುತ್ತಿದೆ. WhatsApp ಪಠ್ಯ ಸಂದೇಶಗಳ ಜೊತೆಗೆ ಧ್ವನಿ ಸಂದೇಶಗಳನ್ನು ಕಳುಹಿಸಬಹುದು. ಇದು ಗೊತ್ತಿರುವ ವಿಚಾರ. ಅನೇಕರು ಬ್ಯುಸಿ ಅವಧಿಯಲ್ಲಿ ವಾಯ್ಸ್ ನೋಟ್ ಕಳುಹಿಸುತ್ತಾರೆ.
ಅಂದರೆ ದೀರ್ಘವಾದ ಟೆಕ್ಸ್ಟ್ ಸಂದೇಶ ಕಳುಹಿಸುವ ಬದಲು ಸಣ್ಣ ಧ್ವನಿಯಲ್ಲಿ ವಾಯ್ಸ್ ನೋಟ್ ಕಳುಹಿಸುತ್ತಾರೆ. ಆದರೆ ಇಲ್ಲೂ ಒಂದು ಸಮಸ್ಯೆ ಇದೆ. ಆ ಧ್ವನಿ ಸಂದೇಶ ಕೇಳಲು ಸ್ವಲ್ಪ ತೊಂದರೆ ಇದೆ. ಮೀಟಿಂಗ್ನಲ್ಲಿರುವಾಗ, ಯಾವುದೋ ಸಭೆಯಲ್ಲಿರುವಾಗ, ಚಿತ್ರಮಂದಿರದಲ್ಲಿದ್ದಾಗ ಅಥವಾ ವೈಯಕ್ತಿಕವಾಗಿ ಧ್ವನಿ ಸಂದೇಶ ಕೇಳಲು ಆಗಲ್ಲ.
ಇದನ್ನೂ ಓದಿ: ಜುನಾ ಅಖಾಡದಿಂದ ಐಐಟಿ ಬಾಬಾಗೆ ಗೇಟ್ಪಾಸ್: ಕಾರಣವೇನು ಅಂತ ಗೊತ್ತಾ?
ಬಂದಿರುವ ವಾಯ್ಸ್ ಮೆಸೇಜ್ ತುರ್ತು ವಿಷಯವಾದರೂ ಕೇಳಲಾಗದ ಪರಿಸ್ಥಿತಿ ಎದುರಿಸುತ್ತೇವೆ. ಸಾರ್ವಜನಿಕವಾಗಿದ್ದಾಗ ಕೆಲವರಿಗೆ ಟೆಕ್ಸ್ಟ್ ಟೈಪ್ ಮಾಡುವ ಸಮಯ ಇರಲ್ಲ. ಇನ್ನು ಕೆಲವರಿಗೆ ಬಂದಿರುವ ಮೆಜೇಸ್ ಕೇಳಿಸಿಕೊಳ್ಳಲು ಅವಕಾಶ ಸಿಗಲ್ಲ. ಸಂದಿಗ್ಧತೆಗೆ ಸಿಲುಕುವ ಸಂದರ್ಭಗಳಿಗೆ ವಾಟ್ಸ್ಆ್ಯಪ್ ಬಿಗ್ ರಿಲೀಫ್ ನೀಡುತ್ತಿದೆ. ವಾಟ್ಸಾಪ್ ವಾಯ್ಸ್ ನೋಟ್ಗಳನ್ನು ಟೆಕ್ಸ್ಟ್ ಆಗಿ ಪರಿವರ್ತಿಸುವ ಟ್ರಾನ್ಸ್‌ಕ್ರಿಪ್ಟ್ ಆಯ್ಕೆಯನ್ನು ತಂದಿದೆ.
ಪ್ರತಿಲಿಪಿ ಆಯ್ಕೆಯು ನಿಮ್ಮ ಧ್ವನಿ ಸಂದೇಶಗಳನ್ನು ಪಠ್ಯಕ್ಕೆ ಲಿಪ್ಯಂತರ ಮಾಡುತ್ತದೆ. ಅದೂ ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ. ಸದ್ಯ ನಾಲ್ಕು ಭಾಷೆಗಳಲ್ಲಿ ಈ ಸೌಲಭ್ಯ ಇದೆ. ಪ್ರತಿಲಿಪಿಯು ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ಇಸ್ರೋ ಸಾಧನೆಗೆ ಮತ್ತೊಂದು ವೇದಿಕೆ.. ‘ಬಾಹುಬಲಿ’ ಉಡಾವಣಾ ಪ್ಯಾಡ್ ಹಿಂದಿರುವ ಕತೆ ರೋಚಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ